ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಯಾತಕೋ ಗೊತ್ತಿಲ್ಲ ನನ್ನ ಮೌನ ಮಾತಿಗೆ ಇಳಿದಿದೆಏನೊಂದು ಅರಿತಿಲ್ಲ ನನ್ನ ಮಾತು ಮೌನವ ತಳೆದಿದೆ ಪ್ರೀತಿಯಲ್ಲಂತೂ ಮಾತು ಮೌನಗಳದ್ದೇ ಕಾರುಬಾರು ಮುದ್ದಿಸುವಾಗ ಸದ್ದೇ ಇಲ್ಲದೇ ಸವಿ ಸಲುಗೆ ಬೆಳೆದಿದೆ ಲೋಕದ ಕಣ್ಣಿಗಂತೂ ಪ್ರೇಮಿಗಳೆಂದಿಗೂ ಹುಚ್ಚರೇಇಂದಲ್ಲ ಹಿಂದಿನಿಂದಲೇ ಜಗದ ಹಗೆಯು ಉಳಿದಿದೆ ಮನಸೆರಡು ಒಪ್ಪಿದರೇನು ಕುರುಡರು ಒಪ್ಪಬೇಕಲ್ಲಜಗತ್ತು ಪ್ರೀತಿಯನು ಜಾತಿ ಅಂತಸ್ತಿನಿಂದ ಅಳೆದಿದೆ ಮಹಾಂತ ಭರವಸೆಯ ಬುತ್ತಿ ಹಿಡಿದು ನಿಂತಿರುವನುಬರಿದೆದೆಯ ಬಾಂದಳದಿ ತಾರೆಯೊಂದು ಹೊಳೆದಿದೆ ಎಮ್ಮಾರ್ಕೆ
ಎಮ್ಮಾರ್ಕೆ ಅವರ ಗಜಲ್ Read Post »









