ಧಾರಾವಾಹಿ ಸಂಗಾತಿ-38 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಗಡಿಭಾಗ ಕನ್ನಡತಿಯ ಕೂಗು ನಡುನಾಡ ಅಣ್ಣಂದಿರೆ,ಗಡಿ ಭಾಗದವರಿಗಕಡಿಗಣ್ಣಿಲಿ ನೋಡಬ್ಯಾಡರಿ, ನಾವೆಲ್ಲಒಡಹುಟ್ಟೀದ ಕನ್ನಡ ಮಕ್ಕಳು* ಬೇಲೂರಿನಿಂದ ಮೈಸೂರಿನವರೆಗೆ ಅಖಂಡ ಕರ್ನಾಟಕದ ಬಗ್ಗೆ ಮಾತನಾಡುವುದು ಅಂದರೆ ಒಂದು ಸಂಧಿಗ್ಧ ಪರಿಸ್ಥಿತಿ ಉಂಟು ಮಾಡುವುದೆನ್ನುವ ಸಮಯದಲ್ಲಿ ಜಯದೇವಿ ತಾಯಿಯವರು ನಿರ್ಭೀತೆಯಿಂದ ಪ್ರಚಾರ ಮಾಡಿದ್ದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡವು. *೨೫-೫-೧೯೫೨-ಕರ್ಮವೀರ* ೧೯೫೨ರ ಬೇಲೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಮುಖ್ಯಮಂತ್ರಿಗಳಾದ ಕೆಂಗಲ ಹನುಮಂತಯ್ಯ ನವರು ತಮ್ಮ ಭಾಷಣದಲ್ಲಿ ಏಕೀಕರಣದ ಬಗ್ಗೆ ಒಂದು ಶಬ್ದವನ್ನೇ ಎತ್ತಲಿಲ್ಲ… ಇದರಿಂದ ಜನ ನಿರಾಶರಾಗಿದ್ದಾರೆ. ಬೇಲೂರಿನ ಸಮ್ಮೇಳನದ ಮಹಿಳಾ ಪರಿಷತ್ತಿನಲ್ಲಿ ಭಾಗವಹಿಸಿದ್ದ ಜಯದೇವಿ ತಾಯಿ ಅವರು ಕರ್ನಾಟಕದ ಗತವೈಭವವನ್ನು ಸ್ಮರಿಸಿ ಕೊಳ್ಳುತ ಸಂತೃಪ್ತರಾಗದೆ ನಾಡಿನ ಐಕ್ಯತೆಗೆ ಭದ್ಧರಾಗಬೇಕೆಂದು ಕರೆ ನೀಡಿದರು. *೨೧-೫-೧೯೫೨-ಪ್ರಜಾವಾಣಿ ವರದಿ* “ನಮ್ಮ ನಾಡಿನವರು ನಮ್ಮ ಸಂಸ್ಕೃತಿಯವರೆಂದು ನಾನು ಗಡಿಭಾಗವಾದ ಸೊಲ್ಲಾಪುರದಿಂದ ಮೈಸೂರಿಗೆ ಪ್ರವಾಸ ಕೈಗೊಂಡೆ, ಆದರೆ ಇಲ್ಲಿ ಮರಾಠರಿಗಿಂತ ಹೆಚ್ಚಿನ ವಿರೋಧಕರನ್ನು ಕಂಡೆ, ಮರಾಠಿಗರು ವಿರೋಧಿಸುವುದು ಸ್ವಾಭಾವಿಕ ಆದರೆ ನಮ್ಮ ಬಗ್ಗೆ ಮೈಸೂರಿನವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ….ನಮಗೆ ಬೇರೆಯವರದು ಬೇಕಿಲ್ಲ ನಮಗೆ ಬರಬೇಕಾಗಿದ್ದನ್ನು ಉಳಿಸಿಕೊಳ್ಳೋಣ ನಮ್ಮ ಸೋಲಾಪುರ ಹೋಗುವ ಅಂಚಿನಲ್ಲಿ ಇದೆ… ಆದರೆ ಬೇಲೂರು ಹೋದಿತು… ಮೈಸೂರಿನವರು ಎಚ್ಚರದಿಂದ ಇರಲಿ ಮರಾಠಿಗರಿಗೆ ಇರುವ ತಾಯಿ ನುಡಿಯ ನಿಷ್ಠೆ ನಮ್ಮಲ್ಲಿ ಬರೆಯಿಲಿ…..!!!ಎಂದು ಅಂಗಲಾಚಿದರು. “ಕನ್ನಡಿಗರೇ ಜಾಗೃತರಾಗಿ ಸ್ವತಂತ್ರ ನಾಡವನ್ನು ಕಟ್ಟಬೇಕು ಇಲ್ಲವಾದರೆ ನಮಗೆ ಉಳಿಗಾಲವಿಲ್ಲ ಎಂದು ಜಯದೆವಿತಾಯಿಯವರು ತಮ್ಮ ಭಾಷಣದಲ್ಲಿ ಹೇಳುತ್ತ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ಎಂದಿಗೂ ಮರೆಯುತ್ತಿರಲಿಲ್ಲ. ಹೈದರಾಬಾದ ರಾಜ್ಯದ ತಳವಾಡದಲ್ಲಿ ನಡೆದ ಅಖಿಲ ಕನ್ನಡಿಗರ ಸಭೆಯಲ್ಲಿ ಹೈದರಾಬಾದಿನ ಮುಖ್ಯಮಂತ್ರಿ ಬಿ ರಾಮಕಿಶನರಾವ ಅವರು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯದೇವಿ ತಾಯಿ ಲಿಗಾಡೆಯವರು ಒಹಿಸಿಕೊಂಡಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಬಿ ರಾಮ ಕಿಸರಾವ ಅವರನ್ನು ಒತ್ತಾಯಿಸುವ ಮೂಲಕ ಗೊತ್ತುವಳಿಯು ಸ್ವೀಕರಿಸಲಾಯಿತು. ಕನ್ನಡ ಶಿಕ್ಷಕರು ಹೈದರಾಬಾದ ರಾಜ್ಯದಲ್ಲಿ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಜಯದೇವಿ ತಾಯಿಯವರು….ನಾಲ್ಕು ನೂರು ಜನ ಶಿಕ್ಷಕರನ್ನು ನೇಮಿಸಿದರು.ಅವರು ಮುಖ್ಯವಾಗಿ ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುತ್ತಿದ್ದರು. ಅದೇ ಕಾಲಕ್ಕೆ ಸೊಲ್ಲಾಪುರ ಕೆಲ ಭಾಗದಲ್ಲಿ ಕನ್ನಡ ಶಾಲೆಗಳು ಪ್ರಾರಂಭವಾದವು. ಅಲ್ಲಿ ನೇಮಕರಾದ ಶಿಕ್ಷಕರ ಖರ್ಚನ್ನು ತಾಯಿಯವರೇ ವಹಿಸುತ್ತಿದ್ದರು. ೧೯೫೩ ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಮಿತಿಯಲ್ಲಿ ಪಾಸಾದ ಗೊತ್ತುವಳಿಯ ಪ್ರಕಾರ ಪ್ರಾಂತ ಪುನರ ರಚನಾ ಆಯೋಗವು ೨೯-೧೨-೫೩ ರಲ್ಲಿ ನಿಯಮಿಸಲ್ಪಟ್ಟಿತು. ಪ್ರಾಂತ ಪುನರ್ರಚನಾ ಆಯೋಗದ ಎದುರು ಸಾಕ್ಷಿಯಾಗಿ ನುಡಿಯುವ ಆಯೋಗದಲ್ಲಿ ಜಯದೇವಿ ತಾಯಿಯವರು ಶ್ರೇಷ್ಠ ಸದಸ್ಯರಾಗಿದ್ದರು. ಆದರೆ ಅವರ ಅನಾರೋಗ್ಯದ ಕಾರಣದಿಂದಾಗಿ ಜಯದೇವಿ ತಾಯಿಯವರಿಗೆ ದಿಲ್ಲಿಯವರೆಗೆ ಹೋಗಲಾಗಲಿಲ್ಲ .ಅದನ್ನು ತುಂಬಾ ವಿಷಾದದಿಂದ ಶ್ರೀ ನಿಜಲಿಂಗಪ್ಪನವರು ಹೇಳ್ತಾರೆ…. ತಾಯಿಯವರು ಅಲ್ಲಿಯವರಿಗೆ ಬಂದಿದ್ದರೆ ಅವರ ಉಪಸ್ಥಿತಿಯು ಅತ್ಯಂತ ಫಲದಾಯಕವಾಗಿರುತ್ತಿತ್ತು ಎಂದು ಉದ್ಗರಿಸಿದರು. ಶ್ರೀ ಕೆ.ಎಫ್ ಪಾಟೀಲ, ನಿಜಲಿಂಗಪ್ಪ, ಹಳ್ಳಿಕೇರಿ, ಕಂಠಿ ಇವರು ಯಾರೇ ಬಂದರೂ ಸೊಲ್ಲಾಪುರದಲ್ಲಿ ಜಯದೇವಿ ತಾಯಿಯವರ ಹತ್ತಿರ ಬರದೆ ಚರ್ಚಿಸದೆ ಅವರ ಸಲಹೆ ಪಡೆಯದೆ ಯಾವ ನಿರ್ಣಯ ತೆಗೆದುಕೊಳ್ಳುತ್ತಿರಲಿಲ್ಲ. ಮುಂದೆ ೧೯೫೪ ಕೆ.ಪಿ.ಸಿ.ಸಿ ಮುಂದೆ ಕರ್ನಾಟಕದ ಬೇಡಿಕೆಯನ್ನು ಮಂಡಿಸಲು ನಿಯುಕ್ತರಾದ ಉಪಸಮಿತಿಯವರು… ‘ವಿಜಾಪುರ ಜಿಲ್ಲೆಯ ಗಡಿ ಸಮಿತಿ’ ಎಂದು ಗುರುತಿಸಿದ ಎಂಟು ಜನರಲ್ಲಿ ಜಯದೇವಿ ತಾಯಿಯವರು ಪ್ರಮುಖ ರಾಗಿದ್ದರು. ಅಷ್ಟರಲ್ಲಿ ಗಡಿಭಾಗದ ಮರಾಠಿ ಮುಖಂಡರ ಗಮನವು ಗಡಿಭಾಗದ ಕನ್ನಡಿಗರ ಮೇಲೆ ಬಿತ್ತು… ಹೀಗಾಗಿ ಸೊಲ್ಲಾಪುರ ಬೆಳಗಾವಿ ನಿಪ್ಪಾಣಿ ಖಾನಾಪುರ ನಂದಗಡ ಜತ್ತ ಅಕ್ಕಲಕೋಟೆ ಅಂತಹ ಮಹತ್ವದ ಕನ್ನಡ ಪ್ರದೇಶಗಳನ್ನು ಪಡೆಯಲು ಮುಂದಾದರು ಮರಾಠಿಗರು ಸಮಿತಿ ರೂಪಿಸಿದರು. ಮುಖ್ಯಮಂತ್ರಿ ಆಗಿದ್ದರು ಸೊಲ್ಲಾಪುರ ನಗರವನ್ನು ಒಳಗೊಂಡಿದ್ದ ಸೊಲ್ಲಾಪುರ ಕೆಲವು ತಾಲೂಕುಗಳಲ್ಲಿ ನೂರಕ್ಕೆ 90ರಷ್ಟು ಕನ್ನಡಿಗರಿಂದ ಕೂಡಿತ್ತು.. ಸೊಲ್ಲಾಪುರ ನಗರ ಮಾತ್ರ ಮಿಶ್ರ ಭಾಸಿಕರಿಂದ ಕೂಡಿತ್ತು. ಈ ಮಿಶ್ರ ನುಡಿಯಲ್ಲಿಯೇ ಕನ್ನಡಿಗರು ತೆಲುಗು ಉರ್ದು ಮರಾಠಿ ಭಾಷಿಕರು ಇದ್ದರು. ಇದರಲ್ಲಿ ಅತ್ಯಧಿಕ ಸಂಖ್ಯೆ ಕನ್ನಡಿಗರದಾಗಿತ್ತು. ಅನ್ಯ ಭಾಷಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರು. ಈ ಕಾರಣದಿಂದ ಮರಾಠಿ ಮುಖಂಡರು ಸೊಲ್ಲಾಪುರ ತಾಲೂಕನ್ನು ಒಡೆದು ನೇರ ಮರಾಠಿ ತಾಲೂಕಿನಿಂದ ಸಣ್ಣಪುಟ್ಟ೪0 ಮರಾಠಿ ಪ್ರಾಧಾನ್ಯ ಹಳ್ಳಿಗಳನ್ನು ಸೋಲಾಪುರ ನಗರಕ್ಕೆ ಜೋಡಿಸಿದರು .ಅದಕ್ಕೆ ಉತ್ತರ ಸೋಲಾಪುರ ತಾಲೂಕ ಎಂದು ಹೆಸರಿಟ್ಟರು .ಉಳಿದ ಸೋಲಾಪುರ ಭಾಗಕ್ಕೆ ದಕ್ಷಿಣ ಸೋಲಾಪುರ ವೆಂದು ಹೆಸರಿಡಲಾಯಿತು. ಇಂದಿಗೂ ಈ ಎರಡು ತಾಲೂಕು ಸೋಲಾಪುರ ನಗರದಲ್ಲಿ ಬೇರೆ ಬೇರೆಯಾಗಿವೆ. ಈ ವಿಂಗಡಣೆಯ ಮುಖ್ಯ ಉದ್ದೇಶ ತಾಲೂಕನ್ನು ಘಟಕವಾಗಿ ಹಿಡಿದರೆ.. ಅನಿವಾರ್ಯವಾಗಿ ಮಹಾರಾಷ್ಟ್ರಕ್ಕೆ ಸೇರಿದರೂ ದಕ್ಷಿಣ ಸೋಲಾಪುರ ಮಾತ್ರ ಮೈಸೂರಿಗೆ ಸೇರಬೇಕು. ಈ ರೀತಿಯ ಪೂರ್ವುದೇಶದಿಂದ ನಡೆದ ಸಮಿತಿಗಳ ಕಾರ್ಯ ಸೊಲ್ಲಾಪುರ ಕರ್ನಾಟಕದಿಂದ ಕೈತಪ್ಪಿತುವಂತೆ ಮಾಡಿದವು. *ನುಡಿ ನಾಡ ಕಟ್ಟುವಾಗ ಗಡಿಭಾಗಮರಿಬ್ಯಾಡರಿ ತೊಡಕೆ ಇಡಬೇಡಿರಿಕಡೆ ತನಕ ಬೇಡುವೆ ಸರಕಾರಕ* ಜಯದೇವಿ ತಾಯಿಯವರ ಈ ಮಾತುಗಳಲ್ಲಿ ಅಖಂಡ ಕರ್ನಾಟಕದ ಕನಸು, ಗಡಿಭಾಗದ ಕನ್ನಡಿಗರ ನೋವು ತೋಡಿಕೊಂಡರು.ಕನ್ನಡ ಭಾಷೆಯ ಆಧಾರದ ಮೇಲೆ , ಕನ್ನಡ ಮಾತನಾಡುವ ಪ್ರದೇಶಗಳನ್ನೆಲ್ಲಾ ಒಂದಾಗಿ ಸೇರಿಸಬೇಕು ಎಂಬುದು ತಾಯಿಯವರ ಆಶಯ. ನಾಡಿನ ಗಡಿಯಲ್ಲಿ ಇರುವ ಕನ್ನಡಿಗರನ್ನು ಮಾತ್ರ ಮರೆಯಬೇಡಿ. ಸೊಲ್ಲಾಪುರ, ಅಕ್ಕಲಕೋಟೆ, ಜತ್, ಮೀರಜ್, ಜಮಖಂಡಿ ಮುಂತಾದ ಗಡಿ ಪ್ರದೇಶಗಳಲ್ಲಿ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡು ಬದುಕುತ್ತಿದ್ದಾರೆ. ಅವರನ್ನೂ ಅಖಂಡ ಕರ್ನಾಟಕದ ಭಾಗವೆಂದು ಪರಿಗಣಿಸಬೇಕು ಎಂದರು.ಗಡಿಭಾಗದ ಕನ್ನಡ ಪ್ರದೇಶಗಳು ಕರ್ನಾಟಕದೊಂದಿಗೆ ಒಂದಾಗಲು ಯಾವುದೇ ಅಡ್ಡಿ ಅಥವಾ ತೊಡಕು ಉಂಟುಮಾಡಬಾರದು. ಭಾಷೆ ಮತ್ತು ಜನರ ಹಕ್ಕಿನ ಆಧಾರದ ಮೇಲೆ ಅವರ ಆಶಯವನ್ನು ಗೌರವಿಸಬೇಕು ಎಂಬ ಆಗ್ರಹಿಸಿದರು. ಇದು ಕೇವಲ ಒಂದು ದಿನದ ಮನವಿಯಲ್ಲ. ಸರ್ಕಾರವು ಗಡಿಭಾಗದ ಕನ್ನಡಿಗರ ಸಮಸ್ಯೆಯನ್ನು ಪರಿಹರಿಸುವವರೆಗೂ, ಕೊನೆಯವರೆಗೂ ನಾನು ಈ ಬೇಡಿಕೆಯನ್ನು ಮುಂದಿಡುತ್ತೇನೆ ಎಂಬ ಜಯದೇವಿ ತಾಯಿಯವರ ಅಚಲ ಸಂಕಲ್ಪವನ್ನು ತೋರಿದರು.ಜೀವನಚರಿತ್ರೆಯಲ್ಲಿ ಬಳಸಬಹುದಾದ ಭಾವನಾತ್ಮಕಜಯದೇವಿ ತಾಯಿಯವರು ಗಡಿಭಾಗದಲ್ಲಿ ಬದುಕುತ್ತಿದ್ದ ಕನ್ನಡಿಗರ ಪರವಾಗಿ ಕೇಳಿಬಂದ ಒಬ್ಬ ಕನ್ನಡ ತಾಯಿಯ ಹೃದಯದ ಮೊರೆಯಾಗಿತ್ತು. ಅಖಂಡ ಕರ್ನಾಟಕದ ನಕ್ಷೆಯನ್ನು ರೂಪಿಸುವಾಗ ಅದರ ಗಡಿಯಲ್ಲಿ ನಿಂತಿರುವ ಕನ್ನಡಿಗರನ್ನು ಮರೆಯಬಾರದು ಎಂಬುದು ಅವರ ಕಳಕಳಿ. ಭಾಷೆ, ನೆಲ ಮತ್ತು ನಾಡಿನ ಬಂಧದಿಂದ ಕರ್ನಾಟಕದೊಂದಿಗೆ ಬೆಸೆದುಕೊಂಡಿದ್ದ ಜನರನ್ನು ಯಾವುದೇ ರಾಜಕೀಯ ಗಡಿರೇಖೆ ಬೇರ್ಪಡಿಸಬಾರದು ಎಂಬುದು ಅವರ ಹೋರಾಟದ ಆಶಯವಾಗಿತ್ತು. ಅದಕ್ಕಾಗಿ ಅವರು ಸರ್ಕಾರವನ್ನು ಪದೇಪದೇ ಎಚ್ಚರಿಸುತ್ತಿದ್ದರು“ಗಡಿಭಾಗವನ್ನು ಮರೆಯಬೇಡಿ ಎಂದಿದ್ದರು ಕನ್ನಡ ನಾಡನ್ನು ಕಟ್ಟುವಾಗ ಗಡಿಭಾಗ ಕನ್ನಡಿಗರನ್ನೂ ಒಳಗೊಳ್ಳುವಿಕೆಯ ಮನವಿ ಅವರ ಜೀವನದ ಕೊನೆಯವರೆಗೂ ಮುಂದುವರಿದ ಅಖಂಡ ಕರ್ನಾಟಕದ ಬದ್ಧತೆಯ ಪ್ರತಿಧ್ವನಿಯಾಗಿತ್ತು ಸವಿತಾ ದೇಶಮುಖ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಬಸವ ಪ್ರೇಮಿ ಸಿರಿಗೆರೆಯ ಸಿರಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ಹೀಗೆ ಮಧ್ಯ ಕರ್ನಾಟಕದ ಭಾಗಗಳಲ್ಲಿ ಬಸವ ಜ್ಯೋತಿಯ ಬೆಳಕಾಗಿ ಮನೆ ಮನೆಗೆ ಬಸವಾದಿ ಶರಣರ ವಚನಗಳನ್ನು ಮುಗಿಸಿದ ಶಿವಯೋಗದ ಸಿರಿ ತರಳಬಾಳು ಶ್ರೀ ಮಠದ 20ನೆಯ ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿ. ಏಪ್ರಿಲ್ 28, 1914ರಂದು ಬಸವ ಜಯಂತಿಯಂದು ಜನಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು 1940ರ ಬಸವ ಜಯಂತಿಯಂದೇ ತರಳಬಾಳು ಪೀಠದ ಜಗದ್ಗುರುಗಳಾಗಿ ಸಮಾಜಸೇವಾ ದೀಕ್ಷೆಯನ್ನು ಕೈಗೊಂಡರು. ಆ ಮೂಲಕ ಮಠದ 20ನೆಯ ಜಗದ್ಗುರುಗಳಾಗಿ ಮಠಗಳ ಪರಂಪರೆಯಲ್ಲಿಯೇ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ ಮೊದಲಿಗರು ಎಂದರೆ ಅತಿಶಯೋಕ್ತಿಯಲ್ಲ. ಮಠದ ಆಡಳಿತದ ಚುಕ್ಕಾಣಿ ಹಿಡಿದಾಗ ಸಿರಿಗೆರೆ ಮಠ ದುಗ್ಗಾಣಿ ಮಠವಾಗಿತ್ತು. ಅಂಥ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿಸುವಲ್ಲಿ ಅವರಲ್ಲಿನ ಕಾಯಕಶ್ರದ್ಧೆ, ದೂರದೃಷ್ಡಿ, ತಾಯ್ತನ, ಸಂಘಟನಾ ಚಾತುರ್ಯ, ನೇರನಿಷ್ಟುರ ನುಡಿ, ಅದಮ್ಯ ವಿಶ್ವಾಸವೇ ಕಾರಣ. 19ನೆಯ ಶತಮಾನದ ಕಲ್ಯಾಣದಲ್ಲಿ ಬೆಳಗಿದ ಶರಣ ಧರ್ಮದ ದೀವಿಗೆಯನ್ನು ಸಿರಿಗೆರೆಯ ಪ್ರಣತಿಯಲ್ಲಿ ಬೆಳಗಿಸಿದವರು ಪೂಜ್ಯರು. ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರ ಚಿಂತನೆ, ವಿಶ್ವಗುರು ಬಸವಣ್ಣನವರ ತತ್ವಸಿದ್ಧಾಂತಗಳ ತಳಹದಿಯಲ್ಲಿ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸದಾ ಕಲ್ಲುಮಳ್ಳುಗಳ ಹಾದಿಯಲ್ಲಿ ಸಾಗಿದ ಧೀಮಂತ ಗುರುಗಳು ಶ್ರೀ ಶಿವಕುಮಾರ ಶ್ರೀಗಳು. ಪ್ರಸ್ತುತ ದಿನಮಾನದಲ್ಲಿ ಒಂದು ಮಠವನ್ನು ಕಟ್ಟುವುದು ಅಷ್ಟು ಕಷ್ಟವಾಗಲಾರದೇನೋ! ಸರ್ಕಾರದ ಅನುದಾನದಿಂದಲೇ ಅನೇಕ ಮಠಗಳು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರಬಹುದು. ಆದರೆ ಕಳೆದ ನಾಲ್ಕು ದಶಕದ ಹಿಂದೆ ಮಠವೆಂದರೆ ಭಕ್ತರಿಗೆ ಏನೂ ಎಂಬುದೇ ಗೊತ್ತಿಲ್ಲದ ಸಂದರ್ಭದಲ್ಲಿ ಇಡೀ ಭಕ್ತಸಮೂಹವನ್ನು ಎಚ್ಚರಿಸಿ ಮಠದ ಕಡೆಗೆ ಸೂಜಿಗಲ್ಲಿನಂತೆ ಸೆಳೆಯುವಂತೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರು ಪಟ್ಟ ಕಷ್ಟ, ನೋವು, ನಿಂದನೆ, ಯಾರಿಗೂ ಬಂದಿರಲಾರದೇನೋ! ಆದರೆ ಹಿಡಿದ ಕಾಯಕವನ್ನು ಮಾಡಿಮುಗಿಸುವ ಇಚ್ಛಾಶಕ್ತಿ ಗುರುಗಳಿಗೆ ಇದ್ದುದರಿಂದಲೇ ಸಿರಿಗೆರೆ ಮಠವನ್ನು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿಸಿತು. ಶಿಷ್ಯರು ಮತ್ತು ಮಠದ ನಡುವೆ ಬಾಂಧವ್ಯಕಲ್ಪಿಸಿ ಶಿಷ್ಯರೆಂದರೆ ಸಿರಿಗೆರೆ ಶಿಷ್ಯರಂತೆ ನಡೆದುಕೊಳ್ಳಬೇಕು ಎನ್ನುವ ವಾತಾವರಣವನ್ನು ನಿರ್ಮಿಸಿದರು. ’ಮಠ ನಮಗೇನು ಮಾಡಿದೆ’ ಎಂದು ಆಶಿಸುವ ಜನರೇ ಈ ಸಮಾಜದಲ್ಲಿ ತುಂಬಿರುವಾಗ ’ಮಠಕ್ಕೆ ನಾನೇನು ಮಾಡಿದೆ’ ಎಂದು ಯೋಚಿಸುವ ಸಮರ್ಪಣಾ ಭಾವದ ಭಕ್ತರು ಸಿರಿಗೆರೆ ಮಠಕ್ಕಿದ್ದಾರೆ. ಅದರಂತೆ ಸ್ವಾಮಿಗಳೆಂದರೆ ಸಿರಿಗೆರೆ ಸ್ವಾಮಿಗಳ ಹಾಗೆ ಇರಬೇಕು ಎನ್ನುವಂತೆ ತೋರಿಸಿಕೊಟ್ಟರು. ನಿಸರ್ಗದ ಮುನಿಸಿನಿಂದ ಬರಗಾಲ ಬರಬಹುದೇ ಹೊರತು ಆ ಮಠದ ಶಿಷ್ಯರ ಶ್ರದ್ಧಾ-ಭಕ್ತಿಗೆ ಎಂದಿಗೂ ಬರವೆಂಬುದಿಲ್ಲ. ಹಾಗೆ ನೋಡಿದರೆ ಹಿರಿಯ ಗುರುಗಳಿಗಿಂತ ಮೊದಲು ಆರ್ಥಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮಠವದು. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಸದ್ಧರ್ಮ ಸಿಂಹಾಸನವನ್ನು ಅಲಂಕರಿಸಿದ ನಂತರ, ಭಕ್ತರು ನಾಮುಂದು ತಾಮುಂದು ಎಂದು ತನು-ಮನ-ಧನದ ಸೇವೆಯ ಮೂಲಕ ಈ ಬೃಹನ್ಮಠವನ್ನು ಅನ್ವರ್ಥವಾಗಿಯೂ ಬೃಹದಾಕಾರವಾಗಿ ಬೆಳೆಸಿದರು. ‘ಕಾಯ, ಕಾಲ, ಕಾಸಿಗೆ ಮಹತ್ವ ಕೊಡದವನು ಉದ್ಧಾರವಾಗುವುದಿಲ್ಲ’ ಎಂದು ಸಾರುತ್ತಾ ಅದರಂತೆಯೇ ತಾವು ನಡೆದು, ತಮ್ಮ ಶಿಷ್ಯವರ್ಗವೂ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.ಬಹುಶಃ ಭಾರತದಲ್ಲಿ ಸಂವಿಧಾನ ಜಾರಿ ಆಗುವುದಕ್ಕಿಂತ ಮೊದಲೇ ಇಡೀ ರಾಷ್ಟ್ರದಲ್ಲಿ ಜಾತ್ಯತೀತ ಕನಸನ್ನು ಕಂಡು ಅದನ್ನು ನಿಜಗೊಳಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಶ್ರೀ ಶಿವಕುಮಾರ ಶ್ರೀಗಳು ಮಾತ್ರ ಎಂದು ಹೆಮ್ಮೆಯಿಂದ ಹೇಳಬಹುದು. ಸಹಪಂಕ್ತಿ ಭೋಜನ, ಸಮಾನ ಶಿಕ್ಷಣ, ಅಂತರ್ಜಾತಿ ಶಿಕ್ಷಣದ ಮೂಲಕ ’ಮಾನವಜಾತಿ ತಾನೊಂದೆ ವಲಂ’ ಎನ್ನುವ ಪಂಪನ ನುಡಿಯನ್ನು ನಿಜಗೊಳಿಸಿದರು. ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಫಾಪಿಸಿ ಅದರ ಅಡಿಯಲ್ಲಿ ನೂರಾರು ಶಾಲಾಕಾಲೇಜುಗಳನ್ನು ತೆರೆದರು. ಅಲ್ಲಿ ಓದುವ ಮಕ್ಕಳಲ್ಲಿ ಸಮಾನತೆಯ ಬೀಜಬಿತ್ತಿದರು. ವ್ಯವಹಾರ ಜ್ಙಾನವಿರುವವನಿಗೆ ವ್ಯಾಪಾರ ಮಾಡು, ಕೃಷಿ ಕೆಲಸದಲ್ಲಿ ಅನುಭವವಿದ್ದರೆ ಒಳ್ಳೆಯ ರೈತನಾಗು, ಚೆನ್ನಾಗಿ ಓದಿ ಉತ್ತಮ ಪದವಿಯನ್ನು ಪಡೆದಿದ್ದರೆ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸು ಎಂದು ಹೇಳುವ ಮೂಲಕ ಬಸಣ್ಣನವರ ಕಾಯಕ ಶ್ರದ್ಧೆಯನ್ನು ಬೆಳೆಸಿದರು. ‘ನೆತ್ತಿಯುಳ್ಳವನು ಓದಬೇಕು, ರಟ್ಟೆಯುಳ್ಳವನು ದುಡಿಯಬೇಕು, ಹೊಟ್ಟೆಯುಳ್ಳವನು ಉಣ್ಣಬೇಕು’ ಎಂದು ಹೇಳುತ್ತಿದ್ದ ಅವರ ಆಶೀರ್ವಾಣಿಯು ಅದೆಷ್ಟೋ ಜನರನ್ನು ಕರ್ತವ್ಯ ಪ್ರಜ್ಞರನ್ನಾಗಿ ಹಾಗೂ ಕ್ರಿಯಾಶೀಲರನ್ನಾಗಿ ಮಾಡಿತು. ಸಮಾಜದಲ್ಲಿ ನಡೆಯುವ ವಿವಾಹ, ಶಿವಗಣಾರಾಧನೆ, ಗೃಹಪ್ರವೇಶ ಇತ್ಯಾದಿ ಯಾವುದೇ ಕಾರ್ಯಕ್ರಮವಿರಲಿ; ಅಲ್ಲಿ ‘ಸರ್ವ ಶರಣ ಸಮ್ಮೇಳನ’ಗಳ ಮೂಲಕ ನಾಡಿನ ಒಳ-ಹೊರಗೆ ಶರಣತತ್ವ ಪ್ರಸಾರ ಕಾರ್ಯವನ್ನು ಕೈಗೆತ್ತಿಕೊಂಡರು. ಅನ್ಯ ಭಾಷೆಗಳಿಗೂ ಶರಣರ ವಚನಗಳನ್ನು ಭಾಷಾಂತರಿಸಿ ಅನ್ಯ ಭಾಷಿಕರೂ ಶರಣ ಸಾಹಿತ್ಯದ ಮಹತ್ವವನ್ನ್ನು ಮನಗಾಣುವಂತೆ ಮಾಡಿದರು. ಒಂದು ಮಠದ ಪೀಠಾಧಿಪತಿಯಾಗಿ, ಕಾವಿಧಾರಿ ಸ್ವಾಮಿಗಳಾಗಿರುವವರು ಬಹುತೇಕ ಸಂಪ್ರದಾಯವಾದಿಗಳೇ ಆಗಿರುತ್ತಾರೆ. ಜಪ, ತಪ, ನಿತ್ಯ ನೇಮಗಳನ್ನು ಅನುಸರಿಸುತ್ತಾ ಅದನ್ನೇ ಶಿಷ್ಯರಿಗೆ ಬೋಧಿಸುತ್ತಾ ಕುರುಡು ಆಚರಣೆಗೆ ಒಳಗಾದವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ. ಆದರೆ ಸ್ವಾಮಿಗಳಾಗಿ ಪ್ರಖರ ವಿಚಾರವಾದಿಯಾಗಿ, ಮೂಢನಂಬಿಕೆಗಳ ವಿರೋಧಿಯಾಗಿ ಶಿಷ್ಯರನ್ನು ತಿದ್ದುತ್ತಾ ಸರಿದಾರಿಯಲ್ಲಿ ಕರೆದೊಯ್ಯೊವ ಶ್ರೀ ಶಿವಕುಮಾರ ಸ್ವಾಮಿಜಿಯಂಥವರು ಸಿಗುವುದು ವಿರಳವೇ ಸರಿ. ಹಳಕಟ್ಟಿಯವರಿಗೆ ಬಂಗಾರದ ಪದಕ ಒಮ್ಮೆ ದಾವಣಗೆರೆ ನಗರದ ರಾಜನಹಳ್ಳಿ ಹನುಮಂತಪ್ಪ ಛತ್ರದ ಆವರಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿತ್ತು. ಆಗ ವಚನಶಾಸ್ತ್ರದ ಪಿತಾಮಹರೆಂದೇ ಖ್ಯಾತರಾದ ಫ.ಗು ಹಳಕಟ್ಟಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅವರು ಹಳ್ಳಿ ಹಳ್ಳಿಗೆ ಸೈಕಲ್ ಮೇಲೆ ತಿರುಗಿ ವಚನಗಳ ಓಲೆಗರಿ, ಕೈಬರಹಗಳ ಪ್ರತಿ ಸಂಗ್ರಹಿಸಲು ಪಟ್ಟ ಶ್ರಮ, ಅದಕ್ಕಾಗಿ ಆರ್ಥಿಕವೆಚ್ಚ ಹೆಚ್ಚಾಗಿ ಆಗಿನ ಕೆಸಿಸಿ ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ತೀರಿಸಲಾಗದೆ ಮನೆ ಜಪ್ತಿಗೆ ಬಂದಿತು. ಈ ವಿಷಯ ತಿಳಿದ ಶ್ರೀ ಶಿವಕುಮಾರ ಶ್ರೀಗಳು ಕೂಡಲೇ ಎ. ಜಿ ವಿರುಪಾಕ್ಷಪ್ಪ, ಮತ್ತು ಸಿ ಅಂಕಪ್ಪ ಇವರನ್ನು ಸಿರಿಗೆರೆಗೆ ಕಳುಹಿಸಿ ಮಠದ ಏಜೆಂಟ್ ಆಗಿದ್ದ ರುದ್ರಯ್ಯನವರಿಗೆ ಪತ್ರ ಕೊಟ್ಟು ಮಠದಲ್ಲಿದ್ದ ಬಂಗಾರದ ಪದಕವನ್ನು ತರಿಸಿ ಅಂದಿನ ಕಾರ್ಯಕ್ರಮ ಮುಗಿಯುವದರೊಳಗಾಗಿ ಫ .ಗು ಹಳಕಟ್ಟಿಯನ್ನು ಸನ್ಮಾನಿಸಿ ‘ಮಠ ಕೊಟ್ಟದ್ದು ಎಂದು ಬಂಗಾರದ ಪದಕವನ್ನು ಹಾಗೆ ಇಟ್ಟುಕೊಳ್ಳಬೇಡಿ. ಇದನ್ನು ಮಾರಿ ನಿಮ್ಮ ಸಾಲವನ್ನು ತೀರಿಸಿ ಋಣಮುಕ್ತರಾಗಿ, ಶರಣ ಸಾಹಿತ್ಯದ ಸೇವಕರು ಸಾಲಗಾರರಾಗಿ ಈ ರೀತಿ ನೋವನ್ನು ಪಡುವುದು ನಮಗೆ ಇಷ್ಟವಿಲ್ಲ’ ಎಂದು ಆಶೀರ್ವದಿಸಿದರು. ತುಂಬಿದ ಕಣ್ಣು, ಮುಗಿದ ಕೈನಿಂದ ಅದನ್ನು ಸ್ವೀಕರಿಸಿದ ಹಳಕಟ್ಟಿಯವರು ಸಾಲ ತೀರಿಸಿ ಉಳಿದ ಹಣವನ್ನು ಮಠಕ್ಕೆ ತಲುಪಿಸುವುದಾಗಿ ಎಂದು ಹೇಳಿದಾಗ ಸಾಧ್ಯವಿಲ್ಲ, ಅದು ಶರಣ ಸಾಹಿತ್ಯದ ಮೀಸಲು ಎಂದು ಶ್ರೀಗಳು ಹೇಳಿದ್ದರು. ತಮ್ಮ ಜೀನದುದ್ದಕ್ಕೂ ಜಾತಿಮತ ಭೇದವಿಲ್ಲದೆ ಗ್ರಾಮೀಣ ಜನರ ಅಭ್ಯುದಯಕ್ಕಾಗಿ ನಾಲ್ಕು ದಶಕಗಳ ಕಾಲ ಅಹರ್ನಿಷಿ ದುಡಿದು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಆಮುಲಾಗ್ರ ಬದಲಾವಣೆಗೆ ನಾಂದಿ ಹಾಡಿದವರು ಶ್ರೀಗಳವರು. ಕಲ್ಲಾಗಿದ್ದ ಭಕ್ತರನ್ನು ಶಿಲೆಗಳನ್ನಾಗಿ ರೂಪಿಸಿದರು. ಬಿದ್ದವರನ್ನು, ಶೋಷಣೆಗೆ ಒಳಗಾದವರನ್ನು. ದೀನ ದಲಿತರನ್ನು, ಅಜ್ಞಾನದ ಸ್ಥಿತಿಯಲ್ಲಿ ಇರುವವರನ್ನು ಸದಾ ಮೇಲಕ್ಕೆತ್ತುವ ಮೂಲಕ ಸರ್ವ ಜನಾಂಗದ ಕಲ್ಯಾಣಕ್ಕೆ ಶ್ರಮಿಸಿದರು. ತಮ್ಮ ಕಣ್ ಸನ್ನೆ, ಬಾಯ್ ಸನ್ನೆ, ಕೈಸನ್ನೆಯ ಮೂಲಕವೇ ಸಾವಿರ ಸಾವಿರ ಜನರನ್ನು ಒಗ್ಗೂಡಿಸುವ, ಎಚ್ಚರಿಸುವ, ಮೌನರನ್ನಾಗಿಸುವ ಅವರ ವ್ಯಕ್ತಿತ್ವ ಕಲ್ಪನೆಗೂ ನಿಲುಕದ್ದು.ಪೀಠ ಅವರಿಗೆ ಹೂವಿನ ಹಾಸಿಗೆಯಾಗಿರಲಿಲ್ಲ; ಮುಳ್ಳಿನ ಹಾಸಿಗೆಯಾಗಿತ್ತು. ಪೂಜ್ಯರು ಮನಸ್ಸಿದ್ದರೆ ಮಾರ್ಗ ಎಂಬ ತತ್ವದ ಮೇಲೆ ನಂಬಿಕೆಯಿಟ್ಟವರು. ಯಾವುದೇ ಕಾರ್ಯವಿರಲಿ ಹಣವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಶ್ರೀಜಗದ್ಗುರುಗಳು ಹಣವನ್ನು ಎಂದೂ ಹಿಂಬಾಲಿಸಲಿಲ್ಲ; ಇವರು ಕಾರ್ಯ ಸಾಧನೆ ಮಾಡುತ್ತಾ ಹೋದಂತೆ ಹಣವೇ ಇವರನ್ನು ಹಿಂಬಾಲಿಸಿತು. ದೀನದಲಿತರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡುತ್ತ ಅವರ ಬದುಕಿನಲ್ಲಿ ವಿಶ್ವಾಸ ಮೂಡಿಸಿದ ಶಿವಕುಮಾರ ಶ್ರೀಗಳು ಸಮಸ್ತ ಸಮಾಜದ ಜಾಗೃತಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡ ವಾಸ್ತವ ಮಾನವತಾವಾದಿಗಳು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಉನ್ನತಿಗೆ ಹಗಲಿರುಳು ಶ್ರಮಿಸಿ ಸಮಾಜದ ಅಭ್ಯುದಯಕ್ಕೆ ಪಣತೊಟ್ಟು ಸುಂದರ ’ಮಹಾಮನೆ’ಯನ್ನೇ ನಿರ್ಮಾಣ ಮಾಡಿದ ಶ್ರೀಗಳಿಗೆ ನಾಡು ಎಷ್ಟು ಋಣಿಯಾಗಿದ್ದರೂ ಸಾಲದು. ಜಾತಿ ನಿರ್ಮೂಲನೆ ಜಾತಿಯ ವಿಷಬೀಜ ಎಲ್ಲೆಲ್ಲೂ ಚಿಗುರಿ ’ಗಿರಕಿ’ ಹೊಡೆಯುತ್ತಿದ್ದಾಗ ಮೊತ್ತಮೊದಲು ಕರ್ನಾಟಕದಲ್ಲಿ ಸಹಪಂಕ್ತಿ ಭೋಜನ ಆರಂಭಿಸಿ ಇಂದಿಗೂ ನಿರಂತರತೆ ಉಳಿಸಿದ ಧೀರ ಚೇತನ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳವರು. “ಸಹಪಂಕ್ತಿ ಭೋಜನ ಬೇಡ ಎನ್ನುವುದಾದರೆ ಈ ಪೀಠದ ಜಗದ್ಗುರು ಪಟ್ಟವೇ ನಮಗೆ ಬೇಡ” ಎಂದ ಮಾನವತಾವಾದಿ ಅವರು.ಶ್ರೀಗಳವರನ್ನು ಕುರಿತು ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಸೂರ್ಯನನ್ನು ಪರಿಚಯಿಸುತ್ತೇನೆ ಎನ್ನುವುದು ದಡ್ಡತನದ ಮಾತಾಗುತ್ತದೆ. ಕಲೆ, ಸಾಹಿತ್ಯ, ನಾಟಕ, ಶಿಕ್ಷಣ, ಧರ್ಮ, ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಶಾಲಾ-ಕಾಲೇಜುಗಳ ಮುಖಾಂತರ ಅನ್ನದಾನ, ವಿದ್ಯಾದಾನಗಳ ಕ್ರಾಂತಿಯನ್ನು ಮಾಡಿ ನವಸಮಾಜವನ್ನು ಕಟ್ಟಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಇಂದಿನ ವಿಜ್ಞಾನ ಯುಗದಲ್ಲಿಯೂ ಅಡ್ಡಪಲ್ಲಕ್ಕಿ ಇರಲಾರದೆ ನಾವು ಬರುವುದಿಲ್ಲ ಎನ್ನುವ ವೇಷದಾರಿ ಸ್ವಾಮಿಜಿಗಳೆತ್ತ, ಅಂದಿನ ಕಾಲದಲ್ಲಿ ಜಗದ್ಗುರುಗಳಾಗಿದ್ದರೂ ತಾವೇ ಬಂದು ಜನ-ಮನದ ಹೃದಯಾಂತರಾಳದಲ್ಲಿ ಬಸವ ಬೀಜ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡ ನಿಜವಾದ ಜಗದ್ಗುರು ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳೆತ್ತ! ತಮ್ಮ ಉತ್ತರಾಧಿಕಾರಿಯಾಗಿ ವಿದ್ವತ್ ಪೂರ್ಣ ಜಗದ್ಗುರುಗಳಾಗಿರುವ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ತಮ್ಮ ಸ್ಥಾನಕ್ಕೆ ಕುಳ್ಳಿರಿಸಿ ತರಳಬಾಳು ಮಠವನ್ನು ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ರೈತಮುಖಿಯಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುವಂತೆ ಮಾಡಿದ್ದಾರೆ. ಶ್ರೀಗಳವರ ಭೌತಿಕ ಶರೀರ ಅಳಿದಿರಬಹುದು. ಆದರೆ ಅವರ ವ್ಯಕ್ತಿತ್ವ ಜಂಗಮ. ಸಾವಿರ ವರ್ಷ ಕಳೆದರೂ ಅವರ ಚೈತನ್ಯ ಮರೆಯಾಗಲಾರದು. ಇಂದಿಗೂ ಅವರ ಸ್ಮರಣೆ ನಮ್ಮಲ್ಲಿ ಚೈತನ್ಯ ತುಂಬುತ್ತದೆ. ಇದು ಅವರ ಜಂಗಮತ್ವ. ಅವರನ್ನು ಸ್ಮರಿಸಿದಾಗಲೆಲ್ಲಾ ಕಣ್ಣು ಒದ್ದೆಯಾಗುತ್ತದೆ. ಹೀಗೆ ಶ್ರೀಗಳ ಬಗ್ಗೆ ಬರೆಯುತ್ತಾ ಹೋದರೆ ಬತ್ತದ ಒರತೆಯಂತೆ, ವಜ್ರದ ಗಣಿಯಂತೆ ಅನೇಕ ಪಾಠ ಕಲಿಸುವ ಪ್ರಸಂಗಗಳು ನೆನಪಿನ ಬುತ್ತಿಯಿಂದ ಚಿಮ್ಮುತ್ತವೆ.ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಬಲ್ಲವರು ಅವರನ್ನು ನೆನೆಯದ ದಿನವೇ ಇಲ್ಲ. ಬಯಲಲ್ಲಿ ಬಯಲಾದರು ಪೂಜ್ಯರು 1992 ಸೆಪ್ಟೆಂಬರ್ 24 ರಂದು ಲಿಂಗೈಕ್ಯರಾಗಿದ್ದರೂ ಭಕ್ತರ ಅಂತರಾಳದಲ್ಲಿ ಇಂದಿಗೂ ಹೃದಯ ಸಿಂಹಾಸನಾಧೀಶ್ವರರಾಗಿ ಉಳಿದಿದ್ದಾರೆ. ಭಕ್ತರೆದೆಯಲಿ ಹಣತೆ ಹಚ್ಚಿಭಕ್ತರೇಳಿಗೆಯಲಿ ಬೆಳಕ ಕಂಡು ಮಾತಿಗಿಂತ ಕೃತಿಯೆ ಮೇಲೆಂದ ಭಕ್ತರೆದೆಯ ದಿವ್ಯಪ್ರಭೆ ವರಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾರ್ಯ ಸಾಧನೆ ನಿತ್ಯ ಸ್ಮರಣೀಯವಾಗಿದೆ. ಬಸವ ತತ್ವ ಪ್ರಸಾರ ಮಾಡುವ ಕೈಂಕರ್ಯಕ್ಕೆ ದುಡಿಯುವ ಶ್ರೇಷ್ಠ ಶಿವಯೋಗದ ಸಿರಿ ಸಾಧಕ ಪೂಜ್ಯರು ಶ್ರೀ ಶಿವಕುಮಾರ ಸ್ವಾಮಿಗಳು. ಇವರು ಸಾವಿಲ್ಲದ ಶರಣರು ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-44 ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಭರತ ಭೂಮಿಗೆ ಬಿದ್ದ ಅಯೋಧ್ಯೆಯಲ್ಲಿ ದೀಕ್ಷಾಬದ್ಧನಾಗಿದ್ದ ರಾಮನಿಗೆ ಚಿಂತೆ ಕಾಡತೊಡಗಿತು. ರಥದಿಂದ ಬಿದ್ದಿದ್ದ ಶತ್ರುಘ್ನನಿಗೆ ಏನಾಗಿದೆ ಎನ್ನುವ ಸಂದೇಶ ಆ ಬಳಿಕ ಅವನನ್ನು ತಲುಪಿರಲಿಲ್ಲ. ಯುದ್ಧಕ್ಕೆ ನಿಂತವರು ಕುಶ ಲವ ಎಂಬ ಬಾಲಕರು ಎನ್ನುವುದೀಗ ಅವನಿಗೆ ತಿಳಿದಿತ್ತು. ಯುದ್ಧಕ್ಕೆ ಅಗಾಧ ಸೇನೆ ಕಟ್ಟಿಕೊಂಡು ಹೋಗಿದ್ದ ಲಕ್ಷö್ಮಣ ಆ ಬಾಲಕರನ್ನು ಸೆರೆಹಿಡಿದನೋ? ಕೊಂದನೋ? ಯುದ್ಧದಲ್ಲಿ ಅವನಿಗೆ ಶ್ರಮವಾಯಿತೋ? ಗೆದ್ದನೋ? ಸೋತನೋ? ಕುದುರೆಯನ್ನು ಬಿಡಿಸಿ ತರುವನೋ? ಎಂಬೆಲ್ಲಾ ಪ್ರಶ್ನೆಗಳು ಮೂಡಿದಾಗ ಕಳವಳಕ್ಕೀಡಾದ ಕೌಸಲ್ಯಾಸುತ.ಲಕ್ಷö್ಮಣ ಕೋಪಗೊಂಡು ಆ ಬಾಲಕರ ಪ್ರಾಣಕ್ಕೆ ಸಂಚಕಾರ ತಂದರೆ! ಎಂಬ ಸಂಶಯ ಮೂಡಿತು ರಾಮಹೃದಯದಲ್ಲಿ. ಅವರಿಬ್ಬರನ್ನೂ ಘಾಸಿಗೊಳಿಸದೆ ಸಮ್ಮೋಹನಾಸ್ತçದಿಂದ ಮರುಳುಗೊಳಿಸಿ ಸೆರೆಹಿಡಿದು ತಂದು ತನಗೊಪ್ಪಿಸಿದರೆ ಅಷ್ಟೇ ಸಾಕು ಎಂದು ತೋರಿತು ಅವನಿಗೆ. ಲಕ್ಷö್ಮಣನಿಗೆ ಅದನ್ನು ತಿಳಿಸುವಂತೆ ಸೇವಕರನ್ನು ಕಳುಹಿಸಿಕೊಟ್ಟ ರಣರಂಗಕ್ಕೆ.ಅಲ್ಲಿಂದ ಬಂದ ಸೇವಕರು ಕುಶನ ಕುಶಲತೆಯನ್ನು ಸಾರಿಹೇಳಿದರು ಶ್ರೀರಾಮನಿಗೆ. “ದೀಕ್ಷೆಯನ್ನು ಬಿಟ್ಟು ಆ ಕುಶನೊಡನೆ ನೀವು ಯುದ್ಧಕ್ಕೆ ಹೋಗುವುದೇ ಒಳ್ಳೆಯದು. ಲವನನ್ನೂ ಮೀರಿದ ವೀರ ಆ ಕುಶ. ಶತ್ರುಘ್ನ ಲಕ್ಷö್ಮಣರ ಜೀವ ಉಳಿದಿದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಸಂದೇಹವಿದೆ. ಅಂದು ಶ್ರೀಕೃಷ್ಣನಿಗೆ ಮೊಲೆಯೂಡಿಸಲು ಹೋದ ಪೂತನಿಯಂತಾಗಿದೆ ನಮ್ಮ ಸೇನೆಯ ಸ್ಥಿತಿ” ಎಂದರು.ತನ್ನ ತಮ್ಮಂದಿರು ಪ್ರಾಣವನ್ನೇ ಕಳೆದುಕೊಂಡರೋ ಏನೋ ಎಂದು ಅತಿಯಾದ ಆಘಾತಕ್ಕೊಳಗಾದ ರಾಮ ಮೂರ್ಛಿತನಾದ. ಭರತನ ಉಪಚಾರವದು ಮರುಪ್ರಜ್ಞೆ ನೀಡಿತು ಮಾರುತಿಯ ಒಡೆಯನಿಗೆ. ತನಗಾಗಿ ಸದಾ ಸೇವೆ ಸಲ್ಲಿಸುತ್ತಿದ್ದ ಲಕ್ಷö್ಮಣ ತೀರಿಹೋದನೇ! ಎಂದು ಮತ್ತೆ ಮತ್ತೆ ರೋಧಿಸಿದ ರಾಮ. ಪರಮ ಪರಾಕ್ರಮಿಗಳೆನಿಸಿಕೊಂಡ ಶತ್ರುಘ್ನ ಲಕ್ಷö್ಮಣರಿಗೆ ಸೋಲುಣಿಸಿದ ಪುಟ್ಟ ಪೋರರ ಶೌರ್ಯ ಅಚ್ಚರಿ ಹುಟ್ಟಿಸಿತ್ತು ರಘುಕುಲತಿಲಕನಲ್ಲಿ. ತನ್ನ ದೇಹದ ಮೇಲಿರುವ ಸೀತೆಯ ವದನದ ಗುರುತು ಆ ಬಾಲಕರ ಮೈಯ್ಯ ಮೇಲೆಯೂ ಇದೆ ಎಂಬ ವಿಚಾರ ತಿಳಿದುಬಂದಿತ್ತು ಅವನಿಗೆ. ಯಾರವರು ಎಂಬ ಕೌತುಕ ಮೂಡಿತ್ತು ಅವನಲ್ಲಿ. ಶತ್ರುಘ್ನ ಲಕ್ಷö್ಮಣರ ಬಗ್ಗೆ ಮತ್ತೆ ಮತ್ತೆ ಹುಟ್ಟುತ್ತಲೇ ಇತ್ತು ಆತಂಕ.“ಕರೆಸು ಮತ್ತೊಮ್ಮೆ ಆ ಸೇವಕರನ್ನು. ಮರಳಿ ಕೇಳುವೆ ನನ್ನ ತಮ್ಮಂದಿರ ಸಮಾಚಾರವನ್ನು” ಎಂದು ಹೇಳಿದ ಭರತನಲ್ಲಿ. ಮತ್ತದೇ ಭೀತಿ ಹುಟ್ಟಿಸುವ ಮಾತುಗಳನ್ನಾಡಿದರು ಸೇವಕರು ರಾಮನ ಎದುರಲ್ಲಿ.ಸಹೋದರನಿಗೆ ಸಮಾಧಾನ ಹೇಳದಿರುವುದು ಸರಿಯಲ್ಲ ಈ ಸಮಯದಲ್ಲಿ ಎಂದು ತೋರಿತು ಸೋದರ ಭರತನಿಗೆ. “ಭಯಕ್ಕೊಳಗಾದ ಈ ಸೇವಕರು ಏನೋ ಗೊತ್ತಿಲ್ಲದೆ ಮಾತನಾಡುತ್ತಿದ್ದಾರಷ್ಟೇ. ಲಕ್ಷö್ಮಣ ಶತ್ರುಘ್ನರು ಯುದ್ಧದ ಆಯಾಸದಿಂದ ಪ್ರಜ್ಞೆ ಕಳೆದುಕೊಂಡಿರಬಹುದು. ಮರಣವನ್ನಂತೂ ಹೊಂದಿರಲಿಕ್ಕಿಲ್ಲ. ಅದು ಖಚಿತ. ಸುಮ್ಮನೆ ಧೈರ್ಯಗೆಡಬೇಡ. ನಾನೇ ಹೋಗುತ್ತೇನೆ ಯುದ್ಧರಂಗಕ್ಕೆ. ಆ ಬಾಲಕರನ್ನು ಎದುರಿಸಿ, ಕುದುರೆಯನ್ನು ಬಿಡಿಸಿ ತರುತ್ತೇನೆ” ಎಂದು ರಾಮನಿಗೆ ಸಾಂತ್ವನ ಹೇಳಿದ.ಸುಷೇಣ, ಅಂಗದ, ಜಾಂಬವ, ಹನುಮಂತ ಮೊದಲಾದ ವೀರರನ್ನು ಕೂಡಿಕೊಂಡು, ಚತುರಂಗ ಸೇನೆಯನ್ನು ಜೊತೆಮಾಡಿಕೊಂಡು, ಗಂಗಾನದಿಯ ತೀರಕ್ಕೆ ಬಂದುನಿAತ ಭರತ. ಯುದ್ಧದ ವೃತ್ತಾಂತವನ್ನು ತಿಳಿದುಬರುವ ಹೊಣೆಯನ್ನು ಹನುಮಂತನಿಗೆ ವಹಿಸಿ ಕಳುಹಿಸಿಕೊಟ್ಟ.ಯುದ್ಧರಂಗಕ್ಕೆ ಬಂದ ಆಂಜನೇಯ. ಪ್ರಾಣ ಕಳೆದುಕೊಂಡು ಬಿದ್ದಿದ್ದ ಅಗಣಿತ ಸಂಖ್ಯೆಯ ಭಟರನ್ನು ಕಂಡ ರಾಮಭಂಟ. ‘ನಮ್ಮ ಅಣ್ಣನಾದ ಆ ರಾಮ ನಿನ್ನ ಸುತೆ ಸೀತೆಯನ್ನು ತೊರೆದಿರುವುದಕ್ಕೆ ಕೋಪಿಸಿಕೊಳ್ಳದಿರು. ಸಹನೆ ವಹಿಸು’ ಎಂದು ಭೂಮಿಯನ್ನು ಸಮಾಧಾನಪಡಿಸುವ ರೀತಿಯಲ್ಲಿ ಮೂರ್ಛೆತಪ್ಪಿ ಧರಣಿಯನ್ನಪ್ಪಿಬಿದ್ದಿದ್ದ ಶತ್ರುಘ್ನ ಲಕ್ಷö್ಮಣರನ್ನು ಕಂಡ.ಅವರಿಬ್ಬರನ್ನೂ ಹೆಗಲಮೇಲೆ ಹೊತ್ತುಕೊಂಡ ಅಂಜನಾಸುತ ಮರಳಿಬಂದ ಭರತನಲ್ಲಿಗೆ. ಭರತ ತನ್ನ ಸಹೋದರರನ್ನು ರಥದಲ್ಲಿ ಕೂರಿಸಿದ. ಕುದುರೆಯನ್ನು ಬಾಳೆಗಿಡಕ್ಕೆ ಕಟ್ಟಿ, ಬಿಲ್ಲು ಬಾಣಗಳನ್ನು ಹಿಡಿದುನಿಂತಿದ್ದ ಶೂರ ಸೋದರರನ್ನು ಎದುರಿಸಲು ಹೊರಟ ಕೈಕೇಯಿಸುತ, ಸೇನೆಸಹಿತ.ಲವ ಕುಶರು ಕಂಡರು ಸೇನೆಯನ್ನು. ಕದನಕ್ಕೆ ಸಿದ್ಧರಾದರು. ಯುದ್ಧಕ್ಕೆ ಬದ್ಧರಾದರು. ಬಾಣಗಳನ್ನು ಪ್ರಯೋಗಿಸಿದರು ಸತತವಾಗಿ. ಬಾಲಕರ ವೀರತ್ವವದು ಮೆಚ್ಚಿಸಿತು ದೇವಾನುದೇವತೆಗಳನ್ನು. ಹೂಮಳೆಗರೆದರು ಸುರರು ಸೀತಾಸುತರ ಮೇಲೆ.ಅವರ ಬಾಣದ ಝೇಂಕಾರವದು ಮೂರೂ ಲೋಕಗಳನ್ನು ವ್ಯಾಪಿಸಿತು. ದಿಗ್ಗಜಗಳು ಕಿವುಡಾದವು. ಪರ್ವತಗಳು ನಡುಗಿದವು. ಬಾಣಗಳೇ ಸಂಪೂರ್ಣ ಆವರಿಸಿತು ಭೂಮಿಯ ಮೇಲ್ಭಾಗವನ್ನು. ಸೂರ್ಯಪ್ರಭೆಯದು ತೋರದಾಯಿತು. ಗಾಢಾಂಧಕಾರಕ್ಕೀಡಾದ ಗೃಹದಂತೆ ತೋರಿತು ಆ ಕದನರಂಗ.ರಾಮಸುತರನ್ನು ಎದುರಿಸಹೊರಟ ಸೈನಿಕರಿಗೆ ಇಲ್ಲದಾಯಿತು ಆರಾಮ, ವಿರಾಮ. ಉಂಟಾದದ್ದು ಬರಿಯ ದೇಹಶ್ರಮ. ಅವರನ್ನು ಗೆಲ್ಲುವ ವೀರರಾರೂ ಇಲ್ಲ ಎಂಬAತಹ ಭಾವನೆಗೊಳಗಾಯಿತು ಸಮಸ್ತ ಸೇನೆ. ಭರತನ ಸೈನಿಕರು ಅದಿರಿದರು. ಅಧೀರರಾದರು.ಆ ಗಳಿಗೆಯಲ್ಲಿಯೇ ಹನುಮಂತ “ಬಾಲಕರ ಕದನದ ರೀತಿಯದು ಆ ರಘುಕುಲತಿಲಕನ ಯುದ್ಧಶೈಲಿಯಂತಿದೆ” ಎಂದು ಯುದ್ಧೋನ್ಮುಖರಾಗಿದ್ದ ಕುಶ ಲವರನ್ನು ತೋರಿಸಿದ ಭರತನಿಗೆ. ಅವನು ಅಚ್ಚರಿಪಟ್ಟ.ಅವರ ಬಳಿಗೇ ಹೋದ. ರಾಮವದನವನ್ನು ಹೋಲುವ ಅವರ ಮೊಗದಾವರೆಗಳನ್ನು ಕಂಡು ರೋಮಾಂಚಿತನಾದ. ಪ್ರೀತಿಯಿಂದ ಮಾತನಾಡಿಸಿದ. “ನಮ್ಮ ಸೈನಿಕರನ್ನು ಕೊಂದಿದ್ದೀರಿ. ನನ್ನ ಸಹೋದರರನ್ನು ಘಾಸಿಗೊಳಿಸಿದ್ದೀರಿ. ಇನ್ನಾದರೂ ಕುದುರೆಯನ್ನು ಬಿಟ್ಟು ಮನೆಗೆ ಹೋಗಿ” ಎಂದು ಅನುನಯದಿಂದ ನುಡಿದ.ಅವನ ಸಾತ್ವಿಕ ನುಡಿಯದು ಹಿಡಿಸಲಿಲ್ಲ ಕದನದ ಸತ್ವಪೂರ್ಣ ಗೆಲುವನ್ನು ಬಯಸಿದ್ದ ವೀರ ಬಾಲಕರಿಗೆ. ಭರತ, ನಳ, ಹನುಮಂತ, ಜಾಂಬವ, ಅಂಗದ, ನೀಲ ಕುಮುದರು, ಸುಷೇಣ ಇವರೆಲ್ಲರೂ ಅನುಕ್ರಮದಲ್ಲಿ ಬಾಣಗಳ ಹೊಡೆತಕ್ಕೆ ಈಡಾಗುತ್ತಲೇ ಹೋದರು.ಚೈತನ್ಯವನ್ನೇ ಕಳೆದುಕೊಂಡ ಭರತ ಪ್ರಜ್ಞೆ ಕಳೆದುಕೊಂಡು ಭೂಮಿಗೆ ಬಿದ್ದ. ಈ ಸುದ್ದಿ ಸಿಡಿಯಿತು ಅಯೋಧ್ಯೆಯೆಡೆಗೆ…ಶ್ರೀರಾಮನಿದ್ದ ಕಡೆಗೆ… ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
ಅಂಕಣ ಸಂಗಾತಿ-39 ಸುಜಾತಾ ರವೀಶ್ ವೃತ್ತಿ ವೃತ್ತಾಂತ ಮತ್ತಷ್ಟು ಎರರ್ ಪಟ್ಟಿಗಳು ಈ ಹಿಂದೆಯೇ ಹೇಳಿದಂತೆ ತಪ್ಪುಗಳ ಲಿಸ್ಟ್ ಬಂದಾಗ ಅದನ್ನು ಸರಿಪಡಿಸುವುದು ನನಗೆ ತುಂಬಾ ಖುಷಿಯ ಕೆಲಸ ನಮ್ಮ ಪಾಲಿಸಿ ಸೇವಾ ವಿಭಾಗದಲ್ಲಿ ಸಂಭವಿಸಬಹುದಾದ ತಪ್ಪುಗಳ ಪಟ್ಟಿಗಳನ್ನು ಸರಿಪಡಿಸಿದ್ದಾಗಿತ್ತು ಕೆಲವೊಮ್ಮೆ ಪ್ರೀಮಿಯಂ ಗೆ ಹಣ ಅಡ್ಜಸ್ಟ್ ಮಾಡಲು ಸಾಧ್ಯವಾಗದೆ ಬಂದ ಹಣವನ್ನು ಡೆಪಾಸಿಟ್ ಅಂತ ಯಾವುದಕ್ಕೂ ಅಕೌಂಟ್ ಮಾಡದೆ ಇಟ್ಟು ಬಿಡುವ ವ್ಯವಸ್ಥೆ ಇತ್ತು .ಆ ರೀತಿ ಇಟ್ಟ ಡೆಪಾಸಿಟ್ ಗಳು ನಾನು ಪಾಲಿಸಿ ಸೇವಾ ವಿಭಾಗದಲ್ಲಿದ್ದಾಗ ಸ್ವಲ್ಪ ಹೆಚ್ಚಿನ ಸಂಖ್ಯೆ ಹಾಗೂ ಹೆಚ್ಚಿನ ಮೊತ್ತದಲ್ಲಿಯೇ ಇದ್ದವು. ಅದು ಏಕೆ ಆ ರೀತಿ ಪ್ರೀಮಿಯಂ ಅಡ್ಜಸ್ಟ್ ಆಗಲಿಲ್ಲ ಎಂಬುದನ್ನು ಕಂಡುಕೊಂಡು, ಬೇಕಾದ ಕಡೆ ಪಾಲಿಸಿ ದಾರರ ಜೊತೆ ಪತ್ರ ವ್ಯವಹಾರ ಅಥವಾ ಫೋನ್ ನಲ್ಲಿ ಹೇಳಿ ಕಡಿಮೆ ಇದ್ದ ಮೊತ್ತ ಕಟ್ಟಿಸಿ ಅದನ್ನು ಸರಿ ಮಾಡಬೇಕಿತ್ತು. ಕೆಲವೊಮ್ಮೆ ಹೆಚ್ಚು ಹಣ ಉಳಿದುಕೊಳ್ಳುತ್ತಲೂ ಇತ್ತು .ಅವುಗಳನ್ನು ಸಹ ವಾಪಸ್ಸು ಮಾಡಬೇಕಿತ್ತು. ಆ ರೀತಿ ಹೆಚ್ಚುವರಿ ಇದ್ದ ಹಣ ನೂರು ರೂಪಾಯಿಗಿಂತ ಹೆಚ್ಚು ಇದ್ದಲ್ಲಿ ಚೆಕ್ ಮೂಲಕ ವಾಪಸ್ಸು ನೂರು ರೂಪಾಯಿಯ ಒಳಗೆ ಇದ್ದಲ್ಲಿ ಮನಿ ಆರ್ಡರ್ ಮೂಲಕ ಹಿಂದಿರುಗಿಸಬೇಕಿತ್ತು. ಒಂದಷ್ಟು ದಿನ ಪಟ್ಟು ಹಿಡಿದು ಆ ಕೆಲಸದ ಬಗ್ಗೆ ಗಮನ ಹರಿಸಿದ್ದರಿಂದ ಎಲ್ಲಾ ಕೇಸ್ ಗಳು ಇತ್ಯರ್ಥವಾಗಿ ಡೆಪಾಸಿಟ್ ಜೀರೋ ಅಂದರೆ ನಿಲ್ ಆಗಿ ಅದಕ್ಕೂ ಸಹ ನಮಗೆ ವಿಭಾಗಿಯ ಕಚೇರಿಯಿಂದ ಒಂದು ಪ್ರಮಾಣ ಪತ್ರ ಬಂದಿತ್ತು. ಮತ್ತೊಂದು ಹೆಚ್ಚು ತಪ್ಪುಗಳಾಗುತ್ತಿದ್ದ ಕ್ಷೇತ್ರ ಎಂದರೆ ಪೆನ್ಷನ್.ಅನ್ಯುಯಿಟಿ ವಿಭಾಗ. ಅಲ್ಲಿ ಪಾಲಿಸಿಗಳ ಮಾಹಿತಿಗಳು ಕೆಲವೊಮ್ಮೆ ತಪ್ಪಾಗಿ ಫೀಡ್ ಆಗಿದ್ದರಿಂದ ಕೆಲವೊಂದು ಕಡೆ ತಾಳೆ ಆಗದೆ ಅವು ಎರರ್ ಪಟ್ಟಿಯಲ್ಲಿ ಬರುತ್ತಿತ್ತು . ಫೈಲ್ಗಳನ್ನು ತರಿಸಿ ಪ್ರೊಪೋಸಲ್ ನಲ್ಲಿ ಇದ್ದ ಹಾಗೆ ಎಲ್ಲಾ ಮಾಹಿತಿಗಳನ್ನು ತಿದ್ದಿ ಮಾಹಿತಿ ಪೂರ ಸರಿಯಾದ ಮೇಲೆ ಪೆನ್ಷನ್ ಸೆಟಲ್ ಮಾಡಲು ಆಗುತ್ತಿತ್ತು .ಆ ರೀತಿ 600ಕ್ಕೂ ಹೆಚ್ಚು ಎರರ್ ಗಳು ಇದ್ದವು. ಈ ಕೆಲಸ ಪಾಲಿಸಿ ಸೇವಾ ವಿಭಾಗಕ್ಕೆ ಸಂಬಂಧಿಸಿದ್ದಲ್ಲ, ದಾವಾ ವಿಭಾಗಕ್ಕೆ ಸಂಬಂಧಿಸಿದ್ದು. ಆಗ ಆ ವಿಭಾಗದ ಅಧಿಕಾರಿ ಆಗಿದ್ದವರು ಎಸ್ ಆರ್ ಮುರಳಿ. ಈ ಹಿಂದೆ ನಾನು ವಿಭಾಗೀಯ ಕಚೇರಿಯಲ್ಲಿ ಇದ್ದಾಗ ನನ್ನ ಎಚ್ ಜಿ ಎ ಆಗಿದ್ದವರು. ಅವರು ಈ ವಿಷಯದಲ್ಲಿ ನನ್ನ ಸಹಕಾರ ಕೋರಿದಾಗ ನನಗೆ ಇಷ್ಟದ ಕೆಲಸವೂ ಆದ್ದರಿಂದ ಅವರೊಂದಿಗೆ ಸೇರಿ ಆ ಪಟ್ಟಿಯನ್ನು ಸಹ ಪೂರ್ತಿ ಸರಿ ಮಾಡಿದ್ದೆವು. ಈ ಹಂತದಲ್ಲೇ ನಮ್ಮ ನಿಗಮದ ಕೆಲಸಗಳನ್ನು ಡಿಜಿಟೀಕರಣ ಮಾಡುವ ಯೋಜನೆ ಆರಂಭವಾಗಿದ್ದು. ಇದು ಸಹ ಒಂದು ಬೃಹತ್ ಯೋಜನೆ. ಆದರೆ ಇಡೀ ನಿಗಮದ ಕಾರ್ಯ ವೈಖರಿಯಲ್ಲಿ ಒಂದು ಐತಿಹಾಸಿಕ ಬದಲಾವಣೆ ಆಗಿತ್ತು ಇದರಿಂದ. LIC ಯಲ್ಲಿ ದಾಖಲೆಗಳ ಡಿಜಿಟಲೀಕರಣ ಮತ್ತು ಸ್ಕ್ಯಾನಿಂಗ್ ಯೋಜನೆ 2008 – 2010 ರ ಅವಧಿಯಲ್ಲಿ ದೇಶಾದ್ಯಂತ ಹಂತ-ಹಂತವಾಗಿ ಪ್ರಾರಂಭವಾಯಿತು.ಪಾಲಿಸಿ ದಾಖಲೆಗಳನ್ನು ಕಾಗದದ ರೂಪದಿಂದ ಡಿಜಿಟಲ್ ರೂಪಕ್ಕೆ ಬದಲಾಯಿಸಲು EDMS (Enterprise Document Management System) ಎಂಬ ಯೋಜನೆಯನ್ನು ಜಾರಿಗೆ ತರಲಾಯಿತು. ಮೊದಲನೆಯ ಹಂತ ದಾಖಲೆಗಳ ವರ್ಗಿಕರಣ ಮತ್ತು ಸಿದ್ಧತೆ ಶಾಖೆಗಳಲ್ಲಿ ಇರುವ ಹಳೆಯ ಪಾಲಿಸಿ ಫೈಲ್ ಗಳು ಲೈನ್ ದಾಖಲೆಗಳು ಮತ್ತು ಹೊಸ ಪ್ರಪೋಸಲ್ ಫಾರಂ ಗಳನ್ನು ವರ್ಗೀಕರಿಸಿ ಪಿನ್ ಅಥವಾ ಟ್ಯಾಗ್ ತೆಗೆದು ಸ್ಕ್ಯಾನಿಂಗ್ ಗೆ ಸಿದ್ಧಪಡಿಸಲಾಯಿತು. ಎರಡನೆಯ ಹಂತದಲ್ಲಿ ಇಡಿಎಂಎಸ್(EDMS) ಪೋರ್ಟಲ್ ಮೂಲಕ ಸ್ಕ್ಯಾನಿಂಗ್ ವಿಶೇಷ ಹಾಯ್ ಸ್ಪೀಡ್ ಡಾಕ್ಯುಮೆಂಟ್ ಸ್ಕ್ಯಾನರ್ ಗಳನ್ನು ಬಳಸಿ ಪಾಲಿಸಿ ಪತ್ರಗಳು ವೈದ್ಯಕೀಯ ವರದಿಗಳು ವಯಸ್ಸಿನ ದಾಖಲೆ ಮತ್ತು ಕೆ ವೈ ಸಿ ಪತ್ರಗಳನ್ನು ಇ ಡಿ ಎಂ ಎಸ್ ತಂತ್ರಾಂಶಕ್ಕೆ ಸ್ಕ್ಯಾನ್ ಮಾಡಲಾಯಿತು. ಮೂರನೆಯ ಹಂತದಲ್ಲಿ ಇಂಡಾಕ್ಸಿಂಗ್ ಮತ್ತು ಪರಿಶೀಲನೆ ಪ್ರತಿ ಸ್ಕ್ಯಾನ್ ಮಾಡಿದ ದಾಖಲೆಗೂ ಸೂಕ್ತ ಪಾಲಿಸಿ ಸಂಖ್ಯೆ ಮತ್ತು ದಾಖಲೆಯ ಪ್ರಕಾರವನ್ನು ಟ್ಯಾಗ್ ಮಾಡಿ ಡೇಟಾ ಸರಿಯಾಗಿದೆಯೇ ಎಂದು ತಾಳೆ ನೋಡಲಾಯಿತು. ನಾಲ್ಕನೆಯ ಹಂತದಲ್ಲಿ ಕೇಂದ್ರೀಕೃತ ಸರ್ವರ್ ನಲ್ಲಿ ಸಂಗ್ರಹಣೆ ಮಾಡಲಾಯಿತು ಆದ ದಾಖಲೆಗಳನ್ನು ನಿಗಮದ ಕೇಂದ್ರೀಕೃತ ಭದ್ರತಾ ಸರ್ವರ್ ನಲ್ಲಿ ಭದ್ರವಾಗಿ ಸಂಗ್ರಹಿಸಲಾಯಿತು ಇದರಿಂದಾಗಿ ಯಾವುದೇ ಶಾಖೆಯಿಂದ ಸಿಬ್ಬಂದಿ ಕ್ಷಣಾರ್ಧದಲ್ಲಿ ದಾಖಲೆಗಳನ್ನು ವೀಕ್ಷಿಸಲು ಸಾಧ್ಯವಾಯಿತು. ಇದರಿಂದಾದ ಮುಖ್ಯ ಪ್ರಯೋಜನಗಳು:ಸೇವೆಗಳ ವೇಗ: ಪಾಲಿಸಿ ಸಾಲ (Policy Loan), ಸರ್ವಿಸ್ಸಿಂಗ್, ಮತ್ತು ಕ್ಲೈಮ್‌ಗಳ (Claim Settlement) ಪ್ರಕ್ರಿಯೆ ಅತ್ಯಂತ ವೇಗವಾಗಿ ಪೂರ್ಣಗೊಳ್ಳಲು ನೆರವಾಯಿತು.ದಾಖಲೆಗಳ ಭದ್ರತೆ: ಹಳೆಯ ಕಾಗದದ ಫೈಲ್‌ಗಳು ಹಾಳಾಗುವುದು ಅಥವಾ ಕಳೆದುಹೋಗುವ ಅಪಾಯ ತಪ್ಪಿತು.Any Branch Servicing: ಗ್ರಾಹಕರು ದೇಶದ ಯಾವುದೇ LIC ಶಾಖೆಗೆ ಹೋದರೂ ಅವರ ಪಾಲಿಸಿ ದಾಖಲೆಗಳನ್ನು ಕಂಪ್ಯೂಟರ್ ಪರದೆಯ ಮೇಲೆ ತಕ್ಷಣ ಪರಿಶೀಲಿಸಲು ಸಾಧ್ಯವಾಯಿತು.ಪ್ರಸ್ತುತ ಹೊಸ ಪ್ರಪೋಸಲ್ ಫಾರ್ಮ್‌ಗಳು ಮತ್ತು ದಾಖಲೆಗಳನ್ನು e-KYC ಹಾಗೂ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯ ಮೂಲಕ ನೇರವಾಗಿ ಡಿಜಿಟಲ್ ರೂಪದಲ್ಲೇ ಅಪ್‌ಲೋಡ್ ಮಾಡಲಾಗುತ್ತದೆ. ಇದೊಂದು ಬೃಹತ್ ಯೋಜನೆ ಎಂದು ಮೊದಲೇ ಹೇಳಿದ್ದೆ. ಸಾವಿರಗಳ ಗಟ್ಟಲೆ ಕೆಲವೊಂದು ದೊಡ್ಡ ಶಾಖೆಗಳಲ್ಲಿ ಲಕ್ಷಗಟ್ಟಲೆ ಇರುವ ದಾಖಲೆಗಳನ್ನು ಈ ರೀತಿ ಸ್ಕ್ಯಾನಿಂಗ್ ಗೆ ಸಿದ್ಧ ಮಾಡುವ ಕೆಲಸ ಶಾಖೆಗಳಿಗೆ. ಆದರೆ ಅದಕ್ಕೆಂದು ಹೆಚ್ಚುವರಿ ಸಿಬ್ಬಂದಿಯನ್ನೇನು ಕೊಟ್ಟಿರಲಿಲ್ಲ. ಇರುವ ಸಿಬ್ಬಂದಿಗಳನ್ನೇ ಪಾನಲ್ ತರಹ ಮಾಡಿ ಕೆಲಸಕ್ಕೆ ನಿಯೋಜಿಸಿ ತುಂಬಾ ಯಶಸ್ವಿಯಾಗಿ ಈ ಕಾರ್ಯವನ್ನು ನಿರ್ವಹಿಸಲಾಯಿತು. ಈ ಸಮಯದಲ್ಲಿ ನಮಗೆ ಇದ್ದ ಅಧಿಕಾರಿ ಹಂಸಿನಿ ಎನ್ನುವವರು. ಇದನ್ನು ತುಂಬಾ ಸಮರ್ಥವಾಗಿ ನಿಭಾಯಿಸಿದರು ಎಂದೇ ಹೇಳಬಹುದು. ಆದರೆ ಮೊದ-ಮೊದಲು ಆರಂಭಿಕ ತೊಂದರೆಗಳು ಬಹಳಷ್ಟು ಬಂದವು ಕೆಲವೊಂದು ಡಾಕೆಟ್ ಗಳು ಸಿಗುತ್ತಿರಲಿಲ್ಲ. ಇಡಿಎಂಎಸ್ ಇಮೇಜ್ ಸಹ ಇರುತ್ತಿರಲಿಲ್ಲ. ಪಾಲಿಸಿ ಸೇವೆಗಾಗಿ ಬಂದ ಪಾಲಿಸಿದಾರರಿಗೆ ಸಮರ್ಪಕ ಕಾರಣ ನೀಡಲು ಆಗುತ್ತಿರಲಿಲ್ಲ ಆದರೆ ಇವೆಲ್ಲ ಕೆಲ ದಿನಗಳು ಮಾತ್ರ. ನಂತರ ಇದು ತುಂಬಾ ಪ್ರಾಯೋಗಿಕವಾಗಿ ಅನುಕೂಲಕ್ಕೆ ಬಂತು. ಈಗಂತೂ ದೇಶದ ಯಾವ ಮೂಲೆಯಲ್ಲಿ ಪಾಲಿಸಿ ಸೇವೆ ನಡೆಯುತ್ತಿದ್ದರೂ ಬೇರೆ ಯಾವುದೇ ಶಾಖೆಯಲ್ಲಿ ಪ್ರೀಮಿಯಂ ಕಟ್ಟುವುದು ಸಾಲ ತೆಗೆದುಕೊಳ್ಳುವುದು ನಾಮಿನಿ ಬದಲಾಯಿಸುವುದು ಕೆಲವೊಂದು ಸೀಮಿತ ಪಾಲಿಸಿಗಳಿಗೆ ದಾವಾ ಮೊತ್ತವನ್ನು ಪಡೆಯುವುದು ಸಹ ಸಾಧ್ಯವಾಗುತ್ತಿದೆ. ಇದಿಷ್ಟು ಕಚೇರಿಯ ಒಳಗಿನ ವಿಷಯಗಳು. ಆದರೆ ಇದೇ ಅವಧಿಯಲ್ಲಿ ನಾನು ಮತ್ತೊಮ್ಮೆ ಹೈದರಾಬಾದ್ ನ ತರಬೇತಿಗೆ ಹೋಗಿ ಬಂದಿದ್ದು. ವಿಭಾಗಿಯ ಕಚೇರಿಯ ನಮ್ಮದೇ ಕಾರ್ಮಿಕ ಸಂಘದ ಮಂಜುಳಾ ಮತ್ತು ಇನ್ನೊಬ್ಬ ಸ್ಟೆನೋಗ್ರಾಫರ್ ಮಂಜುಳಾ ಜೊತೆಗೆ ನನ್ನನ್ನು ತರಬೇತಿಗೆ ಹಾಕಿದ್ದರು. ಒಳ್ಳೆಯ ಕಂಪನಿ ತುಂಬಾ ಚೆನ್ನಾಗಿ ಇತ್ತು. ಈ ವೇಳೆಗೆ ತರಬೇತಿಯ ಅವಧಿಯನ್ನು ಮೂರು ದಿನಗಳಿಗೆ ಇಳಿಸಿದ್ದರು. ಆಗ ಮೈಸೂರಿನಿಂದ ನೇರ ರೈಲು ಇರಲಿಲ್ಲ ಸಂಜೆ 6:00 ಗಂಟೆಗೆ ಬೆಂಗಳೂರಿನಿಂದ ಇದ್ದದ್ದು ಬೆಳಿಗ್ಗೆ ಹನ್ನೆರಡು ಗಂಟೆಗೆ ಹೊರಟು ಬೆಂಗಳೂರಿಗೆ ಬಸ್ ನಲ್ಲಿ ಹೋಗಿ ಅಲ್ಲಿ ರಾಮಕೃಷ್ಣ ಹೋಟೆಲ್ ನಲ್ಲಿ ಊಟ ಮಾಡಿ ಯಾವುದೋ ಒಂದು ಪುಟ್ಟ ಮಾಲ್ ನಲ್ಲಿ ಸುತ್ತಾಡಿ ನಂತರ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆವು. ಅಲ್ಲದೆ ಒಂದು ದಿನ ಮುಂಚೆ ಹೋಗುವ ಅನುಕೂಲ ಇರಲಿಲ್ಲ. ಬೆಳಗ್ಗೆ ಹೋದ ತಕ್ಷಣವೇ ತರಬೇತಿ ಆರಂಭವಾಗಿತ್ತು ಹಾಗೂ ನಾಲ್ಕನೆಯ ದಿನ ತರಬೇತಿ ಮುಗಿದ ತಕ್ಷಣವೇ ಮೈಸೂರಿನ ರೈಲು ಹತ್ತಬೇಕಿತ್ತು ಹಾಗಾಗಿ ಬಹಳಷ್ಟು ಜಾಗಗಳನ್ನು ನೋಡಲಿಲ್ಲ. ಬೆಳಿಗ್ಗೆ ಬೇಗ ಎದ್ದು ತರಬೇತಿ ಆರಂಭವಾಗುವ ಮೊದಲೇ ಬಿರ್ಲಾ ಮಂದಿರ ಅನ್ನು ನೋಡಿಕೊಂಡು ಬಂದಿದ್ದೆವು. ಇನ್ನುಳಿದ ಮೂರು ದಿನ ಬೇಗಂ ಪೇಟ್ ಚಾರ್ಮಿನಾರ್ ಇಲ್ಲೆಲ್ಲ ಸುತ್ತಿ ಒಂದಷ್ಟು ಶಾಪಿಂಗ್ ಮಾಡಿದ್ದು ಅಷ್ಟೇ. ಆ ಬಾರಿ ನಾನೇನು ಹೆಚ್ಚು ಖರೀದಿಸಲಿಲ್ಲ ಯಾಕೋ ಏನೋ ಬೇಡ ಎನಿಸಿತ್ತು ಆಗ. ಮತ್ತೊಂದು ಮುಖ್ಯವಾದ ಘಟನೆ ನಡೆದದ್ದು ಅಂದರೆ ಆಫೀಸಿನ ಪಕ್ಕದ ಬೀದಿಯಲ್ಲಿ ಒಂದು ಸಂಗೀತ ಶಾಲೆ ಆರಂಭವಾದ್ದು. ಒಂದು ದಿನ ಬೋರ್ಡ್ ನೋಡಿದ್ದೆ. ಅಲ್ಲಿ ಹೋಗಿ ದೇವರನಾಮ ಕಲಿಯುವ ಆಸೆ ನನಗೆ ಗೆಳತಿಯರಿಗೆ ಹೇಳಿದಾಗ ಒಂದು ಐದು ಜನ ತಾವೂ ಕಲಿಯಲು ಸಿದ್ದರಾದರು. ವಾರದಲ್ಲಿ ಎರಡು ದಿನ ಸಂಜೆ ಆಫೀಸ್ ಮುಗಿದ ನಂತರ ಅಲ್ಲಿ ಹೋಗಿ ಹೇಳಿಸಿಕೊಂಡು ಹೋಗುವುದು ಎಂದು ನಿರ್ಧಾರವಾಯಿತು. ಒಂದಷ್ಟು ಹಾಡುಗಳನ್ನು ಕಲಿತೂ ಆಯಿತು. ಅಷ್ಟರಲ್ಲಿ ನನ್ನ ಸಂಗೀತ ಕಲಿಯುವ ಚಿಕ್ಕಂದಿನ ಆಸೆಗೆ ಕೊಂಬು ಬಂದಿತ್ತು. ಸಂಗೀತ ಟೀಚರ್ ಅಂಬಿಕಾ ಅವರು ಈಗಲೂ ಕಲಿಯಬಹುದು ಎಂದು ಪ್ರೋತ್ಸಾಹ ಕೊಟ್ಟಿದ್ದರಿಂದ ಶಾಸ್ತ್ರೀಯ ಸಂಗೀತ ಕ್ಲಾಸಿಗೆ ನಾನು ಮತ್ತು ಗೆಳತಿ ವೈದೇಹಿ ಸೇರಿಕೊಂಡೆವು. ಅದೆಷ್ಟುಓ ದಿನ ಆದ್ಮೇಲೆ ಗೆಳತಿಯರು ಬಿಟ್ಟು ದೇವರನಾಮದ ಕ್ಲಾಸ್ ಕಥೆ ಮುಗಿಯಿತು. ಆದರೆ ನಾನು ಮತ್ತು ವೈದೇಹಿ ಶಾಸ್ತ್ರೀಯ ಸಂಗೀತದ ಕ್ಲಾಸ್ಗೆ ನಿಯಮಿತವಾಗಿ ಹೋಗುತ್ತಿದ್ದೆವು. ಈ ನಡುವೆ ಮೈಸೂರು ಸಿಲ್ಕ್ ಫ್ಯಾಕ್ಟರಿಯವರು ಹಾಗೂ ಚಾಮುಂಡಿ ಸಿಲ್ಕ್ ಫ್ಯಾಕ್ಟರಿ ಅವರು ನಮ್ಮ ಶಾಖೆಯ ಆವರಣದಲ್ಲಿ ಸ್ಟಾಲ್ ಹಾಕಿದ್ದು ಮತ್ತು ಕಂತಿನಲ್ಲಿ ಸೀರೆ ಕೊಳ್ಳಲು ಅನುವು ಮಾಡಿ ಕೊಟ್ಟಿದ್ದು ಒಂದು ವಿಶೇಷ ಸಂಗತಿ. ನಮ್ಮದೇ ಕಟ್ಟಡದಲ್ಲಿ ಕೆಳಗಡೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ವಲಯ ಕಛೇರಿ ಇತ್ತು ಹಾಗೂ ನಮ್ಮ ಮೇಲಿನ ಎರಡನೆಯ ಫ್ಲೋರ್ ನಲ್ಲಿ ರಾಜ್ಯ ವಿಮಾ ಘಟಕ ಹಾಗೂ ಹಿಂದುಳಿದ ವರ್ಗದವರ ಕಚೇರಿ ಇತ್ತು ಎಲ್ಲಾ ಸಿಬ್ಬಂದಿಗಳಿಗೂ ಇದರಿಂದ ಅನುಕೂಲವಾಯಿತು. ಆ ಸಂಸ್ಥೆಗಳವರ ಸೇಲ್ ಸಹ ಚೆನ್ನಾಗಿ ಆಯಿತು . ಹಾಗೆಲ್ಲ ಕರೆದು ಕರೆದು ಕಂತಿನಲ್ಲಿ ಕೊಟ್ಟು ನಮ್ಮ ಕಚೇರಿಗೆ ಬಂದು ಸ್ಟಾಲ್ ಹಾಕುತ್ತಿದ್ದ ಮೈಸೂರು ಸಿಲ್ಕ್ ನ ಉತ್ಪಾದನೆ ಈಗ ಬಾರಿ ಇಳಿಮುಖವಾಗಿದ್ದು ಕೊಳ್ಳುತ್ತೇನೆ ಎಂದರೂ ಸಹ ಸೀರೆಗಳು ಸಿಗುತ್ತಿಲ್ಲ .ಎಂತಹ ವಿಪರ್ಯಾಸ ನೋಡಿ. ಅದರ ಬೆಲೆಗಳು ಮುಗಿಲೆತ್ತರ ಆದರೂ ಕೊಳ್ಳಲು ಜನ ಮುಗಿ ಬೀಳುತ್ತಾರೆ. ಆದರೆ ಸಮರ್ಪಕವಾದ ವ್ಯವಸ್ಥೆಯೇ ಇಲ್ಲ. ಅಷ್ಟರಲ್ಲಿ ಮತ್ತೊಂದು ಕುತೂಹಲಕಾರಿ ಕೆಲಸ ನನ್ನ ಪಾಲಿಗೆ. ಏನದು? ಮುಂದಿನ ವಾರ ತಿಳಿದುಕೊಳ್ಳೋಣ. ಸುಜಾತಾ ರವೀಶ್
ಧಾರಾವಾಹಿ ಸಂಗಾತಿ-37 ಸವಿತಾ ದೇಶಮುಖ ಜಯದೇವಿತಾಯಿಲಿಗಾಡೆ ಜೀವನಗಾಥೆ ೧೯೫೨ರ ಬೇಲೂರು ಸಾಹಿತ್ಯ ಸಮ್ಮೇಳನ- ಅಖಂಡ ಕರ್ನಾಟಕ ಗೊತ್ತುವಳಿ ೧೯೫೨ರ ಮೇ ತಿಂಗಳು…. ಐತಿಹಾಸಿಕ ಬೇಲೂರು ….ಮತ್ತೊಮ್ಮೆ ಕನ್ನಡದ ಇತಿಹಾಸಕ್ಕೆ ಸಾಕ್ಷಿಯಾಗಲು ಸಜ್ಜಾಗಿತ್ತು. ಕನ್ನಡ ಸಾಹಿತ್ಯದ ದಿಗ್ಗಜರು, ಸಾಹಿತಿಗಳು, ಚಿಂತಕರು, ಕನ್ನಡಾಭಿಮಾನಿಗಳು ಒಂದೆಡೆ ಸೇರಿದ್ದ… ೩೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೇಲೂರು ಆತಿಥ್ಯ ವಹಿಸಿತ್ತು. ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು ವಿದ್ವಾಂಸರಾದ ಎಸ್.ಸಿ. ನಂದೀಮಠರು. ಆ ಸಮ್ಮೇಳನಕ್ಕೆ ಜಯದೇವಿತಾಯಿಯವರು ಅತಿಥಿಗಳಾಗಿದ್ದರು.ಅವರ ಹೃದಯದಲ್ಲಿ ಬಹುಕಾಲದಿಂದ ಉರಿಯುತ್ತಿದ್ದ ಕನ್ನಡದ ಜ್ಯೋತಿ ಪ್ರಜ್ವಲಿಸುವ ಕಾಲವಾಗಿತ್ತು. ಸೊಲ್ಲಾಪುರದಲ್ಲಿ ಹುಟ್ಟಿ, ಮರಾಠಿ ಮಾಧ್ಯಮದಲ್ಲಿ ಬಾಲ್ಯಶಿಕ್ಷಣ ಪಡೆದಿದ್ದ ಜಯದೇವಿತಾಯಿಯವರು ನಂತರ ಕನ್ನಡವನ್ನು ಕಲಿತು, ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿ, ಕನ್ನಡದ ಸೇವೆಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು. ಕನ್ನಡಕ್ಕಾಗಿ ಅವರ ತುಡಿತ ಅವರ ಕಣ್ಣೀರು… ಪ್ರಾಣವನ್ನೇ ಬಲಿಕೊಡುವ ಪಣ…. ಬೇಲೂರಿನ ಸಾಹಿತ್ಯ ಪರಿಷತ್ತು ಸಾಕ್ಷಿಯಾಗಿ ನಿಂತಿತ್ತು…!! ಅವರ ಪಾಲಿಗೆ ಕನ್ನಡವೆಂಬ ಭಾಷೆಯು ಅವರ ಅಂತರಂಗದ ನಾದವಾಗಿತ್ತು…ಅದು ಗಡಿಭಾಗದಲ್ಲಿ ಚದುರಿಹೋಗಿದ್ದ ಕನ್ನಡಿಗರ ಬದುಕಿನ ಬಂಧವಾಗಿತ್ತು…..ಅದು ಶರಣರ ನುಡಿಯ ಪರಂಪರೆಯಾಗಿತ್ತು….ಅದು ತಮ್ಮ ತಾಯ್ನಾಡಿನ ನೆನಪಾಗಿತ್ತು….ಕನ್ನಡಿಗರೆಲ್ಲ ಒಂದಾಗಬೇಕೆಂಬ ಕನಸಾಗಿತ್ತು……!! ಬೇಲೂರಿನ ಸಾಹಿತ್ಯಿಕ ವೇದಿಕೆಯಲ್ಲಿ ಅಖಂಡ ಕರ್ನಾಟಕದ ವಿಚಾರ ಪ್ರಸ್ತಾಪವು…..ತಾಯಿಯವರ ಮನದಾಳದ ನೋವಿನ ಮಾತಾಗಿ ಹೊರಹೊಮ್ಮಿತು. ನಂತರ ಅದು ದಾಖಲೆಗಳಾಗಿ ಉಳಿದವು…. ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧ ಎಂಬಷ್ಟು ತೀವ್ರವಾದ ಬದ್ಧತೆಯನ್ನು ದಾಖಲಿಸುತ್ತವೆ. ಅವರ ಭಾಷಣದ ಹೀಗಿತ್ತು … *ಯೋಗಿ ಬಂದಿದಾರೇನ…ರಾಗಭೋಗದ ಆಚೆ ಒಯ್ಯುವರೇನಯೋಗದ ಕೀಲ ತಿಳಿಸುವರೇನ…. ಎಂದು ಶಿವಯೋಗಿ ಸಿದ್ದರಾಮನನ್ನು ಪ್ರಥಮವಾಗಿ ನೆನೆಯುತ್ತ… ಭಾಷಣವನ್ನು ಪ್ರಾರಂಭಿಸುವ ರೂಡಿ ಜಯದೇವಿ ತಾಯಿ ವರದಗಿತ್ತುಅಂದಿನ ಭಾಷಣದ ಮುಖ್ಯ ಭಾಗದಲಿ ಅವರು ಹೇಳ್ತಾರೆ… *ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬರಿದು ಹಾಡುವಿರೇಕೆ?…… ಅಧಿಕಾರದ ಲಾಲಸೆ ಬಿಟ್ಟು ಕರ್ನಾಟಕಕ್ಕಾಗಿ ಹೋರಾಡುವಿರಾ? ನಡು ನಾಡಿನಲ್ಲಿರುವ ಕನ್ನಡಿಗರು ನೀವು ಗಡಿನಾಡಿನಲ್ಲಿರುವ ಕನ್ನಡತಿ ನಾನು ……..ನಮ್ಮ ಕಷ್ಟ, ನಾವು ತಲೆ ಕೊಟ್ಟಿರುವ ತುಳಿತ ಇವೆಂತು ನಿಮಗೆ ಗೊತ್ತಾದಿತ್ತು ,?…..ಅಣ್ಣಂದಿರೇ , ಸೊಲ್ಲಾಪುರದ ಗೋಡವೆ ಏಕೆ ಎಂದೆನ್ನುವಿರಾ?….. ಇಂದು ಸೊಲ್ಲಾಪುರಕ್ಕೆ ಒದಗಿದ ಗತಿ ನಾಳೆ ಬೇಲೂರಿಗೂ ಬರಬಹುದು…. ಏಕೀಕರಣ ಬೇಕಾದರೆ ಮಾಡಬೇಕಾದ ಕಾರ್ಯ ಬಹಳವಿದೆ….. ನಾನಂತೂ ನನ್ನ ಪ್ರಾಣವನ್ನು ಬಲಿಯಾಗಿ ಕೊಡಲು ಸಿದ್ದಳಿರುವೆನು……!! ಅಖಂಡ ಕರ್ನಾಟಕದ ಈ ಹೋರಾಟವನ್ನು ಯಾವುದೇ ಆಶಯಗಳನ್ನು ಇಟ್ಟುಕೊಂಡು ನಾವು ಕೈಗೆತ್ತಿಕೊಂಡಿಲ್ಲ…. ಇದಕ್ಕೆ ಸೊನ್ನಲಿಯ ಸಿದ್ದರಾಮನೇ ಸಾಕ್ಷಿ, ಪಂಪಾಪತಿಯ ವಿರೂಪಾಕ್ಷ, ಬೇಲೂರಿನ ಚನ್ನಕೇಶವ ,ಶ್ರವಣಬೆಳಗೊಳದ ಗೊಮ್ಮಟೇಶ್ವರರೇ ಸಾಕ್ಷಿ …..ಕರ್ನಾಟಕ ಒಂದುಗೂಡುವುದು ನಿಶ್ಚಿತ ಇದು ನನ್ನ ಅಂತಕರಣದ ಬಯಕೆ, ಇದು ಆಗಲೇಬೇಕು……!!!ಎಂದು ಧಾರಾಕಾರವಾಗಿ ಕಣ್ಣೀರು ಸುರಿಸಲಾರಂಭಿಸಿದರು. ಶತ ಶತಮಾನಗಳಿಂದ ಕರ್ನಾಟಕದ ಸಂಸ್ಕೃತಿಯ ಇತಿಹಾಸವನ್ನು ತನ್ನ ತೊಡೆಯ ಮೇಲೆ ಹೊತ್ತು ನಿಂತಿರುವ ಶ್ರೀ ಚೆನ್ನಕೇಶ್ವರನ ದಿವ್ಯ ಸನ್ನಿಧಿಯಲ್ಲಿ ಆ ಸಮ್ಮೇಳನ ಜರುಗುತ್ತಿತ್ತು. ಸುತ್ತಲೂ ಸಾಹಿತ್ಯದ ಕಂಪು….. ಕನ್ನಡದ ಕಾವ್ಯ, ನಾಡು-ನುಡಿಯ ಪ್ರೀತಿ, ಸಂಸ್ಕೃತಿಯ ಸೊಬಗು,ಇವೆಲ್ಲವೂ ಒಂದೆಡೆ ಸೇರಿ ಆ ವಾತಾವರಣವನ್ನು ಪಾವನಗೊಳಿಸಿದ್ದವು. ಅಂತಹ ಸಾಹಿತ್ಯದ ಸಾಕ್ಷಿ ಯಜ್ಞವೇದಿಕೆಯ ನಡುವೆ, ಕನ್ನಡತಿಯೊಬ್ಬಳು ಗಳಗಳನೆ ಅಳುತ್ತಾ ನಿಂತಿದ್ದಳು. ಕಣ್ಣಂಚಿನಿಂದ ಜಾರುತ್ತಿದ್ದ ಕಣ್ಣೀರನ್ನು ತನ್ನ ಸೆರಗಿನಿಂದ ಒರೆಸಿಕೊಳ್ಳುತ್ತಾ, ಇಡೀ ಕನ್ನಡ ನಾಡಿನ ನೋವು ತೋಡಿಕೊಂಡರು. ಗಡಿಯಾಚೆ ಉಳಿದ ಕನ್ನಡಿಗರ ಕೊರಗು, ನಾಡು ನುಡಿಯ ಅಸ್ತಿತ್ವದ ಸಂಕಟ, ತನ್ನ ತಾಯ್ನಾಡಿನಿಂದ ದೂರವಾಗುತ್ತಿರುವ ಕನ್ನಡಿಗರ ವೇದನೆ..ಎಲ್ಲವನ್ನೂ ತನ್ನ ಕಣ್ಣೀರಿನ ಮೂಲಕ ಅಲ್ಲಿ ನೆರೆದಿದ್ದವರ ಹೃದಯಕ್ಕೆ ತಲುಪಿಸುತ್ತಿದ್ದರು….. ಅವರ ಪ್ರತಿಯೊಂದು ಮಾತಿನಲ್ಲೂ ನೋವಿತ್ತು. ಪ್ರತಿಯೊಂದು ಕಣ್ಣೀರಿನ ಹನಿಯಲ್ಲೂ ಕನ್ನಡದ ಮೇಲಿನ ಅಪಾರ ಅಭಿಮಾನವಿತ್ತು. ಅವರ ಮಾತನಾಡುತ್ತಿದ್ದಂತೆ ಕೇಳುತ್ತಿದ್ದವರ ಕಣ್ಣುಗಳೂ ತೇವಗೊಂಡವು. ಸಾಹಿತ್ಯಾಸಕ್ತ ಹೃದಯಗಳು ಮಿಡಿದವು. ಅಲ್ಲಿ ನೆರೆದಿದ್ದವರಿಗೆ ಅವರು ಸಾಕ್ಷಾತ ಭುವನೇಶ್ವರಿ ತಾಯಿಯೇ ತನ್ನ ಮಕ್ಕಳ ನೋವನ್ನು ಹೇಳಿಕೊಳ್ಳಲು ಅವರ ಮುಂದೆ ನಿಂತಂತೆ ಭಾಸವಾಯಿತು. ಕನ್ನಡ ನಾಡುನುಡಿಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ಸಿದ್ಧನಾದ ವರಕವಿಯೊಬ್ಬನು, “ಗಂಡಸಾದರೆ ಬಲಿಕೊಡುವೆನು, ನೀವು ಕೊಡವಿಯೇನು?” ಎಂಬಂತೆ ತಾಯಿಭುವನೇಶ್ವರಿಯನ್ನು ಪ್ರಶ್ನಿಸಿದಾಗ, ಆ ಪ್ರಶ್ನೆಗೆ ಉತ್ತರವಾಗಿ ಆ ಕನ್ನಡತಿಯ ಕಣ್ಣೀರೇ ಹರಿಯುತ್ತಿದ್ದಂತಿತ್ತು. ಮಾತುಗಳಿಂದ ಹೇಳಲಾಗದ ನೋವನ್ನು ಆ ಕಣ್ಣೀರು ಹೇಳುತ್ತಿತ್ತು. ಕನ್ನಡ ತಾಯಿಯ ಮಡಿಲಿನ ಮಕ್ಕಳೇ ಚದುರಿಹೋಗುತ್ತಿರುವಾಗ, ಅವರನ್ನು ಮತ್ತೆ ತನ್ನ ಮಡಿಲಿಗೆ ಕರೆಸಿಕೊಳ್ಳಬೇಕೆಂಬ ತಾಯಿಯ ಆರ್ತನಾದವೇ ಆ ಅಳುವಿನಲ್ಲಿ ಕೇಳಿಸುತ್ತಿತ್ತು.ಆ ಕ್ಷಣದಲ್ಲಿ ಚೆನ್ನಕೇಶ್ವರನ ಸನ್ನಿಧಿಯೂ, ಸಾಹಿತ್ಯದ ಆ ಸಭೆಯೂ, ಕನ್ನಡತಿಯ ಕಣ್ಣೀರೂ ಮೂರೂ ಒಂದಾಗಿ ಬೆರೆತು ಅಪೂರ್ವವಾದ ಭಾವಲೋಕವೊಂದನ್ನು ಸೃಷ್ಟಿಸಿದ್ದವು.ಅಲ್ಲಿ ಕಣ್ಣೀರು ಸುರಿಸುತ್ತಿದ್ದವರು ಇಡೀ ಕನ್ನಡ ನಾಡಿನ ಕಣ್ಣೀರು ತುಂಬಿಕೊಂಡಿತ್ತು. ಸಮ್ಮೇಳನದಲ್ಲಿ ಭಾಗವಹಿಸಿದ್ದ ಅನೇಕ ಸಾಹಿತಿಗಳು ಆ ಕ್ಷಣವನ್ನು ಇಂದಿಗೂ ಮರೆಯಲಾಗದ ದೃಶ್ಯವೆಂದು ಸ್ಮರಿಸುತ್ತಾರೆ……ಕರ್ನಾಟಕದ ಎಲ್ಲ ದಿನಪತ್ರಿಕೆಗಳು ಇಂಗ್ಲಿಷ್ ಪತ್ರಿಕೆಗಳಲ್ಲಿ ಈ ಸುದ್ದಿಯು ಪ್ರಕಟಗೊಂಡಿತು,..,ಮನೆ ಮನೆ ಮಾತಾಯಿತು .ಅದು ಕನ್ನಡ ತಾಯಿಯ ಹೃದಯದಿಂದ ಹೊರಬಂದ ಆರ್ತನಾದವಾಗಿತ್ತು. ಅಖಂಡ ಕನ್ನಡ ನಾಡಿನ ಕನಸಿಗಾಗಿ ಹರಿದ ಪವಿತ್ರ ಕಣ್ಣೀರಾಗಿತ್ತು.ಗಡಿಯಾಚೆ ಉಳಿದುಕೊಂಡ ಕನ್ನಡಿಗರ ನೋವಿನ ಒಂದೊಂದು ಕಥೆಯನ್ನು ಹೇಳುತ್ತಿತ್ತು. * ಕನ್ನಡ ತಾಯಿಗಾಗಿ ಕಣ್ಣೀರ ಸುರಿದಾವಉನ್ನತ ನಾಡ ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸೀದಿ* ಶ್ರೀ ಚೆನ್ನಕೇಶ್ವರನ ಸನ್ನಿಧಿಯಲ್ಲಿ ನಡೆದ ಆ ಕ್ಷಣವು ಕನ್ನಡದ ಇತಿಹಾಸದ ಒಂದು ಭಾವನಾತ್ಮಕ ಅಧ್ಯಾಯವಾಗಿ ಉಳಿಯಿತು. ಚೆನ್ನಕೇಶ್ವರನ ಪಾವನ ಸನ್ನಿಧಿಯಲ್ಲಿ ಸುರಿದ ಆ ಕಣ್ಣೀರಿನ ಹನಿಗಳು, ಮುಂದೆ ಕನ್ನಡ ನಾಡು-ನುಡಿಗಾಗಿ ನಡೆಯಲಿದ್ದ ಹೋರಾಟದ ಸಂಕಲ್ಪಕ್ಕೆ ಪುಷ್ಟಿ ಕೊಟ್ಟೆವು. ಸಾಹಿತ್ಯ ಪರಿಷತ್ತು ಕರ್ನಾಟಕ ಎರಡಾಗಬೇಕು ಎಂಬ ವಾದದೊಂದಿಗೆ ಸೇರಿತ್ತು ಆದರೆ ಅಲ್ಲಿ ಅಖಂಡ ಕರ್ನಾಟಕ ಜನರ ಮನಸ್ಸಗಳನ್ನು ಒಂದು ಮಾಡಬೇಕಿತ್ತು ಸಮ್ಮೇಳನಕೆಂದು ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನರ ಮನಸ್ಸನ್ನು ಒಲಿಸಿ, ಅಖಂಡ ಕರ್ನಾಟಕ ರಚನೆಯ ಬೇಡಿಕೆ ಗೊತ್ತುವಳಿಯನ್ನು ಮಂಡಿಸುವುದು ಹಾಗೂ ಸರ್ವಾನುಮತದಿಂದ ಆ ಬೇಡಿಕೆ ಸೀಕೃತವಾಗುವುದು ಸುಲಭದ ಕೆಲಸವಾಗಿರಲಿಲ್ಲ….. ಮೂರು ಕೋಟಿ ಕನ್ನಡಿಗರ ಎದುರು ಈ ಗೊತ್ತುವಳಿಯನ್ನು ಮಂಡಿಸೀದ್ದರು.ಆ ಕಾಲಕ್ಕೆ ಒಬ್ಬ ಹೆಣ್ಣು ಮಗಳು ನೆರೆದಿದ್ದ ಜನಸಮುದಾಯದ ಸಭೆಯಲ್ಲಿ ಮಾತನಾಡುವುದೇ ವಿರಳವಾಗಿತ್ತು. ಅಂತಹದರಲ್ಲಿ ಜಯದೇವಿ ತಾಯಿಯವರ ಕಾರ್ಯ ಮಹಾಸಾಧನೆ ಸರಿ. ಅವರು ಮಂಡಿಸಿದ ಗೊತ್ತು ಗಳಿಗೆ ಎದ್ದ ವಿರೋದ್ಧ, ಅಲ್ಲಿ ಉಂಟಾದ ಉದ್ವಿಗ್ನತೆಯಿಂದ ಕರ್ನಾಟಕ ಏಕೀಕರಣ ಅಸಾಧ್ಯವೆಂದು ಅನಿಸಿತ್ತು ಅಂಥ ವಿರೋಧದ ನಡುವೆ ಅವರು ಏಕೀಕರಣದ ಗೊತ್ತುವಳಿ ಮಂಡಿಸಿದರು. ರಾಜಕಾರಣಗಳಿಂದ ನಾಡ ನುಡಿಯ ಚಟುವಟಿಕೆ ಸ್ಥಗಿತವಾಗಿದ್ದ ಕಾಲದಲ್ಲಿ ತಮ್ಮ ದಿಟ್ಟತನದಿಂದ ಗೊತ್ತುವಳಿ ಮಂಡಿಸಿದ್ದು…ಅಲ್ಲಿ ನೆರೆದ ಪುರುಷ ಪ್ರಧಾನ ವ್ಯವಸ್ಥೆಗೆ ಒಂದು ಸವಾಲ ಹಾಕಿದರು . ಕರ್ನಾಟಕ ಏಕೀಕರಣ…. ಅಗಲಿದ ಕನ್ನಡ ನೆಲ ಕುಲ ಜಲ ಜನ ಒಂದಾಗಬೇಕೆನ್ನುವುದೇ ನನ್ನ ಬಯಕೆ ಎಂದರು….ಪರಿಷತ್ತಿನಲ್ಲಿ ನೆರೆದ ರಾಜಕಾರಣಿಗಳ ಮನಸ್ಸು ಒಲಿಸಿದರು.. ಜನತೆಯನ್ನು ಓಲ್ಯೆಸಿದರು. ಕೆಲವು ಮೂಲಗಳು “ಅಖಂಡ ಕರ್ನಾಟಕದ ಗೊತ್ತುವಳಿ” ಮತ್ತು “ಎರಡು ಕರ್ನಾಟಕದ ಕಲ್ಪನೆಗೆ ವಿರೋಧ” ಎಂದು ವಿವರಿಸುತ್ತವೆ. ಒಂದು ಸಂಶೋಧನಾ ಲೇಖನವು ಬೇಲೂರು ಸಮ್ಮೇಳನದಲ್ಲಿ ಹನುಮಂತಯ್ಯ ಮತ್ತು ಇತರರು ಮುಂದಿಟ್ಟಿದ್ದ ಎರಡು ಕರ್ನಾಟಕದ ಕಲ್ಪನೆಯನ್ನು ಜಯದೇವಿತಾಯಿಯವರು ತೀವ್ರವಾಗಿ ವಿರೋಧಿಸಿದ್ದರೆಂದು ಹೇಳುತ್ತದೆ. ೧೯೫೩ ರಲ್ಲಿ ಹೈದರಾಬಾದ ರಾಜ್ಯದ ತಳವಾಡದಲ್ಲಿ ನಡೆದ ಅಖಿಲ ಕನ್ನಡಿಗರ ಸಭೆಯಲ್ಲಿ ಹೈದರಾಬಾದಿನ ಮುಖ್ಯಮಂತ್ರಿ ಬಿ ರಾಮಕಿಶನರಾವ ಅವರು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯದೇವಿ ತಾಯಿ ಲಿಗಾಡೆಯವರು ಒಹಿಸಿಕೊಂಡಿದ್ದರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿ ಬಿ ರಾಮ ಕಿಸರಾವ ಅವರನ್ನು ಒತ್ತಾಯಿಸುವ ಮೂಲಕ ಗೊತ್ತುವಳಿಯು ಸ್ವೀಕರಿಸಲಾಯಿತು. ಕನ್ನಡ ಶಿಕ್ಷಕರು ಹೈದರಾಬಾದ ರಾಜ್ಯದಲ್ಲಿ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಜಯದೇವಿ ತಾಯಿಯವರು ನಾಲ್ಕು ನೂರು ಜನ ಶಿಕ್ಷಕರನ್ನು ನೇಮಿಸಿದರು ಅವರು ಮುಖ್ಯವಾಗಿ ಬೀದರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುತ್ತಿದ್ದರು. ಅದೇ ಕಾಲಕ್ಕೆ ಸೊಲ್ಲಾಪುರ ಕೆಲ ಭಾಗದಲ್ಲಿ ಕನ್ನಡ ಶಾಲೆಗಳು ಪ್ರಾರಂಭವಾದವು. ಅಲ್ಲಿ ನೇಮಕರಾದ ಶಿಕ್ಷಕರ ಖರ್ಚನ್ನು ತಾಯಿಯವರೇ ವಹಿಸುತ್ತಿದ್ದರು ಸವಿತಾ ದೇಶಮುಖ
ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸೇನಾನಿ ದೇಶ ಭಕ್ತ ಲಿಂಗೈಕ್ಯ ಶ್ರೀ ರತ್ನಪ್ಪಣ್ಣ ಕುಂಬಾರ ರತ್ನಪ್ಪ ಭರಮಪ್ಪ ಕುಂಬಾರ (ದೇಶಭಕ್ತ ರತ್ನಪ್ಪಣ್ಣ ಕುಂಬಾರ) ಅವರು ಮಹಾರಾಷ್ಟ್ರದ ಇಚಲಕರಂಜಿಯ ಪ್ರಸಿದ್ಧ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಾಜಕಾರಣಿಯಾಗಿದ್ದರು. ದಕ್ಷಿಣ ಭಾರತದ ಹಲವು ಸಂಸ್ಥಾನಗಳ ವಿಲೀನಕ್ಕಾಗಿ ಶ್ರಮಿಸಿದ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದೂ ಕರೆಯಲಾಗುತ್ತದೆ. ಡಾ. ರತ್ನಪ್ಪ ಕುಂಬಾರ ಅವರ ಜೀವನದ ಪ್ರಮುಖ ವಿವರಗಳು .ಜನನ: 15 ಸೆಪ್ಟೆಂಬರ್ 1909, ನಿಮ್ಶಿರ್ಗಾಂವ್ (ಮಹಾರಾಷ್ಟ್ರ).ನಿಧನ: 23 ಡಿಸೆಂಬರ್ 1998 (ವಯಸ್ಸು 89). ಬಿರುದು: ದೇಶಭಕ್ತ. ರಾಜಕೀಯ ಪಕ್ಷ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ಸಾಧನೆಗಳು ಮತ್ತು ಕೊಡುಗೆಗಳು ಸಂವಿಧಾನಕ್ಕೆ ಸಹಿ: ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ಭಾರತದ ಸಂವಿಧಾನದ ಅಂತಿಮ ಕರಡಿಗೆ ಸಹಿ ಹಾಕಿದ ಮಹನೀಯರಲ್ಲಿ ಇವರೂ ಒಬ್ಬರು. ಸ್ವಾತಂತ್ರ್ಯ ಹೋರಾಟ: 1942 ರ ಆಗಸ್ಟ್ 9 ರಂದು ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಹಕಾರಿ ರಂಗ: ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸಹಕಾರಿ ರಂಗದ ನಕ್ಷತ್ರವಾಗಿ ಬೆಳಗಿದ ಇವರು, ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಹಕಾರಿ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದರು. ಪದ್ಮಶ್ರೀ ಪ್ರಶಸ್ತಿ: ಇವರ ಸಮಾಜ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 1985 ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ರಾಜಕೀಯ ಸೇವೆ: ಇವರು ಸಂಸತ್ ಸದಸ್ಯರಾಗಿ (MP) ಹಾಗೂ ಮಹಾರಾಷ್ಟ್ರ ಸರ್ಕಾರದ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯಹೋರಾಟ ಡಾ. ರತ್ನಪ್ಪಣ್ಣ ಕುಂಬಾರ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗಗಳಲ್ಲಿ ಅತ್ಯಂತ ಸಕ್ರಿಯ ಮತ್ತು ಪ್ರಭಾವಶಾಲಿ ಪಾತ್ರ ವಹಿಸಿದ್ದರು. ಅವರ ಪ್ರಮುಖ ಸ್ವಾತಂತ್ರ್ಯ ಹೋರಾಟದ ವಿವರಗಳು : 1. ಬ್ರಿಟಿಷ್ ಮತ್ತು ರಾಜಪ್ರಭುತ್ವದ ವಿರುದ್ಧ ಹೋರಾಟ 2. ಕೊಲ್ಹಾಪುರ ಪ್ರಜಾ ಪರಿಷತ್: ರತ್ನಪ್ಪಣ್ಣನವರು ಕೊಲ್ಹಾಪುರ ಸಂಸ್ಥಾನದಲ್ಲಿ ರಾಜಪ್ರಭುತ್ವ ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ‘ಕೊಲ್ಹಾಪುರ ರಾಜ್ಯ ಪ್ರಜಾ ಪರಿಷತ್’ ಅನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 3. ಪ್ರಜಾಪ್ರಭುತ್ವಕ್ಕಾಗಿ ಆಗ್ರಹ: ಸಂಸ್ಥಾನದ ಜನರಿಗೆ ಮೂಲಭೂತ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಸಿಗಬೇಕೆಂದು ಅವರು ನಿರಂತರ ಚಳವಳಿ ನಡೆಸಿದರು. 4. . ಕ್ವಿಟ್ ಇಂಡಿಯಾ ಚಳವಳಿ (1942)ಭೂಗತ ಹೋರಾಟ: 1942ರಲ್ಲಿ ಮಹಾತ್ಮ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳವಳಿ ಘೋಷಿಸಿದಾಗ, ರತ್ನಪ್ಪಣ್ಣನವರು ಅದರಲ್ಲಿ ಸಕ್ರಿಯವಾಗಿ ಧುಮುಕಿದರು. ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಲು ಆದೇಶ ಹೊರಡಿಸಿದಾಗ, ಇವರು ಸುಮಾರು 6 ವರ್ಷಗಳ ಕಾಲ ಭೂಗತರಾಗಿ (Underground) ಹೋರಾಟ ಮುಂದುವರಿಸಿದರು. 5. ಸಶಸ್ತ್ರ ಮತ್ತು ಸೈದ್ಧಾಂತಿಕ ಪ್ರತಿರೋಧ: ಭೂಗತರಾಗಿದ್ದ ಅವಧಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ಕಣ್ಣು ತಪ್ಪಿಸಿ ಯುವಕರನ್ನು ಸಂಘಟಿಸುವುದು, ಕ್ರಾಂತಿಕಾರಿ ಪತ್ರಿಕೆಗಳನ್ನು ಹಂಚುವುದು ಮತ್ತು ಸರ್ಕಾರದ ಖಜಾನೆಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟಿಸುವುದರಲ್ಲಿ ಇವರು ಮುಂಚೂಣಿಯಲ್ಲಿದ್ದರು. ಇವರನ್ನು ಹಿಡಿದುಕೊಟ್ಟವರಿಗೆ ಬ್ರಿಟಿಷ್ ಸರ್ಕಾರ ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿತ್ತು. 6. ಸಂಸ್ಥಾನಗಳ ವಿಲೀನ ಮತ್ತು “ದಕ್ಷಿಣ ಭಾರತದ ಪಟೇಲ್” ಎಂದು ಜನರಿಂದ ಅಭಿಮಾನದಿಂದ ಕರೆಯಿಸಿ ಕೊಂಡರು. 7. ಭಾರತ ಒಕ್ಕೂಟಕ್ಕೆ ಸೇರ್ಪಡೆ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ (1947) ಕೊಲ್ಹಾಪುರ, ಸಾಂಗ್ಲಿ ಸೇರಿದಂತೆ ದಕ್ಷಿಣದ ಹಲವು ದೇಶಿ ಸಂಸ್ಥಾನಗಳು ಭಾರತ ಒಕ್ಕೂಟದೊಂದಿಗೆ ವಿಲೀನಗೊಳ್ಳಲು ನಿರಾಕರಿಸುತ್ತಿದ್ದವು. 8 ಕಠಿಣ ನಿರ್ಧಾರ: ರತ್ನಪ್ಪಣ್ಣನವರು ಈ ಸಂಸ್ಥಾನಗಳ ರಾಜರ ವಿರುದ್ಧ ಪ್ರಬಲ ಜನಪ್ರತಿಭಟನೆಗಳನ್ನು ಸಂಘಟಿಸಿ, ಅವರು ಭಾರತದೊಂದಿಗೆ ವಿಲೀನವಾಗುವಂತೆ ಒತ್ತಡ ಹೇರಿದರು. ಈ ಅದ್ಭುತ ಚಾಕಚಕ್ಯತೆ ಮತ್ತು ಸಾಹಸಕ್ಕಾಗಿ ಇವರನ್ನು “ದಕ್ಷಿಣ ಭಾರತದ ವಲ್ಲಭಭಾಯಿ ಪಟೇಲ್” ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ನಂತರದಲ್ಲಿನ ಕೊಡುಗೆಗಳು ಸಂವಿಧಾನ ರಚನೆಯಲ್ಲಿನ ಪಾತ್ರದ ವಿವರಗಳು ಭಾರತದ ಸಂವಿಧಾನ ರಚನೆಯಲ್ಲಿ ಡಾ. ರತ್ನಪ್ಪಣ್ಣ ಕುಂಬಾರ ಅವರು ಅತ್ಯಂತ ಗೌರವಾನ್ವಿತ ಮತ್ತು ಐತಿಹಾಸಿಕ ಪಾತ್ರವನ್ನು ವಹಿಸಿದ್ದರು. ದೇಶಿ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸುವಲ್ಲಿ ಅವರು ತೋರಿದ ನಾಯಕತ್ವವನ್ನು ಗುರುತಿಸಿ, ಅವರನ್ನು ಸಂವಿಧಾನ ರಚನಾ ಸಭೆಯ (Constituent Assembly) ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಸಂವಿಧಾನ ರಚನೆಯಲ್ಲಿ ಅವರ ಪ್ರಮುಖ ಕೊಡುಗೆಗಳು ಮತ್ತು ಪಾತ್ರದ ವಿವರಗಳು 1. ಸಂವಿಧಾನದ ಮೂಲ ಪ್ರತಿಯ ಸಹಿ ಒಕ್ಕೂಟದ ಸದಸ್ಯರುಭಾರತದ ಸಂವಿಧಾನದ ರಚನೆ ಪೂರ್ಣಗೊಂಡ ನಂತರ, 24 ಜನವರಿ 1950 ರಂದು ಸಂವಿಧಾನದ ಅಂತಿಮ ಕರಡು (Final Draft) ಮತ್ತು ಮೂಲ ಪ್ರತಿಯ ಮೇಲೆ ಸಹಿ ಹಾಕಿದ ಭಾರತದ ಪ್ರಮುಖ ನಾಯಕರಲ್ಲಿ ರತ್ನಪ್ಪಣ್ಣ ಕುಂಬಾರ ಅವರೂ ಒಬ್ಬರು. ಡಾ. ಬಿ. ಆರ್. ಅಂಬೇಡ್ಕರ್ ಅವರೊಂದಿಗೆ ದೇಶದ ಅತ್ಯುನ್ನತ ಕಾನೂನು ಗ್ರಂಥಕ್ಕೆ ಸಹಿ ಹಾಕಿದ ಹೆಮ್ಮೆ ಇವರದ್ದಾಗಿದೆ. ದೇಶಿ ಸಂಸ್ಥಾನಗಳ ಜನರ ಧ್ವನಿಯಾಗಿ ಪ್ರಾತಿನಿಧ್ಯಸಂಸ್ಥಾನಗಳ ಜನರ ಹಕ್ಕುಗಳು: ಸಂವಿಧಾನ ರಚನಾ ಸಭೆಯಲ್ಲಿ ಬ್ರಿಟಿಷ್ ಭಾರತದ ಪ್ರಾಂತ್ಯಗಳ ಪ್ರತಿನಿಧಿಗಳ ಜೊತೆಗೆ ದೇಶಿ ಸಂಸ್ಥಾನಗಳ (Princely States) ಪ್ರತಿನಿಧಿಗಳೂ ಇದ್ದರು. ರತ್ನಪ್ಪಣ್ಣನವರು ಕೊಲ್ಹಾಪುರ ಮತ್ತು ದಕ್ಷಿಣದ ಇತರ ಸಂಸ್ಥಾನಗಳ ಲಕ್ಷಾಂತರ ಸಾಮಾನ್ಯ ಜನರ ಧ್ವನಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಜಾಪ್ರಭುತ್ವದ ವಿಕೇಂದ್ರೀಕರಣ: ರಾಜಪ್ರಭುತ್ವದ ಆಡಳಿತದಲ್ಲಿದ್ದ ಜನರಿಗೆ ಸಮಾನ ಹಕ್ಕುಗಳು, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಸೌಲಭ್ಯಗಳು ಸಿಗಬೇಕೆಂದು ಅವರು ಪ್ರತಿಪಾದಿಸಿದರು. .ಕರಡು ಪರಿಶೀಲನೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುವಿಕೆ ಸಂವಿಧಾನ ರಚನಾ ಸಭೆಯ ವಿವಿಧ ಸಮಿತಿಗಳ ಚರ್ಚೆಗಳಲ್ಲಿ ಭಾಗವಹಿಸಿದ ಇವರು, ಭಾರತದಂತಹ ವೈವಿಧ್ಯಮಯ ದೇಶಕ್ಕೆ ಬಲಿಷ್ಠ ಒಕ್ಕೂಟ ವ್ಯವಸ್ಥೆ (Federal Structure) ಎಷ್ಟು ಮುಖ್ಯ ಎಂಬುದರ ಕುರಿತು ತಮ್ಮ ನುಡಿಗಟ್ಟುಗಳನ್ನು ಹಂಚಿಕೊಂಡಿದ್ದರು. ಹಿಂದುಳಿದ ವರ್ಗಗಳು, ರೈತರು ಮತ್ತು ಶ್ರಮಿಕ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಸಂವಿಧಾನದಲ್ಲಿ ಸೂಕ್ತ ಅವಕಾಶಗಳಿರಬೇಕು ಎಂದು ಅವರು ಆಗ್ರಹಿಸಿದ್ದರು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಕೇವಲ ಸಂವಿಧಾನ ಬರೆಯುವುದಷ್ಟೇ ಅಲ್ಲದೆ, ಸ್ವಾತಂತ್ರ್ಯದ ನಂತರ ದೇಶದ ಮೊದಲ ಲೋಕಸಭೆಯ (1952-1957) ಸಂಸದರಾಗಿ (MP) ಆಯ್ಕೆಯಾಗಿ, ಸಂವಿಧಾನದ ಆಶಯಗಳನ್ನು ಕಾನೂನು ರೂಪದಲ್ಲಿ ಜಾರಿಗೆ ತರಲು ಶ್ರಮಿಸಿದರು. ರತ್ನಪ್ಪಣ್ಣ ಕುಂಬಾರ ಅವರು ಸಂವಿಧಾನ ಸಭೆಯ ನಂತರ ದೇಶದ ಮೊದಲ ಲೋಕಸಭೆ ಸದಸ್ಯರಾಗಿ (MP) ಮಾಡಿದ ಅನೇಕ ಕೆಲಸಗಳ ಲೆಕ್ಕ ಇಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಇಚಲಕರಂಜಿಯನ್ನು “ಮ್ಯಾಂಚೆಸ್ಟರ್ ಆಫ್ ಮಹಾರಾಷ್ಟ್ರ” ಆಗಿ ಬದಲಾಯಿಸಿದ ಅವರ ಸಹಕಾರಿ ಚಳವಳಿಯ ದೂರದೃಷ್ಟಿ ರತ್ನಪ್ಪಣ್ಣನವರು ಸಹಕಾರಿ ರಂಗದಲ್ಲಿ ಕ್ರಾಂತಿ ಉಂಟು ಮಾಡಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿಯ (ಗಂಗಾನಗರ) ಕಬ್ನೂರ್‌ನಲ್ಲಿ ಈ ಬೃಹತ್ ಕಾರ್ಖಾನೆಯನ್ನು 1954 ರಲ್ಲಿ ಸ್ಥಾಪಿಸಿದರು. ವಾಣಿಜ್ಯ ಕಾಲೇಜು ಸ್ಥಾಪನೆ. ಇಂತಹ ಅಪರೂಪದ ಅಪ್ಪಟ ಬಸವ ಭಕ್ತ ಸ್ವತಂತ್ರ ಸೇನಾನಿ ದೇಶಭಕ್ತ ಶ್ರೀ ರತ್ನಪ್ಪಣ್ಣ ಕುಂಬಾರ ಸಾವಿಲ್ಲದ ಶರಣರು ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರವಾಹಿ ಸಂಗಾತಿ–43 ಡಾ.ವಿಶ್ವನಾಥ್ ಎನ್. ನೇರಳೆಕಟ್ಟೆ ಅರ್ಜುನ ಉವಾಚ ಸೋದರರ ಪ್ರತಾಪದಿಂದ ಪ್ರಜ್ಞಾ ಶೂನ್ಯನಾದ ರಾಮಸೋದರ ಅಮ್ಮನ ಪ್ರಲಾಪವದು ಕುಶನನ್ನು ದಂಗುಬಡಿಸಿತು. ಕಾರಣ ಕೇಳಿದ ಅವಳ ಅಳುವಿಗೆ. ಲವ ಕುದುರೆಯನ್ನು ಕಟ್ಟಿಹಾಕಿದ್ದು, ಸೈನಿಕರು ಯುದ್ಧಕ್ಕೆ ಬಂದದ್ದು, ರಥದಲ್ಲಿ ಕುಶನನ್ನು ಹೊತ್ತೊಯ್ದದ್ದು ಎಲ ್ಲವನ್ನೂ ಹೇಳಿದಳು ಸೀತೆ. ರೋಷ ಹುಟ್ಟಿತು ಕುಶನಲ್ಲಿ. ಕವಚ, ಖಡ್ಗ, ಬಿಲ್ಲು, ಬಾಣ, ಕಿರೀಟ ಎಲ್ಲವನ್ನೂ ತರಹೇಳಿದ ತಾಯಿಯಲ್ಲಿ. ತಂದುಕೊಟ್ಟಳು. ‚ಲವನನ್ನು ಹೊತ್ತೊಯ್ದವನು ಯಾರೇ ಆಗಿದ್ದರೂ ಅವನನ್ನು ಎದುರಿಸಿ, ಲವನನ್ನು ಎದುರಿಸಿಕೊಂಡು ಬರುತ್ತೇನೆ‛ ಎಂದ ಕುಶ ವೀರಭಾವದಲ್ಲಿ ಹೊರಟ. ಸುತನನ್ನು º Àರಸಿ ಕಳುಹಿಸಿಕೊಟ್ಟಳು ಸೀತೆ.ವಾಯುವೇಗದಿಂದ ಹೋದ ಕುಶ ಶತ್ರುW À್ನ ¸ ೆÃನೆಯನ್ನು ಕಾಣುತ್ತಲೇ ಮುನ್ನುಗ್ಗಿದ. ಶತುಘ್ನನ ದಳಪತಿಯ ಮೇಲೆ ಬಾಣಗಳನ್ನು ಒಂದರ ಹಿಂದೆ ಒಂದರAತೆ ಬಿಟ್ಟ. ದಳಪತಿಗೆ ನಗ ಹೆಸರಿನ ತಮ್ಮನೊಬ್ಬನಿದ್ದ. ಅವನು ಕುಶನನ್ನು ಎದುರಿಸುವ ಉತ್ಸುಕತೆ ತೋರಿದ. ಕುಶನ ಬಾಣದ ಹೊಡೆತಕ್ಕೆ ಕೈಗಳನ್ನೂ, ಕಾಲುಗಳನ್ನೂ, ಅಂತಿಮವಾಗಿ ಶಿರವನ್ನೂ ಕಳೆದುಕೊಂಡು ಪ್ರಾಣಬಿಟ್ಟ.ಕ್ರೋಧಭಾವದವನಾದ ಶತ್ರುಘ್ನ. ಒಂಭತ್ತು ಬಾಣಗಳನ್ನು ಏಕಕಾಲಕ್ಕೆ ಪ್ರಯೋಗಿಸಿದ, ಕುಶನ ಮೇಲೆ. ಬಾಣಪುಂಜಗಳು ಪುಡಿಪುಡಿಯಾದವು ಪುಟ್ಟ ಪೋರ ತೋರಿದ ಪರಾಕ್ರಮಕ್ಕೆ. ಕುಶನ ಬಲು ಬಿರುಸಿನ ಬಾಣವದು ಬೀಳಿಸಿತು ಶತ್ರುಘ್ನನನ್ನು ಭೂಮಿಯ ಮೇಲೆ. ಎಲ ್ಲರ ಭುಜಬಲವನ್ನೂ ಮೀರಿನಿಲ್ಲುವ ದಿಟ್ಟತನವನ್ನು ತೋರಿದನಾಗ ರಾಮಸುತ.ಅಷ್ಟರಲ್ಲಿ ಲವನಿಗೆ ಪ್ರಜ್ಞೆ ಬಂತು. ಅಣ್ಣ ತಮ್ಮಂದಿರು ಜೊತೆ ಸೇರಿ ª ÀÄತ್ತೆ ಕುದುರೆಯನ್ನು ಕಟ್ಟಿಹಾಕಿದರು. ಈ ಮೊದಲಿಗಿಂತಲೂ ಹುರುಪಿನಿಂದ ಯುದ್ಧಕ್ಕೆ ಸಿದ್ಧರಾಗಿ ನಿಂತರು.‚ಒಡೆಯಾ, ನಿನ್ನ ಯಜ್ಞದ ಕುದುರೆಯದು ಭೂಮಿಯನ್ನು ವಿಘ್ನವಿಲ್ಲದೆ ಸುತ್ತಾಡಿತು. ಬಳಿಕ ಅದನ್ನು ಲವನೆಂಬ ಬಾಲಕ ಕಟ್ಟಿಹಾಕಿದ. ಬಿಡಿಸುವುದಕ್ಕೆ ಹೋದ ಸೇನೆಯನ್ನು ನಾಶಮಾಡಿದ. ಆಗ ಶತ್ರುಘ್ನ ಅವ£ Àನ್ನು ಸೆರೆಹಿಡಿದು ಕರೆತರುತ್ತಿರಬೇಕಾದರೆ ಯಾರೋ ಒಬ್ಬ ಬಾಲಕ ಬಂದು, ಬಾಣವನ್ನು ಪ್ರಯೋಗಿಸಿ, ನಿನ್ನ ತಮ್ಮ ಶತ್ರುಘ್ನನನ್ನು ರಥದಿಂದ ಬೀಳಿಸಿದ‛ ಎಂಬ ಸಂದೇಶ ರಾಮನನ್ನು v Àಲುಪಿತು.ಶ್ರೀರಾಮ ಆ ಮಾತನ್ನು ನಂಬಲಿಲ್ಲ. ಶತ್ರುಘ್ನನಂತಹ ಬಲಶಾಲಿಯನ್ನು ಗೆಲ್ಲುವವರಿಲ್ಲ ಈ ಲೋಕದಲ್ಲಿ ಎಂಬ ನಂಬಿಕೆ ಅವನದ್ದು. ಹುಸಿ ಸಂದೇಶವಿದು ಎಂದುಕೊAಡ. ಆದರೆ ಅದು ನಿಜವಾದದ್ದು ಎಂದು ತಿಳಿದಾಗ ಪರಮಾಶ್ಚರ್ಯಗೊಂಡ. ಲವಣಾಸುರನೆಂಬ ರಾಕ್ಷಸನನ್ನೇ ಕೊಂದ ಶತ್ರುಘ್ನನಿಗೆ ಬಾಲಕರಿಬ್ಬರು ಸವಾಲಾಗಿ ನಿಂತಿದ್ದಾರೆAದರೆ ಅವರು ಸಾಮಾನ್ಯದವರಲ್ಲ ಎನ್ನುವುದು ಸ್ಪಷ್ಟವಾಯಿತು ಅಂi ÉÆÃಧ್ಯಾಪತಿಗೆ. ಲಕ್ಷö್ಮಣನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟ.ಕಾಲಜಿತುವೆಂಬ ಸೇನಾಧಿಪತಿಯನ್ನು ಜೊತೆಮಾಡಿಕೊಂಡು ಚತುರಂಗ ಬಲ ಸಹಿತನಾಗಿ ಕುಶ ಲವರ ವಿರುದ್ಧದ ಯುದ್ಧಕ್ಕೆ ಬಂದ ಲಕ್ಷö್ಮಣ. ಸಾವಿರ ಆನೆಗಳು. ಅದಕ್ಕೆ ನೂರು ಪಟ್ಟು ಹೆಚ್ಚು ರಥಗಳು. ರಥಗಳ ನೂರು ಪಟ್ಟಿನಷ್ಟು ಕುದುರೆಗಳು. ಕುದುರೆಗಳ ನೂರು ಪಟ್ಟಿನಷ್ಟು ಸೈನಿಕರು. ಇಂತಹ ಒಂದು ¸ ÉÃನೆಯನ್ನು ಹೊಂದಿದವರು ಭ್ರಮಿಗಳು ಎನಿಸಿಕೊಳ್ಳುತ್ತಿದ್ದರು. ಇಂತಹ ಸಾವಿರ ಭ್ರಮಿಗಳನ್ನು ಒಳಗೊಂಡಿತ್ತು ಲಕ್ಷö್ಮಣ ಸಾರಥ್ಯದ ಹಿರಿದು ಸೇನೆ.ಎದುರು ನಿಂತ ಅಗಾಧ ಸೇನೆ ಕುಶ ಲವರ ಕಣ್ಣಿಗೆ ರಾಚಿತು. ಅಮೋಘವಾದ ಅಸ್ತçವೊಂದಿಲ್ಲದೆ ಜಯಿಸುವುದು ಅಸಾಧ್ಯ ಎಂದು ತೋರಿತು ಲವನಿಗೆ. ಸಹೋದರನಲ್ಲಿ ಗುಟ್ಟಾಗಿ ತಾನು ಸೂಂi ÀÄðದೇವನ ಪ್ರಾರ್ಥನೆ ಮಾಡಿ ಕೋದಂಡವನ್ನು ಪಡೆದುಕೊಳ್ಳುವುದಾಗಿ ಹೇಳಿದ. ಪ್ರಾರ್ಥಿಸಿದ. ಲವನ ಮುಗ್ಧಭಕ್ತಿಗೆ ಒಲಿದ ಸೂಂi ÀÄðದೇವ. ದಿವ್ಯಾಸ್ತçವನ್ನು ಲವನಿಗೆ ಕೊಟ್ಟ.ಅದನ್ನು ಸಂತಸದಲ್ಲಿ ಕುಶನಿಗೆ ತೋರಿದ ಲವ. ಅಣ್ಣ ತಮ್ಮಂದಿರಿಬ್ಬರೂ ಬಲು ಹುರುಪಿನಲ್ಲಿ ಶತ್ರು ಸೈನ್ಯದೆಡೆಗೆ ದೃಷ್ಟಿ ಹರಿಸಿದರು. ನಿಮಿಷದಲ್ಲಿಯೇ ನಾಶಹೊಂದಿತು ಲಕ್ಷö್ಮಣ ಸೇನೆ.ಲಕ್ಷö್ಮಣ ಕುಶನೆದುರು ಹೋರಾಟಕ್ಕೆ ನಿಂತ. ಲವನನ್ನು ಎದುರಿಸುವ ಮನಸ್ಸು ಮಾಡಿದ ಸೇನಾಧಿಪತಿ ಕಾಲಜಿತು. ಸಂಪೂರ್ಣ ಸೇನೆಯೇ ಅತಿ ರೋಷದಿಂದ ಇಬ್ಬರು ಬಾಲಕರ ಮೇಲೆರಗಿತು. ಮೇಲೆ ಬಿದ್ದವರನ್ನೆಲ್ಲಾ ಕೊಂದುಹಾಕಿದ ಲವ. ಎಲ್ಲೆಲ್ಲೂ ಬಾಣಗಳ ಹಾರಾಟ. ಸೇನಾಗಡಲಿನಲ್ಲಿ ಕುಶ ಲವರ ಸಾಹಸದ ಈಜಾಟ. ಆನೆ ಕುದುರೆಗಳು ಧರೆಗುರುಳಿದವು. ಸೈನಿಕರ ಶಿರಗಳು ಅಳಿದುಹೋದವು.ಹೀಗೆ ಲವ ಕುಶರ ಸಾಹಸ ಸಾಗುತ್ತಿದ್ದಾಗಲೇ ಎದುರಾದವನು ರುಧಿರನೆಂಬ ಮಹಾ ರಾಕ್ಷಸ. ಶತ್ರುಘ್ನನಿಂದ ಮಡಿದಿದ್ದ ಲವಣಾಸುರನ ಸೋದರ ಮಾವನಾಗಿದ್ದ ಆತನ ಕಣ್ಣುಬಿದ್ದದ್ದು ಲವನ ಕೈಯ್ಯಲ್ಲಿದ್ದ ಕೋದಂಡದ ಮೇಲೆ. ಅದನ್ನು ಬಿರುಸಾಗಿ ಹಿಡಿದೆಳೆದವನು ಅಪಹರಿಸಿಕೊಂಡು ಗಗನ ಮಾರ್ಗವಾಗಿ ಹೊರಟ. ಲವ ಅಳುಕಲಿಲ್ಲ. ವಾಲ್ಮೀಕಿ ಮಹರ್ಷಿಗಳು ಬೋಧಿಸಿದ್ದ ಅಗ್ನಿಮಂತ್ರಧ್ಯಾನ ಮಾಡಿದ. ಸೇನೆಯನ್ನು ಎದುರಿಸುತ್ತಲೇ ರುಧಿರನನ್ನು ಕೊಂದು ತನ್ನ ದಿವ್ಯಾಸ್ತçವನ್ನು ಮರಳಿ ಪಡೆದುಕೊಂಡ.ಇತ್ತ ಲಕ್ಷö್ಮಣನ ಜೊತೆಗೆ ಯುದ್ಧ ಮಾಡುತ್ತಿದ್ದ ಕುಶ. ಸೀತಾಸುತನ ಬಾಣದ ಏಟಿಗೆ ಊರ್ಮಿಳಾ ರಮಣನ ರಥವದು ಎರಡು U Àಳಿಗೆ ಸತತವಾಗಿ ತಿರುಗಿತು. ‘ಬಾಲಕನಿವನು ಪರಾಕ್ರಮಿ’ ಎಂದು ಮೆಚ್ಚಿತು ಕುಶನನ್ನು, ಲಕ್ಷö್ಮಣನ ಮನಸ್ಸು. ತನ್ನ ಶೌರ್ಯವಷ್ಟೂ ಬೇಕು ಇವನನ್ನು ಸೋಲಿಸಲು ಎಂದು ತೋರಿತು ಸುಮಿತ್ರಾಸುತನಿಗೆ. ಬಲವಾಗಿಯೇ ಬಾಣ ಪ್ರಯೋಗಿಸಿದ. ಕುಶನ ಕಿರೀಟ ಕವಚಗಳು ಕೆಳಗೆ ಬಿದ್ದವು. ಎದುರಾದ ಆಘಾತವನ್ನು ಸರಳವಾಗಿಸಿಕೊಂಡ ಸೀತಾಸುತ. ‚ಕಿರೀಟ ಕವಚಗಳ ಕಾಟವಿಲ್ಲದೆ ನಿರಾಳನಾಗಿ ಯುದ್ಧ ಮಾಡಬಹುದಿನ್ನು‛ ಎಂದು ನಗುತ್ತಾ ನುಡಿದವನು ಲಕ್ಷö್ಮಣನ ಮೇಲೆ ಅಮೋಘಾಸ್ತçವನ್ನು ಪ್ರಯೋಗಿಸಿದ. ಪ್ರಜ್ಞೆ ಕಳೆದುಕೊಂಡು ಭೂಮಿಯನ್ನಪ್ಪಿದ ಶ್ರೀರಾಮ ಸಹೋದರ.ಕುಶ ಲವರ ಆರ್ಭಟಕ್ಕೆ ಲಕ್ಷö್ಮಣ ಸೇನೆಯದು ದಿಕ್ಕುದಿಕ್ಕಿಗೆ ಚೆಲ್ಲಾಪಿಲ್ಲಿಯಾಯಿತು. ಕುದುರೆಯನ್ನು ಕಟ್ಟಿಹಾಕಿದ್ದ ಬನದೆಡೆಗೆ ರಥವನ್ನು ಓಡಿಸಿದರು ಸೀತಾಸುತರು… ಡಾ.ವಿಶ್ವನಾಥ್ ಎನ್.ನೇರಳೆಕಟ್ಟೆ
ಧಾರಾವಾಹಿ ಸಂಗಾತಿ-36 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್ ಚೇತನ ಅಖಂಡ ಕರ್ನಾಟಕ ಹೋರಾಟ ಅಖಂಡ ಕರ್ನಾಟಕದ ಕನಸಿನ ತುಡಿತ ಹೆಚ್ಚುತಿದ್ದಂತಕನ್ನಡದ ಅಭಿಮಾನಿಗಳು, ಕನ್ನಡದ ಸಾಹಿತಿಗಳು, ಕನ್ನಡಪರ ಸಂಘಟನೆಗಳು ಒಂದಾಗಿ ಎತ್ತಿಕೊಂಡಿದ್ದ ಹೋರಾಟದ ಧ್ವನಿ ನಿಧಾನವಾಗಿ ರಾಜಕೀಯದ ಗಾಳಿಯಲ್ಲಿ ಸಿಲುಕಿ ದಿಕ್ಕು ತಪ್ಪಿದುದನ್ನು ಕಣ್ಣಾರೆ ಕಂಡರೂ, ಅದನ್ನು ತಡೆಯಲಾಗದ ಅಸಹಾಯಕ ಸ್ಥಿತಿಗೆ ಸಾಹಿತಿಗಳು, ಕನ್ನಡ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಬಂದು ತಲುಪಿದ್ದರು. ಅಖಂಡ ಕರ್ನಾಟಕ ಹೋರಾಟವು ಒಂದು ಭೌಗೋಳಿಕ ಪ್ರದೇಶವನ್ನು ಒಂದಾಗಿಸುವುದರ ಜೊತೆಗೆ ಕನ್ನಡಿಗರ ಹೃದಯಗಳನ್ನು ಒಂದಾಗಿಸುವ ಕನಸಾಗಿತ್ತು. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ, ಕರಾವಳಿಯಿಂದ ಮಲೆನಾಡಿನವರೆಗೆ……ಕನ್ನಡದ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಭಾವನೆ ನಮ್ಮನ್ನು ಒಂದೇ ನಾಡಿನ ಮಕ್ಕಳನ್ನಾಗಿ ಮಾಡಬೇಕು ಎಂಬುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು….. ಆದರೆ ಅಖಂಡ ಕರ್ನಾಟಕದ ಬದಲಾಗಿ ಕರ್ನಾಟಕವನ್ನು ವಿಭಜಿಸುವ ಮಾತುಗಳು ಬಲ ಪಡೆಯತೊಡಗಿದವು. ಜನರ ಮನದಾಳದಲ್ಲಿ ಬೆಳೆದಿದ್ದ ಏಕೀಕರಣದ ಆಶಯಕ್ಕಿಂತ ರಾಜಕೀಯ ಲೆಕ್ಕಾಚಾರಗಳು ಮೇಲುಗೈ ಸಾಧಿಸಿದವು. ಭಾಷಾವಾರು ರಾಜ್ಯಗಳ ರಚನೆಯ ಪರವಾಗಿ ದೇಶದ ರಾಷ್ಟ್ರೀಯ ನಾಯಕರು ಮುಂದುವರಿದಿದ್ದರೂ, ಕರ್ನಾಟಕ ಒಂದಾಗಬೇಕು ಎಂಬ ಜನಮನದ ಬಯಕೆಯನ್ನು ರಾಜಕೀಯ ನಾಯಕತ್ವ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವಿಫಲವಾಯಿತು. ಕೇಂದ್ರ ರಾಜಕಾರಣದ ಒತ್ತಡಗಳಿಗೆ ಕರ್ನಾಟಕದ ಅನೇಕ ರಾಜಕಾರಣಿಗಳು ಮಣಿದರು. ಹಿಂದೆ ಜನರಿಗೆ ನೀಡಿದ್ದ ಭರವಸೆಗಳು, ಆಡಿದ್ದ ಮಾತುಗಳು ಬದಲಾಗತೊಡಗಿದವು. ರಾಜಕೀಯ ಪಕ್ಷಗಳ ಹಿತಾಸಕ್ತಿಗಳು ಕನ್ನಡ ನಾಡಿನ ಒಗ್ಗಟ್ಟಿನ ಕನಸಿಗಿಂತ ದೊಡ್ಡದಾಗಿ ಕಾಣಿಸಿಕೊಂಡವು. ಹೋರಾಟದ ಉತ್ಸಾಹವೂ ಕ್ರಮೇಣ ಕುಗ್ಗತೊಡಗಿತು. ಇದನ್ನೆಲ್ಲ ಕಂಡ ಕನ್ನಡ ಅಭಿಮಾನಿಗಳು, ಕನ್ನಡ ಸಾಹಿತಿಗಳ ಮನಸ್ಸಿನಲ್ಲಿ ನೋವು ಮಡುಗಟ್ಟಿತು. ಕನ್ನಡಕ್ಕಾಗಿ ಎತ್ತಿದ ಧ್ವನಿ ರಾಜಕೀಯದ ಗದ್ದಲದಲ್ಲಿ ಕೇಳಿಸದಂತಾಯಿತು. ಕನ್ನಡಿಗರ ಭಾವೈಕ್ಯತೆಯ ಕನಸು ಕಣ್ಣೆದುರೇ ಮಸುಕಾಗುತ್ತಿರುವುದನ್ನು ಕಂಡರೂ, ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ….. ಎಲ್ಲೆಲ್ಲಿ ಕನ್ನಡದ ನುಡಿ ಕೇಳಿಸುತ್ತದೆಯೋ, ಅಲ್ಲೆಲ್ಲ ಕನ್ನಡಿಗರ ಹೃದಯ ಒಂದೇ ಬಡಿತದಲ್ಲಿ ಮಿಡಿಯಬೇಕು. ಪ್ರಾದೇಶಿಕ ಭಿನ್ನತೆಗಳನ್ನು ಮೀರಿ, ರಾಜಕೀಯ ಗಡಿಗಳನ್ನು ದಾಟಿ, ಕನ್ನಡದ ಹೆಸರಿನಲ್ಲಿ ಎಲ್ಲರೂ ಒಂದಾಗಬೇಕು….ಎನ್ನುವ ಕರೆ ಕೊಟ್ಟರು ಜಯದೇವಿ ತಾಯಿಯವರು ಜನತೆಗೆ ಕರೆಕೊಟ್ಟರು. ಕನ್ನಡದ ನೆಲ-ನುಡಿ-ಸಂಸ್ಕೃತಿಯ ಭಾವೈಕ್ಯತೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿತ್ತು….ಅಖಂಡ ಕರ್ನಾಟಕವೆಂದರೆ ಒಂದು ನಾಡಿನ ಕೋಟ್ಯಂತರ ಕನ್ನಡಿಗರ ಹೃದಯದ ಕನಸು. ಆ ಕನಸು ಉಳಿಯುವವರೆಗೂ ಕನ್ನಡದ ಏಕತೆಯ ಜ್ಯೋತಿ ಎಂದಿಗೂ ಆರದಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಟಕ್ಕಿ ನಿಂತು ಕೊಂಡರು.ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರು ಹೆಜ್ಜೆ ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಮಾಡುವದಾಗಿತ್ತು. ೧೯೫೩ರಲ್ಲಿ ಆರ್ ವಿ ಬೀಡಪ್ಪ ,ಭೀಮಣ್ಣ ಖಂಡ್ರೆ, ಪ್ರಭುರಾಜ ಕಂಬಳಿವಾಲೆ ಮೊದಲಾದವರು ಸೇರಿ *ಪ್ರಜಾ ಸೋಶಿಯಾಲಿಸ್ಟಿಕ*ಪಾರ್ಟಿಯನ್ನು ಸ್ಥಾಪಿಸಿದ್ದರು…… ಜಮದೇವಿ ತಾಯಿಯವರು ಅವರೊಂದಿಗೆ ಪಕ್ಷ ಸಂಘಟನೆ ತೊಡಗಿಕೊಂಡಿದ್ದರು. ಇವರ ಒಡನಾಟದೊಂದಿಗೆ ಲೋಹಿಯಾ, ಜಯಪ್ರಕಾಶ ನಾರಾಯಣ, ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿದ್ದರು. ಈ ಮೂಲಕ ಒಬ್ಬ ಸಮಾಜವಾದಿಯಾಗಿ ಗುರುತಿಸಿಕೊಂಡರು ಮುಂದೆ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ(ಅ.ಕ.ರಾ.ನಿ) ಉಪಾಧ್ಯಕ್ಷವಾಗಿ ಕೆಲಸ ನಿರ್ವಹಿಸಿದರು. ೧೯-೪-೧೯೫೨ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಿ ಸಭೆಯ ಕಾಂಗ್ರೆಸ್ಸಿನ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದು ಅಂದೆ ಗಲಭೆಯು ನಡೆಯಿತು ಇದೆ ಹುಬ್ಬಳ್ಳಿಯ ಗಲಭೆ ಎಂದು ಹೆಸರಾಯಿತು. ಆಂಧ್ರದ ಹೋರಾಟಗಾರರಾದ ಪೊಟ್ಟು ಶ್ರೀರಾಮುಲು ಅವರ ಪ್ರೇರಣೆಯಿಂದ…. ಕರ್ನಾಟಕದ ಏಕೀಕರಣ ಆಗಲೇಬೇಕೆಂದು ಶಂಕರ ಗೌಡ ಪಾಟೀಲರು ಆ ಮರಣ ಉಪವಾಸ ಕುಳಿತದ್ದು ಈ ಉಪವಾಸವನ್ನು ನಿಲ್ಲಿಸಿ ಏಕೀಕರಣದ ಆಶಯವನ್ನು ಈಡೇರಿಸುವ ಕನಸು ಕಂಡಿದ್ದ ಜನತೆಗೆ ನಿರಾಸೆಗೊಳಿಸಿದ್ದು ಜಯದೇವಿ ತಾಯಿಯವರು ಮನನೋಯಿತು…. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರ ರಾಜಕೀಯ ಬದುಕಿನಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿತು. ಕಾಂಗ್ರೆಸಿನ ಸಾಂಪ್ರದಾಯಿಕ ರಾಜಕಾರಣದಿಂದ ಹೊರಬಂದು, ಜನಪರವಾದ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಅವರು ಹೆಚ್ಚು ಒತ್ತು ನೀಡತೊಡಗಿದರು. ಇದೇ ಸಂದರ್ಭದಲ್ಲಿ ಸೊಲ್ಲಾಪುರ ಸೇರಿದಂತೆ ಕನ್ನಡ ಭಾಷಿಕ ಪ್ರದೇಶಗಳನ್ನು ಒಳಗೊಂಡ ಅಖಂಡ ಕರ್ನಾಟಕ ರಾಜ್ಯದ ನಿರ್ಮಾಣದ ಆಶಯ ಅವರ ರಾಜಕೀಯ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು.. ಈ ಹೊಸ ರಾಜಕೀಯ ವೇದಿಕೆ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಪರ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಿತು.ಜಯದೇವಿ ತಾಯಿಯವರು ಈ ನಾಯಕರೊಂದಿಗೆ ನಿಕಟವಾಗಿ ಸಂಪರ್ಕ ಬೆಳೆಸಿಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಗ್ರಾಮೀಣ ಪ್ರದೇಶಗಳ ಜನರು, ಮಹಿಳೆಯರು ಹಾಗೂ ಸಾಮಾನ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಪಕ್ಷದ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದರು ಸಮಾಜವಾದಿ ನಾಯಕರ ಪ್ರಭಾವಪ್ರಜಾ ಸೋಶಿಯಲಿಸ್ಟ್ ಪಕ್ಷದ ಸಂಘಟನಾ ಕಾರ್ಯದ ಸಂದರ್ಭದಲ್ಲಿ ಜಯದೇವಿ ತಾಯಿಯವರಿಗೆ ದೇಶದ ಪ್ರಮುಖ ಸಮಾಜವಾದಿ ನಾಯಕರ ಚಿಂತನೆಗಳನ್ನು ಹತ್ತಿರದಿಂದ ಅರಿಯುವ ಅವಕಾಶ ದೊರೆಯಿತು.ವಿಶೇಷವಾಗಿ ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಮತ್ತು ಶಾಂತವೇರಿ ಗೋಪಾಲಗೌಡ ಅವರ ವಿಚಾರಗಳು ಅವರ ಮೇಲೆ ಗಾಢವಾದ ಪ್ರಭಾವ ಬೀರಿದವು.ಲೋಹಿಯಾ ಅವರ ಸಾಮಾಜಿಕ ಸಮಾನತೆ, ಹಿಂದುಳಿದ ವರ್ಗಗಳ ಪ್ರಗತಿ ಮತ್ತು ಅಧಿಕಾರದ ಕೇಂದ್ರೀಕರಣದ ವಿರೋಧದ ಚಿಂತನೆಗಳು ಜಯದೇವಿ ತಾಯಿಯವರನ್ನು ಆಕರ್ಷಿಸಿದವು. ಜಯಪ್ರಕಾಶ ನಾರಾಯಣ ಅವರ ಜನಪರ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಅವರ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಿದವು.ಅದೇ ರೀತಿ ಶಾಂತವೇರಿ ಗೋಪಾಲಗೌಡರ ಸರಳ ಜೀವನ, ರೈತಪರ ನಿಲುವು, ಸಮಾಜವಾದಿ ಬದ್ಧತೆ ಮತ್ತು ಜನರೊಂದಿಗೆ ಬೆರೆತು ಹೋರಾಟ ನಡೆಸುವ ಗುಣಗಳು ಜಯದೇವಿ ತಾಯಿಯವರ ಮೇಲೆ ಪರಿಣಾಮ ಬೀರಿದವು. ಸಮಾಜವಾದಿಯಾಗಿ ರೂಪುಗೊಂಡ ಜಯದೇವಿ ತಾಯಿಯವರು ಸಮಾಜವಾದಿ ನಾಯಕರ ಒಡನಾಟ ಮತ್ತು ಅವರ ವಿಚಾರಧಾರೆಯ ಅಧ್ಯಯನದಿಂದ ಜಯದೇವಿ ತಾಯಿಯವರ ರಾಜಕೀಯ ವ್ಯಕ್ತಿತ್ವ ಹೊಸ ರೂಪ ಪಡೆದುಕೊಂಡಿತು. ರಾಜಕೀಯವೆಂದರೆ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವ ಸಾಧನ ಎಂಬ ನಂಬಿಕೆ ಅವರಲ್ಲಿ ಗಟ್ಟಿಯಾಯಿತು. ಸಾಮಾಜಿಕ ಅಸಮಾನತೆ, ಶೋಷಣೆ, ಬಡತನ, ಮಹಿಳೆಯರ ಸಮಸ್ಯೆಗಳು ಮತ್ತು ಹಿಂದುಳಿದ ಜನಸಮುದಾಯಗಳ ಹಕ್ಕುಗಳಂತಹ ವಿಚಾರಗಳ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿದರು. ಈ ಹಂತದಲ್ಲಿ ಅವರು ಒಬ್ಬ ಬದ್ಧ ಸಮಾಜವಾದಿ ನಾಯಕಿಯಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡರು.ಅಖಂಡ ಕರ್ನಾಟಕದ ಆಶಯದೊಂದಿಗೆ ಸಮಾಜವಾದಿ ಚಿಂತನೆಜಯದೇವಿ ತಾಯಿಯವರ ರಾಜಕೀಯ ಚಿಂತನೆಗಳಲ್ಲಿ ಸಮಾಜವಾದ ಮತ್ತು ಅಖಂಡ ಕರ್ನಾಟಕದ ಹೋರಾಟ ಪರಸ್ಪರ ಬೆಸೆದುಕೊಂಡಿದ್ದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಬೇಕು ಎಂಬುದು ಅವರ ಪ್ರಮುಖ ಆಶಯವಾಗಿತ್ತು.ಅವರ ದೃಷ್ಟಿಯಲ್ಲಿ ಕರ್ನಾಟಕ ಏಕೀಕರಣವೆಂದರೆ ಕರ್ನಾಟಕದ ಪ್ರತಿಯೊಂದು ಭಾಗದ ಜನರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೊರೆಯಬೇಕು ಎಂಬುದೂ ಅದರ ಭಾಗವಾಗಿತ್ತು. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನಲ್ಲಿ ಜವಾಬ್ದಾರಿ ಹಂತದಲ್ಲಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ (ಅ.ಕ.ರಾ.ನಿ.) ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡರು. ಇಂಥ ಸ್ಥಾನವು ಅವರ ರಾಜಕೀಯ ಜೀವನದ ಮಹತ್ವದ ಘಟ್ಟವಾಗಿತ್ತು. ಈ ಹುದ್ದೆಯ ಮೂಲಕ ಅವರು ಅಖಂಡ ಕರ್ನಾಟಕದ ವಿಚಾರವನ್ನು ಜನರ ಮುಂದೆ ನಿರಂತರವಾಗಿ ಪ್ರಸ್ತಾಪಿಸಿದರು. ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣ, ಕನ್ನಡಿಗರ ಹಕ್ಕುಗಳು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪರವಾಗಿ ಧ್ವನಿ ಎತ್ತಿದರು. ಹೋರಾಟ ಮತ್ತು ವಿಚಾರಧಾರೆಯ ಸಂಗಮಜಯದೇವಿ ತಾಯಿಯವರ ರಾಜಕೀಯ ಪಯಣವನ್ನು ಗಮನಿಸಿದಾಗ, ಅವರ ಬದುಕಿನಲ್ಲಿ ಕನ್ನಡದ ಮೇಲಿನ ಅಭಿಮಾನ, ಅಖಂಡ ಕರ್ನಾಟಕದ ಕನಸು ಮತ್ತು ಸಮಾಜವಾದಿ ವಿಚಾರಧಾರೆ ಒಂದಕ್ಕೊಂದು ಪೂರಕವಾಗಿ ಬೆಳೆದಿರುವುದು ಕಾಣಿಸುತ್ತದೆ.ಕಾಂಗ್ರೆಸ್‌ನಿಂದ ಹೊರಬಂದ ನಂತರ ಅವರು ಆಯ್ದುಕೊಂಡ ದಾರಿ ಸುಲಭವಾದದ್ದಾಗಿರಲಿಲ್ಲ. ಆದರೆ ಅಧಿಕಾರದ ರಾಜಕಾರಣಕ್ಕಿಂತ ತತ್ವ, ಜನಪರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ ಬದುಕನ್ನು ಅವರು ಕಟ್ಟಿಕೊಂಡರು.ಹೀಗಾಗಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ಕನಸನ್ನು ಹೊತ್ತ ಕನ್ನಡತಿ, ಸಮಾಜವಾದಿ ಚಿಂತನೆಯ ಹೋರಾಟಗಾರ್ತಿ ಮತ್ತು ಜನಪರ ಪ್ರತಿನಿಧಿಯಾಗಿ ಗುರುತಿಸುವುದು ಹೆಚ್ಚು ಸೂಕ್ತವಾಗಿದೆ. ಸವಿತಾ ದೇಶಮುಖ
ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಶಿಕ್ಷಣ ಪ್ರವರ್ತಕ ರಾವ್ ಬಹಾದ್ದೂರ್ ಗಿಲಗಂಚಿ ಗುರುಸಿದ್ದಪ್ಪನವರು ರಾವ್ ಬಹಾದ್ದೂರ ಶ್ರೀ ಗಿಲಗಂಚಿ ಗುರುಸಿದ್ದಪ್ಪನವರು ಎಂಬ ಉತ್ತರ ಕರ್ನಾಟಕದ ಧ್ರುವತಾರೆ ಸಮಾಜಸೇವಕ ಅಪ್ರತಿಮ ಸಮಾಜ ಚಿಂತಕರು. ಇವರ ಸಂಕ್ಷಿಪ್ತ ಪರಿಚಯ ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಪ್ರಕಟ ಮಾಡುತ್ತಿದ್ದೇನೆ. (1841–1891) ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಪ್ರವರ್ತಕರು, ಲಿಂಗಾಯತ ಧರ್ಮದ ಸಂಘಟಿಕರು, ಸಮಾಜ ಸುಧಾರಕರು ಮತ್ತು ಬ್ರಿಟಿಷ್ ಆಡಳಿತಾವಧಿಯಲ್ಲಿ ಧಾರವಾಡದ ಡೆಪ್ಯೂಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಹಿರಿಯ ಅಧಿಕಾರಿಯಾಗಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯ ಮತ್ತು ಶೋಷಿತ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಇವರು ನೀಡಿದ ಕೊಡುಗೆ ಅನನ್ಯವಾದದ್ದು. ಜನನ ಮತ್ತು ಶಿಕ್ಷಣ ಗಿಲಗಂಚಿ ಗುರುಸಿದ್ದಪ್ಪನವರು 1841 ರಂದು ಧಾರವಾಡದ ಲಿಂಗಾಯತ ನೇಕಾರ( ಹಟಗಾರ ) ಕುಟುಂಬದಲ್ಲಿ ಜನಿಸಿದರು. ಬಾಲಕ ಗುರುಸಿದ್ದಪ್ಪನವರು ತುಂಬಾ ಚತುರ ಮತ್ತು ಬುದ್ಧಿವಂತನಾಗಿದ್ದನು. ಹೀಗಾಗಿ ಇವರ ತಂದೆ ವೀರಬಸಪ್ಪ ಇವರ ಶಿಕ್ಷಣಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು. ಅವರ ಪ್ರಮುಖ ಸಾಧನೆಗಳು ಮತ್ತು ಜೀವನದ ಮುಖ್ಯಾಂಶಗಳು : 1. ಶೈಕ್ಷಣಿಕ ಕ್ರಾಂತಿ ಮತ್ತು ಸಂಸ್ಥೆಗಳ ಸ್ಥಾಪನೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA): ಒಂದು ದಿನ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಆಪ್ತ ಮಿತ್ರರು ಇವರ ಜೊತೆಗೆ ಕೆಲಸ ನಿರ್ವಹಿಸುವ ಶ್ರೀ ಅರಟಾಳ ರುದ್ರಗೌಡರು ಮತ್ತು ಇತರ ಸ್ನೇಹಿತರೊಂದಿಗೆ ಒಂದು ದಿನ ಸಂಜೆ ಮೈಲಾರ ಗುಡ್ಡಕ್ಕೆ ವಾಕಿಂಗ್ ವಸ್ತು ವಿಹಾರಕ್ಕೆ ಹೋಗುವಾಗ ಬೇರೆ ಬೇರೆ ವಿಷಯ ಮಾತನಾಡುತ್ತಾ ಲಿಂಗಾಯತರು ಏಕೆ ಹಿಂದುಳಿದಿದ್ದಾರೆ ಎಂದು ಚರ್ಚಿಸ ತೊಡಗಿದರು. ಇದಕ್ಕೆ ಮುಖ್ಯ ಕಾರಣ ಬಡತನ ಶಿಕ್ಷಣ ಇಲ್ಲದಿರುವುದು. ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಎಲ್ ಇ ಎ ಲಿಂಗಾಯತ ಎಜ್ಯುಕೇಶನ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು 1883 ರಲ್ಲಿ 215500 ರೂಪಾಯಿ ಹಣವನ್ನು ಡಿಪಾಸಿಟ್ ಮಾಡಿ ಅದರ ಬಡ್ಡಿಯಲ್ಲಿ ಲಾಕ್ ಲಿಂಗಾಯತ ಶಿಷ್ಯ ವೇತನ ಸ್ಕಾಲರ್ಶಿಪ್ ಫಂಡ್ ಬರುವಂತೆ ಯೋಜನೆಯನ್ನು ಜಾರಿಗೆ ತಂದರು. ಗಿಲಗಂಚಿ ಗುರುಸಿದ್ದಪ್ಪನವರು ಮತ್ತು ಅರಟಾಳ ರುದ್ರಗೌಡರು ಸೇರಿ 1883 ರಲ್ಲಿ ಧಾರವಾಡದಲ್ಲಿ Lingayat Education Association ಸಂಸ್ಥೆಯನ್ನು ಸ್ಥಾಪಿಸಿದರು. ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಇದು ಪ್ರಮುಖ ಆಧಾರವಾಯಿತು. ಉತ್ತರ ಕರ್ನಾಟಕದ ಡಾ ಫ ಗು ಹಳಕಟ್ಟಿ ಅವರನ್ನೂ ಸೇರಿ ಅನೇಕ ಮಹನೀಯರು ಈ ಸಂಸ್ಥೆಯಿಂದ ಶಿಷ್ಯ ವೇತನ ಪಡೆದು ಬೆಳೆದವರು. ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆಯ ಮುಖ್ಯ ಶಿಲ್ಪಿ ಡಾ ಫ ಗು ಹಳಕಟ್ಟಿ ಇವರೂ ಸಹಿತ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಸ್ಥಾಪಿಸಿದ ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ತಮ್ಮ ಪದವಿ ಮತ್ತು ವಕೀಲಿ ಕೋರ್ಸ್ ಮಾಡಿದ್ದು. ಕೆ.ಎಲ್.ಇ ಸಂಸ್ಥೆಗೆ ಮುನ್ನುಡಿ: ಇವರು ಸ್ಥಾಪಿಸಿದ್ದ ‘ಲಿಂಗಾಯತ ಫಂಡ್’ ನೆರವು ಮತ್ತು ಶಿಷ್ಯವೇತನದಿಂದಲೇ ಅಂದಿನ ಪ್ರಮುಖ ಸಪ್ತರ್ಷಿಗಳು ಪ್ರೊ ಶಿ ಶಿ ಬಸವನಾಳ ಪ್ರೊ ಎಂ ಆರ್ ಸಾಖರೆ ಬಿ ಎಸ್ ಹಂಚಿನಾಳ ಏಚ್ ಎಫ ಕಟ್ಟಿಮನಿ ಬಿ ಬಿ ಮಮದಾಪೂರ ಪಂಡಿತಪ್ಪ ಚಿಕ್ಕೋಡಿ ಸರ್ದಾರ್ ವೀರನಗೌಡ ಪಾಟೀಲ (ಏಳು ಜನ ಶಿಕ್ಷಕರು) ಉನ್ನತ ಶಿಕ್ಷಣ ಪಡೆದಿದ್ದರು. ಇದೇ ಪ್ರೇರಣೆಯಿಂದ ಮುಂದೆ ಪ್ರಸಿದ್ಧ KLE ಶಿಕ್ಷಣ ಸಂಸ್ಥೆ 1916 ರಲ್ಲಿ ಉದಯಿಸಲು ಸಾಧ್ಯವಾಯಿತು. 2. ಸಾಮಾಜಿಕ ಸೇವೆ ಮತ್ತು ಸಂಘಟನೆ ಅಖಿಲ ಭಾರತ ವೀರಶೈವ ಮಹಾಸಭೆ: ಸಮಾಜದ ಸುಧಾರಣೆ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಉದ್ದೇಶದಿಂದ ಸ್ಥಾಪನೆಯಾದ ವೀರಶೈವ ಮಹಾಸಭೆಯ ಆರಂಭಿಕ ದಿನಗಳಲ್ಲಿ ಅರಟಾಳ ರುದ್ರಗೌಡರು, ಸರ್ದಾರ್ ಬುಳ್ಳಪ್ಪ ಮಾಮಲೆದೇಸಾಯಿ ಮುಂತಾದ ಧೀಮಂತರು ಸೇರಿ ಸಮಾಜ ಸಂಘಟನೆಗೆ ಇವರು ಸ್ಪೂರ್ತಿಯಾದರು. ದೂರದೃಷ್ಟಿಯ ನಾಯಕತ್ವ: ಲಿಂಗಾಯತ ಸಮಾಜ ಸುಶಿಕ್ಷಿತವಾಗಬೇಕೆಂಬ ಹಂಬಲದಿಂದ ತಮ್ಮ ಇಡೀ ಜೀವನ ಹಾಗೂ ಸಂಪತ್ತನ್ನು ಧಾರೆ ಎರೆದ ಇವರನ್ನು ಉತ್ತರ ಕರ್ನಾಟಕದ ಶೈಕ್ಷಣಿಕ ರಂಗದ ಪ್ರಾತಃಸ್ಮರಣೀಯರೆಂದು ಗೌರವಿಸಲಾಗುತ್ತದೆ. ಲಿಂಗಾಯತ ಸಮಾಜದಲ್ಲಿ ಮೊಟ್ಟ ಮೊದಲ ಡೆಪ್ಯುಟಿ ಕಮಿಷನರ್ ಆಗಿ ನೇಮಕ ಗೊಂಡ ಪ್ರಥಮರು ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಉದಾರತ್ವತನಕ್ಕೆ ಮಾದರಿ. 1884 ರಲ್ಲಿ ಪುಣೆಯಲ್ಲಿ ಓದುವ ನಾಲ್ಕು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರಿಗೂ ತಿಂಗಳಿಗೆ 80 ರೂಪಾಯಿಯಂತೆ ತಿಂಗಳಿಗೆ 320 ರೂಪಾಯಿಯನ್ನು ಐದು ತಿಂಗಳು ತಮ್ಮ ಸ್ವಂತ ಹಣ ಕೊಡುತ್ತಿದ್ದರು.ಕಾರಣ ಲಿಂಗಾಯತ ವೆಲ್ ಫೇರ್ ಫಂಡ್ ಬಡ್ಡಿ ಜಮಾ ಆಗಿರದ ಕಾರಣ ತಮ್ಮ ಹಣವನ್ನು ಕೊಟ್ಟು ವಿದ್ಯಾರ್ಥಿಗಳನ್ನು ಕಲಿಸಿದರು. ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು 1890 ರಲ್ಲಿ ಒಂದು ದಿನ ಮಧ್ಯಾನ್ಹ ಊಟ ಮಾಡಿ ಪ್ರಾಂಗಣದಲ್ಲಿ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ಒಬ್ಬ ಬಡ ವಿದ್ಯಾರ್ಥಿ ಬಂದು ತನ್ನ ಕಾಲೇಜಿಗೆ ಫೀ ಕಟ್ಟಲು ಹಣ ಬೇಕೆಂದು ಕೇಳಿಕೊಂಡಾಗ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ಎದ್ದು ಗೂಟಕ್ಕೆ ನೇತು ಹಾಕಿದ್ದ ತಮ್ಮ ಕೋಟ್ ನ ಕಿಸೆಯಲ್ಲಿ ಕೈಹಾಕಿದಾಗ ಅಲ್ಲಿ ಒಂದು ಅಣೆ ಪೈಸೆ ದೊರೆಯಲಿಲ್ಲ . ಕಣ್ಣೀರು ಕೆನ್ನೆಯ ಮೇಲೆ ಹರಿದವು. ಅಸಹಾಯಕನಾಗಿ ದುಡ್ಡಿಲ್ಲ ಕ್ಷಮಿಸು ಎಂದು ಹೇಳಿ ಕಳುಹಿಸಿದರು. ವಿದ್ಯಾರ್ಥಿ ಮನೆಯ ಕಾಂಪೌಂಡ್ ದಾಟುವ ಮುನ್ನ ತಮ್ಮ ಎದೆಯ ಮೇಲಿನ ಬಂಗಾರದ ಗುಂಡಗಡಗಿ ಕರಡಿಗೆ ತೆಗೆದು ಇಷ್ಟ ಲಿಂಗವನ್ನು ಕೈಯಲ್ಲಿ ಹಿಡಿದು ಬಿಳಿ ಬಟ್ಟೆಯಲ್ಲಿ ಕಟ್ಟಿ ಬಂಗಾರದ ಗುಂಡಗಡಗಿಯನ್ನು ಬಡ ವಿದ್ಯಾರ್ಥಿಗೆ ಕೊಟ್ಟು. ” ನೋಡು ಇದನ್ನು ಮಾರಿ ನಿನ್ನ ಇಡೀ ಶಿಕ್ಷಣವನ್ನು ಮುಗಿಸು ಎಂದು ಹರಸಿ ಕಳುಹಿಸಿದ ಮಹಾ ಮಾನವತಾವಾದಿ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು. ಕೊನೆಯ ಸಂದೇಶ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ತಮ್ಮ ಐವತ್ತನೆಯ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಅವರನ್ನು ನೋಡಲು ಇವರ ಆಪ್ತ ಮಿತ್ರರು ಶ್ರೀ ಅರಟಾಳ ರುದ್ರಗೌಡರು ಭೇಟಿಗೆ ಬಂದರು ” ರಾವ್ ಸಾಹೇಬ್ ಶ್ರೀ ಗುರುಸಿದ್ದಪ್ಪನವರೇ ನಮಗೆ ಏನಾದರೂ ತಮ್ಮ ಸಂದೇಶ ಮಾರ್ಗದರ್ಶನ ನೀಡುತ್ತೀರಾ ಎಂದು ಕೇಳಿದಾಗ ಮುಗುಳು ನಕ್ಕು. ರುದ್ರಗೌಡರೆ ನಾವಿಬ್ಬರೂ ಆರಂಭಿಸಿದ ಲಿಂಗಾಯತ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಲಿಂಗಾಯತ ಎಜುಕೇಶನ್ ಅಸೋಸಿಯೇಷನ್ (LEA) ಎಲ್ಲಾ ಬಡ ಮಕ್ಕಳ ಶಿಕ್ಷಣಕ್ಕೆ ನಿರಂತರವಾಗಿ ಶಿಷ್ಯವೇತನ ನೀಡಿ. ಯಾರೂ ಶಿಕ್ಷಣ ವಂಚಿತರಾಗಬಾರದು. ಬಸವಾದಿ ಶರಣರ ಕಾಯಕ ದಾಸೋಹ ನಿಲ್ಲ ಬಾರದು ಎಂದು ಅವರಿಂದ ಪ್ರಮಾಣ ಮಾಡಿಸಿಕೊಂಡರು. 22ಜೂನ್ 1891 ರಂದು ಅವರು ಬಯಲಲ್ಲಿ ಬಯಲಾದರು. ಇಂತಹ ಅಪರೂಪದ ಮಹಾಶರಣ ರಾವ್ ಬಹದ್ದೂರ ಗಿಲಗಂಚಿ ಗುರುಸಿದ್ದಪ್ಪನವರು ನಾಗರಿಕ ಸಮಾಜಕ್ಕೆ ಲಿಂಗಾಯತ ಸಮಾಜದವರಿಗೆ ನಿತ್ಯ ಸ್ಮರಣೀಯರು ಸಾವಿಲ್ಲದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ-42 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅಪ್ಪನ ಅಶ್ವ, ಮಗನ ಸವಾಲು ಮಡದಿಯನ್ನು ಕಾಡಿಗಟ್ಟಿದ್ದ ರಾಮನನ್ನು ಈಗ ರಾವಣವಧೆಯದು ಬ್ರಹ್ಮಹತ್ಯೆಯೆನಿಸಿ ಕಾಡಲಾರಂಭಿಸಿತ್ತು. ರಾವಣನೆಂಬ ಮಹಾಬ್ರಾಹ್ಮಣನನ್ನು ಕೊಂದ ದುರಿತ ತನ್ನದಾಯಿತಲ್ಲಾ! ಎಂದು ಚಿಂತಿಸತೊಡಗಿದ ಶ್ರೀರಾಮ. ಪರಿಹಾರವನ್ನು ಕೇಳಿದ್ದು ವಸಿಷ್ಠರಲ್ಲಿ. ಅವರು ಸೂಚಿಸಿದ್ದು ಅಶ್ವಮೇಧ ಯಾಗವನ್ನು. ಆದರೆ ಯಾಗ ನಡೆಯುವ ಸಮಯದಲ್ಲಿ ಪತ್ನಿ ಸೀತೆ ರಾಮನೊಡನೆಯೇ ಇರಬೇಕಿತ್ತು. ಚಿನ್ನದಿಂದ ನಿರ್ಮಿಸಲಾದ ಸೀತೆಯ ವಿಗ್ರಹವನ್ನಿಟ್ಟುಕೊಂಡು ಯಜ್ಞ ನಡೆಸುವೆನೆಂದ ಶ್ರೀರಾಮ. ಮುನಿಗಳ ಒಪ್ಪಿಗೆ ದೊರಕಿತು.ದೀಕ್ಷಾಬದ್ಧನಾದ ದಶರಥಸುತ. ಪೂಜೆ ನಡೆಯಿತು ಕುದುರೆಯದ್ದು, ಕೌಸಲ್ಯಾತನಯನಿಂದ. ಶ್ರೀರಾಮ ಶ್ರೇಷ್ಠತೆಯನ್ನು ಸಾರಿಹೇಳುವ ಬರಹವಿದ್ದ ಪತ್ರಿಕೆಯನ್ನು ಅಶ್ವದ ಹಣೆಗೆ ಅಳವಡಿಸಲಾಯಿತು. ಮೂರು ಅಕ್ಷೆÆÃಹಿಣಿ ಸೇನೆ ಹೊರಟಿತು ಯಜ್ಞಾಶ್ವ ರಕ್ಷಣೆಗೆ. ಆ ಸೇನೆಯ ಮುಂದಾಳತ್ವವದು ಶತ್ರುಘ್ನನಿಗೆ. ದಿಕ್ಕುದಿಕ್ಕಿಗೆ ಚಲಿಸಿತು ಕುದುರೆ. ಹಲವು ಅರಸರು ಮಣಿದರು ಅಯೋಧ್ಯಾಪತಿಯ ಹೆಸರನ್ನು ಕೇಳಿ.ಚಲಿಸುತ್ತಾ ಬಂದ ಕುದುರೆ ಈಗ ಸೇರಿದ್ದು ವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಸೇರಿದ್ದ ಉಪವನವನ್ನು. ಅಲ್ಲಿದ್ದ ಹಸಿಹಸಿರು ಹುಲ್ಲನ್ನು ಹೊಟ್ಟೆಗಿಳಿಸಿಕೊಳ್ಳುವ ಹುರುಪಿತ್ತು ಆ ಅಶ್ವಕ್ಕೆ. ಆ ಉಪವನದ ಕಾವಲಿಗಿದ್ದವನು ಲವ. ಬಿಲ್ಲನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದ ಆತ ಕುದುರೆಯನ್ನು ಕಂಡ. ವಾಲ್ಮೀಕಿ ಋಷಿಗಳೇ ಆ ಉಪವನದ ಕಾವಲು ಕಾಯುವ ಹೊಣೆಯನ್ನು ಅವನಿಗೆ ವಹಿಸಿ ವರುಣನ ಭೇಟಿಗಾಗಿ ಹೋಗಿದ್ದರು. ಈ ಕುದುರೆ ಉಪವನವನ್ನು ಹಾಳುಗೆಡಹಿದರೆ ವಾಲ್ಮೀಕಿ ಮುನಿಗಳು ಬೈದಾರು ತನ್ನನ್ನು ಎಂದುಕೊAಡ ಲವ.ಕುದುರೆಯ ಬಳಿಬಂದ. ಅದರ ಹಣೆಯಲ್ಲಿದ್ದ ಲೇಖವನ್ನು ಓದಿದ. ಅದರಲ್ಲಿದ್ದ ಪರಾಕ್ರಮವನ್ನು ಕೆರಳಿಸುವ ಅಕ್ಷರಗಳು ಲವನ ಸಾಹಸ ಪ್ರವೃತ್ತಿಯನ್ನು ಪ್ರಚೋದಿಸಿತು. ಇದನ್ನು ಕಟ್ಟಿಹಾಕದಿದ್ದರೆ ತನ್ನ ಈ ತೋಳುಗಳು ಇರುವುದಾದರೂ ಏಕೆ ಎಂದು ತೋರಿತು ಅವನಿಗೆ. ತನ್ನ ಹೆಗಲ ಮೇಲಿನ ಶಾಲನ್ನು ತೆಗೆದ ಲವ ಅದರಿಂದಲೇ ಕಟ್ಟಿಹಾಕಿದ ಕುದುರೆಯನ್ನು, ಬಳಿಯಲ್ಲಿದ್ದ ಬಾಳೆಯ ಗಿಡಕ್ಕೆ.ಅವನ ಜೊತೆಗಿದ್ದವರು ಕೆಲವು ಬ್ರಾಹ್ಮಣ ಹುಡುಗರು. ಹೆದರಿದರು. ಬೇರೆಯವರ ಕುದುರೆಯನ್ನು ಕಟ್ಟುವುದು ಸರಿಯಲ್ಲ ಎಂದರು. ಆದರೆ ಲವನಲ್ಲಿದ್ದ ಕ್ಷಾತ್ರಭಾವವದು ಅಳುಕಲಿಲ್ಲ; ಮಣಿಯಲಿಲ್ಲ.ಕುದುರೆಯ ಕಾವಲಿಗಿದ್ದ ಸೈನಿಕರು ಅದೇ ಸಮಯದಲ್ಲಿ ಬಂದರು ಅಲ್ಲಿಗೆ. ಬಾಳೆಯ ಗಿಡಕ್ಕೆ ಕಟ್ಟಿದ್ದ ಕುದುರೆಯನ್ನು ಕಂಡರು. ಎದುರು ಕಂಡ ಬ್ರಾಹ್ಮಣ ಬಾಲಕರನ್ನು ದಿಟ್ಟಿಸಿ “ಕುದುರೆಯನ್ನು ಕಟ್ಟಿದವರಾರು?” ಎಂದು ಕೇಳಿದರು. ಬಾಲಕರ ಕೈಗಳು ಚಾಚಿದ್ದು ಲವನ ಕಡೆಗೆ. ಕಿರಿದು ಪ್ರಾಯದ ಹುಡುಗ ಅರಿವಿರದೆ ತುರಗವನ್ನು ಕಟ್ಟಿಹಾಕಿದ್ದಾನೆ ಎಂದು ತೋರಿತು ಅವರಿಗೆ. ಬಿಟ್ಟುಬಿಡು ಎಂದರು ಅಸಡ್ಡೆಯಿಂದ.“ಕುದುರೆಯನ್ನು ಬಿಡುವುದಿಲ್ಲ. ಬಿಡಿಸುವುದಕ್ಕೆ ಹೋದವರ ಕರಗಳನ್ನು ಕತ್ತರಿಸದೆ ಇರಲಾರೆ” ಎಂಬ ಶೌರ್ಯದ ನುಡಿ ಹೊಮ್ಮಿತು ಲವನಿಂದ. ಸೈನಿಕರಿಗೆ ಹಠ ಮೂಡಿತು. ತಮ್ಮಂತಹ ಪರಾಕ್ರಮಿಗಳಿಗೆ ಪುಟ್ಟ ಪೋರನ ಸವಾಲೇ! ಎಂದು ತೋರಿತು. ಕುದುರೆಯನ್ನು ಬಿಡಿಸಲು ಮುಂದಾದರು. ಆ ಕ್ಷಣವೇ ಬಾಣ ಪ್ರಯೋಗಿಸಿದ ಲವ ಅವರ ಕೈಗಳನ್ನು ಕತ್ತರಿಸಿಹಾಕಿದ. ಮುನ್ನುಗ್ಗಿಬಂದ ಸೇನೆಯ ಮೇಲೆ ಬಾಣಗಳ ಮಳೆಯನ್ನೇ ಹರಿಸಿದ. ಸೈನಿಕರು ಬಿಟ್ಟ ಬಾಣಗಳನ್ನೆಲ್ಲವನ್ನೂ ಕತ್ತರಿಸಿ, ಸಂಖ್ಯೆಗಳನ್ನೆಣಿಸದೆಯೇ ಸೈನಿಕರ ಶಿರಗಳನ್ನು ಕತ್ತರಿಸುತ್ತಲೇ ಹೋದ ಲವ.ರಾಮಸುತನ ಈ ಬಗೆಯ ದಿಟ್ಟಹೋರಾಟ ಕಾಣಿಸಿದ್ದು ಕುದುರೆಯ ರಕ್ಷಣೆಗೆಂದು ಬಂದಿದ್ದ ರಾಮಸೋದರ ಶತ್ರುಘ್ನನಿಗೆ. ಚತುರಂಗ ಬಲವನ್ನು ಕೂಡಿಕೊಂಡು ಲವನನ್ನು ಎದುರಿಸುವುದಕ್ಕೆ ಹೋದ ಆತ. ಶತ್ರುಘ್ನ ಆರ್ಭಟಿಸುತ್ತಾ ಬರುತ್ತಿರುವುದನ್ನು ಕಂಡ ಲವ ಶಿವನ ಮಂತ್ರವನ್ನು ಸ್ಮರಿಸಿದ.“ನೀನಿನ್ನೂ ಶಿಶು. ಸಾಯದಿರು ನನ್ನ ಕೈಯ್ಯಲ್ಲಿ. ಕುದುರೆಯನ್ನು ಬಿಟ್ಟು ಹೋಗು” ಎಂಬ ರಾಮಸೋದರನ ಅಬ್ಬರದ ನುಡಿ ಅಳುಕಿಸದಾಯಿತು ಸೀತಾಸುತನನ್ನು. ಶತ್ರುಘ್ನ ಶರವನ್ನು ಕ್ಷಿಪ್ರವಾಗಿ ತುಂಡರಿಸಿ ಗೆಲುವಿನ ನಗು ಬೀರಿದ ಲವ.ಕೆರಳಿದ ಶತ್ರುಘ್ನ. ಮೂರು ಬಾಣಗಳನ್ನು ಒಂದೇ ಬಾರಿಗೆ ಪ್ರಯೋಗಿಸಿದ. “ನನ್ನ ಪಾಲಿಗೆ ಪರಿಮಳದ ಕುಸುಮ ಬಾಣಗಳಿವು” ಎಂದು ನಗುತ್ತಾ ಬಾಣತ್ರಯಗಳನ್ನು ತುಂಡರಿಸಿದ ಲವನೆಂಬ ತರಳ.‘ಇವನು ಪೋರನಲ್ಲ; ಬಾಣಗಳ ಪ್ರಾಣ ತೆಗೆಯುವ ಅಸಹಾಯ ಶೂರ’ ಎನ್ನುವುದು ಮನದಟ್ಟಾಯಿತು ಶತ್ರುಘ್ನನಿಗೆ. ಅಮೋಘವಾದ ಬಾಣವನ್ನೇ ಪ್ರಯೋಗಿಸಿದ. ಶಿವನ ಹಣೆಗಣ್ಣಿಂದ ಹೊರಬರುವ ಉರಿಯ ತೆರದಲ್ಲಿ ಭೀಕರವಾಗಿತ್ತು ಆ ಬಾಣ. ಮಂದಸ್ಮಿತ ಮೊಗದಿಂದಲೇ ಆ ಬಾಣವನ್ನು ಅರ್ಧರ್ಧವಾಗಿಸಿದ ರಾಮತನಯ. ಈಗಲೂ ಗೆಲುವು ತನ್ನದೇ ಎಂದುಕೊAಡು ಬೀಗಿದ. ಆದರೆ ಅದರಲ್ಲಿ ಒಂದರ್ಧ ನೆಲವನ್ನು ಸೇರಿಕೊಂಡಿದ್ದರೆ, ಇನ್ನೊಂದರ್ಧ ಮೇಲ್ಮುಖವಾಗಿ ಚಲಿಸಿ ಲವನ ಎದೆಗೆ ಆಘಾತವನ್ನು ಉಂಟುಮಾಡಿತು. ಪ್ರಜ್ಞಾಶೂನ್ಯನಾದ.ನೆಲದ ಮೇಲೆ ಬಿದ್ದಿದ್ದ ಲವನ ಮುಖವದು ಶ್ರೀರಾಮನ ನೆನಪನ್ನು ಮೂಡಿಸಿತು ಶತ್ರುಘ್ನನಿಗೆ. ಮೋಹಭಾವದಿಂದ ಅವನ ಪ್ರಜ್ಞಾಶೂನ್ಯ ದೇಹವನ್ನು ತನ್ನ ರಥದ ಮೇಲಿರಿಸಿಕೊಂಡ. ಕುದುರೆಯನ್ನು ಬಿಡಿಸಿ, ಸೈನ್ಯದ ಜೊತೆಗೆ ನಗರದತ್ತ ಮುಖಮಾಡಿ ಪಯಣಿಸಿದ.ಲವನ ಜೊತೆಗಿದ್ದ ಬ್ರಾಹ್ಮಣ ಹುಡುಗರು ವಿಚಾರವನ್ನು ಬಂದು ಅರುಹಿದರು ಸೀತೆಗೆ. ಮಗನಿಗೆದುರಾದ ಸ್ಥಿತಿಯನ್ನು ನೆನೆದು ಅತೀವ ದುಃಖಕ್ಕೊಳಗಾದಳು ಅವನಿಸುತೆ. ಏನಾಗಿಹೋಯಿತೋ ತನ್ನ ಮಗನಿಗೆ! ರಥದಲ್ಲಿ ಕೊಂಡೊಯ್ದವ ಅವನಿಗೆ ಅದಾವ ನೋವನ್ನಿತ್ತನೋ! ಎಂದೆಲ್ಲಾ ಭಾವಿಸಿ ರೋಧಿಸಿದಳು ಸೀತೆ. ಆಗಲೇ ಕುಶ ಅಲ್ಲಿಗೆ ಬಂದ.*** ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ





