Category: ಕಾವ್ಯಯಾನ

  • ಎ.ಹೇಮಗಂಗಾ ಅವರ ಗಜಲ್

    ಎ.ಹೇಮಗಂಗಾ ಅವರ ಗಜಲ್

    ಕಾವ್ಯ ಸಂಗಾತಿ ಎ.ಹೇಮಗಂಗಾ ಅವರ ಗಜಲ್ ಬೇಕೆನಿಸಿದ ಕ್ಷಣಗಳಲಿ ನೀ ತೊರೆದು ಹೋದೆವಿರಹದ ಕಾವ್ಯಕೆ ಮುನ್ನುಡಿ ಬರೆದು ಹೋದೆ ನಡೆವ ಹಾದಿಗೆ ಸುರಿದ ಪ್ರೀತಿ ಸುಮಗಳೆಷ್ಟೋಕೊಂಚವೂ ದಯೆಯಿರದೇ ತುಳಿದು ಹೋದೆ ನಿನ್ನ ಕೈಯಲಿ ಕೀಲುಗೊಂಬೆ ನಾನಾಗಿ ಕುಣಿದೆಕಟು ಮಾತಿನ ಕೂರಂಬುಗಳಲಿ ಇರಿದು ಹೋದೆ ನಂಬಿ ಬಂದ ಈ ಜೀವಕೆ ಅದೆಷ್ಟು ಆಘಾತಗಳು !ತೋರಿದ ಅಸೀಮ ಒಲವನು ಜರೆದು ಹೋದೆ ನನಸಾಗದ ಕನಸುಗಳ ನೀ ಕಾಣದಿರು *ಹೇಮ*ನಿನಗಾಗಿ ಮಿಡಿದ ಹೃದಯವ ಮುರಿದು ಹೋದೆ ಎ. ಹೇಮಗಂಗಾ

  • ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು”

    ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಅಳು ಬಂದರೆ ಅತ್ತು ಬಿಡು”

    ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಅಳು ಬಂದರೆ ಅತ್ತು ಬಿಡು” ಅಳು ಮನವೆ ತಡೆದುಕೊಳ್ಳಬೇಡಈ ಕಣ್ಣೀರು ದೌರ್ಬಲ್ಯ ಅಲ್ಲವೊಅದಾರ ಮೇಲಿನ ಪ್ರೀತಿಯ ಸಾಕ್ಷಿಗೊಮುನಿಸಿಗೊ ನಿನ್ನ ಮನಸ ಹಗುರಾಗಲುಅತ್ತೆ ಬಿಡು ಅಳು ಬಂದರೆ. ಗಂಟಲು ಕಟ್ಟಿ ಮಾತು ಬಾರದಾದಾಗಕಣ್ಣುಗಳೇ ಮಾತಾಡಲಿ ನಿನ್ನೊಡನೆಒಂದೊಂದು ಹನಿಯೂ ಹೇಳಿವೆ“ನೆನಪುಗಳೆ ನೆನಪಾಗ್ತೀರಿ” ಅಂತ.   ಜನ ಏನಂದಾರೆಂದು ನೋಡಬೇಡಗಂಡಸರು ಅಳಬಾರದು ಅನ್ನೋದೆಲ್ಲ ಸುಳ್ಳುಅವಳು ಹೋದ ನೋವಿಗೆ ಅಳದಿದ್ರೆ  ಆ ಎದೆ ಕಲ್ಲು ಆಗಿರಬೇಕು ಎನ್ನುವರಲ್ಲ. ಅಳು, ಆದ್ರೆ ಆ ಹನಿಗಳಲ್ಲಿ ಮುಳುಗಬೇಡಅದೇ ಹನಿಗಳಿಂದಲೆ…

  • ಎಸ್. ಆರ್. ಆರ್. ವಿಜಯಲಕ್ಷ್ಮಿ  ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ”

    ಎಸ್. ಆರ್. ಆರ್. ವಿಜಯಲಕ್ಷ್ಮಿ ಅವರ ಕವಿತೆ “ನೀಲ ನಭದೊಳಗಣ ಮುಗಿಲ ದಿಬ್ಬಣ”

    ಕಾವ್ಯ ಸಂಗಾತಿ ಎಸ್. ಆರ್. ಆರ್. ವಿಜಯಲಕ್ಷ್ಮಿ “ನೀಲ ನಭದೊಳಗಣ ಮುಗಿಲ ದಿಬ್ಬಣ” ನೀಲ ನಭದೊಳಗಣಮುಗಿಲ ದಿಬ್ಬಣ. ನೀಲ ನಭ ದೊಳಗಣಮುಗಿಲ ಮೇಘಗಾನಸೋಜಿಗದ ಸೊಬಗುಸೃಜಿಸಿದೆ ರಿಂಗಣ           ಬಂಗಾರ ವರ್ಣದ         ಬಾಂದಳದೊಡೆಯಭಾಸ್ಕರನ ಶೃಂಗಾರಕಲ್ಪಲೀಲಾ ಮಗದೊಮ್ಮೆಮರು ಹುಟ್ಟು ಪಡೆದಿದೆ         ಮುಸ್ಸಂಜೆ ಯು  ರವಿಯರಶ್ಮಿ ಯೊಳಗೆ ಮಿಂದೆದ್ದ. ಉಷೆಯ ಉಸುಕುರಂಗೇರಿ ಮೇಘ ತರಂಗಗಳಹಣೆಗೆ ಕೆಂಪಿನ ತಿಲಕ ವಿಟ್ಟಂತೆಇಲ್ಲೊಂದು. ಗಾಂಧಾರಲೋಕ ವರಳಿಸಿದೆ      …

  • ಡಾ. ಹೆಚ್. ನಟರಾಜ್ ಆರ್ಯ‌ ಅವರ ಕವಿತೆ”ಸ್ವರ್ಗ ಮನದೊಳಿದೆ”

    ಡಾ. ಹೆಚ್. ನಟರಾಜ್ ಆರ್ಯ‌ ಅವರ ಕವಿತೆ”ಸ್ವರ್ಗ ಮನದೊಳಿದೆ”

    ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ‌ “ಸ್ವರ್ಗ ಮನದೊಳಿದೆ” ಕಾಣದ ಸ್ವರ್ಗಕೆಹಂಬಲವೇಕೆಕಾಣುವ ಬದುಕನುಕಳೆವೆಯೇಕೆ ಹುಟ್ಟಿದ ಉಸಿರುಹೊರಡಲೇಬೇಕುಈ ನಿತ್ಯ ಸತ್ಯವನುಮರೆವೆಯೇಕೆ ನರಕದ ಭಯಕೆನಡುಗುವೆಯೇಕೆಮನದ ಗಾಯಕ್ಕಿಂತದೊಡ್ಡದೇನಿದೆ ಮೂರ್ತಿಯಲ್ಲಅಮೂರ್ತದಲ್ಲಕೊನೆಯ ತೀರ್ಪುಆತ್ಮಸಾಕ್ಷಿಯಲ್ಲವೇ ಕೈಯಲಿ ಕರುಣೆಮನದಲಿ ಪ್ರೀತಿಬದುಕಲಿ ಮಾನವತೆಸಾಕಲ್ಲವೇ ಕಾಣುವ ಬದುಕೇಕೈಯಲ್ಲಿರುವುದುಪ್ರೀತಿ ಇರುವೆಡೆಸ್ವರ್ಗ ಇರುವುದು ಮೂರು ದಿನದ ಬದುಕುನಗುನಗುತಾ ಸಾಗಲಿಒಬ್ಬರ ನೋವಿಗೆಇನ್ನೊಬ್ಬ ಕಾರಣವಾಗದಿರಲಿ ಸ್ವರ್ಗ ನರಕವೆಲ್ಲಮನದೊಳಿವೆಮಾಡಿದ ಒಳಿತುಗಳೇಉಳಿಯಲಿವೆ ಡಾ. ಹೆಚ್. ನಟರಾಜ್ ಆರ್ಯ

  • ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

    ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್

    ಕಾವ್ಯ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಗಜಲ್                                            ಅವಳ ಕಂಗಳ ಮಿಂಚನು ಅರಸುತಾ ಕಾಡಿನಿಂದ ಬಂದೀನಿಅವಳಿಗಾಗಿ ಸುಂದರ ಕನಸುಗಳ ಮೂಟೆ ಹೊತ್ತು ತಂದೀನಿ ಅವಕುಂಠದೊಳಗಿನ ಮೊಗವು ನಗೆ ಜೊನ್ನ ಚೆಲ್ಲುತಿದೆಮಾನಸ ‌ಸರೋವರದೊಳಗಿನ ಬಿರಿದ ನೈದಿಲೆ ಹಿಡಿದು ನಿಂತೀನಿ ಕರದೊಳಗಿನ ಕುಸುಮ ಜಾರಿದರೂ ಕಂಪು ಉಳಿದಿದೆ ದುಂಬಿ ಯಾಗಿ…

  • ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು”

    ಡಾ.ವೈ.ಎಂ.ಯಾಕೊಳ್ಳಿ ಅವರ “ಹತ್ತು‌ ಕವಿತೆ ಚೂರು”

    ಕಾವ್ಯ ಸಂಗಾತಿ ಡಾ.ವೈ.ಎಂ.ಯಾಕೊಳ್ಳಿ “ಹತ್ತು‌ ಕವಿತೆ ಚೂರು” ೧ಅವ್ವ ಕಾಯುತ್ತಾಳೆಕಣ್ಣಾಗಿ ಜಗವಬುದ್ಧನಂತೆ ೨ಅಪ್ಪನ‌ ನೇಗಿಲಕುಳಕ್ಕೆ ಬೇಸರವೆಂಬುದಿಲ್ಲಬರಿ ಹಸಿರು ಬಿತ್ತುತ್ತದೆ ೩ಲೋಕ ನಿದ್ದೆಗಣ್ಣಲ್ಲಿದೆಎಚ್ಚರಿಸ ಬೇಕಾದ ದೈವಮರೆತು‌ ಮಲಗಿದೆ ೪ಯುದ್ಧ ನಿಲ್ಲದುಎದೆಯಲ್ಲಿ ಶಾಂತಿ ತೋಟಬೆಳೆಯುವವರೆಗೆ ೫ಕೈಯ ಕೋವಿಗೂಕ್ಷಮಿಸುವ ಶಕ್ತಿಕೊಟ್ಟಾಗ ಬುದ್ಧ ನಗುತ್ತಾನೆ ೬ನಮ್ಮ‌ಕೇರಿಯತುಂಬ ಹೂವು ಚೆಲ್ಲಿವೆರಂಜಾನ್,ಯುಗಾದಿ ಕೂಡಿ ನಡೆದಿವೆ೭ಅವ್ವ  ತಟ್ಟುವರೊಟ್ಟಿಗೆ ಜಗದ ಹಸಿವುನೀಗಿಸೊ ತಾಕತ್ತಿದೆ ೮ಬರೆದು ಸೋಲುತ್ತೇನೆಆಕೆ ಮಹಾಜಾಣೆಕಣ್ಣೊಳಗೇ ಓದಿ ನಗುತ್ತಾಳೆ ೯ನಾನು ಅಕ್ಷರ ಜೀವಅವಳು‌ ಪ್ರೇಮದ ಅರ್ಥಬಲ್ಲವಳು ಸಾಂಗತ್ಯ ಸಸಾರ ೧೦ಪ್ರೀತಿಯ ಬಾವಿಬತ್ತಿದ ದಿನಸಂಸಾರ ಸತ್ತು ಹೋಗಿರುತ್ತದೆ ಡಾ.ವೈ.ಎಂ.ಯಾಕೊಳ್ಳಿ

  • ವಿಜಯಲಕ್ಷ್ಮಿ ಹಂಗರಗಿ ಅವರ “ವಚನಕಾರರ ಹರಿಕಾರ:ಫಗು ಹಳಕಟ್ಟಿ”

    ವಿಜಯಲಕ್ಷ್ಮಿ ಹಂಗರಗಿ ಅವರ “ವಚನಕಾರರ ಹರಿಕಾರ:ಫಗು ಹಳಕಟ್ಟಿ”

    ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ವಚನಕಾರರ ಹರಿಕಾರ:ಫಗು ಹಳಕಟ್ಟಿ” ನಾಡಿನ ನೆಲದ ನಂದಾದೀಪ,ನುಡಿಯ ಬೆಳಕಿನ ಶಾಶ್ವತ ರೂಪ;ಫಗು ಹಳಕಟ್ಟಿ ಮಹನೀಯರ ಹೆಸರು,ಕನ್ನಡಿಗರ ಹೃದಯದ ಚಿರಸ್ಮರಣೆ// ಧಾರವಾಡದ ಧರೆಗೆ ಜನಿಸಿ,ಧೀಮಂತ ಚಿಂತನೆ ಹೊತ್ತು ಬೆಳೆದು;ಸರಳ ಬದುಕಿನ ಸತ್ಯದ ದಾರಿಯಲ್ಲಿ,ಸಾಹಿತ್ಯ ಸೇವೆಯೇ ಜೀವನವಾಗಿಸಿ// ವಚನಗಳ ಅಮೃತವನು ಹುಡುಕುತ್ತ,ಹಳ್ಳಿ-ಹಳ್ಳಿ ಹೆಜ್ಜೆ ಇಟ್ಟರು;ತಾಳೆಗರಿ, ಹಸ್ತಪ್ರತಿ, ಹಳೆಯ ಗ್ರಂಥಗಳಲಿ,ಅಮೂಲ್ಯ ನಿಧಿಯನು ಕಾಪಾಡಿದರು// ಚದುರಿದ ವಚನ ಮುತ್ತುಗಳನು,ಒಂದೊಂದು ಹಾರವ ಮಾಡಿ ಜೋಡಿಸಿ;ಶರಣರ ಸಂದೇಶದ ಸಿರಿಯನ್ನು,ಜಗದ ಮುಂದೆ ಬೆಳಗಿಸಿದರು// ಶ್ರಮವೇ ಅವರ ಉಸಿರಾಯಿತು,ಸೇವೆಯೇ ಅವರ ಜೀವನವಾಯಿತು;ನಿರಹಂಕಾರದ ನಗುವಿನೊಳಗೆ,ಜ್ಞಾನಜ್ಯೋತಿ…

  • ಹಮೀದ್ ಹಸನ್ ಮಾಡೂರು ಅವರ ಕವಿತೆ “ನ್ಯಾಯದ ಕೂಗು”

    ಹಮೀದ್ ಹಸನ್ ಮಾಡೂರು ಅವರ ಕವಿತೆ “ನ್ಯಾಯದ ಕೂಗು”

    ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನ್ಯಾಯದ ಕೂಗು” ಬಡಿಯೋಣ ನ್ಯಾಯದ ಕದಮೌನದ ಗೋಡೆ ಕುಸಿಯುವ ತನಕ,ಮುಖವಾಡಧಾರಿಗಳನಿಜಮುಖ ಬೆಳಕಿಗೆ ಬರುವ ತನಕ,! ಎಚ್ಚೆದ್ದು ಕೊಳ್ಳೋಣ….ನಿದ್ರಿಸಿದ ಮನಸ್ಸುಗಳನ್ನೆಬ್ಬಿಸಿ,ಕಪಟದ ನೆರಳಲ್ಲಿ ಬೆಳೆದಶಾಂತಿ ಕದಡುವ ದುಷ್ಟರ ಓಡಿಸಿ,! ಹೋರಾಡೋಣ….ಸುಳ್ಳಿನು ಬಿತ್ತುವ ಕಣಿವೆಗಳಲ್ಲಿ,ದ್ವೇಷದ ಬೆಳೆಯನು ಬೆಳೆಸುವಕಾಣದ ಕೈಗಳ ವಿರುದ್ಧ ಸಟೆದು ನಿಂತು,! ಧ್ವನಿಯಾಗೋಣ….ನಿಶ್ಯಬ್ದದ ಕಣ್ಣೀರಿಗೆ ಧ್ವನಿಯಾಗಿ,ನ್ಯಾಯದ ಹಾದಿಯಲಿ ನಡೆವಶೋಷಿತರ ನಂಬಿಕೆಗಳ ಪರ ನಿಂತು,! ಚಿಂತಿಸಿ ಬಾಳೋಣ…ಸತ್ಯದ ದೀಪಗಳ ಎಲ್ಲೆಡೆ ಬೆಳಗಿಸಿ,ಮೋಸದ ಜಾಲವನು ಬೀಸಿದಕೈಗಳಿಗೆ ಕಾನೂನಿನ ಬಿಸಿ ಮುಟ್ಟಿಸಿ.! ಹಮೀದ್ ಹಸನ್ ಮಾಡೂರು.

  • ಕಾವ್ಯ ಸುಧೆ ಅವರ ಕವಿತೆ “ನನ್ನಾತ್ಮ ಸಖ”

    ಕಾವ್ಯ ಸುಧೆ ಅವರ ಕವಿತೆ “ನನ್ನಾತ್ಮ ಸಖ”

    ಕಾವ್ಯ ಸಂಗಾತಿ ಕಾವ್ಯ ಸುಧೆ “ನನ್ನಾತ್ಮ ಸಖ” ಏಕಾಂತದಲ್ಲಿ ಜೊತೆಯಾದವನು ನೀನುಭವಸಾಗರವ ದಾಟಿಸಿದವ ನೀನು.ದಣಿದಾಗ ಮೈದಡವಿ ಮಲಗಿಸಿದವ ನೀನು,ನನ್ನೆಲ್ಲಾ ಕನಸಿಗೆ ಕಾವಲಾದವನು ನೀನು. ಮನನೊಂದಾಗ ಸಾಂತ್ವಾನಿಸಿದವ ನೀನುಬೇಸರಕೆ ನನ್ನ ಹಾಡಾದವ ನೀನುಲೋಕದ ನಜರಿಗೆ ಎದೆಗೊಟ್ಟು ನಿಂತವ ನೀನು,ಸೋತೆನಾ ಎಂದಾಗ ಗೆಲುವು ತಂದವ ನೀನು ಕನ್ನಡಿಯಲ್ಲಿ ಪ್ರತಿಬಿಂಬವಾಗಿ ನಕ್ಕವನು ನೀನುಉಸಿರಿನ ಜಪದಲ್ಲಿ ಓಂಕಾರವಾಗಿ ಮಿಡಿದವ ನೀನುನನ್ನೊಳಗೆ ನಾ ಹುಡುಕಿ ಕಂಡುಕೊಂಡ ಸತ್ಯನನ್ನೊಳಗಿನ……..ನನ್ನಾತ್ಮಸಖ ನೀನು ! ಕಾವ್ಯ ಸುಧೆ

  • ಎ.ಹೇಮಗಂಗಾ  ಅವರ ಹೊಸ ಗಜಲ್

    ಎ.ಹೇಮಗಂಗಾ ಅವರ ಹೊಸ ಗಜಲ್

    ಕಾವ್ಯ ಸಂಗಾತಿ ಎ.ಹೇಮಗಂಗಾ ಗಜಲ್ ಎಂದಾದರೂ ಒಮ್ಮೆ ಬಾಳ ಯಾತ್ರೆಯು ಮುಗಿಯಲೇಬೇಕಲ್ಲಕಾಲನ ಕರೆ‌ಯು ಬಂದಾಗ ಎದುರಾಡದೇ ಹೋಗಲೇಬೇಕಲ್ಲ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಲ್ಲ ಜೀವಿಗಳಿಗೂ ಬುವಿಯಲಿಬೇಕೋ ಬೇಡವೋ ಬಾಳ ಬಂಡಿಯನು ಎಳೆಯಲೇಬೇಕಲ್ಲ ನಿಯಂತ್ರಿಸುವ ವಿಧಿ ಆಣತಿಗೆ ತಲೆ ಬಾಗದವರು ಎಲ್ಲುಂಟು ?ಅಂತಕ ಬಂದಿರಲು ‘ ನಾಳೆ ಬಾ ‘ ಎನ್ನದೇ ಶರಣಾಗಲೇಬೇಕಲ್ಲ ಸಂಕಷ್ಟಗಳ ಸಂಕೋಲೆಯಲಿ ಸಿಲುಕಿ ನರಳುವುದು ಜೀವನೋವ ಮರೆಸುತ ನಗೆಯ ಮುಖವಾಡ ಧರಿಸಲೇಬೇಕಲ್ಲ ಅಪಮಾನ ಅಪನಿಂದೆಗೆ ಹೆದರಿ ಸಾವ ಬಯಸದಿರು *ಹೇಮ*ಸಾರ್ಥಕ ಜನ್ಮ ನಿನ್ನದಾಗಲು…

You cannot copy content of this page