ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ

ಪುಸ್ತಕ ಸಂಗಾತಿ ಅಭಿಜ್ಞಾ ಪಿ.ಎಂ ಗೌಡ ಶ್ರೀಕಾಂತ್‌ ಪತ್ರೆಮರ “ವ್ಯಕ್ತಪತ್ರೆಗಳು” *ವ್ಯಕ್ತಪತ್ರೆಗಳ ಒಳ ಹೊಕ್ಕಾಗ*                ವ್ಯಕ್ತಪತ್ರೆಗಳು ಎಂಬ ಶೀರ್ಷಿಕೆಯೆ ಬಹಳ ಅರ್ಥಪೂರ್ಣವಾಗಿದೆ. ಈ ಕವನ ಸಂಕಲನವು ಶ್ರೀಕಾಂತ್ ಪತ್ರೆಮರ ರವರ ಚೊಚ್ಚಲ ಕೃತಿಯಾಗಿದ್ದು ಇದು ನೂರಕ್ಕೂ ಅಧಿಕ ಕವನಗಳನ್ನು ತನ್ನ ಒಡಲಿನೊಳಗೆ ಇಟ್ಟುಕೊಂಡಿರುವ ಅದ್ಭುತ ಕೃತಿ ಎಂದರೆ ತಪ್ಪಾಗಲಾರದು. ಇದರೊಳಗಿರುವ ಒಂದೊಂದು ಕವನಗಳು ಕೂಡ ಒಂದೊಂದು ಕಥೆಯನ್ನು ಹೇಳುವಂತಿವೆ.ಇಲ್ಲಿನ ಕವನಗಳಲ್ಲಿ ಭಾವನೆಗಳು, ಕಲ್ಪನೆಗಳು ಮತ್ತು ಆಲೋಚನೆಗಳನ್ನು ಅತ್ಯಂತ ಸುಂದರ ಹಾಗೂ ಅರ್ಥಗರ್ಭಿತ ಪದಗಳಲ್ಲಿ ವ್ಯಕ್ತಪಡಿಸಿರುವುದನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂಥರಾ ಆನಂದ. ಈ ಸಂಕಲನದಲ್ಲಿ ಶ್ರೀಕಾಂತ್ ಪತ್ರೆಮರ ರವರು ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು, ಭಾವನೆಯನ್ನು ತುಂಬಿ ಕವನಗಳ ರಚನೆ ಮಾಡಿರುವುದನ್ನು ಕಾಣಬಹುದು. ಈ ಸಂಕಲನದಲ್ಲಿನ ಕವನಗಳಲ್ಲಿ ಪ್ರೀತಿ, ಕರುಣೆ, ಕೋಪ, ದುಃಖ, ದೇಶಭಕ್ತಿ, ಪ್ರಕೃತಿಯ ಸೌಂದರ್ಯವನ್ನು ಮನಮುಟ್ಟುವಂತೆ ಹೇಳಿರುವುದಲ್ಲದೆ;ಕೆಲವೊಂದು ಕವನಗಳು ಲಯಬದ್ಧವಾಗಿ ರಚಿಸಿದ್ದಾರೆ. ಹಾಗಾಗಿ ಇಲ್ಲಿನ ಕೆಲವು ಕವನಗಳು ರಾಗವಾಗಿ ಹಾಡಲು ಮನಸ್ಸಿಗೆ ಮುದ ನೀಡುವಂತಿವೆ.ಪತ್ರೆಮರ ರವರು ​ತಮ್ಮ ಕಲ್ಪನಾ ಲೋಕದ ಮೂಲಕ ಸಾಮಾನ್ಯ ಸಂಗತಿಗಳಿಗೂ ಒಂದು ವಿಶಿಷ್ಟ ರೂಪವನ್ನು ಕೊಟ್ಟಿರುವುದು ಹಾಗು ಸುದೀರ್ಘವಾದ ಕಥೆಯನ್ನು ಹೇಳುವ ಬದಲು, ಕೆಲವೇ ಸಾಲುಗಳಲ್ಲಿ ಇಡೀ ಭಾವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಶ್ಲಾಘನೀಯವೆನಿಸಿದೆ.ಅದರ ಜೊತೆಗೆ ಪ್ರಕೃತಿಯ ಐಸಿರಿ , ವಸುಂಧರೆಯ ಸೌಂದರ್ಯ; ಅವಳ ಅನನ್ಯ ಅಪ್ರತಿಮ ಒಡಲಿನಲಿ ತುಂಬಿರುವ ಅಗಾಧ ಅಂಶಗಳನ್ನು ಹೊತ್ತಿ ತರುವುದರ ಮೂಲಕ ಒಂದು ಪ್ರಚಲಿತ ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ವಿಧಾನ ನಾಡುನುಡಿಯ ಬಗ್ಗೆ ಗೌರವ, ಆದರಗಳು ಇತ್ಯಾದಿಗಳನ್ನು ಬಹಳ ಅಚ್ಚುಕಟ್ಟಾಗಿ ಹೆಣೆದಿದ್ದಾರೆ.“ಮನಸ್ಸಿನ ಆಳದಿಂದ ಉಕ್ಕಿ ಬರುವ ಭಾವನೆಗಳಿಗೆ ಶಬ್ದಗಳ ಬಣ್ಣ ಹಚ್ಚಿ, ಲಯದ ಚೌಕಟ್ಟಿನಲ್ಲಿ ಪೋಣಿಸಿರುವುದನ್ನು ಕೂಡ ಈ ಕೃತಿಯಲ್ಲಿ ನೋಡಬಹುದಾಗಿದೆ.                 ಪತ್ರೆಮರ ರವರು ತಮ್ಮ ಆಂತರ್ಯದ ಮೌನ, ಪ್ರೀತಿ, ವಿರಹ, ಹಳಹಳಿಕೆ, ಸಾಮಾಜಿಕ ಚಿಂತನೆಗಳನ್ನು ವ್ಯಕ್ತಪಡಿಸುತ್ತಾ ಪತ್ರಗಳ ರೂಪದಲ್ಲಿ ಕಾವ್ಯವಾಗಿಸಿ ವ್ಯಕ್ತಪಡಿಸಿರುವುದನ್ನು ಈ ಕವನಗಳನ್ನು ಓದುತ್ತಿದ್ದಂತೆಯೇ ಗೊತ್ತಾಗುವುದು.ಭಾವನೆಗಳನ್ನು ವ್ಯಕ್ತಪಡಿಸಿರುವ ಈ ಕವನಗಳು ಸಾಮಾನ್ಯವಾಗಿ ಓದುಗನಿಗೆ ನೇರವಾಗಿ ಕವಿಯು ತನ್ನೊಳಗಿನ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಿರುವಂತೆಯೆ  ಆಪ್ತವೆನಿಸುವವು.                 ಪತ್ರೆಮರ ರವರು ತಮ್ಮ ಕವನ ಸಂಕಲನದಲ್ಲಿ ನಮ್ಮೊಳಗಿನ ಅಹಂಕಾರವನ್ನು ಕರಗಿಸಿ, ಭಗವಂತನಲ್ಲಿ ಶರಣಾಗುವ ದಿವ್ಯ ಮಾರ್ಗವನ್ನು ತೋರುವಂತಹ ಭಕ್ತಿ ಸುಧೆಯನ್ನು ಹರಿಸಿರುವುದನ್ನು ಕಾಣಬಹುದು.ಬದುಕಿನ ಏಳು ಬೀಳುಗಳನ್ನು ಕಂಡಂತಹ ಆಪ್ತ ವಿಷಯಗಳನ್ನು ಕಥನ ರೂಪದಲ್ಲಿ ಬಿಂಬಿಸಿರುವುದು ಅರ್ಥಗರ್ಭಿತವಾಗಿದೆ. ಅಪ್ಪನ ನೋವು, ಹೆತ್ತವ್ವನ ಕಷ್ಟ,ಜೀವಸಖಿಯ ಗೀತೆಗಳನ್ನು ಎಳೆ ಎಳೆಯಾಗಿ ರಚಿಸಿದ್ದಾರೆ. ಈ ಕೃತಿಯಲ್ಲಿರುವ ಎಲ್ಲಾ ಕವನಗಳು ತುಂಬಾ ಅರ್ಥಪೂರ್ಣವಾಗಿ ರಚನೆಗೊಂಡಿದೆ ಅದರಲ್ಲಿ ಕೆಲವೊಂದುಷ್ಟು ಕವನಗಳ ಸಾಲುಗಳು ತುಂಬಾ ಆಪ್ತವೆನಿಸಿತ್ತಿವೆ  *ತಾವರೆ ನಾವಾದರೆ* ಸುತ್ತಣ ಸುಂದರವಿದೆ ಒಳಗಣ ಅಂದಗೆಟ್ಟಿದೆಹಾಗೆಂದು ಅರಳದೇನು? ತಾವರೆ ಜೀವ ಚೈತನ್ಯದ ಚಾರುಲತೆ?       ಕವಿಯ ಈ ಸಾಲುಗಳಲ್ಲಿ ಅದೆಷ್ಟು ಅರ್ಥ ತುಂಬಿದ ನುಡಿಗಳಿವೆ. ನಮ್ಮ ಸುತ್ತಲಿನ ಪರಿಸರ ಎಷ್ಟೇ ಸುಂದರವಾಗಿದ್ದರೂ, ನಮ್ಮೊಳೊಗಿನ ಮನಸ್ಸು ಕುಸಿದಿರಬಹುದು; ಹಾಗೆಂದ ಮಾತ್ರಕ್ಕೆ ಬದುಕಿನ ಚೈತನ್ಯದ ಸಂಕೇತವಾದ ತಾವರೆ ಅರಳುವುದನ್ನು ನಿಲ್ಲಿಸುವುದಿಲ್ಲ.ನಾವು ತಾವರೆಯಂತಾದರೆ, ಎಂತಹ ಕಷ್ಟದ (ಕೆಸರಿನ) ಪರಿಸ್ಥಿತಿಯಲ್ಲೂ ಧೃತಿಗೆಡದೆ ನಮ್ಮೊಳಗಿನ ಜೀವಕಳೆಯನ್ನು ಜಾಗೃತವಾಗಿಟ್ಟುಕೊಂಡು ಮುನ್ನಡೆಯುತ್ತ,ನಮ್ಮನ್ನು ನೋಡುವ ಇಡೀ ಜಗತ್ತಿಗೆ ನಮ್ಮ ಮುಖದಲ್ಲಿನ ನಗು ಮತ್ತು ಸಕಾರಾತ್ಮಕತೆ ಸದಾ ಸ್ಪೂರ್ತಿ ನೀಡುವಂತಿರಬೇಕು ಎಂಬುದನ್ನ ತುಂಬಾ ಸೊಗಸಾಗಿ ಹೇಳಿದ್ದಾರೆ.  *ದೀವಟಿಕೆ*  ಮಾತಿರದ ಮೌನದಲಿ ಅರಳಿಸಿಹಳು ಹಣತೆಗಳೊಳಗಿಂದ ಬೆಳಕಿನ ಸಿಂಚನ ಮಾತಿರುವ ಮುನಿಸಿರುವ ಬದುಕಿನಲಿ ಪ್ರೀತಿಯ ಎದೆಗೂಡಲಿ ಮುಡಿದಿಹಳು ಜೀವಾತ್ಮದ ಜ್ಯೋತಿ ಸುಚೇತನವನು ಮಿಡಿದಿಹಳು ಸಖಳಾಗಿ ಸಕಲಕೆಲ್ಲಕು ದೀವಟಿಕೆ ಕವನದಲ್ಲಿ ಹೆಣ್ಣನ್ನು ಹಣತೆಗೆ ಹೋಲಿಸಿರುವ ಅವರ ಸಾಲುಗಳು ತುಂಬಾ ಚೆನ್ನಾಗಿವೆ ಮಾತುಗಳಿಲ್ಲದ ನಿಶ್ಯಬ್ದದ ಪರಿಸ್ಥಿತಿಯಲ್ಲಿ ಆಕೆ ಪ್ರೀತಿಯ ಹಣತೆಯನ್ನಿಟ್ಟು, ಬದುಕಿನಲ್ಲಿ ಜ್ಞಾನ ಮತ್ತು ಸಂತೋಷದ ಬೆಳಕನ್ನು ಚೆಲ್ಲುತ್ತ,ಮೌನದ ಬೆಳಕನ್ನು,ಪ್ರೀತಿಯ ಆಸರೆಯನ್ನು, ಆತ್ಮದ ಜಾಗೃತಿಯನ್ನು ಮಾಡುತ್ತಾ, ಕೊನೆಗೆ ತನ್ನ ಬದುಕಿನ ಪ್ರತಿಯೊಂದು ಅಣು-ಅಣುವಿನಲ್ಲೂ ತುಂಬಿ ಹೋಗಿ, ಜೀವನದ ಸಕಲಕ್ಕೂ ತಾನೇ ಸರ್ವಸ್ವವಾಗಿದ್ದಾಳೆ ಎಂಬುವುದನ್ನು ಈ ಸಾಲುಗಳಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ. ಅಮೂರ್ತ ಚಿಂತನೆಗೆ ಮೂರ್ತ ರೂಪ ನೀಡುವ ಇವರ ಕವನದ ಸಾಲುಗಳು, ಸಡಗರದ ಸಂಕ್ರಾಂತಿಯ ಕಿಚ್ಚು. ಎಳ್ಳು ಬೆಲ್ಲ ಸವಿಯುವ ಮೆಚ್ಚು, ಸಹಬಾಳ್ವೆ,ಸಮಾನತೆ,ಸಹಬಂಧಗಳ ಬಗ್ಗೆ ಮೂಡಿ ಬಂದಿರುವ ಸಾಲುಗಳ ತೇರು. ಕನ್ನಡ ನುಡಿ,ನಾಡಿನ ಕೆಚ್ಚೆದೆಯ ಬಗೆಗಿನ ಬರಹ ಅರ್ಥಪೂರ್ಣವಾಗಿದೆ.  *ಕನ್ನಡ ನುಡಿ* ವಿಶಾಲ ಕರುನಾಡಿನ ಊರು ಕೇರಿಗಳಲ್ಲಿಬಡವರ ಒಡಲುಗಳಲ್ಲಿ ಮಣ್ಣಿನ ಮಕ್ಕಳಲ್ಲಿಶ್ರಮಿಕ ಕಾರ್ಮಿಕರ ಉಸಿರಿನಲ್ಲಿ ಮತ್ತೆಲ್ಲರತುಟಿಗಳಲ್ಲಿ ನಲಿದಾಡುತಿರೆ ಭಯವೇಕೆ? ಕನ್ನಡ ನಾಡಿನ ಹಳ್ಳಿ-ಹಳ್ಳಿಗಳಲ್ಲಿ, ಬಡವರ ಹಾಗೂ ರೈತರ ಹೃದಯಗಳಲ್ಲಿ,ಕಷ್ಟಪಟ್ಟು ದುಡಿಯುವ ಕಾರ್ಮಿಕರ ಉಸಿರಿನಲ್ಲಿ ಕನ್ನಡ ನುಡಿ ರಾರಾಜಿಸುತ್ತಿದೆ. ಈ ಮಣ್ಣಿನ ಪ್ರತಿಯೊಬ್ಬರ ತುಟಿಗಳ ಮೇಲೂ ಕನ್ನಡವೇ ನಲಿದಾಡುತ್ತಿರುವಾಗ, ನಮ್ಮ ಭಾಷೆಗೆ ಯಾವುದೇ ಆಪತ್ತು ಬರುತ್ತದೆ ಎಂಬ ಭಯ ಪಡುವ ಅಗತ್ಯವೇ ಇಲ್ಲ. ಜನಸಾಮಾನ್ಯರ ಬದುಕಿನೊಂದಿಗೆ ಬೆರೆತುಹೋಗಿರುವ ಕನ್ನಡ ಭಾಷೆ ಸದಾ ಸುರಕ್ಷಿತ ಮತ್ತು ಚಿರಂತನ ಎಂಬುವುದನ್ನು ಅದ್ಭುತವಾಗಿ ತಮ್ಮ ಕವನದ ಸಾಲುಗಳಲ್ಲಿ ಹೇಳಿದ್ದಾರೆ.       ಹಾಗೆಯೇ ಲೌಕಿಕ ಮತ್ತು ಅಲೌಕಿಕ ಎಂಬ ಎರಡು ವಿಭಿನ್ನ ತತ್ವಗಳನ್ನು ಸರಳವಾಗಿ ಅರ್ಥೈಸುವ ಇವರ ಕವನದ  ಸಾಲುಗಳನ್ನು ಓದಲೇಬೇಕು.”ವ್ಯಕ್ತಿಯು ತನ್ನ ಅಸ್ಮಿತೆ  ಮತ್ತು ಕಣ್ಣೀರಿನ ಮೂಲಕ ತನ್ನೊಳಗಿನ ದುಃಖ-ದುಮ್ಮಾನಗಳನ್ನು ಅರಿತುಕೊಳ್ಳುವ ಬಗ್ಗೆ,ಪ್ರಕೃತಿಯ ಮುಗ್ಧತೆ (ಹಕ್ಕಿಯ ಹಾಡು) ಹಾಗೂ ಜೀವನದ ಸಂತೋಷದ ಸಾಕಾರ ರೂಪವಾದ ನಗುವಿನಲ್ಲೇ (ಸಿರಿ ನಿನ್ನ ನಗುವಿನಲ್ಲಿದೆ) ನಿಜವಾದ ಸಂಪತ್ತನ್ನು ಕಂಡುಕೊಳ್ಳುವ ಬಗ್ಗೆಗಿನ ಸಾಲುಗಳನ್ನು ಕಾಣಬಹುದು ಮತ್ತು ಈ ರೀತಿ ತನ್ನನ್ನು ತಾನು ಗೆದ್ದು, ಜಗತ್ತಿಗೆ ಪ್ರೀತಿ ಮತ್ತು ಜ್ಞಾನವನ್ನು ಹಂಚುವ ಮೂಲಕವೆಮನುಷ್ಯ ಕೊನೆಗೆ ‘ವಿಶ್ವಗುರು’ ಆಗುತ್ತ ಉದಾತ್ತ ಎತ್ತರಕ್ಕೆ ಬೆಳೆಯುವ ಈ ಕವನದ ಸಾಲುಗಳನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಅರ್ಥಪೂರ್ಣವಾದ ಸಾಲುಗಳಿವು.​ಒಟ್ಟಾರೆಯಾಗಿ ಅಸ್ತಿತ್ವ, ಪ್ರಕೃತಿ, ಭಾವನೆ, ಆನಂದ ಮತ್ತು ಆಧ್ಯಾತ್ಮಿಕ ಉನ್ನತಿಯ ವಿಭಿನ್ನ ಹಂತಗಳನ್ನು ಧ್ವನಿಸುವಂತಿವೆ. ಮುಂದುವರೆದಂತೆ ಈ ಎಲ್ಲ ಪರಿಕಲ್ಪನೆಗಳು ಮನುಷ್ಯನ ಜೀವನದ ಸುದೀರ್ಘ ಪಯಣವನ್ನು ಮತ್ತು ಅದರಲ್ಲಿ ಎದುರಾಗುವ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವಂತಿರುವುದನ್ನು ನೋಡಬಹುದು. ಜಗತ್ತಿನ ಸತ್ಯವನ್ನು ಹುಡುಕುವ ‘ಶೋಧನಾ ಸವಾರಿ’ ಮತ್ತು ಸಾವಿನೆಡೆಗೆ ಸಾಗುವ ‘ಬಾಳಯಾನ’ಗಳು ‘ವಿಧಿ ಲಿಖಿತ’ದ ಚೌಕಟ್ಟಿಗೆ ಒಳಪಟ್ಟಿದ್ದರೂ, ಬದುಕು ಸಾರ್ಥಕವಾಗುವುದು ಪ್ರೀತಿಯ ಜ್ವಾಲೆಯಾದ ‘ಒಲುಮೆಯ ಕುಲುಮೆ’ಯಲ್ಲಿ ಬೆಂದು ಪಕ್ವವಾದಾಗ ಮಾತ್ರ. ಅಂತಿಮವಾಗಿ, ಜಗದ್ಜ್ಯೋತಿ ಬಸವೇಶ್ವರರು ತೋರಿದ ಕಾಯಕ, ಸಮಾನತೆ ಮತ್ತು ಭಕ್ತಿಯ ಮಾರ್ಗವು ಈ ಇಡೀ ಜೀವನದ ಪಯಣಕ್ಕೆ ಒಂದು ಸುಂದರವಾದ ಅರ್ಥವನ್ನು ಹಾಗೂ ಮುಕ್ತಿಯ ದಾರಿಯನ್ನು ಕಲ್ಪಿಸಿಕೊಡುತ್ತದೆ. ಇಂತಹ ಹಲವಾರು ಕವನಗಳನ್ನು ಓದಬೇಕಾದರೆ ಈ ಸಂಕಲನವನ್ನು ಖಂಡಿತ ಕೊಂಡು ಓದಿರಿ. ಅಷ್ಟೇ ಅಲ್ಲದೆ ಈ ಕೃತಿಯಲ್ಲಿ ಹಲವಾರು ಮಹಾನ್ ಕವಿಗಳು, ಸಂಗೀತಗಾರರ,ಬಗ್ಗೆ ತುಂಬಾ ಚೆಂದದ ಕವನಗಳಿವೆ.  *ಸಂಚಲನ* ಸಂಚಲನ ಕವನದಲ್ಲಿ ಮೂಡಿ ಬಂದಿರುವಂತಹ ಈ ಸಾಲುಗಳು ಮನಸ್ಸಿಗೆ ಮುದ ನೀಡುವಂತಿವೆ.“ದಟ್ಟ ಕಾನನದಿ ಫಲಪುಷ್ಪಗಳ ತೊನೆದ ತರುಲತೆಗಳು ತಂಗಾಳಿಗೆ ತೂಗುತ ತೇಲುತ ಜೀಕುವ ಜೋಗುಳದ ತರಂಗ ಲಾಲಿ ನಿತ್ಯ ಲೀಲೆ.” ಈ ಸಾಲುಗಳು ದಟ್ಟವಾದ ಅರಣ್ಯದಲ್ಲಿ ಪ್ರಕೃತಿ ಮತ್ತು ತಂಗಾಳಿಯ ನಡುವೆ ನಡೆಯುವ ಅದ್ಭುತ ಸುಂದರ ಬಾಂಧವ್ಯವನ್ನು ವರ್ಣಿಸುತ್ತಿವೆ. ಹೂವು-ಹಣ್ಣುಗಳಿಂದ ತುಂಬಿದ ಗಿಡಮರಗಳು ತಂಗಾಳಿಯ ಸೌಮ್ಯ ಸ್ಪರ್ಶಕ್ಕೆ ಲಯಬದ್ಧವಾಗಿ ತೂಗುತ್ತಾ, ಪ್ರಕೃತಿಯೇ ಒಂದು ದಿವ್ಯ ಜೋಗುಳವನ್ನು ಹಾಡುತ್ತಿರುವಂತೆ ಭಾಸವಾಗುತ್ತಿವೆ. ಕಾಡಿನ ಈ ಧ್ವನಿ ಮತ್ತು ಹಸಿರಿನ ನೃತ್ಯವು ಮನಸ್ಸಿಗೆ ಶಾಂತಿಯನ್ನು ನೀಡುವ ಜೋಗುಳದ ತರಂಗದಂತಿದೆ. ಯಾವುದೇ ಹಸ್ತಕ್ಷೇಪವಿಲ್ಲದ ನಿಗೂಢ ಕಾನನದಲ್ಲಿ ಈ ನೈಸರ್ಗಿಕ ಸೌಂದರ್ಯವು ಪ್ರತಿದಿನವೂ ನಿರಂತರವಾಗಿ ನಡೆಯುವ ಒಂದು ದೈವಿಕ ಲೀಲೆಯಾಗಿದೆ ಎಂಬುವುದನ್ನು ತುಂಬಾ ಸುಂದರವಾಗಿ ಹೇಳುತ್ತಾ, ಇಲ್ಲಿ ಪ್ರತಿದಿನ ಪ್ರಕೃತಿಯ ಸಂಚಲನ ಹೇಗಾಗುತ್ತಿದೆ ಎಂಬುದನ್ನು ಈ ಸಾಲುಗಳಲ್ಲಿ ಬಿಂಬಿಸಿದ್ದಾರೆ.            ಇಲ್ಲಿನ ಕವನಗಳಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬಹುದು. ಶ್ರೀಕಾಂತ್ ಪತ್ರೆಮರ ರವರು ಯಾವುದೇ ತ್ರಾಸಕ್ಕೆ ಬೀಳದೆ ಹೆಚ್ಚಿನ ಪ್ರಾಸವಿಲ್ಲದೆ ಅರ್ಥಪೂರ್ಣವಾದಂತಹ ಕವನಗಳನ್ನು ನೀಡಿದ್ದಾರೆ. ಹಾಗೆಯೇ ತಮ್ಮ ಕವನಗಳಲ್ಲಿ ರೂಪಕ ಉಪಮೇಗಳನ್ನು ಅಲ್ಲಲ್ಲಿ ಸೇರಿಸಿ ಉತ್ತಮ ನಿದರ್ಶನಗಳೊಂದಿಗೆ ಸಾಲುಗಳನ್ನು ಹೆಣೆಯುತ್ತ ಹಲವಾರು ಕವನಗಳನ್ನು ರಚಿಸಿದ್ದಾರೆ. ಇಲ್ಲಿ ಭಾವ ತುಂಬಿದ ಸಾಲುಗಳಿದ್ದು,ಪ್ರಸ್ತುತ ವಿಚಾರಗಳನ್ನ ಸೇರಿಸುತ್ತಾ ಅರ್ಥಪೂರ್ಣವಾಗಿ ಹಾಗೂ ಪ್ರಜ್ಞಾಪೂರ್ವಕವಾಗಿ ರಚಿಸಿದ್ದಾರೆ.                ಕವಿತೆ ಕಟ್ಟಲು ಒಬ್ಬ ಕವಿಗೆ ತನ್ನೆಲ್ಲ ಅಭಿಷ್ಟಗಳಿಗಿಂತಲೂ ಮುಖ್ಯವಾಗಿ ತಾಳ್ಮೆ ಇರಬೇಕು. ಇಲ್ಲಿ ಶ್ರೀಕಾಂತ್ ಪತ್ರೆಮರ ರವರ ಕವನಸಂಕಲನದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಭಕ್ತಿಸುಧೆ, ಬದುಕಿನ ಏಳುಬೀಳಿಗೆ ಸಂಬಂಧಪಟ್ಟಂತಹ ಕವನಗಳು, ಹೆಣ್ಣು, ಕನ್ನಡ ನುಡಿ, ಮಹಾನ್ ವ್ಯಕ್ತಿಗಳ ಸಾಲುಗಳು, ಕಾಣದ ವೈರಾಣು, ನೀರಾಗಬೇಕು,ಕಂಬನಿ, ಹೊರಟೆ ಏಕೆ ನಿಷ್ಕಾರಣ.? ಜೋಪಡಿ, ಹುಲಿ ಉಳಿಸಿ, ಮದರಂಗಿ, ಮೇಘ ಮನ, ಕೊನೆಯೆಂದು,ಸ್ವಯಂ ಪ್ರೀತಿ,ನಿರುತ್ತರ, ನಿರಾಸೆ, ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತಹ ಕವನಗಳನ್ನು ನೋಡಬಹುದಾಗಿದೆ. ಕುತೂಹಲ ಭರಿತ ವಿಚಾರಗಳನ್ನ ನೀವು ತಿಳಿಯಬೇಕಾದರೆ ಈ ಸಂಕಲನವನ್ನು ಖಂಡಿತ ಓದಲೇಬೇಕು.ಈ ಅಂದರೆ ನೋವು, ನೋಲಿವು, ಅಕ್ಕರೆ, ಸಕ್ಕರೆ. ಹುರುಪು, ಉತ್ತೇಜನ. ಉತ್ಸಾಹ, ಧೈರ್ಯ, ಉಲ್ಲಾಸ, ಆಸೆ, ಆಕಾಂಕ್ಷೆ, ಅಭಿಷ್ಟಗಳು, ಹೆಣ್ಣು,ಪ್ರಕೃತಿ,ಗೆಳೆಯ, ಗೆಳತಿ ಹೀಗೆ ಎಲ್ಲಾ ರೀತಿಯ ಕವಿತೆಗಳು ಸಹ ಇಲ್ಲಿವೆ..       ಈ ಸಂಕಲನವು ಸುಮಾರು 100 ಕ್ಕು ಹೆಚ್ಚು ಕವನಗಳನ್ನು ಒಳಗೊಂಡಿದ್ದು ;ಇದರೊಳಗೆ ಓದುಗರ ಮನಸ್ಸಿನಲ್ಲಿ ಉಳಿಯುವ ಕವನಗಳನ್ನು ನೋಡಬಹುದಾಗಿದೆ. ಅಂದ ಹಾಗೆ ಎಲ್ಲಾ ಕವನಗಳು ಉತ್ತಮ ರಚನೆಗಳಾಗಿದ್ದು ಮುಂಬರುವ ಹೊತ್ತಿಗೆಯಲ್ಲಿ ಮತ್ತಷ್ಟು ಹೊಸತನ, ಲಯಬದ್ದ ಕವನಗಳು ಹಾಗೂ ಒಂದಷ್ಟು ಛoದೋಬದ್ದ ಕವನಗಳನ್ನು ಹೊತ್ತು ತರಲೆಂದು ಆಶಿಸುವೆ.ಈ ಒಂದು ಕೃತಿಗೆ ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ ಶೈಲಾ ಜಯಕುಮಾರ್ ರವರು ಅಮೂಲ್ಯವಾದ ನುಡಿತೋರಣವನ್ನು ಮುನ್ನುಡಿಯೊಂದಿಗೆ ಕಟ್ಟಿಕೊಟ್ಟಿರುವರು. ಹಾಗೂ ಈ ಕೃತಿಗೆ ತಮ್ಮದೇ ಬೆನ್ನುಡಿಯಿದ್ದು ತುಂಬಾ ಸೊಗಸಾಗಿದೆ.ಹೀಗೆಯೆ ತಮ್ಮ ಸಾಹಿತ್ಯ ಸೇವೆ ಮುಂದುವರಿಯಲಿ ಶುಭವಾಗಲಿ ಸರ್.ನಿಮ್ಮಿಂದ ಮತ್ತಷ್ಟು ಕವನ ಸಂಕಲನಗಳು ಕನ್ನಡ ಸಾಹಿತ್ಯದ ಒಡಲಿನಲ್ಲಿ ಸೇರಿಕೊಳ್ಳಲೆಂದು ಹಾರೈಸುವೆ… ಅಭಿಜ್ಞಾ ಪಿ.ಎಂ ಗೌಡಮಂಡ್ಯ

ಶ್ರೀಕಾಂತ್‌ ಪತ್ರೆಮರ ಅವರ ಕೃತಿ “ವ್ಯಕ್ತಪತ್ರೆಗಳು” ಒಂದು ಅವಲೋಕನ ಅಭಿಜ್ಞಾ ಪಿ.ಎಂ ಗೌಡ Read Post »

ಪುಸ್ತಕ ಸಂಗಾತಿ

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು

ಪುಸ್ತಕ ಸಂಗಾತಿ ಹರಿನರಸಿಂಹ ಉಪಾಧ್ಯಾಯ ಶಂಭೂರು ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ” ಅಂಬುಧಿಯ ಆಳಗಲ ಆಗಸದ ವಿಸ್ತಾರಕಾವ್ಯ ಕನ್ನಿಕೆ ಚೆಲುವ ಅಳೆಯಲುಂಟೇನು?ದೂರದೃಷ್ಟಿಯ ಬೀರಿ ಚಿತ್ತವನು ಹರಿಸಿದೊಡೆಜಗವೊಂದು ಹಿಡಿ ತಾನೆ? ಚಕ್ರಪಾಣಿ || ಸಾಗರದ ಆಳ ಅಗಲ ಅಳೆದಷ್ಟೂ ಅಗಾಧ, ಆಗಸವನ್ನು ಶೋಧಿಸಿದಷ್ಟೂ ವಿಸ್ತಾರಗೊಳ್ಳುವಂತೆ ಸಾಹಿತ್ಯದಲ್ಲಿ ಕಾವ್ಯ ಕನ್ನಿಕೆಯ ಚೆಲುವನ್ನು ಬಣ್ಣಿಸಲು ಸಾಧ್ಯವಿಲ್ಲ. ದೂರದೃಷ್ಟಿಯಿಂದ ತನ್ನ ಚಿತ್ತವನ್ನು ಅತ್ತ ಹರಿಸಿದ್ದೇ ಆದರೆ ಆಗ ಅವೆಲ್ಲವೂ ಹಿಡಿ ಗಾತ್ರದಂತೆ ಭಾಸವಾಗದೆ ಇರದು. ಆದರೆ ಅದಕ್ಕೆ ಉದಾತ್ತತೆಯ ಗುಣ ನಮ್ಮಲ್ಲಿರಬೇಕು ಎಂಬ ಸಾರಾಂಶ ಹೊಂದಿರುವ ಮೇಲಿನ ರಚನೆ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲ ರವರ ಚೋಕಾ ಸಾಹಿತ್ಯ ಪ್ರಕಾರವನ್ನು ಕಂಡಾಗ ನನ್ನಲ್ಲಿ ಉದಿಸಿಬಂದದ್ದು ಸತ್ಯ. ಇತ್ತೀಚೆಗೆ ಅಂತರ್ಜಾಲದ ಪ್ರಭಾವದಿಂದ ನಮ್ಮ ಕನ್ನಡ ಸಾಹಿತ್ಯದ ಹಲವಾರು ಕವಿಮಿತ್ರರು ದೇಶೀಯ ಸಾಹಿತ್ಯ ಪ್ರಕಾರಗಳಲ್ಲದೆ ವಿದೇಶಿ ಸಾಹಿತ್ಯದಲ್ಲೂ ಆಸಕ್ತಿ ತೋರುತ್ತಿರುವುದು ಒಂದು ವಿಶೇಷವೇ ಸರಿ. ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ತೊರೆಯಾಗಿ ಇರುವಾಗ ಸಾಹಿತ್ಯ ತನ್ನನ್ನು ತಾನು ವಿಸ್ತಾರಗೊಳಿಸಿಕೊಂಡು ಹೊಸ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮೊದಲೇ ಹೇಳಿದಂತೆ ಮೊದಲನೆಯದಾಗಿ ಅಂತರ್ಜಾಲ. ಹಾಗೆಯೇ ಕವಿಗಳ ಆಸಕ್ತಿ, ಹೊಸತನ್ನು ಕಲಿಯುವ, ಅದರ ಬಗ್ಗೆ ತಿಳಿಯುವ ಮತ್ತು ಅದನ್ನು ಅಳವಡಿಸಿಕೊಂಡು ತಮ್ಮ ಕೃಷಿಯನ್ನು ವಿಸ್ತರಿಸಿಕೊಳ್ಳುವ ಹಂಬಲವೇ ಇಂದು ಜಪಾನಿ ಸಾಹಿತ್ಯ, ಪರ್ಷಿಯನ್ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಇಳಿದು ಬರಲು ಸಾಧ್ಯವಾಗಿದೆ. ಜಪಾನಿ ಸಾಹಿತ್ಯ ಪ್ರಕಾರಗಳಲ್ಲಿ ಹಾಯ್ಕು, ತಾಂಕಾ, ಚೋಕ ಇತ್ಯಾದಿ ಪುಟ್ಟ ಪ್ರಕಾರಗಳು ಹೆಚ್ಚಿನ ಅರ್ಥ ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇದು ನಮ್ಮವರನ್ನು ತನ್ನತ್ತ ಆಕರ್ಷಿಸಿ ಅದಕ್ಕೆ ಹೊಸ ರೂಪ ಕೊಡಲು ಪ್ರೇರಣೆ ನೀಡಿರುವುದರಿಂದ ಇಂದು ಕನ್ನಡದಲ್ಲಿಯೂ ಹಾಯ್ಕು, ಚೋಕಾಗಳು ಚಿಗುರೊಡೆಯುತ್ತಿವೆ. ಇವುಗಳು ಮೂಲದಲ್ಲಿ ಸಿಲಬಲ್ ಗಳಿಂದ ರಚನೆಗೊಂಡಿರುವುದಾದರೂ ಕನ್ನಡದಲ್ಲಿ ಅಕ್ಷರಗಳ ಸಂಖ್ಯೆಗಳ ಅಳತೆಯಿಂದ ರಚನೆಗೊಳ್ಳುತ್ತಿವೆ. ಹಾಗೆಯೇ ಚೋಕಾ ಪ್ರಕಾರದ ಕಾವ್ಯಾತ್ಮಕ ಅಳತೆಯು ೫/೭/೫/೭/೫/೭/೫/೭/೭ ಎಂದು ಪರಿಗಣಿಸಲ್ಪಟ್ಟಿದೆ. ಇದರಂತೆ ಡಾ. ಮಲ್ಲಿಕಾರ್ಜುನ ರವರು ತಮ್ಮ ಚೋಕಾ ರಚನೆಗಳನ್ನು ಒಳಗೊಂಡ ತಮ್ಮ ಕೃತಿಯನ್ನು   ಹೊರ ತರುವ ಈ ಸಂದರ್ಭದಲ್ಲಿ ಅವರ “ಚೋಕಾ- ಕಾವ್ಯಧಾರೆ” ಕೃತಿಯು ಕನ್ನಡ ಸಾಹಿತ್ಯದಲ್ಲಿ ಮೊದಲ ಚೋಕಾ ಕೃತಿ ಎಂಬ ಹಿರಿಮೆಗೆ ಪಾತ್ರವಾಗುತ್ತದೆ. ಶ್ರೀಯುತ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರು ವೃತ್ತಿಯಿಂದ ವ್ಯಾಪಾರಿಯಾಗಿದ್ದು ಕಲಬುರ್ಗಿಯ ಯಡ್ರಾಮಿ ಊರಿನವರು. ಸಣ್ಣವರಿದ್ದಾಗ ನಡೆದ ಒಂದು ಘಟನೆ ಇವರನ್ನು ಬರೆವಣಿಗೆ ಕೃಷಿಗೆ ಕರೆತಂದಿತು. ಆ ಘಟನೆಯಿಂದ ನೊಂದ ಇವರು ಸತ್ಯಾಂಶವನ್ನು ಜನತೆಗೆ ತಿಳಿಸುವ ಸಲುವಾಗಿ ಬರೆಯತೊಡಗಿದರು. ಮುಂದೆ ಇದು ಹವ್ಯಾಸವಾಗಿ ಬೆಳೆದು ನಿಂತಿತು. ಶ್ರೀಯುತರ ಹವ್ಯಾಸಕ್ಕೆ ಈಗ ಎರಡು ದಶಕಗಳ ಸಂಭ್ರಮ. ಕನ್ನಡ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ ಇವರನ್ನು ಗೌರವ ಡಾಕ್ಟರೇಟ್ ಕೂಡ ಅರಸಿ ಬಂದಿದೆ. ಅಲ್ಲದೆ ಚುಟುಕು ರತ್ನ, ಸಾಹಿತ್ಯ ಕೇಸರಿ, ಸ್ವರ್ಣಭೂಮಿ ಸೇವಾರತ್ನ, ಕಾವ್ಯ ಕಣಜ, ನುಡಿಚೇತನ ಮೊದಲಾದ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಚೋಕಾ ಕಾವ್ಯಧಾರೆ ಕೃತಿಗೆ ಮುನ್ನುಡಿ ಬರೆದುಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಾಗ ಇದೊಂದು ಸಾಹಿತ್ಯ ಸೇವೆ ಎಂದು ಪರಿಗಣಿಸಿ ಶ್ರೀಯುತ ಮಲ್ಲಿಕಾರ್ಜುನ ರವರ ಈ ಕೃತಿಯ ಕುರಿತು ನನ್ನ ಒಂದಿನಿತು ಅನಿಸಿಕೆಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ವಸ್ತು ವಿಷಯಗಳಲ್ಲಿ ವೈವಿಧ್ಯತೆಯನ್ನು ತೋರುವ ಚೋಕಾಗಳು ಇಲ್ಲಿ ಏಕತಾನತೆಗೆ ಅವಕಾಶ ನೀಡದೆ ಓದುಗರನ್ನು ಎಲ್ಲ ದಿಕ್ಕಿನಿಂದಲೂ ಚಿಂತಿಸುವಂತೆ ಮಾಡುತ್ತವೆ ಆ ನಿಟ್ಟಿನಲ್ಲಿ ಲೇಖಕರ ಶ್ರಮ ಬಹುತೇಕ ಸಾರ್ಥಕವಾಗಿದೆ ಎಂದು ಮೊದಲೇ ಹೇಳಲು ಇಚ್ಛಿಸುತ್ತೇನೆ. ಗುರುಚರಣ ಎಂಬ ಚೋಕಾದಲ್ಲಿ… ಮುನಿದರೇನು/ ದೇವಗಣ; ಗುರುವು/ ಕಾಯುವವನು/ ಗುರುವೇ ಮುನಿದರೆ/ನರಮಾನವ/ ನಿನ್ನಾರು ಕಾಯುವರು/ಗುರುಚರಣ/ ಅನುದಿನ ಪೂಜಿಸು/ನೀನೇ ಶ್ರೇಷ್ಠನಾಗುವೆ// ಮೇಲಿನ ರಚನೆಯು ದೇವರು ಮುನಿದರೆ ಗುರುವು ಕಾಯಲು ಇದ್ದಾರೆ, ಆದರೆ ಗುರುವೇ ಮುನಿಸಿಕೊಂಡರೆ ಗುರಿ ತೋರುವವರು ಇಲ್ಲದೆ ನಿನ್ನನ್ನು ಕಾಪಾಡಲು ಯಾರೂ ಇರಲಾರರು. ಆದ್ದರಿಂದ ನಿತ್ಯ ಗುರುಚರಣ ಸೇವಿಸಿದಲ್ಲಿ ಶ್ರೇಷ್ಟನಾಗಬಹುದು, ವಿಶೇಷನಾಗಬಹುದು ಎಂಬ ಸುಂದರ ವಿಚಾರ ಇಲ್ಲಿ ತಿಳಿಸಿದ್ದಾರೆ. ಇದನ್ನೇ ಅಲ್ಲವೇ ದಾಸರು ಹೇಳಿದ್ದು, “ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ” ಎಂದು. ಇನ್ನೊಂದು ರಚನೆ: ನಾ ಹೇಗೆ ಹೋರಾಡಲಿ…. ಅಂಧಕಾರವೇ/ ತುಂಬಿರೋ ಬದುಕಲ್ಲಿ/ ಹೊಂಬೆಳಕನ್ನು / ನಾನೆಲ್ಲಿ ಹುಡುಕಲಿ/ಸತ್ಯದ ಸಾವು/ ಸಂಭವಿಸಿರುವಾಗ/ಸದ್ಧರ್ಮಕ್ಕಾಗಿ/ ನಾ ಹೇಗೆ ಹೋರಾಡಲಿ/ಹೇಳು ನೀ ಸೃಷ್ಟಿಕರ್ತ // ಇಲ್ಲಿ ಬದುಕಿನ ತೊಳಲಾಟವನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಬದುಕಿನಲ್ಲಿ ಅಂಧಕಾರ ತುಂಬಿರುವಾಗ ಉಜ್ವಲವಾಗುವುದಾದರೂ ಹೇಗೆ? ಲೋಕದಲ್ಲಿ ಸತ್ಯಕ್ಕೆ ಜಯ ಸಿಗದೆ ಸುಳ್ಳು ಮೆರೆದಾಡುತ್ತಿದೆ. ಹೀಗಿರುವಾಗ ಧರ್ಮಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವುದಾದರೂ ಹೇಗೆ? ಹೇ ಭಗವಂತ ನೀನೇ ಇದಕ್ಕೆ ಉತ್ತರಿಸಬೇಕು ಎಂಬ ಆರ್ತನಾದ ಇಲ್ಲಿ ವ್ಯಕ್ತವಾಗಿದೆ. ಮಾನವೀಯತೆ/ ಮಣ್ಣಲ್ಲಿ ಮಣ್ಣಾದಾಗ/ ಕರುಣೆಯೆಂಬ/ ಕಡಲು ಬತ್ತಿದಾಗ/ ಅಧರ್ಮಗಳು/ ಅಟ್ಟಹಾಸ ಗೈದಾಗ/ ಅಂತಿಮವಾಗಿ / ಸದ್ಧರ್ಮ ಸ್ಥಾಪನೆಗೆ/ಧರ್ಮಯುದ್ಧವೇ ಅಸ್ತ್ರ// ಭಗವದ್ಗೀತೆಯ ಸಾಲು ಇಲ್ಲಿ ನೆನಪಿಗೆ ಬರುತ್ತದೆ. ಧರ್ಮಗ್ಲಾನಿ ಉಂಟಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಭಗವಂತ ಅವಿರ್ಭವಿಸುತ್ತಾನೆ ಎಂಬ ಮಾತಿನಂತೆ ಲೋಕದಲ್ಲಿ ಮಾನವೀಯತೆ, ಕರುಣೆ ನಾಶವಾಗಿ ಅಧರ್ಮವೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಧರ್ಮ ಸ್ಥಾಪನೆಗೆ ಧರ್ಮಯುದ್ಧವೇ ಪ್ರಬಲವಾದ ಅಸ್ತ್ರ. ಅದನುಳಿದು ಬೇರೆ ಇಲ್ಲ ಎಂಬ ತೀರ್ಮಾನ ಇಲ್ಲಿ ವ್ಯಕ್ತವಾಗಿದೆ. ಬೆಳದಿಂಗಳ/ ಬೆಳ್ಳಿ ಬೆಳಕಿನಲ್ಲಿ/ ಅರಳಿ ನಿಂತ/ ಸುಕೋಮಲ ಪುಷ್ಪವೇ/ ಲಲಿತಾಂಗಿಯೇ/ ಏನೆಂದು ಬಣ್ಣಿಸಲಿ/ ಆಶಕ್ಯವಿದೆ/ ನಿನ್ನಂದಕೆ ಸಾಟಿಯೇ/ ಶಶಿ ಕರಗಿದನು// ಇಲ್ಲಿ ಕವಿಯ ಅಲಂಕಾರ ಭಾವ ವ್ಯಕ್ತವಾಗಿದೆ. ಒಂದು ಕಡೆಯಿಂದ ಬೆಳದಿಂಗಳ ಬೆಳಕಿನಲ್ಲಿ ಹೂವು ಸೊಗಸಾಗಿ ಅರಳಿ ನಿಂತ ಪರಿಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಎಂಬುದಾಗಿಯೂ ಮತ್ತೊಂದು ದೃಷ್ಟಿಯಿಂದ ಅದೇ ಬೆಳದಿಂಗಳ ಛಾಯೆಯಲ್ಲಿ ಸುಕೋಮಲೆಯಾದ ಹೆಣ್ಣು ಮೈ ತುಂಬಿ ನಿಂತಾಗ ಆ ಸೊಬಗಿಗೆ ಸೋತ ಗಂಡು ಆಕೆಯ ಸೌಂದರ್ಯವನ್ನು ಹೊಗಳಲು ಪದಗಳಿಗೆ ಪರದಾಡುವ ಸ್ಥಿತಿಯಲ್ಲಿ ಇದ್ದಾಗ, ತಾನೇನು, ಈ ಚೆಲುವಿಗೆ ಶಶಿಯೇ ಸೋತು ಕರಗಿದನು ಎಂದು ವರ್ಣಿಸುವ ಕಾವ್ಯಾತ್ಮಕ  ಪರಿ ಅತ್ಯಂತ ಸೊಗಸಾಗಿದೆ. ಸ್ತ್ರೀ ಅಂದರೇನು/ ಕೇವಲ ಅವಳೊಂದು/ ಹೆಣ್ಣಾಗಿಹಳೇ/ ಕೂಸುಗಳನ್ನು ಮಾತ್ರ/ ಹೆತ್ತು ಕೊಡುವ/ ಸಾಧನವಾಗಿಹಳೇ / ಕಾಮ ತೀರಿಸೋ/ ಭೋಗ ವಸ್ತುವೇ?; ಅಲ್ಲ/ ಜಗದ್ದಾತ್ರಿಯವಳು// ಹಿಂದಿನ ಚೋಕಾದಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿದ ಕವಿಯು ಇಲ್ಲಿ ಹೆಣ್ಣಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಸಮಾಜವು ಇಂದು ಯಾವ ರೀತಿ ಹೆಣ್ಣನ್ನು ನೋಡುತ್ತಿದೆ ಎನ್ನುವುದನ್ನು ಅರಿತು ಅದರ ವಿರುದ್ಧ ಧ್ವನಿ ಎತ್ತಿರುವುದನ್ನು ಇಲ್ಲಿ ಕಾಣಬಹುದು. ಆಕೆ ಕೇವಲ ಭೋಗವಸ್ತು ಎಂದು ತಿಳಿಯದೆ, ಅವಳೊಂದು ಶಕ್ತಿ, ಜಗದ್ಧಾತ್ರಿ ಎನ್ನುವುದನ್ನು ತಿಳಿದು ಅಕೆಯನ್ನು ಗೌರವದಿಂದ ಕಾಣುವ ದೃಷ್ಟಿ ಹೊಂದಬೇಕು ಎಂದು ಪ್ರತಿಪಾದಿಸಿದ್ದಾರೆ. ಇದು ಇಂದಿನ ದಿನಮಾನಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಇನ್ನು ಬೇರೆಯವರ ದುಡ್ಡು ತಿಂದು ಎಷ್ಟು ದಿನ ಸುಖವಾಗಿ ಇರಬಹುದು ಎನ್ನುವುದರ ಬಗ್ಗೆ ಹೀಗೆ ಹೇಳುತ್ತಾರೆ. ಪರ ದುಡ್ಡಲ್ಲಿ/ ಮೋಜು ಮಸ್ತಿಯ ಮಾಡಿ/ ತಮ್ಮ ಬೇಳೆಯ/ ಬೇಯಿಸಿಕೊಳ್ಳುವಂತ/ ನರಾಧಮರು/ ಜಗದ ತುಂಬೆಲ್ಲವೂ/ ತುಂಬಿರುವಾಗ / ಸುಜನರ ಏಳ್ಗೆಯು/ ಬುವಿಯಲ್ಲಿ ಆದೀತೇ// ಸ್ವಾರ್ಥವೇ ತುಂಬಿರುವ ಜನರು ಇಂದು ಸುಲಿಗೆ ಮೋಸ ವಂಚನೆಯಲ್ಲಿ ತೊಡಗಿರುವಾಗ ಅಂಥ ನರಾಧಮರು ತಮ್ಮ ಮೋಜು ಮಸ್ತಿಗಾಗಿ ಬೇರೆಯವರ ದುಡ್ಡು ತಿಂದು ಮೋಸ ಮಾಡುವುದನ್ನು ಕಾಣುತ್ತವೆ. ಇಂಥ ನೀಚರೇ ಎಲ್ಲೆಲ್ಲೂ ತುಂಬಿ ಹೋಗಿದ್ದಾರೆ. ಹೀಗಿರುವಾಗ ಲೋಕ ಹೇಗೆ ಉದ್ದಾರ ಆದೀತು ಎಂಬ ಕಳವಳ ಕವಿಯಲ್ಲಿ ಮಾತ್ರವಲ್ಲ , ನಮ್ಮಲ್ಲೂ ಮೂಡದೆ ಇರಲು ಸಾಧ್ಯವೇ ಹೇಳಿ. ದೇಶಪ್ರೇಮ ಇರದವನು ದೇಶಿಗನು ಆಗಲು ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ದೇಶಪ್ರೇಮ ಮೆರೆವ ಯೋಧರ ಕುರಿತಾದ ರಚನೆ ನೋಡೋಣ. ಭಾರತಾಂಬೆಯ / ಮುಕುಟದಿ ಶೌರ್ಯದಿ /ನಿಂತ ಯೋಧರು/ ಹಿಮವನ್ನೇ ಹಾಸಿಗೆ/ ಮಾಡಿಕೊಂಡರು/ ಕೊರೆವ ಚಳಿಯನ್ನೇ/ ಹೊದ್ದುಕೊಂಡರು / ಕೆಚ್ಚೆದೆಯಿಂದ ವೈರಿ/ ನಾಶಕ್ಕೆ ಕಾದಿಹರು// ಇಂದು ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದಾದರೆ ಅದು ಗಡಿಯಲ್ಲಿ ಕಾಯುವ ಯೋಧರ ಕೊಡುಗೆ. ನಾವು ಬೆಚ್ಚಗೆ ಮಲಗಿದ್ದರೆ ಅಲ್ಲಿ ಯೋಧರು ಹಿಮವನ್ನೇ ಹೊದ್ದುಕೊಂಡು ವೈರಿಗಳ ನುಸುಳುವಿಕೆಯನ್ನು ತಡೆಯಲು ಕಾಯುತ್ತಿದ್ದಾರೆ ಅಲ್ಲವೇ. ಅವರ ದೇಶ ಪ್ರೇಮ, ಸೇವಾ ನಿಷ್ಠೆ, ಕಾರ್ಯ ತತ್ಪರತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಲ್ಲವೇ.. ಕವಿಯ ದೇಶಪ್ರೇಮ ಇಲ್ಲಿ ಉತ್ಕಟವಾಗಿದೆ. ಇಷ್ಟೇ ಅಲ್ಲದೆ ಕವಿಯ ಚಿತ್ತ ದಶದಿಕ್ಕುಗಳಿಗೂ ಹರಿದು, ದೃಷ್ಟಿಗೆ ಗೋಚರಿಸಿದ ಬಹಳಷ್ಟು ವಿಚಾರಗಳನ್ನು ತಮ್ಮ ಲೇಖನಿಯ ಮೂಲಕ ಇಳಿಸಿದ್ದಾರೆ. ಕರುನಾಡಿನ ಕುರಿತು, ಕನ್ನಡದ ಕುರಿತು ಬರೆಯದ ಕವಿ ಕನ್ನಡಿಗನು ಹೇಗಾದಾನು. ಅಂತೆಯೆ ಕನ್ನಡ ನಾಡು ನುಡಿಯ ಬಗ್ಗೆಯೂ ಇಲ್ಲಿ ನಾವು ನೋಡಬಹುದಾಗಿದೆ. ಇನ್ನು ಗುರುಗಳು, ಶರಣರು, ಮಹಾತ್ಮರ ಕುರಿತಾದ ಚೋಕಾಗಳು ಮನಸೆಳೆಯುತ್ತವೆ. ಭಾರತದ ನೆಲದಲ್ಲಿ ಅಧ್ಯಾತ್ಮಕ್ಕೆ ಮಹತ್ವದ ಸ್ಥಾನ ಇದೆ. ಅಂತೆಯೇ ಇಲ್ಲಿ ಕವಿಗಳ ಭಗವಂತನ ಕುರಿತು, ರಾಮನ ಕುರಿತು ಬರೆದ ರಚನೆಗಳು ಭಕ್ತಿ ಭಾವದಿಂದ ಓದುವಂತೆ ಮಾಡಿವೆ. ಕವಿಯಾದವನಿಗೆ ಪ್ರಕೃತಿ ನೀಡಿದಷ್ಟು ಪ್ರೋತ್ಸಾಹ ಮತ್ತೆಲ್ಲೂ ಸಿಗಲಾರದು. ಅಂದ ಮೇಲೆ ಪ್ರಕೃತಿ ಸೌಂದರ್ಯ ಇಲ್ಲೂ ನಳನಳಿಸಿದೆ, ಒಲವಿನ ಸುಧೆ ಹರಿಸಿದೆ. ಹಾಗೆಯೇ ಬದುಕಿನ ನೋವು ನಲಿವುಗಳು ಪ್ರತಿದ್ವನಿಸಿವೆ. ಆದರೆ ಇವೆಲ್ಲವುಗಳನ್ನು ಓದಿ ಮನನಮಾಡಿಕೊಳ್ಳುವ ಹೃದಯ ಇರಬೇಕು ಅಷ್ಟೇ. ಒಟ್ಟಿನಲ್ಲಿ “ಚೋಕಾ- ಕಾವ್ಯಧಾರೆ” ಕೃತಿಯು ತನ್ನ ಪ್ರತಿ ಪುಟದಲ್ಲೂ ಓದುಗನ ಹೃದಯಕ್ಕೆ ನಾಟುವಂತಹ ವಿಶಿಷ್ಟ ಜಪಾನಿ ಸಾಹಿತ್ಯದ ಕನ್ನಡ ಪ್ರಕಾರದಿಂದ ಪ್ರಕಾಶಿತಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತೆ ಎನ್ನಬಹುದು. ಕವಿ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರ ಈ ಕೃತಿಯು ಓದುಗರ ಜ್ಞಾನದಾಹವನ್ನು ತಣಿಸಲಿ. ಕೃತಿಕಾರರಿಗೆ ಯಶಸ್ಸು ಕೀರ್ತಿ ಅರಸಿ ಬರಲಿ. ಮತ್ತಷ್ಟು ಅಧ್ಯಯನದೊಂದಿಗೆ ಬರೆವಣಿಗೆ ಮುಂದುವರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಲಿ ಎಂದು ಹಾರೈಸುತ್ತೇನೆ. ಹರಿನರಸಿಂಹ ಉಪಾಧ್ಯಾಯ(ಕವಿಗಳು)ಶಂಭೂರು, ಬಂಟ್ವಾಳ ತಾಲ್ಲೂಕು. ದ.ಕ.ಜಿಲ್ಲೆ+೯೧ ೯೯೮೦೯೨೧೧೧೧

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು Read Post »

ಪುಸ್ತಕ ಸಂಗಾತಿ

“ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಗೊರೂರು ಅನಂತರಾಜು

ಪುಸ್ತಕ ಸಂಗಾತಿ ಗೊರೂರು ಅನಂತರಾಜು “ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..? ‘ನೀವು ನನ್ನನ್ನು ಸರಪಳಿಯಲ್ಲಿ ಬಂಧಿಸಬಹುದು, ನೀವು ನನ್ನನ್ನು ಹಿಂಸಿಸಬಹುದು, ನೀವು ಈ ದೇಹವನ್ನು ಸಹ ನಾಶಪಡಿಸಬಹುದು. ಆದರೆ ನೀವು ಎಂದಿಗೂ ನನ್ನ ಮನಸ್ಸನ್ನು ಬಂಧಿಸಲಾಗುವುದಿಲ್ಲ.             -ಮಹಾತ್ಮ ಎಂ.ಕೆ.ಗಾಂಧಿ. ಮಾಳೇಟಿರ ಸೀತಮ್ಮ ವಿವೇಕ್  ಅವರ ಇತ್ತೀಚಿನ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕವೊಂದರ ನಂತರ ಮೂಡಿ ಬರುತ್ತಿರುವ ನನ್ನ ಚೊಚ್ಚಲ ಕನ್ನಡ ಕೃತಿಯಾಗಿದೆ ಎನ್ನುವ ಮೇಡಂ ಅವರ ತವರು ಮನೆ ಹೆಸರು ಕಂಬೀರಂಡ. ಮೂರ್ನಾಡು ಬಾಡಗ ಗ್ರಾಮ. ಕೊಡಗು ಜಿಲ್ಲೆ. ಚರಿತ್ರೆ ಅಧ್ಯಯನಗಾರ್ತಿಯಾದ ಇವರ ಮನಸ್ಸು ಕೃತಿ ಸಾಕಷ್ಟು ಅಧ್ಯಯನ ನಡೆಸಿ ವಿಶಿಷ್ಟ ಮಾಹಿತಿ ಅನುಭವಗಳನ್ನು ಕ್ರೋಢೀಕರಿಸಿ ಬರೆದ ಕೃತಿ.  ಮಾನವ ಜೀವನದ ಅತಿ ಮಹತ್ವದ ಆದರೆ ಅತೀ ಅಲಕ್ಷಿತ ಶಕ್ತಿ ಮನಸ್ಸು. ಇದು ಕಾಣುವುದಿಲ್ಲ. ಕಾಣಿಸಿಕೊಳ್ಳುವ ಎಲ್ಲರಿಗೂ ಇದು ಸ್ಫರ್ಶಿಸಬಹುದಾದ ಅಂಗವೂ ಅಲ್ಲ. ಅದರ ಪ್ರತಿಯೊಂದು ಅನುಭವದ ಸ್ಫಂದನ. ಅದರಿಂದಲೇ ಈ ಕೃತಿಯಲ್ಲಿ ಕಾಣುವ ಮನ ಏವಂ ಮನುಷ್ಯಾಣಾಂ ಕಾರಣಂ ಬಂಧಂ ಮೋಕ್ಷಯೋ: ಎಂಬ ಪುರಾತನ ತತ್ವ ವಾಕ್ಯವು ಮನಸ್ಸಿನ ಸ್ವಭಾವವನ್ನು ನೇರವಾಗಿ ಸ್ಫಷ್ಟಪಡಿಸುತ್ತದೆ. ಮನಸ್ಸೆ ಬಂಧನಕ್ಕೂ ಕಾರಣ. ಅದೇ ಮುಕ್ತಿಗೂ ದಾರಿ ಎಂದಿದ್ದಾರೆ ಇವರ ಪತಿ ಮಾಳೇಟಿರ ವಿವೇಕಾನಂದ ಪೊನ್ನಪ್ಪನವರು.   ಮನಸ್ಸು ಒಂದು ಅಗೋಚರ ಅತೀಂದ್ರಿಯ ಶಕ್ತಿಯಾಗಿದೆ. ಹೆಣ್ಣು ಗಂಡೆನ್ನದೆ ಸರ್ವರೊಳಗೂ ಇರುವ ಮನಸ್ಸು ಪ್ರತಿಯೊಬ್ಬರಿಗಿರುವ ಅವರವರ ದೇಹದೊಂದಿಗೆ ಜೀವಮಾನವೆಲ್ಲ ಚಲಿಸುವ, ದೈಹಿಕ ಅರಿಹಂತಗಳಿಂದ ಸಮ್ಮಿಳಿತವಾಗಿರುವ ಅತೀಂದ್ರಿಯವಾಗಿದೆ. ಬುವಿಯಲ್ಲಿ ರೂಪ ತಾಳುವ ದೇಹದೊಂದಿಗೆ ಗಾಢವಾದ ನಂಟು ಬೆಸೆದುಕೊಂಡಿರುವ ಮನಸ್ಸಿಗೆ ಘಾಸಿಯಾದರೆ ಇಡೀ ಶರೀರವೇ ನಾಶವಾಗುತ್ತದೆ. ಅಂತಹ ಘನತ್ತರವಾದ ನಮ್ಮೊಳಗೆ ಇರುವ ಮನ: ಮಾತೃಕೆಯ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸದೆ ಇರುವುದರಿಂದಲೇ ನಾವು ಮಾತ್ರವಲ್ಲದೆ ಕುಟುಂಬ, ಸಮಾಜ, ದೇಶವೇ ಏರುಪೇರು ದೃಷ್ಟಿಕೊನವನ್ನು ಹೊಂದಿದೆ.ಮಾನವ ಸಂಘ ಜೀವಿ. ಎಲ್ಲರ ಮನಸ್ಸಿಗು ಒಟ್ಟಿಗೆ ಬಾಳುವುದೇ ಪ್ರಧಾನ ಬಯಕೆ ಆಗಿರುತ್ತದೆ. ಹಾಗೆಂದು ಒಟ್ಟಿಗೆ ಬಾಳುವುದು ಸುಲಭದ ಮಾತಲ್ಲ. ನನಗೆ ಜಿ.ಎಸ್. ಶಿವರುದ್ರಪ್ಪನವರ ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಎಂಬ ಭಾವಗೀತೆ ನೆನಪಾಗುತ್ತದೆ. ಅದರಲ್ಲಿನ ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲ್ಲಿ. ಹೊಂದಿಕೆ ಎಂಬುದು ಎಷ್ಟು ಕಷ್ಟವೋ ನಾಲ್ಕು ದಿನದ ಈ ಬಾಳಿನಲಿ.. ಹೌದು ಮನಸ್ಸಿನ ಅರಿವಿಕೆ ಇಲ್ಲದೆ ಇರುವುದೇ ಆ ಹೊಂದಿಕೆ ಸಾಧ್ಯವಾಗದೆ ಇರಲು ಕಾರಣ.ಮೇಡಂ ಅವರು ತಮ್ಮ ವೈಯಕ್ತಿಕ  ಜೀವನಾನುಭವಗಳನ್ನು ಆತ್ಮ ಪರಿಶೀಲನೆಯ ಕಣ್ಣಿನಿಂದ ನೋಡುತ್ತಾ, ಸಂಕಟಗಳನ್ನು ಜ್ಞಾನವಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದಾರೆ. ಕೊಡಗಿನ ಪ್ರಕೃತಿ ವಾತಾವರಣದಲ್ಲಿ ಬೆಳೆದ ಬಾಲ್ಯ, ವಿಭಿನ್ನ ಸಂಸ್ಕೃತಿಗಳ ಅನುಭವ, ಜೀವನದ ಕಠಿಣ ಘಟ್ಟಗಳು, ಆರೋಗ್ಯ ಸಂಕಟಗಳು, ಆತ್ಮ ಅನ್ವೇಷಣೆಯ ಕ್ಷಣಗಳು ಇವೆಲ್ಲವೂ ಈ ಕೃತಿಗೆ ಜೀವ ತುಂಬಿವೆ. ಹಿಮಾಚಲ ಪ್ರದೇಶದ ರೋಹತಂಗ್ ಪಾಸ್ ನಲ್ಲಿ ಸಂಭವಿಸಿದ ಮರಣಭಯದ ಅನುಭವ   ದಾಖಲಿಸುತ್ತಾರೆ.ನಮ್ಮ ಕುಟುಂಬ ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿ ಮನಾಲಿಯ ಹಿಡಿಂಬ ದೇವಸ್ಥಾನ ಸಮೀಪದಿಂದ ಸುಮಾರು ೫ ಸಾವಿರ ಮೀ.ಗಿಂತಲೂ ಎತ್ತರದ ರೋಹತಂಗ್ ಪಾಸ್ ನ ಪರ್ವತದೆಡೆ  ಪ್ರಯಣ ಬೆಳಸಬೇಕಿತ್ತು. ಅದು ಹಿಮ ಪರ್ವತವಾಗಿ ಸ್ಥಳೀಯರು ಬೆಚ್ಚಗಿನ ಮೈಹೊದಿಕೆ ಹಾಕಿಕೊಳ್ಳುವಂತೆ ಹೇಳಿದ್ದರು. ನಾವು ಅದೇ ರೀತಿ ತಯಾರಾಗಿ ಹೊರಟೆವು. ಅನೇಕ ತಿರುವುಗಳ ರಸ್ತೆ. ಕ್ರಮಿಸಬೇಕಾಗಿದ್ದ ಎತ್ತರ ನಾವಿದ್ದ ಸ್ಥಳದಿಂದ ತುಂಬಾ ಮೇಲೆ ಮೋಡ ಹರಡಿಕೊಂಡಂತೆ ಇತ್ತು. ಹಾಗಾಗಿ ನಮ್ಮ ವಾಹನದ ಚಾಲಕ ನಮಗೆ ಶ್ವಾಸಕೋಶ ಸಂಬಂಧಿ ತೊಂದರೆ ಇರುವವರಿಗೆ ಆಮ್ಲಜನಕ ಕೊರತೆ ಬಾಧಿಸಬಹುದೆಂದು ಮುನ್ಸೂಚನೆ ನೀಡಿದ್ದರು. ನನ್ನ ತಾಯಿಗೆ ಉಬ್ಬಸದ ಸಮಸ್ಯೆ ಇತ್ತು. ನಾವು ಅವರ ಬಗ್ಗೆ ಯೋಚಿಸುತ್ತಾ ವಾಹನದಲ್ಲಿ ಕುಳಿತು  ಎಲ್ಲವನ್ನು ಅಹ್ಲಾದಿಸುತ್ತ ತುತ್ತ ತುದಿ ತಲುಪಿದೆವು. ಇನ್ನೇನು ಹಿಮ ಹರಡಿದ್ದ ಜಾಗ  ಮುಟ್ಟಬೇಕು. ಅಷ್ಟು ಹತ್ತಿರದಲ್ಲಿ ಹಿಮಾವೃತ ಸುಂದರ ಪುಟ್ಟ ಗುಡ್ಡ! ಅದನ್ನು ನೋಡುತ್ತ ವಾಹನದಿಂದ ಎಲ್ಲರೂ ಖುಷಿಯಿಂದ  ಇಳಿದರು. ಸುತ್ತಮುತ್ತಲ ದೃಶ್ಯಗಳು ವರ್ಣಿಸಲು ಅಸಾಧ್ಯ!  ಸೌಂದರ್ಯ ಅಮೋಘ! ದೂರದಲ್ಲಿ ಹಿಮಚ್ಛಾದಿತ ಬೆಟ್ಟದ ತುದಿಯಲ್ಲಷ್ಟೇ ಸೂರ್ಯನ ಕಿರಣಗಳು ಹಾಯ್ದು ಬೆಟ್ಟ ಬೆಳ್ಳಿಯಂತೆ ಹೊಳೆಯುತ್ತಿತ್ತು. ಆ ಸೊಂಪನ್ನು ನೋಡ ನೋಡುತ್ತಿದ್ದಂತೆಯೇ ಆರೋಗ್ಯವಾಗಿದ್ದ ನಾನು ದೊಪ್ಪೆಂದು ಕುಸಿದ್ದು ಬಿದ್ದೆ! ಬಿದ್ದದ್ದು ನನಗೆ ತಿಳಿಯಲಿಲ್ಲ. ಎಷ್ಟು ಸಮಯದ ನಂತರ ಎಚ್ಚರವಾಯಿತು ತಿಳಿಯಲಿಲ್ಲ. ಅಲ್ಲಿ ನಾನು ಎದ್ದು ಕುಳಿತಾಗ ಕಿವಿಗೆ ಬಿದ್ದದ್ದು ನನ್ನ ತಾಯಿಯ ಪ್ರಶ್ನೆ. ಇದನ್ನ ಕೈಲಾಸ ಅಂದುಕೊಂಡು ಶಿವನನ್ನು ನೋಡಲು ಹೊರಟುಬಿಟ್ಟಿದ್ದೆಯಾ..ಎಂದು! ಆಗ ನಾನು ಅಲ್ಲಿದ್ದೆ. ಇಲ್ಲಿಗೆ ಹೇಗೆ ಬಂದೆ? ಎಷ್ಟು ಇಂಪಾದ ನಾದಗಳು ಅಹ್ಲಾದಕರ ಪರಿಮಳ ಅಲ್ಲಿ ಇದ್ದವಲ್ಲ ಎಂದಿದ್ದೆ. ಅಲ್ಲಿ ಆಗ ಬಿದ್ದಿದ್ದ ನನ್ನ ದೇಹದ ಸುತ್ತಲೂ ಜನ ಸೇರಿ ಮುಟ್ಟಿ ಉಪಚರಿಸುತ್ತಿದ್ದರೂ ಶರೀರಕ್ಕೆ ಯಾವುದೇ ಸ್ಫರ್ಶಾನುಭವ ಆಗುತ್ತಿಲ್ಲ! ಆದರೆ ನಾನು ಸಂಪೂರ್ಣ ಎಚ್ಚರವಾಗಿಯೇ ಇದ್ದೆ!  ಮೊದಲೇ ನಾನು ಪ್ರಕೃತಿ ಸೌಂದರ್ಯ ತಲ್ಲೀನ ಅಪ್ಪಟ  ಆರಾಧಕಿ. ಆ ಕಾರಣಕ್ಕೋ ಏನೋ ಯಾವ ಬೆಳ್ಳಿಬೆಟ್ಟ ನೋಡುತ್ತಿದ್ದೆನೋ ಅದರೆಡೆಗೆ ನಾನು ಆರಾಮಾಗಿ ಹೊಗುತ್ತಿದ್ದುದು ಚೆನ್ನಾಗಿಯೇ ತಿಳಿಯುತ್ತಿತ್ತು. ಹತ್ತಿರ ತಲುಪಿದಾಗ ಅದರ ಆಸುಪಾಸು ಇಂಪಾದ ನಾದ ಕೇಳಿಸುತ್ತಿತ್ತು. ಸುಂದರ ಹೂವಿನ ಪರಿಮಳ ಹರಡಿತ್ತು.  ಎಂದೂ ನೋಡಿರದ ಸುಂದರ ಪಕ್ಷಿಗಳು ಹಾರಾಡುತ್ತಾ ಇದ್ದಿದ್ದು ಗ್ರಹಿಸಿದ್ದೆ.  ನೀರು ಹರಿಯುವ ನಾದ ಬರುತ್ತಿದ್ದ ಕಡೆ ಹೋಗಲು ಅಣಿಯಾದಾಗ ದೂರದಲ್ಲಿ ಹೃದಯಕ್ಕೆ ಹತ್ತಿರವಾಗಿ ನನ್ನನ್ನು ಕರೆಯುತ್ತಿರುವುದು ಕೇಳಿಸಿ ಆ ಕೂಗು ಬಂದ ಕಡೆಗೆ ಆ ಸುಂದರ ತಾಣ ಬಿಟ್ಟು ಹೊರಡಲು ಮನಸ್ಸಿಲ್ಲದಿದ್ದರೂ ಗುಡ್ಡದಿಂದ ಇಳಿಯುತ್ತ ಹತ್ತಿರ ತಲುಪಿದಾಗ.. ಮುಖಕ್ಕೆ ನೀರು ಚಿಮುಕಿಸಿ ಮೂಗಿಗೆ ಕರ್ಪೂರವನ್ನು ಮೂಸಿಸುತ್ತಿರುವ ಕಾಲ್ಚೀಲ ಕಳಚಿ ಕಾಲು ತಿಕ್ಕುತ್ತಿರುವ ದೈಹಿಕ ಅನುಭವಗಳಾದವು. ಅಲ್ಲಿ ಕಣ್ಣು ತುಂಬಿಕೊಂಡು ಕರೆಯುತ್ತಿದ್ದವರು ನನ್ನ ತಾಯಿ! ನನ್ನ ಪತಿ ತಂಗಿ ಮಗ ಎಲ್ಲರು ಕರೆಯುತ್ತಿದ್ದರೂ ಅಮ್ಮನ ಕೂಗು ಮಾತ್ರ ಕೇಳಿಸುತ್ತಿದ್ದದ್ದು ಮಾತ್ರ ವಿಚಿತ್ರ ಎನಿಸಿತು. ಅದೇ ಹೃದಯದ ಕೂಗು, ಎದೆಯಾಳದ ಕೂಗು ಎಂಬುದು ಅರಿವಾಯಿತು.ಈ ದೇಹದಿಂದ ಪ್ರಜ್ಞೆ ಹೋಗುವಾಗ ಮತ್ತು ಬರುವಾಗ ಪೂರ್ಣ ಕತ್ತಲಲ್ಲಿ ಸಾಗಿದ್ದರೂ ಬರಿ ಕಣ್ಣಿಗೆ ಕಾಣದ ಪ್ರಕಾಶಮಾನವಾದ ಬೆಳಕಿನಲ್ಲಿ ಸಂಚರಿಸಿದ್ದೆ! ನನಗೆ ಕನಸುಗಳು ಸಾಕಷ್ಟು ಬಿದ್ದಿವೆ. ಆದರೆ ನನ್ನ ಮನಸ್ಸು ೫೦-೬೦ ಕಿ.ಮೀ. ದೂರದಷ್ಟಿದ್ದ ಬೆಟ್ಟದ ಸಮೀಪದವರೆಗೆ ದೇಹದೊಂದಿಗೆ ಪಯಣಿಸಿದಂತಹ ಅನುಭವ ಪಡೆದಿದ್ದು, ಅದೂ ಪೂರ್ಣ ಪ್ರಜ್ಞೆಯಲ್ಲಿ  ಎಂದಿಗೂ ಮರೆಯಲಾಗದು. ದೇಹಪ್ರಜ್ಞೆ ಕ್ಷೀಣಿಸಿದ ಕ್ಷಣ ಅನುಭವಿಸಿದ ಆಂತರಿಕ ಪ್ರಕಾಶ, ನಾದ, ಪರಿಮಳ, ಇವು ಮನಸ್ಸಿನ ಅತೀತ ಆಯಾಮಗಳ ಬಗ್ಗೆ ಆಳವಾದ ಚಿಂತನೆಗೆ ದಾರಿ ಮಾಡಿಕೊಟ್ಟಿವೆ.ಇದಾದ ನಂತರ ತಾಯಿ ತಂದೆ ಇರುವವರೆಗೂ ನಾನಾಗಿಯೇ ನನ್ನ ಮರಣವನ್ನೆಂದೂ ಬಯಸಬಾರದೆಂಬ ಮನಸ್ಸು ಬೆಳೆದಿದೆ. ಅಷ್ಟೇ ಅಲ್ಲ ಯಾರ ಮರಣವನ್ನೂ ಬಯಸಬಾರದು. ತದ್ವಿರುದ್ದ ಗುಣದವರೊಂದಿಗೆ ಜೊತೆಯಲ್ಲೇ ವಾಸಿಸಬೇಕಾದಾಗಲೂ ಯಾರನ್ನೂ ದ್ವೇಷಿಸದೆ ನನ್ನ ಕರ್ತವ್ಯಗಳನ್ನು ಯಾವ ಕಾರಣಕ್ಕೂ ಕೈಬಿಡದೆ ಖುಷಿಯಿಂದ ಮಾಡುತ್ತಿರಬೇಕೆಂಬ ನಿಲುವು ತಾಳಿದೆ.. ಅದಾಗಿ ಮೇಡಂ ಧ್ಯಾನ ಯೋಗ ಸಾಧನೆ ಮೂಲಕ ಮಹರ್ಷಿ ಪ್ರಭಾಕರ್ ಗುರೂಜಿ, ಆಚಾರ್ಯ ಆದಿನಾಥ್, ಶ್ರೀ ರವಿಶಂಕರ್  ಆರ್ಟ್ ಆಫ್ ಲಿವಿಂಗ್ ಯೋಗ ಸಾಧಕರ ಮಾರ್ಗದರ್ಶನದಲ್ಲಿ ಮನಸ್ಸಿನ ಸ್ಕೈರ್ಯ ಮತ್ತು ಆತ್ಮಶಾಂತಿ ಕಂಡ ಅನುಭವಗಳು ಈ ಕೃತಿಯ ಆತ್ಮವಾಗಿದೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

“ಮಾಳೇಟಿರ ಸೀತಮ್ಮ ವಿವೇಕ್ ಅವರ ವಿವೇಕಜ್ಞಾನ ಕೃತಿ ಮನಸ್ಸು. ಇದು ಕೊಡವ ಭಾಷೆಗೆ ತರ್ಜುಮೆಗೊಂಡ ಕೊಡವ ಚರಿತ್ರೆ ಪುಸ್ತಕ” ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ

ಪುಸ್ತಕ ಸಂಗಾತಿ ಸುನೀತ ಕುಶಾಲನಗರ ಜಯಲಕ್ಷ್ಮಿ ಕೆ, ಮಡಿಕೇರಿ “ನಡೆದಷ್ಟೂ ದಾರಿ” ಕೃತಿಯ ಹೆಸರು : ನಡೆದಷ್ಟೂ ದಾರಿಲೇಖಕಿ : ಜಯಲಕ್ಷ್ಮಿ ಕೆ ಮಡಿಕೇರಿಪುಟಗಳು : 188ಬೆಲೆ : 230.ಪ್ರಕಾಶಕರು : ಅಂಬಾರಿ ಪ್ರಕಾಶನಕುವೆಂಪುನಗರ, ಮೈಸೂರು ವೃತ್ತಿಯಲ್ಲಿ ಒಬ್ಬ ಅಧ್ಯಾಪಕಿಯಾಗಿ ಜಯಲಕ್ಷ್ಮಿ ಯವರು ಚಿರಪರಿಚಿತರು. ಪ್ರವೃತ್ತಿಯಿಂದ ಬರೆಹಗಾರ್ತಿಯಾಗಿ ಕೊಡಗು ಜಿಲ್ಲೆಯಲ್ಲಿ ಗುರುತ್ತಿಸಿಕೊಂಡವರು. “ನಡೆದಷ್ಟೂ ದಾರಿ” ಇವರ ಮೂರನೆಯ ಕೃತಿ. ಮೊದಲನೆಯದು ಚಪ್ಪಾಳೆಗೂ ಬೆಲೆಯಿದೆ.ಎರಡನೆಯದು ಮತ್ತೆ ವಸಂತ ಆಗಿದ್ದು ಈ ಕೃತಿ ರಾಜ್ಯ ಮಟ್ಟದ ಆಜೂರ ಪ್ರಶಸ್ತಿ, ಮುನಿ ಗಂಗಮ್ಮ ಪ್ರಶಸ್ತಿ ಮತ್ತು ಉಮಾ ಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಳನ್ನು  ಗಿಟ್ಟಿಸಿಕೊಂಡಿದೆ.     ‘ ನಡೆದಷ್ಟೂ ದಾರಿ’ ಪುಸ್ತಕವನ್ನು ಓದುತ್ತಾ ಹೋದಂತೆ ಪುಸ್ತಕ ಮುಗಿಯುವವರೆಗೂ ಮುಚ್ಚಿಡಲಾಗಷ್ಟು ಕುತೂಹಲ ತಂದುಕೊಟ್ಟಿತು.ಲೇಖಕಿ ಬಳಸಿದ ಭಾಷೆ, ಭಾಷೆಯ ಮೇಲಿನ ಹಿಡಿತ, ಗಟ್ಟಿತನ ನಿಜಕ್ಕೂ ಆಶ್ಚರ್ಯ ಮೂಡಿಸಿತು. ಇವರು  ಸಾಹಿತ್ಯ ಪರಂಪರೆಯನ್ನು ಓದಿಕೊಂಡು ವರ್ತಮಾನಕ್ಕೂ ಅಪ್ಡೇಟ್ ಆಗುತ್ತಿದ್ದಾರೆ  ಎಂದು  ಈ ಕೃತಿಯೇ ಸಾರಿ ಹೇಳಿದೆ. “ನಡೆದಷ್ಟೂ ದಾರಿ ಪಡೆದಷ್ಟೂ ಭಾಗ್ಯ” ಈ ಲೇಖನದಲ್ಲಿ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಕಲಿಕೆಯಲ್ಲಿ ಆಸಕ್ತಿ ಹೀನನಾಗುವುದಕ್ಕೆ  ಕಾರಣ ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸುವ ಅಧ್ಯಾಪಕಿ ಲೇಖನದ ಮೂಲಕ ಕಲಿಯಲು ವಿಷಯದ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಕೊಡಬೇಕು. ಪೋಷಕರು ಒತ್ತಡ ಹೇರಬಾರದು ಎಂದು ಹೇಳುತ್ತಾರೆ.  ‘ಬದುಕು ರೂಪಿಸುವ ಶಿಲ್ಪಿಗಳ ಬದುಕು’ ಎಂಬ ಲೇಖನದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರ ಶ್ರಮ,ಪಡೆಯುತ್ತಿರುವ ಕಡಿಮೆ ವೇತನ, ಪವಿತ್ರ ವೃತ್ತಿ ಎಂದು ಅರ್ಪಿಸಿಕೊಳ್ಳುವ ಇವರು ಎಲ್ಲೋ ಅಲಕ್ಷಿತರಾಗುತ್ತಿದ್ದಾರೆ. ಇವರಿಗೆ ಕೆಲಸದ ಒತ್ತಡ ಹೇರಿದರೆ ಸರ್ಕಾರಿ ಶಿಕ್ಷಕರಿಗೆ ಬೋಧನೇತರ ಕಾರ್ಯಗಳ  ಹೊರೆ ಎಂದು ಮುಕ್ತವಾಗಿ ಈ ಲೇಖನದಲ್ಲಿ ಶಿಕ್ಷಕರ ಬವಣೆಯನ್ನು ಬಿಚ್ಚಿಡುತ್ತಾರೆ. ಇವರ ಒಂದೊಂದು ಲೇಖನದ ವಸ್ತು ಸಾಮಾನ್ಯ ಅನಿಸಿದರೂ ಓದುತ್ತಾ ಅದರ ಗಹನತೆ  ಆಳವಾದದ್ದು ಎಂದು ವೇದ್ಯವಾಗುತ್ತದೆ.  ಜಯಲಕ್ಷ್ಮಿಯವರ ಲೇಖನಗಳ ಶೀರ್ಷಿಕೆಗಳ ಆಕರ್ಷಣೆ ಮತ್ತೊಂದು ವಿಶಿಷ್ಟವೆಂಬುದನ್ನು ಹೇಳಲೇಬೇಕಾಗುತ್ತದೆ. ಉದಾಹರಣೆಗೆ “ಕರಿಹಲಗೆಯ ಹಿಂದೆ ಕರಗುತ್ತಿದೆ ಕಾಯಗಳು”, “ಮನ  ಮರುಭೂಮಿಯಾಗುವ ಮುನ್ನ “ಹೀಗೆ ವೈವಿಧ್ಯಮಯ ಶಿರೋನಾಮೆಗಳೇ ಲೇಖನಗಳನ್ನು ಓದುವಂತೆ ಕುತೂಹಲ ಮೂಡಿಸುತ್ತವೆ.‘ಮಕ್ಕಳ ಹದಿಹರೆಯ’ ಲೇಖನದಲ್ಲಿ ಅಮ್ಮ,ತಾಯಿ ಎನ್ನುವ ಪದಕ್ಕೊಂದು ಪರಿಪೂರ್ಣ ವ್ಯಾಖ್ಯಾನ, ಆಕೆಯ ಕೆಲಸ ಕಾರ್ಯಗಳಿಗೊಂದು ಸೀಮಿತ ರೇಖೆ ಇನ್ನೂ ಸೃಷ್ಟಿಯಾಗಿಲ್ಲ. ಆಗಲು ಸಾಧ್ಯವೂ ಇಲ್ಲ. ದೇವರ  ಈ ಅಪೂರ್ವ ಕೊಡುಗೆಯನ್ನು ಪದಪುಂಜಗಳಿಂದ ಬಿಂಬಿಸಲು ಸಾಧ್ಯವೇ?  ಎಂದು ಕೇಳಿರುವುದು  ಸದಾ ಕಾಡುವ ವಾಕ್ಯ ಮತ್ತು ಬದುಕಿನ ವಾಸ್ತವ. ‘ನಾನೂ ಕವಿಯಾಗಬೇಕು’ ಕವಿಯಾಗುವ ನಾನು ಮೊದಲು ಕಿವಿಯಾಗಬೇಕು ಮತ್ತು ಸಾಕಷ್ಟು ಓದಿಕೊಳ್ಳಬೇಕು.ಸಾಗರದಷ್ಟು ಓದಿದರೆ ಸಾಸಿವೆಯಷ್ಷು ಜ್ಞಾನ ವೃದ್ಧಿಗೆ ಸಾಧ್ಯ ಮತ್ತು ಆ ಮೂಲಕ ಭಾಷೆಯ ಹಿಡಿತ ಸಿದ್ಧಿಸುತ್ತದೆ ಎಂಬ ಇವರ ಅಭಿಪ್ರಾಯ ಬರೆಹಗಾರರೊಳಗೆ ಜಾಗ್ರತೆ ಮೂಡಿಸುವುದರ ಜೊತೆಗೆ ಮೆಲ್ಲಗೆ ತಿವಿದಂತೆ ಭಾಸವಾಗುತ್ತದೆ.   ಚಪ್ಪಾಳೆ ಗಿಟ್ಟಿಸಿಕೊಳ್ಳುವವರಿಗೆ ಇತರರಿಗೂ ಚಪ್ಪಾಳೆ ಕೊಡುವ, ಪ್ರಶಂಸಿಸುವ ಗುಣ ಇರಬೇಕು ‌ಎನ್ನುವ ಇವರು ಹತ್ತಾರು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕೆಲವೊಂದು ಉದಾಹರಣೆಗಳನ್ನು ಕೊಡುವುದರ ಮೂಲಕ ಈ ಲೇಖನದಲ್ಲಿ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.‘ ಪುಸ್ತಕಂ ಹಸ್ತ ಭೂಷಣಂ’. ಎಂಬ ಲೇಖನದಲ್ಲಿ ಒಳ್ಳೆಯ ಪುಸ್ತಕಗಳೆಂದರೆ “ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇದಾವಿಗಳ ಜೀವನ ಸರ್ವಸ್ವ ” ಆಂಗ್ಲಕವಿ ಮಿಲ್ಟನ್ ರವರ  ಅದ್ಭುತ ಮಾತನ್ನು ಉಲ್ಲೇಖಿಸುತ್ತಾ ಪುಸ್ತಕದ ಮಹತ್ವವನ್ನು ವೇದ್ಯವಾಗಿಸಿದ್ದಾರೆ.   ತುಟಿಯಂಚಿನಲ್ಲಿ ನಗು ತರಿಸಿದ ಲೇಖನ ‘ಗೋಳಿನ ದನಿಗೆ ಕಿವಿಗಳಿಲ್ಲ’. ಈ ಲೇಖನವನ್ನು ಓದುತ್ತಾ ಹೋದಂತೆ ಧನಾತ್ಮಕ ಚಿಂತನೆ ಮತ್ತು ಮಾತು ಕೊಡುವ ಆತ್ಮ ವಿಶ್ವಾಸ  ಇವುಗಳ ಕೆಲವು ನಿದರ್ಶನಗಳೊಂದಿಗೆ  ಹೇಗೆ ಬದುಕನ್ನು ಸುಖದ ಸುಗ್ಗಿಯಾಗಿಸಬಹುದು ಎಂಬುದರ ಬಗ್ಗೆ  ಇವರ ಅನಿಸಿಕೆ ನಿಜಕ್ಕೂ ವಾಸ್ತವ  ಅನಿಸಿತು.’ ನೋವಲ್ಲೂ ನಲಿಯುವವನ ಸುತ್ತಲೇ ಈ ಜಗವೆಲ್ಲಾ ‘ ಈ ಮಾತು ನಮ್ಮ ಆಸುಪಾಸಿನ ಸತ್ಯ ಎನಿಸುವಷ್ಟು ನಮ್ಮನ್ನು ಸೆಳೆಯುತ್ತಾ ಹೋಗುತ್ತದೆ ಮತ್ತು ಅಗತ್ಯ ಬರೆಹ ಕೂಡಾ.   “ಹೇಗೆ‌ ಬೇಕಾದರೂ ಅರ್ಥೈಸಿಕೊಳ್ಳಿ” ಎಂಬ ಲೇಖನದಲ್ಲಿ ನಾವು ದಿನ ನಿತ್ಯ ಮಾಡುವ ವ್ಯಾಕರಣ ದೋಷಗಳು ವ್ಯಾಕರಣದ ಮಹತ್ವ ಹಾಗೂ ಗಮನಿಸಬೇಕಾದ ಅಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.ಇಲ್ಲಿ ಇವರ ಭಾಷಾ ಪ್ರೇಮ ಧಾರಾಕಾರವಾಗಿ ಅನಾವರಣವಾಗಿದೆ. ಹಾಗೆ ಮುಂದುವರೆಯುತ್ತಾ ಹಬ್ಬಗಳು ಹೇಗೆ ನಮಗೆ ಉತ್ಸಾಹಕಾರಿ ಹಾಗೂ ಬದುಕಿಗೆ ಜೀವಂತಿಕೆ ತುಂಬುವ ಸೆಲೆ  ಎಂಬುದನ್ನು ತಮ್ಮ ಅನುಭವ ಮೂಸೆಯಲ್ಲಿ ‘ಜೀವನೋತ್ಸಾಹ ತುಂಬುವ ಹಬ್ಬಗಳು ‘ ಎಂಬ ಲೇಖನದ ಮೂಲಕ ಅನುಭಾವವಾಗಿಸಿದ್ದಾರೆ.        ಪುಸ್ತಕ ಸಂಸ್ಕೃತಿಯಿಂದ ಹೇಗೆ ಪ್ರಬುದ್ಧರಾಗಬಹುದು ಎಂದು ಹೇಳುತ್ತಾ ಹವ್ಯಾಸಗಳಲ್ಲಿ ಅತ್ತ್ಯುತ್ತಮ ಹವ್ಯಾಸ ಓದುಗಾರಿಕೆ ಎನ್ನುತ್ತಾರೆ. ಹೌದು! ಎಳೆವೆಯಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡರೆ ಭಾಷಾ ಗಟ್ಟಿತನ ,ಮಾತನಾಡುವ ಧೈರ್ಯ ಆವರಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬುದನ್ನು ಎಳೆವೆಯಿಂದಲೇ ವಿದ್ಯಾರ್ಥಿಗಳಲ್ಲಿ ಶಿಕ್ಷಕರಾಗಿ, ಹಿರಿಯರಾಗಿ ತುಂಬಬೇಕಿದೆ ಎನ್ನುತ್ತಾರೆ. “ಹಾಸ್ಯ ಕವಿ ಬೀಚಿ ಸವ್ಯಸಾಚಿ ”  ಎಂಬ ಚೆಂದದ ಶೀರ್ಷಿಕೆಯ ಲೇಖನದಲ್ಲಿ “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೆ ಸ್ವಾಗತ” ಹಾಸ್ಯ ಬ್ರಹ್ಮ ಬೀಚಿಯವರ ಆತ್ಮಕಥನದಿಂದ ಆಯ್ದ ಸಾಲುಗಳನ್ನು ಬಳಸಿ ಬೀಚಿಯವರ ಸಾಹಿತ್ಯ ಸಾಧನೆಯನ್ನು ಸ್ಮರಿಸಿರುವುದು ಇವರ  ಓದಿನ ವಿಸ್ತಾರ ಮತ್ತು ಅಧ್ಯಯನವನ್ನು ಎತ್ತಿ ಹಿಡಿಯುತ್ತದೆ. ಈ ಕೃತಿಯಲ್ಲಿ ಶಿಕ್ಷಣವಿದೆ. ಸಂಸ್ಕೃತಿ, ಶಿಸ್ತು, ಸಂಸ್ಕಾರ, ಸಂಪ್ರದಾಯ ಎಲ್ಲವನ್ನು ಒಳಗೊಂಡ ಲೇಖನಗಳಿವೆ.ಮನಃಶಾಸ್ತ್ರಜ್ಞರ ಅಭಿಪ್ರಾಯಗಳು, ಶಿಕ್ಷಣ ತಜ್ಞರ ಸಲಹೆಗಳು, ಕವಿವಾಣಿಗಳು, ವಿಜ್ಞಾನಿಗಳ ಜ್ಞಾನ, ಲೋಕ ಜ್ಞಾನ ಇತ್ಯಾದಿ ವಿಚಾರಧಾರೆಗಳನ್ನು ಈ ಕೃತಿ ಕಟ್ಟಿಕೊಡುತ್ತದೆ.ಬಸವಣ್ಣನೆಂಬ ಸಾಧನೆಯ ಪ್ರತಿರೂಪದಿಂದ ಹಿಡಿದು ವೈವಿಧ್ಯಮಯ ವಸ್ತುಗಳನ್ನು  ಇಲ್ಲಿನ ಲೇಖನಗಳು ಹೊಂದಿವೆ.  ಶ್ರೀ ಸುಬ್ರಾಯ ಸಂಪಾಜೆಯವರು ಮುನ್ನುಡಿಯ ಮೂಲಕ  “ಈ ಕೃತಿ  ಒಂದು ಶಿಕ್ಷಣ ಸಂಹಿತೆಯೇ ಸರಿ ” ಎಂದು ಉಲ್ಲೇಖಿಸಿರುವುದು ಕೃತಿಯ ತೂಕವನ್ನು ಹೆಚ್ಚಿಸಿದೆ..  ಖ್ಯಾತ ಬರೆಹಗಾರ್ತಿ ಸ್ಮಿತಾ ಅಮೃತರಾಜ್ ಬೆನ್ನುಡಿಯ ಮೂಲಕ  ಓದಿದ ನಂತರ ಬಹಳ ಕಾಡುವ ಬರೆಹ  ಎಂದು ಹೇಳಿರುವುದು  ಇವರೊಬ್ಬರು  ಸಮರ್ಥ ಬರೆಹಗಾರ್ತಿ ಎಂಬುದಕ್ಕೆ  ಸಾಕ್ಷಿ ಎನ್ನುವಂತಿದೆ .  ಜಯಲಕ್ಷ್ಮಿ.ಕೆ. ಇವರ “ನಡೆದಷ್ಟೂ ದಾರಿ” ಕೃತಿಯು  ಸುಂದರ ಮುಖಪುಟ ಹೊಂದಿದ್ದು ಇದರಲ್ಲಿ ಸುಮಾರು 43 ಲೇಖನಗಳಿದ್ದು,184 ಪುಟಗಳಿರುವ ಈ ಕೃತಿಯ ಬೆಲೆ ರೂಪಾಯಿ 230 ಆಗಿರುತ್ತದೆ.    ಈ ಪುಸ್ತಕವೂ  ಪ್ರಶಸ್ತಿ  , ಗೌರವಕ್ಕೆ ಅರ್ಹವಾಗಿದ್ದು ಇವರು ಜಿಲ್ಲೆಯ ಭರವಸೆಯ ಲೇಖಕಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜಯಲಕ್ಷ್ಮಿಯರಿಗೆ ಶುಭಹಾರೈಕೆಗಳು.   ಸುನೀತ ಕುಶಾಲನಗರ

ಜಯಲಕ್ಷ್ಮಿ ಕೆ, ಮಡಿಕೇರಿ ಅವರ ಕೃತಿ “ನಡೆದಷ್ಟೂ ದಾರಿ” ಅವಲೋಕನ ಸುನೀತ ಕುಶಾಲನಗರ ಅವರಿಂದ Read Post »

ಪುಸ್ತಕ ಸಂಗಾತಿ

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ

ಪುರಸ್ಕಾರ ಸಂಗಾತಿ “ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ” ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ . ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ. 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು. ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎ.ಎಸ್.ಮಕಾನದಾರ್

“ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ Read Post »

ಪುಸ್ತಕ ಸಂಗಾತಿ

ಪ್ರೊ.ಶಕುಂತಲಾ ಸಿಂಧೂರ ಗದಗ ಅವರ “ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಕೃತಿ ಅವಲೋಕನ ಡಾ.ನಿಷ್ಟಿ ರುದ್ರಪ್ಪ

ಪುಸ್ತಕ ಸಂಗಾತಿ ಡಾ.ನಿಷ್ಟಿ ರುದ್ರಪ್ಪ ಪ್ರೊ.ಶಕುಂತಲಾ ಸಿಂಧೂರ ಗದಗ “ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಗದಗ ಎಂದರೆ ಮೈ ರೋಮಾಂಚನವಾಗುತ್ತದೆ. ಪಂಪನ ತಾಯಿಯ ತವರು ಮನೆ ಅಣ್ಣಿಗೆರೆ, ಅತ್ತಿಮಬ್ಬೆಯ ಕಾರ್ಯಕ್ಷೇತ್ರ ಲಕ್ಕುಂಡಿ, ಕರ್ನಾಟಕ ಭಾರತ ಕಥಾಮಂಜರಿಯ ರೂಪಕ ಚಕ್ರವರ್ತಿ ಗದುಗಿನ ನಾರಣಪ್ಪ, ಭಾವೈಕ್ಯತೆಯ ತಾವು ನಿಧಿ, ಲಿಂ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಶಿರಹಟ್ಟಿಯ ಫಕೀರಶ್ವರ ಮಠ, ಮುಳಗುಂದದ ಬಾಲ ಲೀಲಾ ಮಹಾಂತ ಶಿವಯೋಗಿಗಳು, ಅಂದ ಅನಾಥರಿಗೆ ಬಾಳಿಗೆ ಬೆಳಕಾದ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಮತ್ತು ಪಂಡಿತ ಪುಟ್ಟರಾಜ ಗವಾಯಿಗಳು, ಅಂಕಲಿಪಿಯಿಂದ ಹಿಡಿದು ಬೃಹತ್ ಗ್ರಂಥಗಳವರೆಗೆ ಅಕ್ಷರ ಸಂಸ್ಕೃತಿಯ ಮುದ್ರಣ ಕಾಶಿ ಎಂದೆ ಖ್ಯಾತಿ ಗಳಿಸಿರುವ ಗದಗ ಜಿಲ್ಲೆ, ಸಹಕಾರ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದೆ. ಜಗದ್ಗುರು ತೋಂಟದಾರ್ಯ ಕಾಲೇಜಿನ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಪ್ರೊ. ಶಕುಂತಲಾ ಸಿಂಧೂರ ಅವರು “ಗದಗ  ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಎನ್ನುವ ಸಂಶೋಧನಾತ್ಮಕ ಕೃತಿಯನ್ನು ಡಾ. ಎಂ ಎಂ ಕಲಬುರ್ಗಿ ಅಧ್ಯಯನ ಸಂಸ್ಥೆ ಜಗದ್ಗುರು ತೋಂಟದಾರ್ಯ ಮಠ ಗದಗ ವತಿಯಿಂದ ಪ್ರಕಟಿಸಿದ್ದಾರೆ. ಗದಗ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸವನ್ನು  ಸುಲಭವಾಗಿ ಅರ್ಥವಾಗುವಂತೆ ಪ್ರೊ. ಶಕುಂತಲಾ ಅವರು ಈ ಕೃತಿಯನ್ನು ರಚಿಸಿದ್ದಾರೆ.ಈ ಕೃತಿಯಲ್ಲಿ ಒಟ್ಟು ಆರು ಅಧ್ಯಾಯಗಳಿದ್ದು ಪ್ರತಿಯೊಂದು ಅಧ್ಯಾಯದಲ್ಲಿಯೂ ಗದಗ ಚಾರಿತ್ರಿಕ ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅರ್ಥಪೂರ್ಣವಾಗಿ ವಿವೇಚಿಸಲಾಗಿದೆ. ಗದಗ ಜಿಲ್ಲೆಯ ಶಾಸನಗಳು ವಾಸ್ತುಶಿಲ್ಪ ಕಲೆ ಮತ್ತು ಧಾರ್ಮಿಕ ಪರಂಪರೆ, ಕೋಟೆ ಕೊತ್ತಲಗಳು, ಕೆರೆಗಳು ಮತ್ತು ಜನಸಾಮಾನ್ಯರ ಕೃಷಿ ಜೀವನದಿಂದ ಹಿಡಿದು ಕವಿಗಳು,‌ಕಲಾವಿದರು,  ಹಾಗೂ ಗದುಗಿನ ತೋಂಟದಾರ್ಯ ಮಠದ ಭಾವೈಕ್ಯತೆಯ ಪರಂಪರೆಯನ್ನು, ಜಿಲ್ಲೆಯ ಎಲ್ಲ ತಾಲೂಕುಗಳ ವಿಶೇಷತೆ ಮತ್ತು ಮಹತ್ವವನ್ನು, ದೇವಾಲಯಗಳು ಬಸದಿಗಳು ಹಾಗೂ ಭಾವೈಕ್ಯತೆಯ ನೆಲೆಗಳನ್ನು ಗುರುತಿಸಲಾಗಿದೆ. ಗದಗ  ಕೇವಲ ಊರಲ್ಲ ಅದು ಕನ್ನಡ ನಾಡಿನ ಸಾಂಸ್ಕೃತಿಕ ಜೀವ ಚೈತನ್ಯದ ಶಕ್ತಿ ಪೀಠ ಇಲ್ಲಿನ ಜನ ಜೀವನ ಇಡೀ ನಾಡಿಗೆ ಮಾದರಿಯಾಗಿದೆ. ಈ ನೆಲವನ್ನು ಆಳಿದ ರಾಜಮನೆತನಗಳು,  ರಂಗಭೂಮಿ, ಸಂಗೀತ, ಶಿಲ್ಪಕಲಾ ವೈಭವ,  ಚಿತ್ರಕಲೆ, ಪತ್ರಿಕೋದ್ಯಮ ಮತ್ತು ಮುದ್ರಣ ಸಂಸ್ಕೃತಿಯ ತವರೂರಾಗಿರುವ ಗದಗ ನಾಡಿಗೆ ಉತ್ತಮವಾದ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದೆ ಎಂದು ಕೃತಿಕಾರರು ಗದುಗಿನ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿಪಾದಿಸಿದ್ದಾರೆ. ಗದಗ ಜಿಲ್ಲೆಯ ಪ್ರಾಕೃತಿಕ ಸಂಪತ್ತನ್ನು, ಆ ನೆಲದಲ್ಲಿನ ಕಪ್ಪತ್ತ ಗುಡ್ಡದ ಅರಣ್ಯ ಅಲ್ಲಿ ದೊರಕುವ ಔಷಧೀಯ ಸಸ್ಯಗಳ ವಿವರಣೆ, ಚಿನ್ನದ ನಿಕ್ಷೇಪದ ಬಗ್ಗೆ ಮತ್ತು ಆಧುನಿಕವಾಗಿ ಪವನ ಯಂತ್ರದ ಮೂಲಕ ವಿದ್ಯುತ್ತಿನ ಉತ್ಪಾದನೆ ಇವೆಲ್ಲವುಗಳ ಮಾಹಿತಿಯು ಈ ಕೃತಿಯಲ್ಲಿ ಅಡಕವಾಗಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಏಕೀಕರಣ ಚಳುವಳಿಯಲ್ಲಿ ಗದಗ ಜಿಲ್ಲೆ ಮಹತ್ವದ ಪಾತ್ರವಹಿಸಿದೆ.‌ ಅದರ ವಿವರಗಳನ್ನು ಸಹ ಕೊಡಲಾಗಿದೆ. ಪ್ರೊ. ಶಕುಂತಲಾ ಸಿಂಧೂರ ಅವರಈ ಸಂಶೋಧನಾತ್ಮಕ ಕೃತಿಯು ಮುಂದಿನ ಅಧ್ಯಯನಕಾರರಿಗೆ ಆಕರ ಗ್ರಂಥವಾಗಲಿದೆ. ಇದೊಂದು ಸಂಗ್ರಹ ಯೋಗ್ಯ ಕೃತಿಯಾಗಿದೆ. ನಾಡಿನ ಜನತೆ ಈ ಕೃತಿಯನ್ನು ಸ್ವೀಕರಿಸಿ ಸಂಶೋಧಕಿಯನ್ನು ಪ್ರೋತ್ಸಾಹಿಸಬೇಕು. ಡಾ. ನಿಷ್ಠಿ ರುದ್ರಪ್ಪ,  ಅಧ್ಯಕ್ಷರು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಅಖಂಡ ಬಳ್ಳಾರಿ ಜಿಲ್ಲೆ.

ಪ್ರೊ.ಶಕುಂತಲಾ ಸಿಂಧೂರ ಗದಗ ಅವರ “ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು” ಕೃತಿ ಅವಲೋಕನ ಡಾ.ನಿಷ್ಟಿ ರುದ್ರಪ್ಪ Read Post »

ಪುಸ್ತಕ ಸಂಗಾತಿ

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ

ಪುಸ್ತಕ ಸಂಗಾತಿ ಡಾ. ಸಂಗಮೇಶ ಎಸ್. ಗಣಿ ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಮೌನ ಧ್ಯಾನಗಳ ಫಲ ಮೌನೇಶ್ ರ ‘ಬಿಸಿಲೇ ಬೆಳದಿಂಗಳು’        ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ ‘ಬಿಸಿಲೇ ಬೆಳದಿಂಗಳು’ ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ ಬಾಳಿನಲ್ಲಿ ಬೆಳದಿಂಗಳಾಗುವ ಹಂಬಲವನ್ನು ಪ್ರಕಟಿಸುತ್ತದೆ.       ಬಿಸಿಲೇ ಬೆಳದಿಂಗಳಲ್ಲಿ ಒಟ್ಟು 36 ಕವಿತೆಗಳಿವೆ. ಇಲ್ಲಿ ಪ್ರೀತಿ, ಪ್ರೇಮ, ವಿರಹ, ಸ್ನೇಹ, ಅಪ್ಪ-ಅಮ್ಮ ಮಗಳು,ಮನುಷ್ಯ ಸಂಬಂಧಗಳು, ಮನುಷ್ಯನ ಮುಖವಾಡ, ಮನಸ್ಸಿನ ಸಂಕಟ, ತಲ್ಲಣ, ತಳಮಳ, ಕನಸು ಕನವರಿಕೆ, ಪರಿಸರ,  ನಾಡು ನುಡಿ ಅಭಿಮಾನ, ಯುದ್ಧ, ಬುದ್ಧ,  ಅಂಬೇಡ್ಕರ್, ಸ್ತ್ರೀ ಸಂವೇದನೆ, ಮನಸ್ಸಿನ ವೇದನೆ, ಸಂಕಟ, ಸಂಭ್ರಮ, ಸಂಘರ್ಷ, ಬದುಕು, ಬೆಳಕು ಎಲ್ಲವೂ ಇವರ ಕಾವ್ಯಕ್ಕೆ ವಸ್ತುಗಳಾಗಿ ಒದಗಿ ಬಂದಿವೆ.         ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮುಖ್ಯ ಅವಸ್ಥೆಗಳಲ್ಲಿ ತಾರುಣ್ಯವೂ ಒಂದು ಹೊಸ ಹುರುಪು ಮತ್ತು ಕನಸು, ಕನವರಿಕೆ, ಉನ್ಮಾದ ಉದ್ವೇಗಗಳೆಲ್ಲವೂ ಇರುವ ಈ ಹಂತದಲ್ಲಿ ಜಾಗರೂಕತೆ ಅಗತ್ಯ ಎಂಬುದನ್ನು ಅರಿತ ಕವಿತಾರುಣ್ಯಸಪ್ತಸಾಗರಗಳ ದಾಟಿಮುಗಿಲ ನಕ್ಷತ್ರಗಳ ತರುವವ್ಯರ್ಥ ಕನಸಲ್ಲಅವಕಾಶ ಸಿಕ್ಕರೆಆಕಾಶಕ್ಕೆ ಏಣಿ ಹಾಕುವಸಾರ್ಥಕ ಹೊಂಗನಸು  (ತಾರುಣ್ಯ) ಎಂದು ಹೇಳುತ್ತಲೇ ‘ಅದು ದೇಹ ಸಂಬಂಧಿಯಲ್ಲ ಆತ್ಮ ಮನಸುಗಳ ಬಂಧಿ, ಅಸಾಧ್ಯವ ಸಾಧ್ಯವಾಗಿಸುವ ಭಾವಾಂಬುಧಿ’ ಎನ್ನುತ್ತಾನೆ. ಅವಳಿಲ್ಲದೆ ಅವನಿಲ್ಲ. ಅವನಿಗೆ ಅವಳೇ ಎಲ್ಲ. ಅವಳೆಂದರೆ ಅವನ ಪಾಲಿಗೆ ಕವಿತೆ. ಕವಿತೆ ವ್ಯಾಖ್ಯಾನಕ್ಕೆ ಒಗ್ಗದ್ದು, ಹಾಗೆಯೇ ಅವಳೂ ಸಹ ಅರಿತಷ್ಟು ಆಳ, ಅರಿವಿಗೆ ನಿಲುಕದ ಅವಳು ನಿಗೂಢ. ಮೊದಲಲ್ಲಿ;   ಅವಳೆಂದರೆಎಂದೋ ಬರೆದು ಮುಚ್ಚಿಟ್ಟ ಅನಂತ ನೆನಪುಗಳು ತುಂಬಿದ್ದ ಆತ್ಮಕಥೆಯಂತೆಸನಿಹವಿದ್ದರೂ ಕೈಗೆಟುಕದ ಕೊನೆಯಾಗದ ಖುಷಿಯಂತೆ (ಅವಳೆಂದರೆ)     ಎನ್ನುವ ಕವಿಗೆ ಸನಿಹವಿದ್ದದ್ದೆಲ್ಲ ಸವಿಯಾದುದು, ಸಹ್ಯವಾದುದು. ಆತ್ಮಕಥೆಯಲ್ಲಿ ಎಲ್ಲ ವಿವರಗಳು ಆಪ್ತ, ನಿಚ್ಚಳ. ಅದೇ ರೀತಿಯಲ್ಲಿ ಆರಂಭದಲ್ಲಿ ಅವಳ ಸಾಮೀಪ್ಯ, ಸಖ್ಯ ಹಿತವಾದುದು. ಕ್ರಮೇಣ ಅವಳೆಂದರೆ ಬದುಕಿನ ಮರುಭೂಮಿಯ ಮರೀಚಿಕೆ, ಹಿಂಬಾಲಿಸುವ ನೆರಳು ಎಂಬಂತಾಗುತ್ತದೆ. ಕೊನೆಗೆ; ಅವಳೆಂದರೆಎಷ್ಟು ಬಾರಿ ಓದಿದರೂಅರಿವಿಗೆ ನಿಲುಕದಅರ್ಥವಾಗದ ಕವಿತೆಯಂತೆ (ಅದೇ)   ಎಂಬುದಾಗಿ ಶರಾ ಬರೆಯುವನು. ಆತ್ಮಕಥೆ ಮತ್ತು ಕಾವ್ಯ  ಪರಿಭಾಷೆಗಳಲ್ಲಿ ಪ್ರೇಮದ ಸ್ವರೂಪವನ್ನು ನಿರೂಪಿಸುವುದು ಇಲ್ಲಿ ವಿಶೇಷ. ಬದುಕಿನಲ್ಲಿ ಅವಳ ಇರುವಿಕೆ ಶ್ರಾವಣ ಮಾಸದಂತೆ ಸಂತಸ ಸಂಭ್ರಮವನ್ನು ಹೊತ್ತು ತರುತ್ತದೆ.   ಧನ್ಯನಾದೆ ಮಾನ್ಯನಾದೆ   ಗೆಳತಿ ನಿನ್ನ ಸನಿಹಕೆ    ಇಷ್ಟು ದಿನದ ವಿರಹ ಬೇಗೆ    ಎಲ್ಲ ಮರೆತೆ ಇಂದಿಗೆ (ಮತ್ತೆ ಬಂತು ಶ್ರಾವಣ) ಎನ್ನುವ ಕವಿಗೆ ಅವಳ ಸಾಮೀಪ್ಯದ ಸುಖದೊಳಗೆ ವಿರಹದ ಬೇಗೆಯಲ್ಲ ಆರಿ ತಣ್ಣಗಾಗುತ್ತದೆ. ಅವಳಿಗಾಗಿ ಪಟ್ಟ ಪಾಡು, ವೇದನೆಗಳೆಲ್ಲ ಈಗ ಮಾಯವಾಗಿದೆ. ಹಿಂದಿನದನ್ನೆಲ್ಲ ಮತ್ತೆ ಮರು ನೆನಪಿಸಿಕೊಳ್ಳುವುದು ಬೇಡ ಎಂದು ತಿಳಿದು ;ಕಳೆದ ಕಾಲದ ಮಾತದೇಕೆ ಲೆಕ್ಕವಿಲ್ಲದ ವೇದನಎಲ್ಲ ಮರೆಸಿ ಚಿಗುರಿ ನಿಂತುಮತ್ತೆ ಬಂತು ಶ್ರಾವಣ (ಅದೇ) ಎಂಬುದಾಗಿ ಹೇಳುತ್ತಾ, ಕಳೆದ ಕಾಲದ ನೆನಪುಗಳ ಗೊಡವೆಗೆ ಹೋಗದೆ ನೋವು ನಲಿವುಗಳನ್ನು ಸಮವಾಗಿ ಸ್ವೀಕರಿಸುವ ಸಮತೋಲನ ಭಾವ ಮುಖ್ಯ ಎಂಬುದನ್ನು ಅರುಹುತ್ತಾನೆ.  ನೀನು ಒಲವಿನೂರಿನ ಸಿರಿಯ ತೋರಲುಕೈಹಿಡಿದು ಹೊರಟೆನಾನು ಹಿಂಬಾಲಿಸಿದೆ (ಒಲವಿನ ಹಾದಿ) ಎನ್ನುವ ಕವಿಗೆ ‘ನನ್ನ ಮೌನಕ್ಕೆ ಮಾತಾಗಿ, ಮಾತುಗಳಿಗೆ ದನಿಯಾಗಿ ಸುಂದರ ಹಾಡಾದ ಪರಿ’ ಅನನ್ಯ. ಪ್ರೇಮದ ದಾರಿಯಲ್ಲಿ ನಡೆಯುವುದೇ ಸಿಹಿಯಾದ ಅನುಭೂತಿ. ‘ಒಲವು ನಡೆಸಿದ ಈ ಹಾದಿ ಖಂಡಿತ ಕಹಿಯಲ್ಲ ಹಿತವಾಗಿ ಕಾಡುವ ಇಂಪಾದ ಹಾಡು’ ಎನಿಸುತ್ತದೆ. ಹೀಗೆ ಪ್ರೇಮದ ಪರಿಯನ್ನು ಪರಿಚಯಿಸುವ ಕವಿಗೆ ಅದೊಂದು ಸುಂದರ ಅನುಭೂತಿ. ಕಾವ್ಯದ ಸಾಮಾಜಿಕ ಪ್ರಜ್ಞೆ   ಸಾಮಾಜಿಕ ಸನ್ನಿವೇಶಗಳೊಂದಿಗೆ ಸಂವಹಿಸದ ಸಾಹಿತ್ಯ ಸಾಯುತ್ತದೆ. ಈ ಹಿನ್ನೆಲೆಯಲ್ಲಿ ಕವಿ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾನೆ. ದೇಶಕ್ಕಾಗಿ ದುಡಿಯುವ ಪ್ರಾಮಾಣಿಕ ಸೈನಿಕರ ಅಗತ್ಯತೆಯನ್ನು  ಪ್ರತಿಪಾದಿಸುವುದರ ಜೊತೆಗೆ ‘ಕದನ ಬಯಸುವ ಕೇಡಿಗಳಲ್ಲ ನಾವು ದೇಶದ ಏಳ್ಗೆಗೆ ನಿಷ್ಠೆಯಿಂದ ದುಡಿವ ಶ್ರಮ ಜೀವಿಗಳು’ (ನಾವು) ಎನ್ನುವುದು ವಿಶೇಷ. ಶಾಂತಿ ಕದಡುವ ಕಿಡಿಗೇಡಿಗಳೆಲ್ಲ ನಾವುಬಂಜರೆದೆಗಳ ಮೇಲೆಶಾಂತಿಯ ಹೂ ಗಿಡಗಳ ಬೆಳೆಸುವ ಕುಶಾಗ್ರಮತಿಗಳುಜಗಕೆ ಶಾಂತಿ ಸಾರುವ ಭಾರತೀಯರು ನಾವು (ಅದೇ)     ದೇಶಭಕ್ತಿ,  ಅಭಿಮಾನ, ರಾಷ್ಟ್ರಪ್ರೇಮ ಎನ್ನುವುದು ಬರೀ ಮಾತು ಭಾಷಣಗಳಿಗೆ ಸೀಮಿತವಾಗದೆ ಅದು ಬದುಕಿನ ಭಾಗವಾಗಬೇಕೆಂಬ ಅದಮ್ಯ ಬಯಕೆ ಕವಿಯದು. ಸೈನಿಕರ ತ್ಯಾಗ, ಬಲಿದಾನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಬದಲಾಗಿ ಸಾರ್ಥಕ ಭಾವವಾಗಿ ಜೀವ ಚೈತನ್ಯವಾಗಿ ಮನಸ್ಸಿನಾಳದಲ್ಲಿ ಜೀವಂತವಾಗಿರುತ್ತವೆ . ಹೀಗಾಗಿ ಕವಿವ್ಯರ್ಥವಾಗದು ಬಲಿದಾನ ಸಾರ್ಥಕವು ಪ್ರಾಣಾರ್ಪಣ (ಅಮರ ನಿಮ್ಮ ಜೀವನ)  ಎಂದು ಹೆಮ್ಮೆ,  ಅಭಿಮಾನದಿಂದ ಹೇಳುತ್ತಾನೆ. ಬಂಜರಾದ ಎದೆಗಳಲ್ಲಿ ಶಾಂತಿಯ ಹೂಗಳನ್ನು ಅರಳಿಸುವ ಮಹತ್ವಾಕಾಂಕ್ಷೆ ಪ್ರಕಟಿಸುವ ಕವಿತೆ ಹೃದಯದಲ್ಲಿ ವಿಕೃತಿ ವಿಕಾರ ವಿಲಕ್ಷಣಗಳಿಗೆ ಜಾಗವಿಲ್ಲ. ಯುದ್ಧದ ಭೀತಿಯಲ್ಲಿ ಕರಾಳ ಕತ್ತಲೆಯಲ್ಲಿ ಅಮಾಯಕರ ನೋವು, ನರಳಾಟಕ್ಕೆ ಕೊನೆ ಇರುವುದಿಲ್ಲ. ಇಂತಹ ವಿಷಮ ಗಳಿಗೆಯಲ್ಲಿಯೇ ಕವಿ ಮಾನವೀಯತೆಗಾಗಿ ಹಂಬಲಿಸುವುದು;  ಅಮಾನುಷ ಹಿಂಸೆಗೆ ಸಿಕ್ಕ ಅಮಾಯಕ ಗಾಯಾಳುಗಳ ಕಂಡು ಮರುಗಿದ ಮಮತಾಮಯಿ….ಜೀವ ಕಾರುಣ್ಯದ ಮಡುವು.. (ಆರದ ದೀಪ) ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ನೆನಪಿಸುವ ಕವಿ ಈ ಕರಾಳ ಕತ್ತಲಮಯ ಜಗತ್ತಿಗೆ ಆರದ ದೀಪವಾಗಿ ಒದಗಿ ಬರಬೇಕು ಎಂದು ಆಶಿಸುತ್ತಾನೆ.    ಜಾತಿ ಮತ ಪಂಗಡ ಇವೆಲ್ಲವೂ ಈ ಸಮಾಜಕ್ಕೆ ಅಂಟಿದ ರೋಗಗಳು. ಇವು ಎಂದಿಗೂ ಮನುಷ್ಯ ಬದುಕನ್ನು ನುಂಗಿ ನೀರು ಕುಡಿಯುತ್ತಿವೆ.   ಆಪೋಷಣೆ ಮಾಡುತ್ತಿವೆ. ಇಡೀ ವಿಶ್ವವೇಒಂದು ಗೂಡಾದರೆ ಎಷ್ಟು ಚೆಂದ! ಕೂಡಿ ಬದುಕಿದರೆ ಅದರೊಳಗೆ ಜಗದ ಜನರಲ್ಲ ಭೇದ ವಿರದ ಹಕ್ಕಿಗಳ ಹಾಗೆ ಎಷ್ಟು ಚಂದ! (ಎಷ್ಟು ಚಂದ!) ಎಂಬುದಾಗಿ ಸೌಹಾರ್ದ, ಸಹಬಾಳ್ವೆಗೆ ಹಂಬಲಿಸುವ ಕವಿ ಸಮಾಜ, ದೇಶ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುವುದು ಹೀಗೆ;  ಶೋಷಣೆ ವರ್ಣದ್ವೇಷಗಳ ಪೊರೆ ಕಳಚಿಯುದ್ಧ, ಭಯೋತ್ಪಾದನೆಗಳ ಭಯ ಬಿಡಿಸಿಧರ್ಮಾoಧತೆ, ಕೋಮುದಳ್ಳುರಿಯ ದಹಿಸಿ ಅಸಮಾನತೆಯ ತೆರೆಸರಿಸಿ ಸಮಾನತೆಯ ರೆಕ್ಕೆಗಳ ಚಾಚಿ ಸ್ವೇಚ್ಛೆಯಲಿ ಹಾರಿದರೆ ಸ್ವಚ್ಛoದ ಮುಗಿಲೆತ್ತರ ನಾವೆಲ್ಲ (ಅದೇ)   ಎನ್ನುವುದು ವಿವೇಚನಾರ್ಹ. ಸಮಾಜದ ಅನೇಕ ಸಮಸ್ಯೆಗಳಿಗೆ ಬುದ್ಧ, ಬಸವ, ಪಂಪ, ಗಾಂಧೀಜಿ, ಅಂಬೇಡ್ಕರ್, ಮದ್ದಾಗಿ ಒದಗುತ್ತಾರೆ. ಈ ಬಗ್ಗೆ ಕವಿ ದಮನಿತರಿಗೆ, ದಲಿತರಿಗೆ ದನಿಯ ನೀಡಿದ ದ್ರಷ್ಟಾರಜಾತಿ ಗೋಡೆಯ ಕುಟ್ಟಿ ಕೆಡವಲು ಕರೆಯಕೊಟ್ಟ ದಿಟ್ಟ ಧೀರ  ‘ತುಳಿಯುವವರ ನೆತ್ತಿಯ ಮೇಲೆ ಕಾಲಿಟ್ಟು ಬೆಳೆದೆ ಬಲು ಎತ್ತರ’ (ದಮನಿತರ ನೇಸರ) ಎಂಬುದಾಗಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವನು. ಅಲ್ಲದೆ ಅವರನ್ನು ‘ನೊಂದು ಬೆಂದವರೆದೆಗೆ ಭರವಸೆಯ ಬಿತ್ತಿದ ಮಾನವತೆಯ ಆಗರ..’ ಎಂಬುದಾಗಿ ಬಣ್ಣಿಸುವನು. ದೇವರನ್ನೇ ದೂರುವ ಧೈರ್ಯದಿಂದ ಪ್ರಶ್ನೆ ಮಾಡುವ ಕವಿ ಅವತರಿಸಿ ಬರುವುದಾದರೆ, ಚಳಿಗಾಳಿಗೆ ಮೈಯೊಡ್ಡಿ ದುಡಿಯುವ ಬಡವರ ಗೋಳು ನೋಡಲು ಬಾ ಎಂದು (ಅವತರಿಸಿ ಬಾ) ಕರೆಯುವುದು ಕವಿಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ. ಗಾಂಧೀಜಿ ಅಪಮೌಲ್ಯಕ್ಕೆ ಒಳಗಾಗುತ್ತಿರುವ ಈ ಹೊತ್ತಿನಲ್ಲಿ ಕವಿ ಪ್ರಿಯ ಗಾಂಧಿ!ನೀನು ಹುಟ್ಟಿದ ದಿನ ಮಾತ್ರ ನೆನೆಯುತ್ತೇವೆ ನಿನ್ನ, ತತ್ವಸಾರವನನುಪತ್ರಿಕೆಯ ಲೇಖನಗಳಲಿ ವೇದಿಕೆಯ ಭಾಷಣಗಳಲಿ.. (ಪ್ರಿಯ ಗಾಂಧಿ) ತತ್ವಾನುಷ್ಠಾನದ ಅಗತ್ಯತೆಯನ್ನು ಮನಗಾಣಿಸುತ್ತಾರೆ. ಧರ್ಮ ಒಂದು ಬಗೆಯ ಅಫೀಮು. ಅದು ಎಲ್ಲರನ್ನೂ ಮಂಪರು ಮಾಡುತ್ತಿದೆ. ಧರ್ಮ ಮಾನವ ಒಳಿತಿಗಿರಬೇಕೆ ಹೊರತು ಕೇಡಿಗಲ್ಲ. ನಮಗೆ ಎಂಥ ಮನುಷ್ಯರ ಅಗತ್ಯವಿದೆ ಎಂಬುದನ್ನುಧರ್ಮದ ಅಫೀಮನ್ನು ತಲೆಗೇರಿಸಿಕೊಡುದ್ವೇಷದ ಕಿಡಿ ಉಗುಳುವವ್ಯಗ್ರ ಮನುಷ್ಯರಲ್ಲ ನಮಗೆ ಬೇಕಿರುವುದು…. (ನಮಗೆ ಬೇಕಿರುವುದು) ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನುಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬುದ್ಧನಂಥ ಕರುಣಾಮಯಿಗಳ ಅವಶ್ಯಕತೆ ಇದೆ. ಎಂಬುದನ್ನು ಸಾರಿದ್ದಾನೆ. ಸಾಮರಸ್ಯದ ಬಾಳಿಗೆ ಸಹನೆ, ಸೌಹಾರ್ದತೆ ಅತ್ಯಗತ್ಯ.  ಸಹನೆ, ಸೌಹಾರ್ದತೆಗಳಿಲ್ಲದ ಬರಡು ಹೃದಯದೊಳಗೆ ಹರಿದಾಡಿಹಸಿರು ಚಿಗುರಿ ಜೀವ ತುಂಬಿ ಸಮೃದ್ಧವಾಗಿ ತೊನೆಯಲು ಮನಸ್ಸು ನದಿಯಾಗಬೇಕು (ಮನಸ್ಸು ನದಿಯಾಗಬೇಕು) ತನ್ನೆಲ್ಲಾ ಮಿತಿಗಳನ್ನು ಮೀರಿಕೊಳ್ಳಲು ಮನುಷ್ಯ ನದಿಯಾಗಬೇಕು ಎಂದು ಆಶಿಸುವುದು ಬಹಳ ದೊಡ್ಡ ಮೌಲ್ಯ.  ಕಾವ್ಯದಲ್ಲಿ ಜೀವನ ಜಿಜ್ಞಾಸೆ      ಈ ಜೀವನವೇ ಸೋಜಿಗ ಅರ್ಥಮಾಡಿಕೊಳ್ಳಲು ಹೋದಷ್ಟು ನಿಗೂಢ. ಆದ್ದರಿಂದ ಕವಿಗೂ ಈ ಜಿಜ್ಞಾಸೆ ತೀವ್ರವಾಗಿ ಕಾಡಿದೆ.ಓ ಬದುಕೇ!ಎಷ್ಟೊಂದು ವಿಸ್ಮಯ ನಿನ್ನೊಡಲು ಆಳ ವಿಸ್ತಾರಗಳರಿಯದ ಕಡಲು! (ಓ ಬದುಕೇ! ) ಅನೇಕ ದಾರ್ಶನಿಕರು, ಸಾಧು ಸಂತರು, ಶರಣರು ಎಲ್ಲರೂ ಈ ಬದುಕಿನ ಬಗೆಯನ್ನು ಬೆದಕಿದವರೇ. ಆದರೆ ಅರ್ಥ ಮಾತ್ರ ಸಿಕ್ಕಿಲ್ಲ. ಈ ಬದುಕೇ ಅಚ್ಚರಿಯ ಆಗರ. ಮನುಷ್ಯ ಮುಖವಾಡಗಳನ್ನೇ ಹಾಕಿಕೊಂಡಿರುವುದರ  ಕುರಿತು ಕಳವಳಿಸುವ ಕವಿ, ಅದನ್ನು ಕಾಳಜಿ, ಪ್ರಾಮಾಣಿಕ, ಪರಿಶುದ್ಧ ಹೃದಯದಿಂದ,  ಮಾನವೀಯ ಅಂತಃಕರಣದಿಂದ ಬಾಳಬೇಕೆಂಬ ನಿಲುವನ್ನು ತಾಳುತ್ತಾನೆ. ಕರುಣೆಗಳೆಲ್ಲ ಕಕ್ಕುಲತೆಗಳೆಲ್ಲ ಮುಖವಾಡಗಳ ಗೋಸಂಬಿ ತನಕೆ ಮೋಸ ಹೋಗಿವೆನಿಷ್ಠೆ, ಪ್ರಾಮಾಣಿಕತೆಗಳು ದೆಸೆಗಟ್ಟು ಓಡುತಿವೆ ನಿಜ ಬದುಕಿಗೆಲ್ಲಿ ಬೆಲೆ (ಮುಖವಾಡದ ಬದುಕು) , ನ್ಯಾಯ, ನಿಷ್ಠೆ,  ಪ್ರಾಮಾಣಿಕತೆಗಳಿಂದಲೇ ಈ ಬದುಕಿಗೆ ಬೆಲೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ ಎಂಬುದನ್ನು ಕವಿ ಸ್ಪಷ್ಟಪಡಿಸಿದ್ದಾನೆ. ಈ ಜೀವನ ಅನಿಶ್ಚಿತತೆ,  ಅಸ್ಥಿರತೆಗಳಿಂದ ಕೂಡಿದ್ದು, ಮನುಷ್ಯನನ್ನು ಕಂಗೆಡಿಸುತ್ತದೆ. ಆದರೆ ಧೃತಿಗೆಡದಂತೆ ಬಾಳಲು ಎಚ್ಚರಿಸುವ ಕವಿ ‘ಸೋತಷ್ಟು ಸತಾಯಿಸುವ ಬದುಕಿದು ಅತ್ತಷ್ಟು ಅಳಿಸುವ ಜಗವಿದು ಬೆದರದೆ ಬೆಚ್ಚಗೆ ಕಲ್ಲಾಗಿಸು ಎದೆಯ ತಿಳಿ ಈ ಸಮಯ ಸ್ಥಿರವಲ್ಲವೆಂಬ ನೀತಿಯ’ (ನೀರ ಮೇಲಣ ಗುಳ್ಳೆ) ಸಾರ್ವಕಾಲಿಕ ಸತ್ಯವನ್ನು ನುಡಿಯುತ್ತಾನೆ. ಬದುಕುವ ಛಲ ತುಂಬುತ್ತಾನೆ. ಅಲ್ಲದೆ ಈ ಜಗತ್ತಿನಲ್ಲಿ ವಿಚಿತ್ರ ಜನರು ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ.  ಕಾವ್ಯದಲ್ಲಿ ಸ್ತ್ರೀ ಚೇತನ      ಈ ಸಮಾಜದಲ್ಲಿ ವೇಶ್ಯೆಯರನ್ನು ಕಾಣುವ ದೃಷ್ಟಿಯೇ ಕೀಳಾದುದು. ಮೈಮಾರಿಕೊಂಡು ಬದುಕುವ ಹೆಣ್ಣಿನ ಬಗ್ಗೆ ಮರುಕ ಪಡುವ ಕವಿ ‘ಅವಳು ಬೀದಿಯಲ್ಲರಳಿ ಮಸಣಕೆ ಶೃಂಗಾರವಾದ ಮಸಣದ ಹೂ’ ಎಂಬುದಾಗಿ ಅವಳ ದಯನೀಯ ಸ್ಥಿತಿಯನ್ನು ಅನಾವರಣ ಮಾಡಿದ್ದಾನೆ.     ತಾಯಿಯು ತನ್ನ ಮಗುವನ್ನೇ ಬೆಳದಿಂಗಳು ಎಂದು ಭಾವಿಸುವ ಸಂಕಲನದ ಶೀರ್ಷಿಕೆಯುಳ್ಳ ಕವನ ‘ಬಿಸಿಲೇ ಬೆಳದಿಂಗಳು’ ಕವಿಯ ಸಂವೇದನಾಶೀಲತೆಗೆ ಸಾಕ್ಷಿ. ದುಡಿಮೆ ಮಾಡಿ ಮಗುವನ್ನು ಸಾಕುವ ಸಮಸ್ತ ತಾಯಂದಿರ ಕಷ್ಟ ಪರಂಪರೆಯನ್ನು ಕಣ್ಮುಂದೆ ತಂದು ನಿಲ್ಲಿಸುವ ಕವಿ ;ಸಿಕ್ಕತಂಗಳೆ ಮೃಷ್ಟಾನ್ನಬೀಸೋ ಗಾಳಿಯೇ ಸುವ್ವಾಲಿ ಹಕ್ಕಿಗಳುಲಿಯೇ ಗಿಲಗಿಂಚಿನಾದಬಿಸಿಲೇ ಬೆಳದಿಂಗಳವಗೆ… ( ಬಿಸಿಲೇ ಬೆಳದಿಂಗಳು ) ಪ್ರಕೃತಿಯ ಎಲ್ಲ ವ್ಯವಹಾರಗಳೂ  ಮನುಷ್ಯ ಬದುಕಿನ ಭರವಸೆಯಾಗಿ ಹಾಗೂ ಪ್ರಕೃತಿ ಮಾತೆಯೇ ಪುರುಷನ ಪೋಷಣೆಗೆ ನಿಂತಿರುವುದನ್ನು ತಿಳಿಸುವ ಕವಿ ಪುರುಷ ಮತ್ತು ಪ್ರಕೃತಿ ನಡುವಿನ ನಂಟನ್ನು ತಾಯಿ ಮಗುವಿನ ಸಂಬಂಧದೊಂದಿಗೆ ಸಮೀಕರಿಸಿ ಒಂದು ರೂಪಕದ ಮೂಲಕ ಕಟ್ಟಿಕೊಟ್ಟಿರುವುದು ಗಮನಾರ್ಹ.     ಮೌನ ಮತ್ತು ಧ್ಯಾನಗಳ ಮೂಲಕ ಕವಿತ್ವವನ್ನು ದಕ್ಕಿಸಿಕೊಳ್ಳುತ್ತಿರುವ ಮೌನೇಶ್ ಅವರು ಬಾಳಿನಲ್ಲಿರುವ ಬಿಸಿಲನ್ನೇ ಬೆಳದಿಂಗಳಾಗಿ ಭಾವಿಸುವ ಧನಾತ್ಮಕ ನಿಲುವು ಮತ್ತು ಆಶಯವನ್ನು ಪ್ರಕಟಿಸಿರುವುದು ವಿಶೇಷ. ಅವರಿಗೆ ಶುಭವಾಗಲಿ. ಡಾ. ಸಂಗಮೇಶ ಎಸ್. ಗಣಿಕನ್ನಡ ಪ್ರಾಧ್ಯಾಪಕರು, ಬೆಂಗಳೂರು.ಮೊಬೈಲ್ :9743171324

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ Read Post »

ಪುಸ್ತಕ ಸಂಗಾತಿ

ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ.

ಪುಸ್ತಕ ಸಂಗಾತಿ ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಅಮರೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ ಯುವ ಜನತೆಯಲ್ಲಿ ಮೂಡಲಿ ರಾಷ್ಟ್ರೀಯತೆಯ ಭಾವನೆ*  -ಶರಣಬಸಪ್ಪಾ ದೇಶಮುಖ*ಔರಾದ* : ಪ್ರತಿಯೊಬ್ಬ ಯುವಕರಲ್ಲಿ ರಾಷ್ಟ್ರೀಯತೆಯ ಭಾವನೆ ಬೆಳೆಯಬೇಕಾಗಿದೆ. ದೇಶದ ಅಭಿವೃದ್ಧಿಯಾಗಬೇಕು ಎಂದರೆ ಅದು ಯುವ ಜನತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಯ ಜೀವನದಲ್ಲಿಯೇ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ *ರಾಷ್ಟ್ರೀಯ ಸೇವಾ ಯೋಜನೆ* ಜಾರಿಗೆ ತಂದರು. ನಾವು ಉಳಿಯಬೇಕು, ಬೆಳೆಯಬೇಕು ಅಂದರೆ ದೇಶದ ಅಭಿವೃಧ್ಧಿಯಲ್ಲಿ ನಾವೆಲ್ಲರೂ ಸಹಭಾಗಿತ್ವ ನೀಡಬೇಕೆಂದು ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಕಾರ್ಯದರ್ಶಿಗಳಾದ ಶರಣಬಸಪ್ಪಾ ದೇಶಮುಖ ಅವರು ನುಡಿದರು. ಇಂದು ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಸರಕಾರಿ ಪ್ರೌಢ ಶಾಲೆ ಯನಗುಂದಾದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ *ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ* ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ನಮ್ಮ ಯುವ ಜನತೆ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ದುಷ್ಚಟಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾದ ಸಂಗತಿ. ತಾವೆಲ್ಲರೂ ಹಾಗೆ ಆಗದೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರ ಜೀವನ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದು ಕರೆ ನೀಡಿದರು. ಶಿಬಿರವನ್ನು ಉದ್ಘಾಟಿಸಿ, ಸಾಹಿತಿ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ ಅವರು ರಚಿಸಿರುವ ಆಧುನಿಕ ಕಥನ ವಚನಗಳ “ಸ್ಮರಣಾಂಜಲಿ” ಕೃತಿ ಬಿಡುಗಡೆಗೊಳಿಸಿದ ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ ಸದಸ್ಯರಾದ ರವೀಂದ್ರ ಮೀಸೆರವರು ಯುವಕರು ದೇಶ ಕಟ್ಟಬೇಕು ಎನ್ನುವ ಉದ್ದೇಶಕ್ಕಾಗಿಯೇ ಎನ್.ಎಸ್.ಎಸ್ ಸಂಘಟನೆ ಹುಟ್ಟಿಕೊಂಡಿದೆ. ಅದೇ ಉದ್ದೇಶದಿಂದ ಎನ್.ಎಸ್.ಎಸ್. ಘಟಕದ ಮೂಲಕ ಶ್ರಮದಾನ, ಸ್ವಚ್ಛತಾ ಅಭಿಯಾನ, ಜನಜಾಗೃತಿ ಜಾಥಗಳು, ವಿಶೇಷ ಉಪನ್ಯಾಸಗಳು, ಜಾಗೃತಿ ಶಿಬಿರಗಳು ಹೀಗೆ ಇನ್ನೂ ಅನೇಕ ರಚನಾತ್ಮ ಚಟುವಟಿಕೆಗಳ ಮೂಲಕ ಯುವಜನರನ್ನು ಜಾಗೃತಗೊಳಿಸುವ ಕಾರ್ಯ ಎನ್.ಎಸ್.ಎಸ್.ಘಟಕಗಳು ಮಾಡುತ್ತಿವೆ ಎಂದು ತಿಳಿಸಿದರು. ಯನಗುಂದಾ ಗ್ರಾಮದ ಗಣ್ಯರಾದ ಶಿವರಾಜ ದೇಶಮುಖರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗುವುದರಿಂದ ಶಿಸ್ತು, ಶಾಂತಿ, ಸಹಬಾಳ್ವೆ, ಸಂಘಟನೆ, ಸಾಹಿತ್ಯದ ಅಭಿರುಚಿ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ನಿರುದ್ಯೋಗ, ಭ್ರಷ್ಟಾಚಾರ, ಅನ್ಯಾಯ ಅತ್ಯಾಚಾರಗಳು ನಿಲ್ಲಬೇಕಾದರೆ ನಮ್ಮ ಯುವಕರು ಜಾಗೃತರಾದಾಗ ಮಾತ್ರ ಸಾಧ್ಯ. ದೇಶಕ್ಕಾಗಿ ನಾವೇನು ಮಾಡಬೇಕು ಎನ್ನುವುದು ತುಂಬಾ ಮುಖ್ಯ, ನಾವೆಲ್ಲರೂ ನಮ್ಮ ಹಕ್ಕುಗಳ ಬಗ್ಗೆ ಮಾತ್ರ ಯೋಚಿಸುತ್ತೇನೆ ಆದರೆ ನಾವು ನಮ್ಮ ಕರ್ತವ್ಯದ ಬಗ್ಗೆಯು ಆಲೋಚಿಸಬೇಕು ಅಂದಾಗಲೇ ಮಾತ್ರ ನಾವು ನಮ್ಮ ದೇಶವನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗಲು ಸಾಧ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ *ರಾಷ್ಟ್ರೀಯ ರಚನಾತ್ಮಕ ಕಾರ್ಯ ಸಮಿತಿಯ* ಜಂಟಿ ಕಾರ್ಯದರ್ಶಿ ಧನರಾಜ ತಾಂಡುರೆ, ಅಮರೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೇಮಾ ಹೂಗಾರ, ಯನಗುಂದಾ ಗ್ರಾಮದ ಪ್ರಮುಖರಾದ ಗುರಯ್ಯ ಸ್ವಾಮಿ, ಗೋಪಾಲರಡ್ಡಿ ಬರ್ಯೆ, ಜಗದೀಶ ಪಾಟೀಲ್, ಬಸವರಾಜ ದೇಶಮುಖ, ಕೃಷ್ಣಾ, ಹಾಗೂ ಎನ್.ಎಸ್.ಎಸ್. ಅಧಿಕಾರಿ ಉತ್ತಮ ದಂಢೆ, ಶಿಕ್ಷಕರಾದ ಖುರಮ್ ಮರ್ತುಜಾ, ಮಲ್ಲಿಕಾರ್ಜುನ ಟಂಕಸಾಲೆ, ಮತ್ತು ಕಾಲೇಜಿನ ಪ್ರಾಧ್ಯಾಪಕರಾದ ಉತ್ತಮ ಜಾದವ, ಕಪೀಲ ಡೋಣಗಾವೆ, ತುಳಸಿರಾಮ ಮಾನೆ, ಮಲ್ಲಿಕಾರ್ಜುನ ಭಾಲ್ಕೆ, ಶಿವರಾಮ ರಾಠೋಡ, ಶೇಖ್ ಮುಜಿಬ್, ಪ್ರೀಯಾ ಸದಾಫುಲೆ, ಆರತಿ ನೌಬಾದೆ, ಸಿಕಂದರ ಚವ್ಹಾಣ, ನಿರ್ಮಲಾ ಶಿವಪೂಜೆ, ರಾಜಲಕ್ಷ್ಮಿಕಾಂತಹಾಗೂ  ಶಿಬಿರಾರ್ಥಿಗಳು  ಭಾಗವಹಿಸಿದರು. ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಟಂಕಸಾಲೆ ಸ್ವಾಗತಿಸಿದರು, ಪ್ರಾಧ್ಯಾಪಕರಾದ ಉತ್ತಮ ಜಾಧವ ನಿರೂಪಿಸಿದರು. ಎನ್. ಎಸ್.ಎಸ್. ಅಧಿಕಾರಿಗಳಾದ ಉತ್ತಮ ದಂಡೆ ಅವರು ವಂದಿಸಿದರು.

ಡಾ. ಪ್ರೇಮಾ ಹೂಗಾರ. ಅವರ ಆಧುನಿಕ ಕಥನ ವಚನ ಸಂಕಲನ “ಸ್ಮರಣಾಜಲಿ ” ಬಿಡುಗಡೆ ಸಮಾರಂಭ. Read Post »

ಪುಸ್ತಕ ಸಂಗಾತಿ

ಹೆಚ್‌ ಎಸ್ ಗೋವಿಂದಗೌಡ ಅವರ ಕೃತಿ “ಕಂಪನಿ ಕಲಾವಿದರು”ಅವಲೋಕನ ಗೊರೂರು ಅನಂತರಾಜು

ಪುಸ್ತಕ ಸಂಗಾತಿ ಗೊರೂರು ಅನಂತರಾಜು ಹೆಚ್‌ ಎಸ್ ಗೋವಿಂದಗೌಡ “ಕಂಪನಿ ಕಲಾವಿದರು”ಅವಲೋಕನ ಅರಕಲಗೊಡು ತಾ. ಹನ್ಯಾಳು ಗ್ರಾಮದ ಹೆಚ್.ಎಸ್.ಗೋವಿಂದಗೌಡರು ಸದ್ಯ ಮೈಸೂರು ವಾಸಿ. ಪೌರಾಣಿಕ ರಂಗನಟರಾದ ಇವರು ರಂಗಕೃತಿಗಳ ಪ್ರಕಟಣೆ ಕೂಡ ಮಾಡುತ್ತಾ ರಂಗಸೇವೆಯಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊನ್ನೆ ಇವರನ್ನು ಮನೆಯಲ್ಲಿ ಭೇಟಿಯಾದೆ. ಇತ್ತೀಚಿಗೆ ಮೈಸೂರಿನಲ್ಲಿ ಬಿಡುಗಡೆಯಾದ ಕೆಲವು ರಂಗಕೃತಿಗಳನ್ನು ನೀಡಿದರು. ಅದರಲ್ಲಿ ಕಂಪನಿ ಕಲಾವಿದರು ಒಂದು. ಇದರಲ್ಲಿ ನಾಟಕ ಕಂಪನಿಗಳ ಕಲಾವಿದರನ್ನು ಮಾತ್ರ ಪರಿಚಯ ಮಾಡಿದ್ದೇನೆ ಎಂದರು. ನಾನು (ಗೊರೂರು ಅನಂತರಾಜು) ೨೦೧೧ರಲ್ಲಿ ಪ್ರಕಟಿಸಿದ ಅಭಿನಯ ಅಭಿವ್ಯಕ್ತಿ ಕೃತಿಯಲ್ಲಿ ಸುಮಾರು ೧೫೦ ಮಂದಿ ರಂಗ ಕಲಾವಿದರನ್ನು ಪರಿಚಯಿಸಿದಂತೆಯೇ  ಲೇಖಕರು ನಾಟಕ ಕಂಪನಿ ಕಲಾವಿದರ ಕಿರು ಪರಿಚಯ ಮಾಡಿರುವರು. ಅರಮನೆಯಲ್ಲಿ ಪ್ರತಿವರ್ಷ ಗೌರಿ ಹಬ್ಬದಲ್ಲಿ ಗೌರಿಪೂಜೆ ಮಾಡುತ್ತಿದ್ದರಾದ್ದರಿಂದ ಗೌರಿ ನರಸಿಂಹಯ್ಯ ಎಂದೇ ಕರೆಯಲ್ಪಟ್ಟ ಗೌರಿ ನರಸಿಂಹಯ್ಯನವರು ಹರಿಶ್ಚಂದ್ರ, ಶೂರಸೇನ, ರತ್ನಾವಳಿ, ಮಂದಾರವಲ್ಲಿ, ದ್ರೌಪದಿ, ಚಂದ್ರಮತಿ ಪಾತ್ರಗಳನ್ನು ನಿರ್ವಹಿಸಿದವರು. ೧೮೭೮ರಲ್ಲಿ ಮುಂಬೈನ ಮರಾಠಿ ಹಾಗೂ ಪಾರ್ಸಿ ನಾಟಕಗಳಿಂದ ಪ್ರಭಾವಿತರಾಗಿ ಇಂದ್ರಸಭಾ ಬಾಣಾಸುರೋಪಾಖ್ಯಾನ ನಾಟಕ ೧೮೮೧ರಲ್ಲಿ ಅಂದಿನ ದಿವಾನರು ರಂಗಾಚರ‍್ಲು ಅವರ ಅಧ್ಯಕ್ಷತೆಯಲ್ಲಿ ನಾಯಕನ ಪಾತ್ರದಲ್ಲಿ ರಂಗಗೀತೆ ಗಾಯನದಿಂದ ಪ್ರೇಕ್ಷಕರ ಮನಸೂರೆಗೊಂಡವರು ಮಂಡ್ಯ ರಂಗಾಚರ‍್ಯರು. ಉಡುಪಿ ಬಳಿಯ ನಂದಳಿಕೆ ಗ್ರಾಮದಲ್ಲಿ ೧೮೬೬ರಲ್ಲಿ ಜನಿಸಿದ ಬಿಡಾರಂ ಕೃಷ್ಣಪ್ಪನವರು ಯಕ್ಷಗಾನ ಮಂಡಳಿಯವರು ಆಡುತ್ತಿದ್ದ ದಶಾವತಾರ ನಾಟಕದಲ್ಲಿ ಸ್ತಿçà ಪಾತ್ರ ಮಾಡುತ್ತಿದ್ದರು. ವಿರಾಟಪರ್ವ ಗಯಚರಿತ್ರೆ ನಾಟಕ ಬರೆದ ಗಿರಿಭಟ್ಟರ ತಮ್ಮಯ್ಯ ನವರು ಶಾಕುಂತಲ ನಾಟಕದಲ್ಲಿ ಕಣ್ವ ಋಷಿಯ ಪಾತ್ರಕ್ಕೆ ಖ್ಯಾತಿ ಪಡೆದಿದ್ದರು. ೩೩ ವರ್ಷ ಕಲಾವಿದರಾಗಿದ್ದ ಲಕ್ಷಿö್ಮÃಪತಿಶಾಸ್ತಿç ಆಲ್ ರೌಂಡ್ ಆಕ್ಟರ್. ಅರಮನೆಯಲ್ಲಿ ವಿದೂಷಕನಾಗಿ ತೆಳ್ಳಗೆ ಕುಳ್ಳಗೆ ಇದ್ದ ಪುಟ್ಟಾರಿಶಾಸ್ತಿç ಹಾಸ್ಯ ಪಾತ್ರದಾರಿ. ಬಸವಪ್ಪ ಶಾಸ್ತಿçಗಳು ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಮೇಲೆ ೧೮೮೧ರಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಅರಮನೆ  ಕಂಪನಿಯ ಗಿರಿಭಟ್ಟರ ತಮ್ಮಯ್ಯ, ಲಕ್ಷಿö್ಮÃಪತಿಶಾಸ್ತಿçಗಳ ಜೊತೆಗೆ  ದುಷ್ಯಂತನ ಪಾತ್ರದಲ್ಲಿ ಯಶಸ್ಸು ಗಳಿಸಿದ ನಟರು ನಟಶೇಖರ ಎಂ.ಡಿ.ಸುಬ್ಬಣ್ಣನವರು. ಅರಮನೆ ಕಂಪನಿ ೧೯೧೭ರಲ್ಲಿ ಕೊನೆಗೊಂಡು ೧೯೧೯ರಲ್ಲಿ ಶಾಕುಂತಲ ಕರ್ನಾಟಕ ನಾಟಕ ಸಭಾ ಎಂಬ ಹೆಸರಿನಿಂದ ಪ್ರಾರಂಭಗೊAಡು ಮದ್ರಾಸಿಗೆ ಪ್ರಯಾಣ ಮಾಡಿ ರಾಣಿ ಪಾತ್ರದಲ್ಲಿ ಟಿ.ನರಸೀಪುರದ ಎನ್.ಸುಬ್ಬಣ್ಣ ಮತ್ತು ರಾಜಪಾರ್ಟಿನ ವಿದ್ವಾನ್ ಬಿ.ರಾಚಪ್ಪನವರ ರಾಜನ ಪಾತ್ರದ ನಟನೆಗೆ ಜನ ಮೆಚ್ಚಿ  ಬಂಗಾರದ ಪದಕ ಕೊಟ್ಟರು.ರಂಗದಿAದ ಸಿನಿಮಾರಂಗಕ್ಕೆ ಬಂದ ಜಿ.ವಿ.ಅಯ್ಯರ್ ತಮ್ಮ ೮ನೇ ವಯಸ್ಸಿನಲ್ಲೇ ಗುಬ್ಬಿ ಕಂಪನಿ ಸೇರಿದವರು. ರಾಜವಿಕ್ರಮ ನಾಟಕದಲ್ಲಿ ಭಟ್ಟಿ ಎಂಬ ಮಂತ್ರಿ ಪಾತ್ರ ಮಾಡುತ್ತಿದ್ದ ಟಿ.ನರಸೀಪುರ ತಾ. ಮುಸುವಿನ ಕೊಪ್ಪಲು ಭಟ್ಟಿಮಹದೇವಪ್ಪ ಮತ್ತು ಮಳವಳ್ಳಿ ತಾ. ಬೆಳಕವಾಡಿಯ ಶನಿದೇವರ ಪಾತ್ರ ನಟನೆಯಿಂದ ಶನಿಮಹದೇವಪ್ಪ  ಎಂದು ಖ್ಯಾತರಾದ ಇವರು ಸಿನಿಮಾ ರಂಗದಲ್ಲಿ ಬೆಳಗಿದವರು. ಹಾಸನ ಜಿಲ್ಲೆಯ ರಾಜಾನಂದ್ ೩೦ಕ್ಕೂ ಹೆಚ್ಚು ವರ್ಷ ನಾಟಕ ರಂಗದಲ್ಲಿದ್ದು ನಾಟಕಗಳನ್ನು ಬರೆದವರು. ಚಕ್ರತೀರ್ಥ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ೩೦೦ ಚಿತ್ರಗಳಲ್ಲಿ ನಟಿಸಿದ ಇವರ ಶ್ರೀ ಶಿರಡಿ ಸಾಯಿಬಾಬಾ ಮಹಾತ್ಮೆ, ಮಕರಜ್ಯೋತಿ ಮಣಿಕಂಠ ನಾಟಕಗಳನ್ನು  ಗೋವಿಂದಗೌಡರು  ಪ್ರಕಟಿಸಿದ್ದಾರೆ. ವಿಶೇಷ ಧ್ವನಿಯ ಚಿತ್ರನಟ ಕೆ.ಎಂ.ರತ್ನಾಕರ್, ಹೊ.ನ.ಪುರ ತಾ. ಜೋಡಿಗುಬ್ಬಿಯ ಕಂಚಿನ ಕಂಠದ ಚಿತ್ರನಟ ಧೀರೇಂದ್ರ ಗೋಪಾಲ್, ನಂಜನಗೂಡು ಚಿತ್ರರಂಗದ ಖಳನಟ ನಾಗಪ್ಪ, ಪೋಷಕ ಪಾತ್ರದ ಚಿತ್ರನಟ ದ.ಕ.ದ  ಸದಾಶಿವ ಬ್ರಹ್ಮಾವರ್, ಚಿಂತಾಮಣಿಯ ಚಿತ್ರನಟಿ ಎಂ.ಎನ್.ಲಕ್ಷಿö್ಮÃದೇವಿ, ಚೋಮನದುಡಿ ಖ್ಯಾತಿಯ ಸ್ವರ್ಣಕಮಲ ಪ್ರಶಸ್ತಿ ವಿಜೇತ ಮೂಡುಬಿದರೆಯ ಎಂ.ವಿ.ವಾಸುದೇವರಾವ್, ಪರಸಂಗ ಗೆಂಡೆತಿಮ್ಮ ಚಿತ್ರದಿಂದ ಪ್ರಸಿದ್ಧಿಯಾದ ಡಿಂಗ್ರಿ ನಾಗರಾಜ್, ೪ನೇ ವಯಸ್ಸಿಗೆ ಬಣ್ಣ ಹಚ್ಚಿದ ಚಿತ್ರನಟ ಎಂ.ಎಸ್.ಉಮೇಶ್. ವಿಲನ್ ಆಗಿ ಚಿತ್ರರಂಗಕ್ಕೆ ಬಂದು ಹಾಸ್ಯನಟರಾದ ಮೈಸೂರಿನ ದಿನೇಶ್, ೭೫ ಚಿತ್ರಗಳಲ್ಲಿ ನಟಿಸಿ ೩ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮಂಗಳೂರಿನ ಕಲ್ಪನಾ, ಭೂತಯ್ಯನ ಮಗ ಅಯ್ಯು ಚಿತ್ರದ ನಟನೆಗೆ ಪ್ರಶಸ್ತಿ ವಿಜೇತ ಲೋಕೇಶ್, ದೆಹಲಿಯ ರಂಗಶಾಲೆಯಲ್ಲಿ ತರಬೇತಿ ಪಡೆದ ಗುಬ್ಬಿ ವೀರಣ್ಣನವರ ಮೊಮ್ಮಗಳು ಜಯಶ್ರೀ ಬಿ. ಕಂಠದಾನ ಕಲಾವಿದೆ ಸರ್ವಮಂಗಳ, ಸುಬ್ಬಾಶಾಸ್ತಿç, ಸಂಸ್ಕಾರ, ಕಾಡು ಚಿತ್ರಗಳಲ್ಲಿ ನಟಿಸಿರುವ ಜಿ.ವಿ.ಶಿವಾನಂದ, ಚಿತ್ರರಂಗದಲ್ಲಿ ಮಿಂಚಿರುವ  ಶರಣ್ ಹಾಗೂ ಶೃತಿ ಅವರ ತಂದೆ ಜಿ.ವಿ.ಕೃಷ್ಣ ಇವರ ನಾಟಕ ಕಂಪನಿಯ ಪಾತ್ರದ ಕಿರು ಪರಿಚಯ ಮಾಡಿದ್ದಾರೆ. ೧೯೭೦ರ ದಶಕದಲ್ಲಿ ಕುರುಕ್ಷೇತ್ರ ನಾಟಕವೆಂದರೆ ಪಿ.ವಜ್ರಪ್ಪ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಇವರು ನೂರಾರು ರಂಗಗೀತೆಗಳನ್ನು ಬರೆದಿರುವರು. ಐದು ದಶಕ ವೃತ್ತಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಮಾಲತಿಶ್ರೀ ಮೈಸೂರು ಇವರ ಪರಿಚಯ ಒಳಗೊಂಡು ಎಲೆಮರೆಕಾಯಿ ಯಂತೆ ಇದ್ದು ಮರೆಯಾಗಿ ಹೋದ ಅನೇಕ  ಕಲಾವಿದರನ್ನು ಪರಿಚಯಿಸಿದ್ದಾರೆ. ಅರಮನೆ ಕಂಪನಿ ಸಮಕಾಲೀನರು ಬೋಧರಾಯ, ಸಂಗೀತಗಾರ ಸದಾಶಿವರಾಯರ ಮೊಮ್ಮಗ ಸರ್ಟನ್ ರಾಮರಾವ್, ಹರ‍್ಮೋನಿಯಂ ವಾದ್ಯದ ಬೆಂಗಳೂರಿನ ಅರುಣಾ ಚಲಪ್ಪ, ಶಿವಮೊಗ್ಗದ ಸಿ.ಬಿ.ಜಯರಾಮ್, ಸದಾರಮೆ ನಾಟಕದ ಕಾಲಾಪಿಲ್ಲಯ್ಯ, ಮೈಸೂರು  ಬೆಳಕವಾಡಿಯ ಶ್ರೀನಿವಾಸ ಅಯ್ಯಂಗಾರ್, ಕೋಲಾರ ಕುರುಡಿ ಗ್ರಾಮದ  ಸಂಗೀತರತ್ನ ಚಿಕ್ಕರಾಮರಾಯ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ಬುಜಭಲದಂತಿದ್ದ ಕೃಷ್ಣಮೂರ್ತಿರಾಯ, ತುಮಕೂರು ದ್ಯಾವರಾಯಪಟ್ಟಣದ ಡಿ.ಆರ್.ಕೃಷ್ಣಮೂತಿಥ,  ಗುಂಡ್ಲುಪೇಟೆಯ ಕಲಿಯುಗ ಭೀಮ   ಜಿ.ವಿ.ಕೃಷ್ಣಮೂರ್ತಿ, ಚಿತ್ರಕಲೆಯ ಅಚಾರ್ ಕೆ.ವಿ, ಸೊರಬ ತಾ. ಮೂಡಿಯ ಅಣ್ಣಪ್ಪ ಎಂ.ಎಸ್, ಮೈಸೂರು ಹಳೇ ಬಂಡಿಕೇರಿಯ ಹಾರ್ಮೋನಿಯಂ ಎಂ.ಶಿವಪ್ಪ, ಚಿಕ್ಕನಾಯಕನಹಳ್ಳಿಯ ಸಿ.ಎಲ್.ರಾಮರಾಜೇ ಅರಸ್, ಗುಬ್ಬಿ ಕಂಪನಿಯ ಜಿ.ವಿ. ಸುಂದರಮ್ಮ, ಪ್ರಾಕ್ಟೀಸ್ ಮೇನೇಜರ್ ಮುನಿಯಪ್ಪ, ಟಿಪ್ಪುಸುಲ್ತಾನ್ ನಾಟಕದ ಮೀರ್ ಸಾದಿಕ್ ಪಾತ್ರ ಖ್ಯಾತಿಯ ಸಾಗರ ತಾ. ಮುಡಗೋಡು ಗ್ರಾಮದ ಎಂ.ಶಾAತ ಕುಮಾರ್, ಕನ್ನಡ ರಂಗಭೂಮಿ ಚಾಣಕ್ಯ ಎಂ.ಸಿ.ಮಹದೇವಸ್ವಾಮಿ, ಹರಿಕಥೆ ಮಾಡುತ್ತಾ ಹರಿಕಥಮ್ಮ ಎಂದೇ ಕರೆಯಲ್ಪಟ್ಟ ವೆಂಕಟೇಶಮ್ಮ, ಗುಬ್ಬಿ ಕಂಪನಿ ಸ್ತಿçà ಪಾತ್ರದಾರಿ ತ್ರಿಪುರಾಂಬ, ೭೬ ವರ್ಷ ಸುಧೀಘ  ರಂಗಸೇವೆಯ ಮೈಸೂರು ಆರ್. ಮಂಜುಳಮ್ಮ, ಕೆ.ಆರ್.ಪೇಟೆ ಹೊಸಹೊಳಲು ಗ್ರಾಮದ ಎಚ್.ಆರ್.ನಂಜಶೆಟ್ಟರು,  ಆಂಜನೇಯ ಪಾತ್ರ ಖ್ಯಾತಿಯ ಬೆಳ್ಳೂರು ನಂಜುAಡಯ್ಯ ಉತ್ತರ ಕರ್ನಾಟಕದವರು.  ಬಿ.ಎಂ.ಸೀತರಾಮರಾಜು ಜನಪ್ರಿಯ ಸಂಗೀತ ನಿರ್ದೇಶಕರು. ಗುಬ್ಬಿ ವೀರಣ್ಣರ ಮಗ ಚನ್ನಬಸವಣ್ಣ, ಪೇಂಟರ್ ಎಲ್.ನಾರಾಯಣಯ್ಯಂಗಾರ್, ಬೆಂಗಳೂರು ಪದ್ಮ ವೇಣುಗೋಪಾಲ್, ಮಾವನ ಮನೆ ನಾಟಕದ ಭಾಗೀರಥಿ ಪಾತ್ರದಾರಿಣಿ ಪ್ರಭಾ ಜಿ.ಸಿ.ಬಸವರಾಜು, ಮೇಲುಕೋಟೆ ಎಂ.ಎನ್.ಪ್ರೇಮಕುಮಾರಿ ಕೂಡಿ ಬಾಳೋಣ ಚಲನಚಿತ್ರದಲ್ಲಿ ನಟಿಸಿರುವರು.  ೯೮ ವಯಸ್ಸಿನ  ಕುಪ್ಯ ಎಂ.ಎಸ್.ವೆAಕಟರಾA ಲೇಖಕರಿಗೆ ತಾವು ಕಂಡ ಇಲ್ಲಿಯ ಕೆಲವು ನಟರ ಪಾತ್ರಾಭಿನಯ ಮಾಹಿತಿ ನೀಡಿರುವರು. ಇವರ ಪರಿಚಯವನ್ನು ನಾನು ನಿಂತು ಹೋದ ರಂಗವೈಭವ ಪುಸ್ತಕದಲ್ಲಿ ಮಾಡಿರುವೆನು. ಉಡುಪಿ ಕಡೆಯ ಬಂಗೇರ ಐತಪ್ಪ, ಮೇಕಪ್ ಮಾಡುವ ತರೀಕೆರೆ ಕೃಷ್ಣಮೂರ್ತಿ, ಸ್ತಿçà ನಾಟಕ ಮಂಡಳಿ ನರ್ತಕಿ ಎಂ.ಕೆ.ಸುಜಾತ, ಚನ್ನರಾಯಪಟ್ಟಣ ತಾ. ಚಿಕ್ಕೋನಹಳ್ಳಿಯ ಸಿ.ವಿ.ವೀರಭದ್ರಾಚಾರ್, ಶೃಂಗೇರಿಯ ಪ್ರಸಿದ್ಧ ನಟಿ ಬಿ.ಎಸ್.ಮಂಜುಳಾ ಅವರ ಸಹೋದರಿ ಬಿ.ಎಸ್.ಪೂರ್ಣಿಮ, ಗುಬ್ಬಿ ತಾ. ಒಡೆಯರ್ ಮಟಿಘಟ್ಟ ಗ್ರಾಮದ ಚನ್ನಬಸವಯ್ಯ, ಮೈಸೂರು ಟಿ.ಎಸ್. ದೊರೆಸ್ವಾಮಿ, ಅರಸೀಕೆರೆ ತಾ. ಯೆರಗೇನಹಳ್ಳಿಯ ರಂಗಸAಗೀತ ಶಿಕ್ಷಕರು ವೈ.ಎಂ.ಪುಟ್ಟಣ್ಣಯ್ಯ, ೨ನೇ ಮಳವಳ್ಳಿ ಸುಂದರಮ್ಮ ಎಂದು ರಂಗದಿಗ್ಗಜ ಹೊನ್ನಪ್ಪ ಭಾಗವತರಿಂದ ಕರೆಸಿಕೊಂಡಿದ್ದ ಮೈಸೂರಿನ ಕಲಾವತಿ, ಶ್ರೀಕೃಷ್ಣಲೀಲೆ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ರಂಗನಾಯಕಿ ಎಂದು ಮರುನಾಮಕರಣಗೊಂಡ ಬೆಂಗಳೂರಿನ ನಿರ್ಮಲ, ಕೋಲಾರದ ಕಲಾರತ್ನ ಕೆ.ಎನ್.ಬಸವರಾಜು, ಮಂಡ್ಯದ ಎನ್.ಶಾಂತಮ್ಮ, ಇಂದಿಗೂ ನಟಿಸುತ್ತಿರುವ ಮೈಸೂರಿನ ಎಸ್.ಸರೋಜಿನಿ, ಆಲನಹಳ್ಳಿಯ  ಎ.ಪಿ.ರಾಜಪ್ಪ, ನಂಜನಗೂಡು ತಾ. ಬಿಳಗಲಿ ಗ್ರಾಮದ ಸುಲೋಚನ ಇವರಿಗೆೆ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇತ್ತೀಚಿಗೆ ೨೭-೧-೨೦೨೬ರಂದು ನಿಧನರಾದ ಮಂಡ್ಯ ನಾಗರಾಜಾಚಾರ್ ಇವರು ಹಾಸನದಲ್ಲಿ ರಾಮಾಯಣ ನಾಟಕ ಕಲಿಸಿ ಅವರನ್ನು ಮಾತನಾಡಿಸಿದ್ದೆನು.  ಚಿಕ್ಕನಾಯಕನಹಳ್ಳಿಯ ಹಾಸ್ಯ ಕಲಾನಿಪುಣ ಬಿ.ಕೆ. ಪಂಚಲಿAಗಯ್ಯ ಇವರ ಚಿಕ್ಕಪ್ಪ ರಂಗದಿಗ್ಗಜ ಸಿ.ಬಿ.ಮಲ್ಲಪ್ಪನವರು. ಕಲಾತಪಸ್ವಿ ಬಿ.ಕೆ.ಈಶ್ವರಪ್ಪ  ಇವರ ರಂಗಪರಿಚಯವನ್ನು ನಾನು  ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ ಕೃತಿಯಲ್ಲಿ    ಮಾಡಿರುವೆನು. ತುಮಕೂರು ಮಲ್ಲಸಂದ್ರದ ಡಾ.ಲಕ್ಷö್ಮಣದಾಸ್ ಇದೇ ಕೃತಿಗೆ ಆಶಯನುಡಿ ಬರೆದಿರುವರು. ಚಾಮರಾಜನಗರ ಆಲೂರು ಗ್ರಾಮದ ನಾಗರಾಜು, ತಬಲವಾದಕ ವಿ.ಎಂ.ಧನಪಾಲ್, ಕೊಪ್ಪಳ  ಕುಕನೂರಿನ ಸರಸ್ವತಿ ಜುಲೇಖಾ ಬೇಗಂ, ತಿಪಟೂರಿನ ಟಿ.ಎಚ್.ಹೇಮಲತ, ಈಗಲೂ ರಂಗದಲ್ಲಿರುವ ಅರಳಗುಪ್ಪೆಯ ಎನ್.ಸುಮಿತ್ರಮ್ಮ, ಇದೇ ಊರಿನ ನೀಲಕಂಠಾಚಾರ್, ಕಾಮಿಡಿ ಪಾತ್ರದಾರಿ ಎಂ.ನಾಗರಾಜ್ ಇವರ ದೊಡ್ಡಪ್ಪ ಚಿತ್ರನಟ ಡಿಕ್ಕಿಮಾಧವರಾವ್. ಮೈಸೂರಿನ ಕಲಾವಿದೆಯರು ಕಮಲಮ್ಮ, ಇಂದ್ರಾಣಿ, ಹೇಮಲತಾ,  ವಸಂತಕುಮಾರಿ. ಸುವರ್ಣಮ್ಮ, ಮಂಜುಳಾರಾಜ್, ಎಸ್.ಭಾರತಿ, ಶಕುಂತಲಾ ವಾಸುದೇವನ್ ಇವರುಗಳ ಪರಿಚಯವಿದೆ.  ತಿಪಟೂರು ತಾ. ಕೋಟನಾಯಕನಹಳ್ಳಿಯ ಪರಪ್ಪ, ಇದೇ ತಾ. ಹೊನ್ನವಳ್ಳಿಯ ಲಕ್ಷö್ಮಮ್ಮ ಇವರ ಸೋದರಮಾವ ಚಿತ್ರನಟ ನರಸಿಂಹರಾಜು.   ಅರಸೀಕೆರೆ ತಾ. ಬಾಣಾವರದ ಬಿ.ಲೀಲಾವತಿ, ಸೊಲ್ಲಪುರ ಗ್ರಾಮದ ಎಸ್.ಎಸ್.ಗಾಯಿತ್ರಿ, ಬೆಂಗಳೂರು ಬಿ.ಎ. ಶಾಂತಮ್ಮ,  ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹೆಚ್.ಕೆ.ಯೋಗಾನರಸಿಂಹ ಅವರ ಪುತ್ರ ಮೈಸೂರು ಎಚ್.ವೈ.ರಾಜೇಶ್ವರ್, ಸೋಮವಾರಪೇಟೆಯ ಮೇರಿ ವಸಂತ ಮತ್ತು ಇವರ ಯಜಮಾನರು ವಸಂತಕುಮಾರ್, ಇಂದಿಗೂ ರಂಗಸೇವೆ ಮುಂದುವರೆಸಿರುವ  ಜಯಂತಿ ಇವರ  ಯಜಮಾನರು ಕಳಲೆ ದೊರೆಯವರು. ಹರಿಹರದ ರಾಜೇಶ್ವರಿ, ನಂಜನಗೂಡು ತಾ. ಹುರ ಗ್ರಾಮದ ಎಚ್.ಎನ್.ಶೇಷಾಚಲ, ಮಂಡ್ಯ  ಗಂಜಾAನವರಾದ ಮಂಗಳಗೌರಿ, ಮೈಸೂರು ಶ್ರೀಕಂಠು, ಐದು ದಶಕಗಳ ಕಾಲ ರಂಗ ಸೇವೆ ಮಾಡಿದ ಲಕ್ಷö್ಮಮ್ಮ, ಸರಗೂರು ಶ್ರೀಪತಿರಾವ್, ಗುಬ್ಬಿ ಮುರಳೀಧರ್, ತುರುವೇಕೆರೆ ತಾ. ಸಂಪಿಗೆ ಗ್ರಾಮದ ಶಂಕರ್, ಹೊಸದುರ್ಗ ತಾ. ಕಾಮಸಂದ್ರದ ನರಸಿಂಹಮೂರ್ತಿ, ಸೋದರ ಸಂಬAಧಿ ಬಂಧುಗಳಾಗಿದ್ದ ಅಡಗೂರು ಬಸವರಾಜು, ಶಿವಲಿಂಗಯ್ಯ, ಸಿದ್ಧಲಿಂಗಮರಿಗಳು, ತುಮಕೂರು  ಸೀತಕಲ್ ಕೃಷ್ಣಮೂರ್ತಿ, ನಂಜನಗೂಡು ತಾ. ಮೂಲದ ಎನ್.ಎಸ್.ಮೂರ್ತಿ, ಗುಬ್ಬಿ ಕಂಪನಿಯ ಬ್ರಾಂಚ್ ಕಂಪನಿ ಬಾಲ ಕಲಾವರ್ಧನಿ ಕಲಾವಿದರು ಶ್ರೀಕಂಠಾಚಾರ್, ಹರ‍್ಮೋನಿಯಂ ಮಾಸ್ಟರ್ ಸಕ್ಕರೆ ಪಟ್ಟಣದ ಶಾಮಣ್ಣಿ, ಟಿ.ನರಸೀಪುರ ಚಿದರಹಳ್ಳಿ ಗ್ರಾಮದ ಸಿ.ಎನ್.ಶ್ರೀಕಂಠಮೂರ್ತಿ, ನಾಟಕ ಕಂಪನಿಗಳಲ್ಲಿ ಜೋಡಿ ನೃತ್ಯಗಾರ್ತಿ ಸಹೋದರಿಯರು ರಾಧಾ ಮತ್ತು ಶಾಂತ ಹಾಗೂ ಕಡೆಗೆ ಹರ‍್ಮೋನಿಯಂ ಜಾದುಗಾರ ಮೇಲುಕೋಟೆ ಎಂ.ಶ್ರೀಕAಠಶೆಟ್ಟರ ಪರಿಚಯ ಸೇರಿದಂತೆ ೧೨೫ ರಂಗ ಕಲಾವಿದರ ಪರಿಚಯ ಒಳಗೊಂಡ ಕಂಪನಿ ಕಲಾವಿದರು ಕೃತಿ ಗತಿಸಿಹೋದ ನಾಟಕ ಕಂಪನಿಗಳನ್ನು ಜೊತೆಗೆ ಪರಿಚಯಿಸುತ್ತದೆ. ಗೊರೂರು ಅನಂತರಾಜು, ಹಾಸನ. ಪ

ಹೆಚ್‌ ಎಸ್ ಗೋವಿಂದಗೌಡ ಅವರ ಕೃತಿ “ಕಂಪನಿ ಕಲಾವಿದರು”ಅವಲೋಕನ ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ

ಪುಸ್ತಕ ಸಂಗಾತಿ ತಿಲಕಾ ನಾಗರಾಜ್ ಹಿರಿಯಡಕ ಡಾ| ಶ್ರುತಿ ಮಧುಸೂದನ್ “ಪೇರಳೆ ಕಾಕು” ಜೀವನದಲ್ಲಿ ಸದಾ ಜೊತೆಗಿದ್ದು, ನಿಸ್ವಾರ್ಥದಿಂದ, ಮುನ್ನಡೆಸೋ ಗೆಳೆಯ ಅಥವಾ ಗೆಳತಿ ಯಾರಾದರೂ ಇದ್ದಾರೆ ಅಂದ್ರೆ ಅದು ಪುಸ್ತಕ ಮಾತ್ರ. ಪುಸ್ತಕ ಯಾವತ್ತೂ ನಮಗೆ ಮೋಸ ಮಾಡೋದಿಲ್ಲ. ಬದಲಾಗಿ, ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ನಮ್ಮನ್ನು ಪ್ರಬುದ್ಧರನ್ನಾಗಿಸುತ್ತದೆ. ನಾನಿಂದು ನಿಮಗೆಲ್ಲ ಪರಿಚಯಿಸ ಹೊರಟಿರುವ ಪುಸ್ತಕದ ಹೆಸರು “ಪೇರಳೆ ಕಾಕು”.           ಪೇರಳೆ ಕಾಕು ರುದ್ರಾಗ್ನಿ ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ. ಇಲ್ಲಿ ಒಟ್ಟು 13 ಕಥೆಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ.  ಪುಟಗಳನ್ನು ತೆರೆಯುತ್ತಾ ಹೋದಂತೆ ಎಲ್ಲಾ ಕತೆಗಳು ನಿಮ್ಮನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಓದಿಸಿಕೊಂಡು ಹೋಗುತ್ತವೆ. ನೀವೇನಾದ್ರು ಈ ಪುಸ್ತಕ ಹಿಡಿದಿರೋ ಅದ್ಭುತವಾದ ಕಥಾಲೋಕದಲ್ಲಿ ಸಂಚರಿಸುತ್ತಿರುವ  ಅನುಭವ ನಿಮ್ಮದಾಗುತ್ತದೆ. ಅಷ್ಟರಮಟ್ಟಿಗೆ ರುದ್ರಾಗ್ನಿ ತಮ್ಮ ಪದಗಳ ಮೂಲಕ ಜಾದು ಮಾಡಿದ್ದಾರೆ.ಪೇರಳೆ ಕಾಕು, ರಾಸತಿ,  ಸಾರ, ತಾರಾ, ರಾವತಿ, ಪಾಂಡು, ಧಾತ್ರಿ ಹೀಗೆ ಹಲವು ಪಾತ್ರಗಳು ಕಥೆ ಓದಿ ಮುಗಿದ ಮೇಲೂ ಮತ್ತೆ ಮತ್ತೆ ಕಾಡುತ್ತವೆ. ಛೆ! ಎಂದು ನೀಡುಸುಯ್ಯುವಂತೆ ಮಾಡುತ್ತವೆ. ಹಾಗಾದ್ರೆ ಎಲ್ಲವೂ ದುಖಾಂತ್ಯ ಕಥೆಗಳೇನು? ಅಂದ್ಕೊಂಡ್ರ ಅಲ್ಲ ಇಲ್ಲಿ ಸುಖಂತ್ಯ ಕಥೆಗಳು ಇವೆ. ಗಂಡ ತರುವ ಸಂಭಳವನ್ನು ಹೊಟ್ಟೆ ಬಟ್ಟೆ ಕಟ್ಟಿ ಜತನದಿಂದ ಖರ್ಚು ಮಾಡೋ ಸೌರಭ, ಗಂಡ ಮಕ್ಕಳಿಗಾಗಿ ತನ್ನ ಕನಸನ್ನೆ ಮರೆತು ಬದುಕುವ ಆರತಿ ಅಂತ ಪಾತ್ರಗಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಅನ್ನಿಸುತ್ತದೆ.       ಹಾಂ ಎಲ್ಲವನ್ನೂ ನಾನೇ ಹೇಳ್ತಾ ಹೋದ್ರೆ ಏನಿದೆ… ನಿಮಗೂ ರುದ್ರಗ್ನಿಯ ಪದಗಳ ಲೋಕದಲ್ಲಿ ಸಂಚರಿಸಬೇಕೆ? ಹಾಗಾದ್ರೆ ಯಾಕೆ ತಡ? 9591889261ಈ ಸಂಖ್ಯೆಯನ್ನು ಸಂಪರ್ಕಿಸಿ ಒಂದೊಳ್ಳೆ ಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಿ. ತಿಲಕಾ ನಾಗರಾಜ್ ಹಿರಿಯಡಕ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ Read Post »

You cannot copy content of this page

Scroll to Top