ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ರಾಜೇಶ್ವರಿ ಪ್ರಕಾಶ ಅವರ ಕವಿತೆ “ಸಾಧನೆ”

ಕಾವ್ಯ ಸಂಗಾತಿ ರಾಜೇಶ್ವರಿ ಪ್ರಕಾಶ “ಸಾಧನೆ” ಚಿಂತನ ಮಂಥನ ಮಾಡು ಮನವೇಅರಿವಿನ ಪೊರೆಯ ಕಿತ್ತೆಸೆದು ನಾನಾ ವಿಧದ ಅಭಿರುಚಿ ಇರಲುರಸಸ್ವಾದನೆ ನಿನಗಿಹುದು ತಡೆಯುವರಾರು ನೀ ಸಾಗುತಿರಲುನಿನ್ನ  ಸಾಧನೆ  ದೃಢ ವಾಗಿರಲು ಕಲ್ಲುಮುಳ್ಳಿನ ದಾರಿಯಿದುಮೆಟ್ಟಿ ಸಾಗು ನೀ ಛಲವಿರಲು ದಿಟ್ಟ ಹೆಜ್ಜೆಯನಿಟ್ಟು  ಮುನ್ನಡೆಅಟ್ಟ ಬೆಟ್ಟವೂ ಚಿಕ್ಕದೆ ನಿನ್ನೊಳಗಣ ಬಲವ ಕಾಣುನಿನಗೆ ಶಕ್ತಿಸ್ಫೂರ್ತಿಯದೇ ಒಮ್ಮೆ ಏರಿ ನೋಡು ಗುರಿಶಿಖರಕಷ್ಟ ಕೋಟಲೆಗಳು ಅದೋ ತೃಣ ಸಮಾನಸಾಧನೆಗೈದೆ ಅದೇ ನಿನ್ನ ಅಭಿಮಾನ. ರಾಜೇಶ್ವರಿ ಪ್ರಕಾಶ.

ರಾಜೇಶ್ವರಿ ಪ್ರಕಾಶ ಅವರ ಕವಿತೆ “ಸಾಧನೆ” Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಗಜಲ್ ಹಸಿರ ಹುಲ್ಲಿನ ಮೇಲೆ ನವಿರು ಬೆಳಕು ಬೀರುತಿದೆ ಉಸಿರಲಿ ಬೆರೆದ ಜೋಡಿಗೆ ಪವನ ಹರಸಿದಂತೆ ತೋರುತಿದೆ. ದೂರದಲಿ ಹೆಂಚಿನ ಮನೆ ಇದ್ದರೆ ಅದೆಷ್ಟು ಚೆಂದವಲ್ಲವೇ ಕರಗಳ ಚಾಚಿ ಮಲಗಿದ ದೃಶ್ಯ ಮೋಜು ತರುತಿದೆ. ಎತ್ತರದ ಮರಗಳು ಸೂರ್ಯನ ಕಿರಣಗಳ ಬಾಚಿ ತಬ್ಬಿಕೊಂಡಿವೆ.ಉತ್ತರದ ದಿಕ್ಕಿನಲಿ ಉದ್ದಕ್ಕೆ ದಾರಿ ಸ್ವಾಗತ ಕೋರುತಿದೆ. ಮಂಗಳದ ಕೋಮಲೆಗೆ ಸುಖದ ದಾಂಪತ್ಯ ನಾಂದಿ ಹಾಡಿದೆಅಂಗಳದ ರಾತ್ರಿರಾಣಿ ಮದಿರೆಯಲಿ  ಕನಸು ಕರಗಿ ಸೋರುತಿದೆ. ಜೀವನದ ಸಿಹಿಕಹಿಗಳ ಅರಿವು ಜಯದ ಸೋಪಾನ ತೂಗುವುದು ಪಾವನದ ಬದುಕು ದಾಂಪತ್ಯಕ್ಕೆ ಅಡಿಯಿಟ್ಟು ಸಂಭ್ರಮ ಏರುತಿದೆ.ಶ್ರೀಜಯ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ

ಎನ್.ಜಯಚಂದ್ರನ್ ಅವರ ಕವಿತೆ “ಧರೆಯ ದಿವ್ಯಾಭಿಷೇಕ”

ಕಾವ್ಯ ಸಂಗಾತಿ ಎನ್.ಜಯಚಂದ್ರನ್ “ಧರೆಯ ದಿವ್ಯಾಭಿಷೇಕ” ನೀಲಗಗನದ ನುಣುಪಿನ ಹಾಳೆಯಲಿಕರಿಮೋಡಗಳ ಕಲಾಸಂಗಮ;ಮಿಂಚಿನ ಬೆರಳಲಿ ಬರೆದ ಕವಿತೆಗೆಗುಡುಗಿನ ನಾದವೇ ಮಂಗಳಗಾನ. ಮಳೆ ಬಂದರೆ—ಭೂಮಿಯ ಮಸ್ತಕದಲಿ ಮುತ್ತಿನ ತಿಲಕ,ಮಣ್ಣಿನ ಮಡಿಲಲಿ ಪರಿಮಳದ ಪರಿಮಳ,ಒಣಗಿದ ಜೀವದ ಎದೆಯೊಳಗೆಆಶೆಯ ಅಂಕುರದ ನವಚೇತನ. ಪ್ರತಿ ಹನಿಯೂಸ್ವರ್ಗದ ಕಲಶದಿಂದ ಜಾರಿದ ಅಮೃತಬಿಂದು;ಪ್ರತಿ ತುಂತುರುವೂಪ್ರಕೃತಿಯ ವೀಣೆಯ ತಂತಿಯಲಿ ಮೂಡಿದ ರಾಗ. ಗುಡ್ಡಗಳು ಹಸಿರಿನ ಶಾಲು ಆವರಿಸಿದರೆ,ಕಣಿವೆಗಳು ನಗುವಿನ ಹಾರ ತೊಟ್ಟವು;ಜಲಪಾತಗಳು ಬೆಳ್ಳಿಯ ಜಡೆಯಾಗಿಬಂಡೆಗಳ ಭುಜದ ಮೇಲೆ ಹರಿದವು. ನದಿಯು ನಾಚಿದ ನವವಧುವಾಗಿತಿರುವು ತಿರುವಿನಲ್ಲಿ ತಾಳ ಹಾಕಿದಳು;ಗಾಳಿಯು ಕೊಳಲಾಗಿ ನುಡಿದಾಗಮರಗಳು ಭಕ್ತರಂತೆ ತಲೆದೂಗಿದವು. ನವಿಲು ನೀಲಾಂಬರದ ನರ್ತಕನಾಗಿಮೋಡಗಳ ರಂಗಮಂದಿರದಲ್ಲಿ ಕುಣಿದಿತು;ಕೋಗಿಲೆಯ ಕಂಠದ ಕಾವ್ಯಗಾನಕ್ಕೆವನದ ಹೃದಯವೇ ತಾಳವಾಯಿತು. ರೈತನ ಕಣ್ಣಲಿ ಮಳೆಯೊಂದುಸಂಪತ್ತಿನ ಕನಸಾಗಿ ಅರಳಿತು;ಹೊಲದ ಪ್ರತಿಯೊಂದು ಮಣ್ಣುಕಣವೂಸುವರ್ಣ ಧಾನ್ಯಗಳ ಭವಿಷ್ಯ ಬಿತ್ತಿತು. ಮಳೆಯೇ…ನೀ ಕೇವಲ ಜಲಧಾರೆಯಲ್ಲ,ಕರುಣೆಯ ಕಡಲು;ನೀ ಕೇವಲ ಋತುವಲ್ಲ,ಸೃಷ್ಟಿಯ ಪುನರ್ಜನ್ಮ. ನೀ ಸುರಿದರೆಒಣಗಿದ ಬದುಕು ಹಸಿರಾಗುತ್ತದೆ,ಬತ್ತಿದ ಹೃದಯ ಗೀತವಾಗುತ್ತದೆ,ಬರಿದ ಭೂಮಿ ಭರವಸೆಯಾಗುತ್ತದೆ,ಮಾನವನ ಮನವು ಮಾನವೀಯತೆಯಿಂದ ತೇವವಾಗುತ್ತದೆ. ಬಾ ಮಳೆಯೇ,ನಿನ್ನ ಅಮೃತಧಾರೆಯ ಆಲಿಂಗನದಲ್ಲಿಈ ಧರೆ ಸದಾ ನಲಿಯಲಿ;ನಿನ್ನ ವೈಭವದ ವಂದನೆಯಲ್ಲಿಪ್ರಕೃತಿಯ ಪ್ರತಿಯೊಂದು ಉಸಿರೂಅನಂತ ಕಾವ್ಯವಾಗಿ ಅರಳಲಿ! ಎನ್.ಜಯಚಂದ್ರನ್

ಎನ್.ಜಯಚಂದ್ರನ್ ಅವರ ಕವಿತೆ “ಧರೆಯ ದಿವ್ಯಾಭಿಷೇಕ” Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ತಪ್ಪು ಯಾರದೇ ಆಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆಸರಿ ನಿಮ್ಮದೇ ಇದ್ದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾ ನೀ ಅವರಿವರು ಮೇಲು ಕೀಳು ಬಿಟ್ಟುಹಾಕಿಹಿಂದೆ ಏನೇ ನಡೆದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಸೇಡಿನಿಂದೇ ಕೇಡು ಕೋಪ ತಾಪ ಸುಟ್ಟು ಹಾಕಿಅರಿಯದ ಪ್ರಮಾದವಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ತಪ್ಪಿ ಆಡಿದ ಮಾತು ಕೊಟ್ಟ ಭಾಷೆ ಬದಲಾಗದುಸರಿ ತಪ್ಪುಗಳು ತೆಪ್ಪಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಕಲಹಗಳು ಇಂದಿನವಲ್ಲ ಬಾಳು ಕಟ್ಟಿದಂದಿನವುತೆರವು ಕೊಡುವುದಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ನಾಗರೀಕನೆನಿಸಿದ್ದೆ ಈ ನಾಲಿಗೆಯ ನಲಿವಿನಿಂದಅವರೇ ದೊಡ್ಡವರಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಅನುಳ ಅಂತರಂಗದಿ ಪ್ರಶಾಂತತೆ ಮನೆ ಮಾಡಲಿಆತುರದ ಎಡರುತೊಡರಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ”

ಕಾವ್ಯ ಸಂಗಾತಿ ಕಾರ್ತಿಕ್ ಭಟ್ ಬಳಗುಳಿ “ನನ್ನೆದೆಯ ಗೂಡಿನಲ್ಲಿ”‌ ನನ್ನೆದೆಯ ಗೂಡಲ್ಲಿ ಧಗಧಗಿಸುತಿದೆಬೆಂಕಿಯ ಜ್ವಾಲೆಹೊತ್ತಿ ಉರಿಯುತ್ತಿದೆಕೆನ್ನಾಲಿಗೆಆರಿಸಬೇಕಿದೆಜ್ವಾಲಾಮುಖಿಯಾಗುವ ಮುನ್ನ….ದಡಕ್ಕೆ ಬಂದು ಅಪ್ಪಳಿಸಿ ಬರುವ ಅಲೆದಡವನ್ನು ಸ್ವಚ್ಚಗೊಳಿಸುವಂತೆ……. ನನ್ನೆದೆಯ ಗೂಡನ್ನ ಆರಿಸಬೇಕಿದೆಆಹುತಿಯಾಗುವ ಮುನ್ನಹೊಗೆಯಾಡುತ್ತಿದೆಸುಟ್ಟುಹೋಗಿರಬಹುದೇ ಸುಡುತ್ತಿರುವ ಬೆಂಕಿಗೆಮಳೆ ಹನಿಯ ಸಿಂಚನಹರಿಸಬೇಕಿದೆ….ಆರಿಸಬೇಕಿದೆನನ್ನೊಡಲ ಕಾವನ್ನ…. ದೂರದಲ್ಲೆಲ್ಲೋ ಬರುತಲಿದೆಸುಟ್ಟ ವಾಸನೆತಂಪಾಗಿಸಬೇಕಿದೆಬಿಸಿಯಾದ ಒಡಲ ಕಾವನ್ನಆರಿಸಬೇಕಿದೆದೀಪ ಆರುವ ಮುನ್ನ…….ಹದಗೊಳಿಸಿ ಬಿತ್ತಬೇಕಿದೆಪ್ರೀತಿಯೆಂಬ ಬೀಜವನ್ನ …..ಮತ್ತೇ ನಳನಳಿಸಿ ಕುಣಿಯುವಂತೆಮಾಡಬೇಕಿದೆ ನನ್ನೆದೆಯ ಗೂಡನ್ನ….. ಕಾರ್ತಿಕ್ ಭಟ್ ಬಳಗುಳಿ

ಕಾರ್ತಿಕ್ ಭಟ್ ಬಳಗುಳಿ ಅವರ ಕವಿತೆ “ನನ್ನೆದೆಯ ಗೂಡಿನಲ್ಲಿ” Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ“ ನೆಲದಿಂದ ಮೇಲಕ್ಕೆಹಾರಿತು ವಿಮಾನ,ಹಕ್ಕಿಯಂತೆ ನಲಿದಿದೆ ನನ್ನಯ ಮನ.ಮೋಡಗಳ ನಡುವೆ ಸಾಗುವ ಈ ಪಯಣ,ಕಾಣದ ಲೋಕದ ಒಡನಾಟದ ನಯನ. ಕೆಳಗೆ ನೋಡಿದರೆ ಕಾಣದು ಗಡಿಗಳು,ಚಿಕ್ಕದಾಗಿ ಕಾಣುವವು ದೊಡ್ಡ ನದಿಗಳು.ಮನುಷ್ಯರ ಸೃಷ್ಟಿಯ ಈ ಅದ್ಭುತ ಯಾನ,ಬಾನಿನಂಚಿಗೆ ಮುಟ್ಟುವ ಸುಂದರ ಪಯಣ. ಬಿಳಿ ಮೋಡಗಳ ಹಾಸಿಗೆ ಮೈಯನ್ನು ತುಂಬಿ,ಕನಸಿನ ಲೋಕಕ್ಕೆ ಕರೆದೊಯ್ಯುವ ಹಾದಿ.ಗಾಳಿಯ ರಭಸದಲಿ ತೇಲುತ್ತಾ ಮುಂದೆ,ಮರೆಯಾಯಿತು ಎಲ್ಲ ಚಿಂತೆಯೂ ಒಂದೊಂದೇ  ಉಷಾರಾಣಿ ಗುರುಪ್ರಸಾದ್ ಕೊಡಗು

ಉಷಾರಾಣಿ ಗುರುಪ್ರಸಾದ್ ಕೊಡಗು “ಹಾರಿತು ವಿಮಾನ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಯಾನ ಹೊರಟಾಗ…..” ಮುಸ್ಸಂಜೆಗೊಂದುಬೆಳಗಿನ ಅವಸರಕ್ಕೊಂದುಹೊರಡುವ ಹಕ್ಕಿಗಳಸಾಲೊಂದು ಎಲ್ಲೋಹೊರಟಂತಿದೆಕಾಲದ ಅಳತೆಯೊಳಗೆಕಳೆದ ಸಮಯವಹುಡುಕಿ ಉಸಿರಿನಸಂಭ್ರಮಕ್ಕೆ ಚಿತ್ರ ಬರೆಯಲುದಾರಿಯಿರದ ದಾರಿಕಾಣದ ಹೆಜ್ಜೆಯ ಪಯಣನಭಕೆ ನಂಬಿಕೆ ಅಂಟಿಸಿಇಳೆಗೆ ಇಳಿವ ಕಾತರಮತ್ತೆ ಬದುಕಿನ ಸುತ್ತಅವಸರದ ಇಡುಗಂಟುಹಸಿವಿಗೆ ಅನ್ನದ ನಗುಮಣ್ಣೊಳಗೆ ಬೇರು ಬಿಟ್ಟಿದೆಭತ್ತವಾಗಲುಉಸಿರು ಉಳಿಸಲುನೆಲದ ಮಾತುಹಕ್ಕಿಗೆ ಗೊತ್ತುಗೂಡಿನ ಒಳಗೆಸಾಲು ಕಟ್ಟಿದ ಕನಸಿನಮೆರವಣಿಗೆಯ ಯಾನತಲುಪಿದ ಮೇಲೆತಿರುಗುವ ಗಡುವುಒಂದು ಪಯಣದ ಬದುಕುಸುಪ್ತ ನದಿಯಂತೆಹರಿದಷ್ಟು ಪರಿಶುದ್ಧತೆಮನದ ಬಿಂಬದ ಚಿತ್ರದಾರಿಯ ಹುಡುಕಬೇಕುಯಾನ ಹೊರಡಬೇಕು ನಾಗರಾಜ ಬಿ. ನಾಯ್ಕಹುಬ್ಬಣಗೇರಿ.ಕುಮಟಾ.

ನಾಗರಾಜ ಬಿ. ನಾಯ್ಕ ಕವಿತೆ “ಯಾನ ಹೊರಟಾಗ…..” Read Post »

ಕಾವ್ಯಯಾನ

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು”

ಕಾವ್ಯ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಕಾಡಿಸದಿರು” ಕೊಳಲನೂದಿ ಕರೆವಾಗಕರಗಿ ಹೋದೆ ಮಾಧವಪ್ರೀತಿಯ ಕರೆಯ ತಿರಸ್ಕರಿಸಿಬಾಳಲು ಸಾಧ್ಯವ ನವಿಲು ಗರಿಯ ಹಿಡಿದು ಬಂದೆನಲ್ಮೆಯ ಗೋಪಾಲನಿಗಾಗಿಬೆಣ್ಣೆಯ ಮಡಿಕೆ ಹೊತ್ತು ತಂದೆಕಳ್ಳನಾದ ಆ ಕೃಷ್ಣನಿಗಾಗಿ ಬೃಂದಾವನದೊಳಗೆ ಅವಿತಅವನ ಹುಡುಕತ ಬಂದೆರಂಗಿನೋಕುಳಿ ಎರಚಿಮರೆಯಾದವನ ಒಲವಲಿ ನೆನೆದೆ ಎದೆಯ ಬಯಕೆಯ ಅರಿತವನಾದರೂಎಲ್ಲರೆದುರು ಮಗ್ಧನ ರೀತಿ ನಿಂತು ಸತಾಯಿಸಿಗೋಪಿಕೆಯರ ಜೊತೆ ಕಳೆದು ಹೋದಗೋವರ್ಧನನ ಗುರುತು ಹಿಡಿದೆ ಭ್ರಮಿಸಿ ಇನ್ನು ಕಾಡಿಸ ಬೇಡ ಮಾಧವವಿರಹದಲಿ ಬೆಂದು ಸೋತಿದೆ ಜೀವಆನಂದದ ಯಮುನೆಯಲಿ ಮೀಯಿಸುಜೀವಚೇತನವಾಗಿ ಕೈಹಿಡಿದು ಮುನ್ನಡೆಸು ಅಮು ಭಾವಜೀವಿ ಮುಸ್ಟೂರು

ಅಮು ಭಾವಜೀವಿ ಮುಸ್ಟೂರು ಅವರ ಕವಿತೆ”ಕಾಡಿಸದಿರು” Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ  ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ  ಗಜಲ್ ಹುಟ್ಟಿ ಬಂದಿಹೆ ನೀನು ಈ ಭುವಿಯಲಿಅನುಭವಿಸಲೆಲ್ಲವನು ಈ ಬದುಕಲಿ.. ಸುಖದ ಜೊತೆಗೆ ಸ್ವಲ್ಪ ದುಃಖವಿರಲಿಬೆಲ್ಲದ ಜೊತೆ ತುಸು ಬೇವು ಇರಲಿ.. ನೋವುನಲಿವುಗಳು ಕೂಡಿ ಬರಲಿಮೊಗದಿಎಂದೆಂದೂ ನಗುತುಂಬಿರಲಿ.. ಹಗಲು ಬರುವುದು ಇರುಳಸರಿಸುತಲಿದೀಪಬೆಳಗುವುದುತಿಮಿರದೂಡುತಲಿ.. ಸ್ನೇಹಪ್ರೀತಿಗಳು ಹೃದಯದೊಳಿರಲಿಕೋಪ ಅಸೂಯೆಎಲ್ಲ ಭಸ್ಮವಾಗಲಿ.. ಒಲವಝರಿಯೊಂದುಜಿನುಗುತಿರಲಿಮನದೊಳೆಂದೂ ಅದು ಚಿಮ್ಮುತಿರಲಿ..  *ಇರುವಂತೆ ಇರಬೇಕು* ದೇವನೊಲುಮೆಯಲಿಬಾಳಿಗದು ಭದ್ರತೆ ನಿನಗೆ ನೆನಪಿರಲಿ.. ಜಗದ ಟೀಕೆಗಳ ನೀ  ಮರೆಯುತಿರಲಿಏನೇ ಆದರೂ ಎಂದೂ  ಹೂ ಮನವಿರಲಿ…! ಹಮೀದಾ ಬೇಗಂ ದೇಸಾಯಿ 

ಹಮೀದಾ ಬೇಗಂ ದೇಸಾಯಿ  ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು”

ಕಾವ್ಯ ಸಂಗಾತಿ ನಿರಂಜನ ನಾಯಕ “ಅನುಭವಿ ಮೇಷ್ಟ್ರು” ಒಮ್ಮೆ ಕಣ್ಣೀರಿಟ್ಟಿದ್ದರುಆ ಒಳ್ಳೆಯ ಮೇಷ್ಟ್ರು—ಪಾಠಕ್ಕೆ ತಡೆಯೊಡ್ಡಿ,ಸದಾ ರಂಪ ಮಾಡುತ್ತಿದ್ದಮಕ್ಕಳ ರಗಳೆಗೆ ಬೇಸತ್ತು… ದಿನಗಳು ಉರುಳಿದವು,ಮಕ್ಕಳ ಪಡೆ ಬದಲಾಯಿತು;ಬಂದ ಹೊಸಬರಂತೂಹಳೆಯವರಿಗಿಂತ ಒಂದು ಕೈ ತಂಟೆಕೋರರೇ!ಆದರೂ ಈ ಬಾರಿಮೇಷ್ಟ್ರು ನಗುತ್ತಲೇ ಪಾಠ ಮಾಡಿದರು,ತಮ್ಮ ಮುಂದಿರುವುದುಮಹಾ ಪಟಿಂಗರೆಂಬಅರಿವೇ ಇಲ್ಲದೇ… ಯಾವ ಕಣ್ಣೀರು ಅಂದು ಅವರನ್ನು ಕುಗ್ಗಿಸಿತ್ತೋ,ಅದೇ ಇಂದು ಅವರ ಆತ್ಮಬಲವಾಗಿತ್ತು!ಅಂದು ಬೆಟ್ಟದಂತಿದ್ದ ಅಡಚಣೆ,ಇಂದು ಅವರ ಬೋಧನೆಯ ಸಹಜ ರಾಗವಾಗಿತ್ತು. ಗಲಿಬಿಲಿಯ ಪ್ರತಿ ತರಗತಿಯೂ,ಸಾಟಿಯಿಲ್ಲದ ಪ್ರತಿ ತುಂಟ ಮಗುವೂ—ಅವರ ಭಾವಗಳ ಹದಗೊಳಿಸಿದವು,ಕಾಲದ ಜೊತೆ ಬೆಳೆಸಿದವು.ಅವರು ಒಳಗೂ ಬೆಳೆದರು, ಹೊರಗೂ ಮಾಗಿದರು—ಏಕೆಂದರೆ,ಅವರು ಕಲಿಸಿದ ಪ್ರತಿ ಮಗುವೂಅವರಿಗೊಂದು ಹೊಸ ಪಾಠ ಕಲಿಸಿತ್ತು;‘ಬೋಧಿಸುವುದೆಂದರೆ ತಿದ್ದುವುದಲ್ಲ, ತಾಳ್ಮೆಯಿಂದ ಕಲಿಯುವುದು’ ಎಂದು. ನಿರಂಜನ ನಾಯಕ

ನಿರಂಜನ ನಾಯಕ ಕವಿತೆ “ಅನುಭವಿ ಮೇಷ್ಟ್ರು” Read Post »

You cannot copy content of this page

Scroll to Top