ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ”

ಕಾವ್ಯ ಸಂಗಾತಿ ಎಮ್ಮಾರ್ಕೆ “ನಾವಿರೋದೇ ಹೀಗೆ” ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮಮನೆಗೆ ತಗುಲುವುದೆಂಬ ಪ್ರಜ್ಞೆಯಿಲ್ಲ,ನಮ್ಮ ಮನೆಗೆ ಬೆಂಕಿ ಬಿದ್ದಾಗಲಷ್ಟೇನಾವು ಆರಿಸಲು ಅಣಿಯಾಗುವೆವು ಕಣ್ಣ ಮುಂದೆ ವಂಚನೆ,ಮೋಸನಡೆದರೂ ತಡೆಯುವ ತುಡಿತವಿಲ್ಲ,ನಮ್ಮ ಹತ್ತಿರಕ್ಕೆ ಬಂದಾಗಲಷ್ಟೇನಾವು ಬಿಡದೇ ಹರಿಹಾಯುವೆವು ನಮಗ್ಯಾಕೆ ಇಲ್ಲದ ಉಸಾಬರಿನಮಗೂ ಅದಕೂ ಸಂಬಂಧವಿಲ್ಲ,ನಮಗೆ ಸಂಬಂಧ ಪಟ್ಟಾಗಲಷ್ಟೇಎದೆಯನ್ನುಬ್ಬಿಸಿ ಎದುರಾಡುವೆವು ಬಿಟ್ಟಿ ಉಪದೇಶ ನೀಡುವವರಸಂಖ್ಯೆಗಂತೂ ಕೊರತೆಯೇ ಇಲ್ಲ,ಸ್ವಾರ್ಥದ ಸದುದ್ದೇಶವಿದ್ದರಷ್ಟೇಉದ್ದ ಉಪದೇಶವ ನೀಡುವೆವು ಬಹುತೇಕ ಪ್ರಭು,ಪ್ರಜೆಗಳಲ್ಲಿನಅಹಂಕಾರಕ್ಕ್ಯಾವ ಅಳತೆಗೋಲಿಲ್ಲ,ಕಾಗೆಯ ಬಣ್ಣ ಬಿಳುಪೆಂದರೂಹೂಂ ಎಂದು ಗೋನು ಹಾಕುವೆವು ಒಬ್ಬನೇ ಸೂರ್ಯ ನಿತ್ಯ ಜಗವಬೆಳಗುವುದರ ಪರಿವೇ ನಮಗಿಲ್ಲ,ನಮ್ಮೊಬ್ಬರಿಂದಲೇ ಏನಾದೀತು!ಎಂದು ಮನದಲ್ಲೇ ಮರುಗುವೆವು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ನಾವಿರೋದೇ ಹೀಗೆ” Read Post »

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್

ಕಾವ್ಯ ಸಂಗಾತಿ ಹಮೀದಾ ಬೇಗಂ ದೇಸಾಯಿ‌ ಗಜಲ್ ಮುಗ್ಧ ಜೀವಿಗಳ ರಕ್ತಪಾತಕೆ  ಬೆಚ್ಚಿದ  *ರಾತ್ರಿಗಾಗಿ* ಹಣತೆ ಬೆಳಗುವೆದ್ವೇಷ ಕಲಹ ಕ್ರಾಂತಿಗಳಿಂದ  ನರಳಿದ  *ಧಾತ್ರಿಗಾಗಿ* ಹಣತೆ  ಬೆಳಗುವೆ ತಲ್ಲಣ ಗೊಂಡಿದೆ  ಮನುಕುಲ ಭೀಕರ ಯುದ್ಧಗಳ  ಸಿಡಿಲಿನಿಂದಕವಿದ ಕರಾಳ  ಮುಖವಾಡಗಳ ಕಳಚುವ  *ಖಾತ್ರಿಗಾಗಿ* ಹಣತೆ  ಬೆಳಗುವೆ ನಾನೆಂಬ ಅಹಂಕಾರದ ಕ್ರೂರ ವರ್ತುಲಗಳು   ಸುತ್ತಿವೆ  ಜಗದಗಲಕ್ಷುದ್ರರಲಿ ಅವಿತ  ದುರುಳತನಗಳ ಮೆಟ್ಟುವ  *ಕ್ಷಾತ್ರಿಗಾಗಿ* ಹಣತೆ ಬೆಳಗುವೆ ಭಯದ ನೆರಳುಗಳು ಆವರಿಸಿ  ಹೆದರಿಸುತಿವೆ  ಹೆಜ್ಜೆ  ಹೆಜ್ಜೆಗೆ ಅಲ್ಲವೇಭ್ರಾತೃತ್ವದ ಸ್ನೇಹ ವಿಶ್ವಾಸಗಳು  ಮೆರೆಯುವ  *ಜಾತ್ರಿಗಾಗಿ* ಹಣತೆ  ಬೆಳಗುವೆ ಒಳಗೊಳಗೆ ಉಸಿರುಗಳು ಮೌನವಾಗಿ  ಬಿಕ್ಕುತ್ತಿವೆ ಪ್ರತಿಷ್ಠೆಯ ಜಾಲಗಳಲಿ  ಸಿಲುಕಿ ಬೇಗಂಶಾಂತಿ ಪ್ರೇಮಗಳನು ನೀಡುವ  ದೂತನಾಗಿ  ಬರುವ  *ಯಾತ್ರಿಗಾಗಿ* ಹಣತೆ  ಬೆಳಗುವೆ ಹಮೀದಾಬೇಗಂ ದೇಸಾಯಿ

ಹಮೀದಾ ಬೇಗಂ ದೇಸಾಯಿ‌ ಅವರ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ ಅವರ ಕವಿತೆ ಕಾಗದದ ಮೇಲೆಬರೆಯಬೇಕೆಂದ ಸಾಲುಗಳುಇದ್ದಲ್ಲೇ ಕರಗಿಹೋದವು ಸುಮ್ಮನೇಗೆರೆಗಳ ಹಾಕಿಚಿತ್ರವಾಗಬೇಕಾದ ಚಿತ್ರಗಳೂರಸ್ತೆಗಳಾದವುಮರದ ನೆರಳಾಗಿಉಳಿಯಬೇಕಾದ ಹೂವುಗಳುಹಣ್ಣಿಗಾಗಿ ಇಳೆ ಸೇರಿತುಕಾಲದ ಸಹಜಓಟದ ಹರಿವಿಗೆಬಯಲು ನದಿಯಾಯಿತುಕಡಲು ಬದುಕಾಗಿಜೀವದ ಓಟ ಸಾಗಿತು ಮರದ ಮೇಲೊಂದು ಹಕ್ಕಿಕುಳಿತು ಗೂಡು ಕಟ್ಟುವುದುಹೇಗೆ ಎಂದು ನೋಡುತ್ತಿತ್ತುಹಾರಿ ಸಾಗಿ ಬದುಕಿನಉಸಿರಿಗೆ ಉಸಿರಾಗಿಕಣ್ಣೊಳಗೆ ಜಗವತುಂಬುತ್ತಿತ್ತು ಸುಮ್ಮನೇಗದ್ದೆಯ ಹಸಿರಿಗೆಚಿಗುರು ಮೂಡಿತ್ತುಮತ್ತೆ ಮೋಡದಿಮಳೆ ಹನಿಯ ಚಿತ್ರತಾನಾಗಿ ಮೂಡಿಜಗದಗಲದ ನೆಲಕೆತಂಪು ಹರಡಿತ್ತುಕಾಗದದ ಮೇಲೆಮೂಡಿದ ಬಣ್ಣಗಳೆಲ್ಲಾಗಾಳಿಯಲ್ಲಿ ತೇಲಿನೆಲಕೆ ಇಳಿದಿತ್ತುಮತ್ತೆ ಚಿತ್ರವಾಗುತ್ತನೆಲದೊಳಗೆ ಸೇರಿತ್ತು……. ನಾಗರಾಜ ಬಿ.ನಾಯ್ಕ

ನಾಗರಾಜ ಬಿ.ನಾಯ್ಕ ಅವರ ಕವಿತೆ Read Post »

ಕಾವ್ಯಯಾನ

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”

ಕಾವ್ಯ ಸಂಗಾತಿ ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ”. ಕಣ್ಣಿನ ನೋಟದಲ್ಲಿ ನೀಡಿದೆ ಭರವಸೆದೇವರಲಿ ನೀಡಿ ಬೇಡಿದೆ ಬೊಗಸೆಹೃದಯದಲಿ ನೀನೆಂದು ಸ್ಥಿರ ಮನಸೇನಿತ್ಯ ನೂತನ ನೆನಪೆoದು ನನಸೇ ಅಲೆ ಅಲೆಯಾಗಿ ಚಿಮ್ಮಿಸಿದೆ ಬಿಸಿ ಉಸಿರೇಬಾಳ ಬದುಕಲ್ಲಿ ನಮ್ಮಿಬ್ಬರ ಬೆರಸೇಸಂಸಾರದ ರಥ ನಡೆಸುವ ಕನಸೇತುಂಬುವುದು ಸಂತಸದ ಹೊಸ ಹಸಿರೇ ಬೆಚ್ಚನೆಯ ಗೂಡಲ್ಲಿ ಸುಂದರ ಲೋಕವದುಅನುಭವದ ಸವಿಸ್ತಾರ ಕೇಳುವುದುಜೀವನ ಚಕ್ರ ನಿಲ್ಲದೆ ಉರುಳುವುದುಸುಮಧುರ ಪ್ರೀತಿ ಅಳಿಯದೆ ಉಳಿಯುವುದು ಅನನ್ಯ ಅವಿಸ್ಮರಣೀಯ ಕಂಡ ಬೆರಗುಬೇಕಿಲ್ಲ ಜಂಜಾಟದ ಯಾವ ಕೊರಗುನೆಮ್ಮದಿಯ ಗೂಡಲ್ಲಿ ಕೈ ಹಿಡಿದು ಸಾಗುದೊರಕಿದೆ ಹೊಸತನದ ಹೊಸ ಮೆರಗು ಡಾ. ಲತಾ ಎ ಆರ್ ಬಾಳೆಹೊನ್ನೂರು.

ಡಾ. ಲತಾ ಎ ಆರ್ ಬಾಳೆಹೊನ್ನೂರು “ಭರವಸೆ” Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ “ಕವಿತೆ”

ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಕವಿತೆ ಎನಿತೊ‌ ಮಾತುಗಳುಮೌನದಲಿ‌ ಕರಗಿನಿಂತು ಹೋಗಿದೆಬಂಧವದು ಸೊರಗಿ ಎದೆಯ ಭಾವಗಳುಆಡದೆಯೆ ಉಳಿದುದೂರವಾದ ಹೃದಯಅಳುತಿದೆ ಮನದಿ ಕಾರಣವೆ ಇರದನೋವಿನ ಸರಮಾಲೆಯಾರದೇನೋ ಶಾಪವುತಿಳಿಯದಾವ ಲೀಲೆ ದಾಟದ ಸಾಗರವುಎದೆಗಳ ನಡುವೆಮುಗಿದು ಹೋದ ಮೇಲೆಮಾತವು ಬರಿ ಸಪ್ಪೆ ಕಡಿದ ಬಂಧವನುಜೋಡಿಸುವದೇ ತಂತುದಾರಿ ಕಾಣದ ಮನಮರುಗುತಿದೆ ಇಂತು ವೈ.ಎಂ.ಯಾಕೊಳ್ಳಿ

ವೈ.ಎಂ.ಯಾಕೊಳ್ಳಿ ಅವರ “ಕವಿತೆ” Read Post »

ಕಾವ್ಯಯಾನ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” ಮುಚ್ಚಿ ಬಚ್ಚಿ ಕಟ್ಟಿಟ್ಟ ಕನಸುಕೊಚ್ಚಿ ಹರಿದು ಹೋದ ಹಾಸುಮತ್ತೆ ಬಿಚ್ಚ ಸೂರೆಗೊಳ್ಳುತಿರೆ-ಮನಸ್ಸು!!೧!! ಕನಸು ನನಸಾಗುವ ಕನವರಿಕೆಕಳೆದು ಹೋದವೆಷ್ಟೋ ಮನದ ಅರಿಕೆಕೊಚ್ಚಿಕೊಂಡಯ್ಯದ ಮನ ಚೇತರಿಕೆ!!೨!! ಕಟ್ಟಿದ ಕಲ್ಪನೆ ಕನಸಾಗಿಯೇ ನಿಂದವೂಅದೆಂದೊ ಕಾಲ ಗರ್ಭದಿ ಅವಿತವುಮರೆಯಾದವೆಂದು ವಿಷಾದದಿ ಕುಳಿತಿರೆ..!!೩!! ಅದು ಎಲ್ಲಿಯೋ ಎನಿತೋ ಹೊಳೆದಬೆಳಕು …ನನ್ನ ಅಬ್ಬೇ ಕನ್ನಡಾಂಬೆ ಕೂಗಿದಥಳುಕು..ಕರೇಯುತಿರೆ ಅಕ್ಕರದಿ….!!೪!! ಮಾಸಿ ಕಳೆಗುಂದಿ ಹೋದ ಗತ್ತು-ಮತ್ತೆತರುತ್ತೀವಿ ಸಕಾರತೆ ಋಣ ಹೊತ್ತುಹರಡಿವೆ ಉಡಿ ತುಂಬ ನುಡಿ ಮುತ್ತು!!೫!! ಎದೆ ತುಂಬಿ ಬಂದ ನುಡಿ ಬೆಳಕು,ಪ್ರಕಾಶಮಾನ ಹೊಂಬೆಳಕಿನ ತುಳುಕುನುಡಿ ಅಮ್ಮನ ಶಬ್ದಗಳ ಚಳಕು…!!೬!! ಎಳೆ ಎಳೆ ಬಿಚ್ಚುತ್ತಿರೆ ಕಟ್ಟಿಟ್ಟ ಕನಸಿನಗಂಟಿನ ನಂಟು ನೋಡಿ ನಿಬ್ಬೆರಗಾಗಿಹರುಷದಿ ಮತ್ತೆ ನಲಿದಾಡುತ!!೭!! ಕಂಡ ಕಿರು ಗನಸು ಹೆಮ್ಮರವಾಗಿಬಿಚ್ಚಿಕೊಳ್ಳುತಿವೆ..ಚಂದ ಚೆಂದವಾಗಿಎತ್ತರ ಅಂಬರನೆತ್ತರಕ್ಕೆ ಪಸರಿಸಲು..!!೮!! ಪಡೆದ ಸನ್ಮಾನದ ಸುಮ್ಮಾನವಾಗಲು.. ಸವಿತಾ ದೇಶಮುಖ

ಸವಿತಾ ದೇಶಮುಖ “ಬಿಚ್ಚಿಕೊಳ್ಳುತ್ತಿದೆ ಕನಸು” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” ಮರೆಯದೇ ಬರೆದು ಬಿಡು ಪ್ರೀತಿ ನಿನ್ನ ಕಂಗಳ ಕಾಂತಿ ಮತ್ತು ನಿನ್ನಮರೆಗುಳಿತನದ ಶಾಂತಿಡಿಮೆನ್ಷಿಯಾ ಎಂದಾಗುವ ಮುನ್ನ ಬರೆದು ಬಿಡು ಪ್ರೀತಿ,ಪ್ರೀತಿ ಮಾಸುವಾ ಮುನ್ನಹೇಳಿಬಿಡು ಪ್ರೀತಿಯ ರೀತಿ! ಒಂದಾನೊಂದು ಕಾಲದ ಕಥೆಗಳು ಕಳೆದು ಹೋಗುವ ಮುನ್ನ,ಕಳೆದ ಕಥೆಗಳು ಧಾರಾವಾಹಿಯಾಗದೇಮಿದುಳ ಬಳ್ಳಿಯಿಂದ ಚಾಚಿಹೃದಯದಿಂದ ಚಿಮ್ಮುತ್ತಕಾಲಾಂತರ್ಗತವಾಗುವ ಮುನ್ನ. ಪ್ರೀತಿ ,ಕಾಲನ ತುಳಿತಕ್ಕೆ ನುಚ್ಚಾಗುವ ಮುನ್ನ ಸೋಸಿ ಬಿಡುನುಚ್ಚಿನ ನೆಚ್ಚಿನ ಪಾಯಸದ ಘಮ ನಾಸಿಕಕ್ಕೆ ತಲುಪುವ ಸುಮುಹೂರ್ತದ ಒಳಗೆ ನೀ ಹೊಗೆಯಾಗಿ ಬಿಡು ಹಬೆಯಾಗಿ ಬಿಡುಕಾಲ ಚಕ್ರನ ವೇಗಕ್ಕೆ ಸಿಲುಕಿ ಸೊಗಸಿ ಬಿಡು ಪ್ರೀತಿ ಇರುವಷ್ಟು ದಿನ ರಾತ್ರಿ ಸಮಯ!! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ “ಕಾಲ ಚಕ್ರನ ಪ್ರೀತಿ” Read Post »

ಕಾವ್ಯಯಾನ, ಗಝಲ್

 ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ  ವಾಣಿ ಭಂಡಾರಿ ಗಜಲ್ ಹಚ್ಚಿಟ್ಟ ಹಣತೆ ಎದೆಯನ್ನು ಸುಡುವಾಗ ಬೆಳಕಿನ ತಾಪವನ್ನು ಏನೆಂದು ಶಪಿಸಲಿಮಾತು ಕಳೆದುಕೊಂಡ ನಾಲಿಗೆ ಜೊತೆಗಿರುವಾಗ ಮೌನದ ನೋವನ್ನು ಏನೆಂದು ಕರೆಯಲಿ ಎಲ್ಲ ನಾಟಕ ಬರಿ ಪೊಳ್ಳು ಬಾಳ ಬಯಲಾಟದಲ್ಲಿ ನಡೆಯುತಿದೆ ತಾಲೀಮು ದಿಕ್ಕೆಟ್ಟುಇರುಳ ಬೆಳಕಿನಾಟದಲ್ಲಿ ರಾತ್ರಿ ಸಾವು ಹಗಲಿಗೆ ಹುಟ್ಟು ಕೂಡಿರುವಾಗ ಪ್ರೀತಿಯನ್ನು ಏನೆಂದು ಹೆಸರಿಸಲಿ ಹುಚ್ಚರ ಸಂತೆಯಲ್ಲಿ ತತ್ರಾಣಿ ಕನಸು ಸೋತು ಗೆಲುವಿನ ಕಂದೀಲು ಅಬ್ಬರಿಸುತ್ತಿದೆಜಾತಿ ಧರ್ಮ ಪ್ರೇಮಕ್ಕೆ ಕಾಮದ ಹಣೆಪಟ್ಟಿ ಕಟ್ಟಿರುವಾಗ ಬದುಕನ್ನು ಏನೆಂದು ಬಣ್ಣಿಸಲಿ. ಮೆಚ್ಚಿಸೊ ಹುಚ್ಚು ಹಂಗಿಸೊ ಆಸೆ ಇರದ ಭಾವಗಳು ಜನ್ನತ್ ಗೆ ಧಾವಿಸುತ್ತಿವೆಒಂದು ದಿನದ ಸಾವು ಸೋಲಾಗಿ ಕೈಹಿಡಿವಾಗ ಬಾಳ ಬಣ್ಣವನ್ನು ಏನೆಂದು ತಿಳಿಯಲಿ. ಮೂರ್ಖರ ಮಧ್ಯೆ ಸ್ವರ್ಗಕ್ಕೆ‌ ದಾರಿಕೇಳಬೇಡ ವಾಣಿ ಏಕತಾರಿ ನುಡಿಸುತ್ತ ಸಾಗುಆತ್ಮದ ಬಾಗಿಲು ಮುಕ್ತಿಯನ್ನೇ ಬೇಡುವಾಗ ಕುಹಕಿಗಳ‌ ಮನವನ್ನು ಏನೆಂದು ಚಿತ್ರಿಸಲಿ. ವಾಣಿ ಭಂಡಾರಿ                    

 ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಕೊರಳು ಕಂಪಿಸಿ ಬಿಗಿಯಾದರೆ ಪ್ರೇಮಕಣ್ಣೆರಡು ಮಿಳಿಸಿ ಹಸಿಯಾದರೆ ಪ್ರೇಮ ಮನದ ಬಯಲಲ್ಲೆಲ್ಲಾ ಅರಳಿ ಮಲ್ಲಿಗೆಜೀವ ಆಲಾಪಿಸಿ ಬಿಸಿಯಾದರೆ ಪ್ರೇಮ ದೇಹದರಮನೆಯ ತುಂಬಾ ಸಂಚಲನಭಾವ ಬಯಸಿ ಖುಷಿಯಾದರೆ ಪ್ರೇಮ ಹಂಬಲದಲೆ ಬೋರ್ಗರೆದು ಅಪ್ಪಳಿಸಿಆಸೆ ಅಂಕುರಿಸಿ ಹಸಿಯಾದರೆ ಪ್ರೇಮ ಬಯಕೆ ಬಾಂದಳ ಕುಣಿಕುಣಿದು ನಲಿದುಮಿಡಿವ ಎದೆ ಕಲಕಿ ತೃಷೆಯಾದರೆ ಪ್ರೇಮ ನರನಾಡಿಗಳಲಿ ನಾದಂತರಂಗ ಮೃದಂಗಹೃದಯ ಮಂಪರಿಸಿ ನಿಶೆಯಾದರೆ ಪ್ರೇಮ ಅನುಳ ಪ್ರೀತಿಯ ಶಿಶೆ ತುಂಬಿ ತುಳುಕುತ್ತಿರೆಬಾನು ಭುವಿ ರಮಿಸಿ ಒಂದಾದರೆ ಪ್ರೇಮ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ”

ಚಂದ್ರನ ಬೆಳಕಲಿ
ಬೆಳ್ಳಿ ತರಂಗ,
ಸೂರ್ಯ ಕಿರಣದಲ್ಲಿ
ಚಿನ್ನದ ಹೊಳಪು

ವಿಜಯಲಕ್ಷ್ಮಿ ಹಂಗರಗಿ “ಸಾಗರದಾಳದ ಅದ್ಬುತ ಲೋಕ” Read Post »

You cannot copy content of this page

Scroll to Top