ಕಾವ್ಯಯಾನ

ಕಾವ್ಯಯಾನ

ಸಿಗಲಾರದ ಅಳತೆ ವಸುಂದರಾ ಕದಲೂರು ನೀನು, ನಿನ್ನ ಕಣ್ಣು ಕೈ ಮನಸ್ಸು ನಾಲಗೆಗಳಲ್ಲಿ ಅಂದಾಜು ಪಟ್ಟಿ ಹಿಡಿದು ಅಳೆದೆ ಅಳೆದೆ ಅಳೆದೆ ಅಳೆಯುತ್ತಲೇ ಇದ್ದೀಯೆ.. ಸರಿ, ಅಳೆದುಕೋ ಹಾಗೆ ಅಳತೆಗೆ ದಕ್ಕುವುದಾದರೆ ನೀ ಅಳೆಯುವುದಾದರೂ ಏನನ್ನು! ಒಂದಷ್ಟು ಅಂದಾಜು ಸಿಗುವ ಗಾತ್ರ- ಗೋತ್ರ; ಉಬ್ಬುತಗ್ಗು ಅವಯವ- ಅವ್ವವ್ವಾ !! ಅಷ್ಟೇ. ಅಷ್ಟಕ್ಕೇ ನಿನಗೆ ದಕ್ಕಿಬಿಟ್ಟರೆ, ರೇ… ಅರೇ ಹೋಗು, ಅಳೆದುಕೋ ನಿನ್ನಾ ಅಳತೆಗೋಲು ಅಂದಾಜು ಶತಮಾನ ಹಳತು ಅದರ ಗೋಲು. ಮಾಡಿಕೊಂಡು ಬಂದದ್ದು ಬರೀ ರೋಲುಕಾಲು. ಅಳೆದೂ […]

ಸಂತಾಪ

ಕನ್ನಡದ ಪ್ರಮುಖ ಕಥೆಗಾರ್ತಿ ಶಾಂತಾದೇವಿ ಕಣವಿಯವರು ಕನ್ನಡ ನಾಡಿನ ಪ್ರಮುಖ ಕಥೆಗಾರ್ತಿ,ಶುದ್ಧ ಕನ್ನಡ ಜನಪದ ಹೃದಯ ಶ್ರೀಮಂತಿಕೆಯ ಸಹಕಾರ ಮೂರ್ತಿ, ಲೇಖಕಿ,⁣ಹಿರಿಯ ಕವಿ, ವಾತ್ಸಲ್ಯಮಯಿ, ಸಮರಸವೇ ಜೀವನ ಎಂದು ಬಾಳು ಬದುಕಿದ ಕವಯಿತ್ರಿ. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ ಸಾಕ್ಷಿಕರಿಸಿದ್ದ ಸಾಹಿತಿ ಶಾಂತಾದೇವಿ ಕಣವಿಯವರು.ಹಾಗಾಗಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿಯವರು ಬಂಧುಗಳೆ. ಜನನ/ಜೀವನ : […]

ಕಾವ್ಯಯಾನ

ಮನದ ಮಾಮರ ಸುವರ್ಣ ವೆಂಕಟೇಶ್ ಮನದ ಮಾಮರಕ್ಕೆ ಮದ ಮತ್ಸರದ ಕಟ್ಟೆ ಕಟ್ಟಿ ಸ್ವಾರ್ಥದ ಜಲವ ಹರಿಸಿ ಬೇರು ಪಸರಿಸಿ ನೇರಳಾಗಿ ನಿಲ್ಲು ಎಂದೊಡನೆ ಎಂತಯ್ಯಾ!! ಮೋಹದ ಕಿರಣವ ತಾಡಿಸಿ ಬೆಂಕಿಯ ಮಳೆ ಸುರಿಸಿ ಮರಳುಗಾಡಿನಲ್ಲಿ ನೆಡಸಿ ಹಚ್ಚ ಹಸಿರಿನ ತರು ಲತೆ ಹೊತ್ತು ಎದ್ದು ನಿಲ್ಲಂದರೆ ಎಂತಯ್ಯಾ!! ಭಾವ ಇಲ್ಲದ ಭಕುತಿ ತೋರಿಸಿ ಅಹಂಕಾರದ ತೊಗಟೆ ಊಡಿಸಿ ಬಿಸಿಲಿನಿಂದ ಬಲೆಯ ಹೆಣೆದು ವಿಷ ಬೀಜವ ಬಿತ್ತಿ ಅಮೃತದ ಸಿಹಿ ಬಯಸಿದೋಡನೆ ಎಂತಯ್ಯಾ!! *********

ಕಥಾಯಾನ

  ಸರಸ್ವತಿ ಜಿ. ಹರೀಶ್ ಬೇದ್ರೆ ಸರಸ್ವತಿ ಮುಂಜಾನೆ ಬೇಗನೇ ಎದ್ದು ಗಂಡ ಮಕ್ಕಳಿಗೆ ಕಾಫಿ ತಿಂಡಿ ಮಾಡಿಕೊಟ್ಟು  ಅಂಗಡಿಯ ಬಳಿ ಬರುವ ಹೊತ್ತಿಗೆ ಎಂಟು ಗಂಟೆಯಾಗಿತ್ತು. ಆಗಲೇ  ಸಾಮಾಜಿಕ ಅಂತರ ಬಳಸಿ ನಿಂತಿದ್ದ ಕ್ಯೂ ಹೆಚ್ಚುಕಮ್ಮಿ ಅರ್ಧ ಕಿ.ಮೀ.ಗಿಂತ ಉದ್ದವಿತ್ತು. ಅಂಗಡಿ ತೆರೆಯಲು ಇನ್ನೂ ಒಂದು ಗಂಟೆ ಬಾಕಿ ಇತ್ತು. ಅಯ್ಯೋ ಏನಪ್ಪಾ ಮಾಡುವುದು ಎಂದು ಗೊಣಗುತ್ತಲೇ ಸರತಿಯಲ್ಲಿ ನಿಂತಳು. ಕ್ಷಣಕ್ಷಣಕ್ಕೂ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಜನರನ್ನು ನಿಯಂತ್ರಿಸಲು ಒಂದಿಬ್ಬರು ಪೋಲಿಸರು ಬಂದರು. […]

ಕಾವ್ಯಯಾನ

ಟಂಕಾ ರೇಖಾ ವಿ.ಕಂಪ್ಲಿ ೧ . ಲಲಿತ ರಾಗ ಕಲಿತೆನು ಈಗ ನಿನ್ನ ಜೊತೆಗೆ ಭಾವ ತುಂಬಿ ಕೊಡುವ ಪ್ರೇಮ ಸುಧೆಯೊಳಗೆ…… ೨. ನಿನಗೆ ಬೊಜ್ಜು ಮೂರ್ನಾಲ್ಕು ಗೊಜ್ಜನು ತಿಂದೆ ಏತಕೆ ಆ್ಯಸಿಡಿಟಿ ಕಾರಣ ಹಾಳಾಯಿತು ಹೊಟ್ಟೆ……. ೩. ಯಾಕೆ ಹುಡುಗ ತಂಟೆ ಮಾಡುತಿಯಾ ಒಂಟಿತನಕೆ ಭಂಗ ಮಾಡಬೇಡ ಬಿಟ್ಟು ಹೋಗ ಬೇಡ……… ೪. ನೀ ಕೊಟ್ಟ ಪೆಟ್ಟು ಮರಿಲಿಲ್ಲ ಗುರು ಆಧಾರವಾದೆ ನನ್ನ ಜೀವನದ ಬಂಡಿ ಸಾಗಿಸಲು….. ********* ರೇಖಾ ವಿ ಕಂಪ್ಲಿ

ಮಕ್ಕಳ ಕಥೆ

“ಕತ್ತೆಗೊಂದು ಕಾಲ”  ಅದು ಗಿರಿಕಂದರ ಪರ್ವತ ಶ್ರೇಣಿಗಳ ನಾಡು. ಅಲ್ಲಿ ಜಯದೇವ ಅರಸನು ರಾಜ್ಯ ಆಳುತಿದ್ದನು. ಆತ ತನ್ನ ಆಸ್ಥಾನದಲ್ಲಿ ಕುದುರೆಗಳ ಜೊತೆಗೆ ಕತ್ತೆಗಳನ್ನು ಸಾಕಿದ್ದನು. ಎಲ್ಲ ರಾಜರು ಕುದುರೆ ಸಾಕುತಿದ್ದರೆ, ಈತ ಮಾತ್ರ ಎರಡನ್ನು ಸಾಕುತಿದ್ದನು. ಈ ಮಾತು ರಾಜ್ಯದ ಎಲ್ಲ ಜನರಿಗೆ ಅಷ್ಟೆ ಅಲ್ಲ, ಕುದುರೆಗಳಿಗೂ ಆಶ್ಚರ್ಯವಾಗಿತ್ತು.                ಒಂದು ದಿನ ಸೇವಕರು ಕುದುರೆ ಮತ್ತು ಕತ್ತೆ ಒಟ್ಟಿಗೆ ಬಯಲಲ್ಲಿ ಮೈಯಲು ಬಿಟ್ಟರು. ಆಗ ಮೈಯುತ್ತಾ […]

ಕಾವ್ಯಯಾನ

ತಿಪ್ಪೆಗುಂಡಿಯಲ್ಲಿ ಮಗು ಫಾಲ್ಗುಣ ಗೌಡ ಅಚವೆ ಅಲ್ಲಿ ಮುರ್ಕಿಯಲ್ಲಿರುವತಿಪ್ಪೆಗುಂಡಿಯಲ್ಲಿ ಎಸೆದು ಹೋಗಿದ್ದಾಳೆಇದೀಗ ಎಂಬಂತೆ ಒಂದು ಮಗು. ನವೆಂಬರ್ ಬೆಳಗಿನ ಚುಮು ಚುಮುಚಳಿಯಲ್ಲಿ ಅಮ್ಮನ ಮಡಿಲಲ್ಲಿರಬೇಕಾದಂತೆಅಲ್ಲೇ ಗುಲ್ ಮೋಹರ್ ಮರಗಳಲ್ಲಿಹೊಡೆದು ಕೂಡ್ರಿಸಿದಂತೆಬೆಳ್ಳಕ್ಕಿಗಳು ಸಣ್ಣಗೆ ಮುಸುಗುತ್ತಿವೆ. ಗಸ್ತು ತಿರುಗುವ ಇರುವೆಗಳುಯಾರನ್ನೋ ಕರೆತರಲು ಹೊರಟಂತೆಎಲ್ಲಿಗೋ ಪಯಣ ಹೊರಟಿವೆ. ತುಸು ತಡವಾಗಿ ವಾಕಿಂಗ್ ಹೊರಟವರುಮಂಕಿ ಕ್ಯಾಪ್ ಬಿಟ್ಟು ಬಂದವರಂತೆತಡವರಿಸುತ್ತ ಎದೆಗೆ ಕೈ ಕಟ್ಟಿಕೊಂಡುಹೊರಡುವ ಸನ್ನಾಹದಲ್ಲಿಅವರದೇ ರಾತ್ರಿಯಹಳಸಿದ ಕನಸುಗಳ ಜೊತೆಗೆ. ಹಾಸಿಗೆ ಮಡಚಿಟ್ಟು ಆಗಸಮುಖ ತೊಳೆದು ಕೊಳ್ಳುತ್ತಿದೆಮೋಡಗಳ ಮರೆಯಲ್ಲಿಬೆಳಗಿನ ಕೆಲಸಕ್ಕೆ ತಡವಾಯಿತೆಂಬರಾತ್ರಿ ನರಳಿಕೆಯ ಮುಖ […]

ಕಾವ್ಯಯಾನ

ದೂರದ ಊರು ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ […]

ಕಥಾಯಾನ

ಕೆಪ್ಪ ಅಂಜನಾ ಹೆಗಡೆ ಕೆಪ್ಪನ ಕಥೆ ಶುರುವಾಗುವುದು ನವರಾತ್ರಿಯಿಂದ. ನವರಾತ್ರಿಯೆಂದರೆ ಅದು ಅಂತಿಂಥ ನವರಾತ್ರಿಯಲ್ಲ. ಹಳೇಮನೆ ರಾಮಚಂದ್ರಣ್ಣನ ನವರಾತ್ರಿಯೆಂದರೆ ಯಲ್ಲಾಪುರ ತಾಲೂಕಿನಲ್ಲೆಲ್ಲ ಮನೆಮಾತಾದ ನವರಾತ್ರಿ ಅದು. ಚೌತಿ ಹಬ್ಬ ಮುಗಿದು ಇನ್ನೇನು ಹತ್ತೋ ಹದಿನೈದೋ ದಿನವಾಗುವಷ್ಟರಲ್ಲಿ ರಾಮಚಂದ್ರಣ್ಣನ ನವರಾತ್ರಿಯ ಧಾವಂತ ಶುರುವಾಗುತ್ತಿತ್ತು. ಅಟ್ಟದ ಮೇಲಿನ ಅಡಿಕೆ ಕಂಬಗಳನ್ನು ಒಂದೊಂದಾಗಿ ಕೆಳಗಿಳಿಸಿ ದೇವರಮನೆಯಲ್ಲಿ ನಿಲ್ಲಿಸುವುದರಿಂದ ಶುರುವಾಗುವ ನವರಾತ್ರಿ ಸಂಭ್ರಮ ಹಳೆಮನೆಯಲ್ಲಿ ವಿಜಯದಶಮಿಯವರೆಗೂ ಇರುತ್ತಿತ್ತು. ಅಲ್ಯೂಮಿನಿಯಂ ಬೋಗುಣಿಯೊಂದರಲ್ಲಿ ತಾನೇ ಕೈಯಾರೆ ತಯಾರಿಸಿಕೊಂಡ ಗೋಧಿಅಂಟಿನೊಂದಿಗೆ ಪ್ರತೀರಾತ್ರಿ ರಾಮಚಂದ್ರಣ್ಣ ಶಾರದೆಯ ಮಂಟಪ ರೆಡಿಮಾಡಲು […]

ಕಾವ್ಯಯಾನ

ದೂರದ ಊರು ಅಪ್ಪ ರಜಿಯಾ ಕೆ.ಬಾವಿಕಟ್ಟೆ ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು […]

Back To Top