ಕಾವ್ಯಯಾನ
ನಾನು ನಿನ್ನಾತ್ಮದ ಗುರುತಾಗಿದ್ದೆ ಬಿದಲೋಟಿ ರಂಗನಾಥ್ ಹೌದು ನಾನು ನಿನ್ನಾತ್ಮದ ಗುರುತಾಗಿದ್ದೆ ಆ ನಿನ್ನ ನೋಡುವ ನೋಟದ ಬಿಸುಪಿಗೆ ಚಳಿಯಾಗಿದ್ದೆ ಮಳೆಯಾಗಿದ್ದೆ ಮುಗಿಲೇ ಆಗಿದ್ದೆ ನಿನ್ನ ಮೈಯೊಳಗಿನ ಬಿಸಿಗೆ ಬೆರೆತ ಜೀವವಾಗಿದ್ದೆ ನೀನು ನಡೆದ ದಾರಿಯ ಮೇಲಿನ ಹೆಜ್ಜೆಯನು ಮುಟ್ಟಿ ಬೆಳಕಿನ ಕಿರಣಗಳ ಮುಡಿಸಿದ್ದೆ ಉಳಿದ ಮಾತುಗಳ ನಿಟ್ಟುಸಿರ ಮೌನಕೆ ಕಾಲದ ಸವಾರ ಕುಂಟಾಗಿ ಬಿದ್ದಿದ್ದ ಎದೆಯೊಳಗಿನ ಗಿಲಕಿಗೆ ಕೀ ಕೊಡುವ ನಿನ್ನ ಹೃದಯದ ಕೋಮಲ ಕೈಗಳು ನನ್ನಿಂದ ಜಾರಿಹೋದಾಗಿನ ಶೂನ್ಯತೆಯಲಿ ಕತ್ತಲ ಮನೆಯಲಿ ದಿನಗಳ ಎಣಿಸುತ್ತ […]
ಕಾಡುವ ಹಾಡು
ಮೈಸೂರು ದಸರಾ ಚಿತ್ರ-ಕರುಳಿನ ಕರೆ ಗೀತರಚನೆ- ಆರ್.ಎನ್.ಜಯಗೋಪಾಲ್ ಸಂಗೀತ-ಎಂ.ರಂಗರಾವ್ ಗಾಯಕರು-ಪಿ.ಬಿ.ಶ್ರೀನಿವಾಸ್ ಸುಜಾತ ರವೀಶ್ ಕಾಡುವ ಹಾಡು ಮೈಸೂರು ದಸರಾ ಮೈಸೂರು ಎಂದರೆ ದಸರಾ ಜಂಬೂ ಸವಾರಿ ಮೊದಲು ನೆನಪು ಬರುವುದು. ನಂತರ ಮೈಸೂರು ಪಾಕ್ ಮೈಸೂರು ಮಲ್ಲಿಗೆ ಮೈಸೂರು ರೇಷ್ಮೆ ಸೀರೆ ಮೈಸೂರು ಚಿಗುರು ವೀಳ್ಯದೆಲೆ ಹಾಗೂ ಶ್ರೀಗಂಧದ ಉತ್ಪನ್ನಗಳು ಮೈಸೂರು ವೀರನಗೆರೆ ಬದನೆಕಾಯಿ. ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ಕೈಗೆ ಹಚ್ಚುವ ಮಸಿ ತಯಾರಾಗುವುದು ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲೇ. ರಾಜ್ಯದ ರಾಜಧಾನಿ ಬೆಂಗಳೂರು ಆದರೂ […]
ಹೊತ್ತಾರೆ
ಅಮ್ಮನೂರಿನನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಹೋರಿ ಕಣ್ಣು ಮೊನ್ನೆ ರಾತ್ರಿ ಊಟ ಮುಗಿಸಿ ಮಲಗಿದ ನಿದ್ರೆ ಹತ್ತಿದ ಸ್ವಲ್ಪ ಹೊತ್ತಿನಲ್ಲೇ ಯಾಕೋ ಇದ್ದಕ್ಕಿದ್ದ ಹಾಗೆ ಕಲ್ಹಳ್ಳಿ ಎತ್ತು ಎದುರಲ್ಲಿ ಬಂದು ನಿಂತಂತೆ ಇತ್ತು! ಸುತ್ತ ನೋಡಿದೆ, ಯಾರಿದಾರೆ ಜೊತೆಯಲ್ಲಿ, ಬರೀ ಕಲ್ಹಳ್ಳಿ ಎತ್ತು… ಮನೆ ಎತ್ತು ಯಾವ್ ಕಡೆ ಹೋಯ್ತು? ಮತ್ತೆ ಇನ್ನೊಂದು ಸಲ ಪರಿಶೀಲಿಸಲೇ, ಎಲ್ಲಿದಿವಿ, ಕಲ್ಹಳ್ಳಿ ಎತ್ತು ಮತ್ತು ನಾನು ಇಬ್ಬರೇ. ಯಾರಿಗೆ ಹೇಳೋದು ಈಗ, ಗಾಬರಿಯಾಯ್ತು. ಆ ಗಾಬರಿಗೆ ಕಾರಣ, ಮನೆ ಎತ್ತು ಜೊತೆಯಲ್ಲಿದ್ದರೆ ಮಾತ್ರ ಕಲ್ಹಳ್ಳಿ […]
ಪುಸ್ತಕ ಸಂಗಾತಿ
ನಾನು ಕಸ್ತೂರ್ ಇತ್ತೀಚೆಗೆ ಲೋಕಾರ್ಪಣೆಗೊಂಡ ಡಾ. ಎಚ್.ಎಸ್.ಅನುಪಮಾ ಕೃತಿ. ಲಡಾಯಿ ಪ್ರಕಾಶನದಿಂದ ಪ್ರಕಟಿತ.. ಚಂದ್ರಪ್ರಭಾ ಬಿ. ಒಂದು ಒಳನೋಟು ಭಿನ್ನ ಆಲೋಚನೆ, ಭಿನ್ನ ನಿಲುವಿನ ಡಾ. ಎಚ್.ಎಸ್.ಅನುಪಮಾ ಏನು ಮಾಡಿದರೂ ಅದು ವಿಭಿನ್ನವೇ ಆಗಿರುತ್ತದೆ ಎಂಬ ಮಾತಿಗೆ ಕಸ್ತೂರ್ ಜೀವನ ಕಥನ ಒಂದು ಉದಾಹರಣೆ. ಮೈಸೂರಿನಲ್ಲಿ ಪುಸ್ತಕ ಲೋಕಾರ್ಪಣೆ ಮಾಡುತ್ತ ಮಮತಾ ಸಾಗರ್ ಹೇಳಿದ ಹಾಗೆ ಅನುಪಮಾ ಸ್ವತಃ ನಿವೇದಿಸಿದ ಪ್ರಸ್ತಾವನೆ ರೂಪದ ಬರಹವನ್ನು ಓದಿಯೇ ಪ್ರತಿ ಓದುಗ ಮುಂದೆ ಸಾಗಬೇಕು. ಕೃತಿ ರಚನೆಯ ಹಿನ್ನೆಲೆಯ ಜೊತೆಗೇ […]
ಅಭಿನಂದನೆ
ಅಕ್ಕಿತಂ ಅಚ್ಯುತನ್ ನಂಬೂದಿರಿ ಮಲಯಾಳಂ ಕವಿ ಮಲಯಾಳಂ ಕವಿ ಅಕ್ಕಿತಂ ಅಚ್ಯುತನ್ ನಂಬೂದರಿಯವರಿಗೆ 2019ರ ಜ್ಞಾನ ಪೀಠ ಪ್ರಶಸ್ತಿ
ಲೇಖನ
ಆಧ್ಯಾತ್ಮಕ್ಕೂ, ಅರ್ಥಶಾಸ್ತ್ರಕ್ಕೂ ಬಿಡಲಾರದ ನಂಟು….. ಗಣೇಶ ಭಟ್ ಶಿರಸಿ . ಆಧ್ಯಾತ್ಮದ ವಿಚಾರಗಳನ್ನು ಚರ್ಚಿಸುವಾಗ ದೈನಂದಿನ ಬದುಕಿನ ವಿಚಾರಗಳ ಕುರಿತು ಹೇಳುವದು, ಅರ್ಥಶಾಸ್ತ್ರದೊಡನೆ ಸಂಬಂಧ ಜೋಡಿಸುವದು ಸರಿಯಲ್ಲವೆಂದು ಹಲವರು ಅಭಿಪ್ರಾಯ ಪಡುತ್ತಾರೆ. ಭಾರತದ ದರ್ಶನಶಾಸ್ತ್ರದ, ಬದುಕಿನ ರೀತಿನೀತಿಗಳ ರಕ್ಷಣೆಯ ಗುತ್ತಿಗೆ ಪಡೆದವರಂತೆ ವರ್ತಿಸುವ ಹಲವರು ಆಧ್ಯಾತ್ಮಕ್ಕೂ , ಅರ್ಥಶಾಸ್ತ್ರಕ್ಕೂ ಸಂಬಂಧವೇ ಇಲ್ಲವೆಂದು ಬೊಬ್ಬೆ ಹೊಡೆಯುತ್ತಾರೆ. ಅವರ ಅರಿವಿನ ವ್ಯಾಪ್ತಿಯ ಸೀಮಿತತೆಯೇ ಇದಕ್ಕೆ ಕಾರಣ. ಮಾನವನ ಬದುಕಿನ ಗುರಿಯನ್ನು ಧರ್ಮ, ಅರ್ಥ, ಕಾಮ , ಮೋಕ್ಷಗಳೆಂಬ ಚತುರ್ವರ್ಗಗಳಾಗಿ ಗುರ್ತಿಸುತ್ತಾರೆ. […]
ಕಾವ್ಯಯಾನ
ನಾಲ್ಕಾರು ಮಳೆ ಹನಿಗಳು: ದೇವು ಮಾಕೊಂಡ ಸಿಂದ್ಗಿ ನನಗೆ ನಾನೇ ಬಂಧಿಯಾಗಿರುವೆ ಎರಡು ಕಳ್ಳ ಹುದುಲಗಳ ನಡುವೆ ಸಿಲುಕಿ ಬೇರೆರಡರ ಇಕ್ಕಟಿನಲಿ ಬೆಳೆದ ಈಚಲು ಸಸಿಯ ಹಾಗೆ ವಿಶಾಲ ಭೂಮಿ ಬಾನುಗಳ ನಡುವೆ ತಳಕು ಹಾಕಿಕೊಂಡಿರುವೆ ಪರೀಧಿಯೊಳಗಿನ ಕೇಂದ್ರದ ಹಾಗೆ ಬೆಳಗು ಬೈಗು ಪ್ರೀತಿ ಇಮ್ಮಡಿಗೊಳ್ಳುತ್ತದೆ ಸೂರ್ಯ ಬಿಸಲ ಪ್ರಖರ ಶಾಖಗೆ ಕಾಮ ಕಸ್ತೂರಿ ಅರಳಿದ ಹಾಗೆ ಎಲ್ಲೋ ಎಸೆದ ಬೀಜ ಮೊಳಕೆಯೊಡೆದು ನನ್ನೊಳಗೆ ಹೂವು ಬಿಡುತ್ತಿದೆ ತಿಂಗಳ ಚಂದಿರ ಮೂಡಿದ ಹಾಗೆ ಇರುಳ ರಾತ್ರಿ ಪುಟಿದೇಳುತ್ತಿದೆ […]
ಕಾವ್ಯಯಾನ
ಮೌನ ಮಾತಾದಾಗ ಸರೋಜಾ ಶ್ರೀಕಾಂತ ಅಮಾತಿ ಎದೆಯಗೂಡೊಳಗೆ ಬಚ್ಚಿಟ್ಟು ಮರೆಮಾಚಿದ ಮಾತುಗಳೆಷ್ಟೋ!? ನುಡಿಯದೇ ಮೌನರಾಗವಾದ ಶ್ರುತಿ,ತಾಳಗಳಿಲ್ಲದ ಹಾಡುಗಳೆಷ್ಟೋ!!? ತುಟಿಯ ಬಿಟ್ಟು ಹೊರಬರದೇ ಅಡಗಿಸಿಟ್ಟ ನಲಿವು-ನೋವ ಬಗೆಯ! ಬಿಡಿ ಬಿಡಿಸಿ ನಿನ್ನ ಮುಂದಿಡುವೆ ನಾನೀಗ ಕೇಳದಿರಬೇಡ ಗೆಳತಿ ಮನದ ಮಾತೀಗ!! ಅಳಿಯದೆ ಉಳಿದ ಭಾವಗಳಿಗೆ ಜೀವ ಬಂದಿದೆ ಮತ್ತೊಮ್ಮೆ ಈಗ! ಮನದ ಮೂಲೆಯಲಿ ಅವಿತಿರುವ ಆಸೆ ಹಕ್ಕಿಗೆ ಹಾರಲು ರೆಕ್ಕೆ ಬಂತೀಗ!! ನನ್ನೀ ಮೌನ ಮಾತಾಗಬೇಕೆಂದರೂ ಬೇಕು ನಿನ್ನ ಸನಿಹ ಸಾಂಗತ್ಯ ನಾ ಬರೆವ ಲೇಖನಿ ನೀನೆಂಬುದು ಸತ್ಯ! […]
ಕಾವ್ಯಯಾನ
ದಾರಿಹೋಕನೆಂದು ನಂಬಿ ಬಿಟ್ಟೆ! ಅವ್ಯಕ್ತ ಕುಶಲ ಚೇಷ್ಟೆಗಳ ಕನಸ ಮಾರುವ ಕಾಂತನೆ ಹೆಣ್ಣಿನ ಒಳಮನಸ್ಸ ಮರ್ಮವ ಹೇಳುವೆ ತಿಳಿದುಕೊ… ನಿನ್ನ ನಿಜ ಲೋಕದ ಕಡಲ ಮುತ್ತು ಗಳಂತಿರುವ, ಮೌನ ವನಿತೆಯರ ಸಖಿಗುಟ್ಟಿದು.. ಮುಂಗುರುಳ ನಡುವೆ ನಲಿವ ಕಣ್ಣಲ್ಲಿ ಕನಸೊಂದ ಹುಡುಕುವುದು ತಪ್ಪೇನಲ್ಲಾ.. ತುಂಟ ನಗುವಿನೊಳಗೆ ರಸಿಕತೆಯ ಬಯಕೆಯು ಅಲ್ಪಾಯುಷಿಯೂ ಅಲ್ಲಾ.. ಸಭ್ಯತೆಯ ನೀಳ ಸೆರಗ ಜಾರಿಸಲು ಬಾಡದ ನಿತ್ಯಾನುರಾಗವ ಹುಡುಕುವಳಷ್ಟೆ, ಸಹಜ ಜೀವನದಲ್ಲಿರುವ ತಿರುವುಗಳ ಮಧ್ಯೆ ಸ್ಪಷ್ಟ ಮನದ ಮದುರ ಪ್ರೀತಿಯ ಅರಸುವಳಷ್ಟೇ. ಉದಾಸೀನ ಪುರುಷನ ಭೂಷಣವಾದರೆ, […]
ಕವಿತೆ ಕಾರ್ನರ್
ಮತ್ತೆಂದೂ ನಿನ್ನ ನೆನೆಯದೆ! ನಾನೀಗ ಬರೆಯುವುದ ನಿಲ್ಲಿಸಿರಬಹುದು ಹಾಗೆಯೇ ನಿನ್ನ ನೆನೆಯುವುದನ್ನೂ ಮೊದಲಿನಂತೆ ಅಕ್ಷರಗಳ ಸಹಕರಿಸುತಿಲ್ಲ ಹುಟ್ಟಿದ ಶಬ್ದಗಳೂ ಅರ್ಥ ಕೊಡುತಿಲ್ಲ ಘನಘೋರ ಬದುಕಿನ ಹಲವು ಹಗಲುಗಳು ಅಸ್ಥವ್ಯಸ್ಥವಾಗಿ ಸರಿದು ಹೋದವು ಓಡುವ ರೈಲಿನ ಪಕ್ಕದ ಗಿಡಗಂಟೆಗಳಂತೆ ಆಯ್ದುಕೊಂಡಿದ್ದೆನೆ ನಾನೀಗ ಇರುಳುಗಳನ್ನು ಅದು ತಂದೊಡ್ಡುವ ಸಾವಿನಂತಹ ಏಕಾಕಿತನವನ್ನು ಮೋಡಗಳ ಹಿಂದಿನ ಬೆತ್ತಲೆ ಚಂದ್ರ ಮೊದಲಿನಂತೆ ಕಣ್ಣಾ ಮುಚ್ಚಾಲೆಯಾಡುವುದಿಲ್ಲ ಬೀಸುವ ಗಾಳಿಗೂ ಉತ್ಸಾಹದ ಉಸಿರಿಲ್ಲ ಎಲ್ಲ ಮುಗಿದು ಹೋದವರ ಅಂಗಳದಲ್ಲಿ ಮಿಂಚು ಹುಳುವೂ ಮಿನುಗುವುದಿಲ್ಲ ನನ್ನ ಪಾಪಗಳು ನಿರಂತರವಾಗಿ […]