ಕಾವ್ಯ ಸಂಗಾತಿ
ನಿಶಾ ಹೆಚ್ ಕಾಮತ್
“ನಿರಾಸೆ”


ನನಸಾಗದ ಕನಸೆಂದು ತಿಳಿದೂ
ಮನದ ಮೂಲೆಯಲೊಂದು ಆಸೆ
ನಾನೂ ಮನಸ ಬಳಿ ಮಾತನಾಡುವೆ
ಆಡದೇ ಯಾವುದೇ ಭಾಷೆ
ಇಂದೋ ನಾಳೆಯೊ ತಿಳಿಯದ ಅಂತ್ಯ
ಮಾಡಿದ್ದೆಲ್ಲವೂ ವ್ಯರ್ಥ
ಕಣ್ಣೆದುರಲ್ಲೇ ಜೀವನ ಮರಣ
ನಮ್ಮಲ್ಲೇಕಿದೆ ಸ್ವಾರ್ಥ ?
ತಿಳಿಯದೆ ಏನೂ ವರ್ತಿಸುವುದೇಕೆ
ತಿಳಿದವರಂತೆ ನಾವು
ತಿಳಿದರೆ ತಿಳಿಸಿ ತೆಗೆವುದು ಹೇಗೆ
ಮಾನವ ಕುಲದ ನೋವು?
ಬೆಳೆಸಿದಿರೇಕೆ ಗಿಡವನು ಅಂದು
ಆಸೆಯ ಬೀಜವ ನೆಟ್ಟು?
ಈ ದಿನ ನಾನು ತಡೆಯಲಿ ಹೇಗೆ
ಜನಗಳ ಕೊಡಲಿಯ ಪೆಟ್ಟು ?
ಗುರುತಿಸದಿದ್ದರೂ ನೋವಿರಲಿಲ್ಲ
ನಾನು ಮಾಡಿದ ಸಾಧನೆ
ತಿಳಿದು ಕೊಳ್ಳಲು ಪ್ರಯತ್ನಿಸಬಾರದೆ
ನನ್ನ ಮನಸಿನ ಭಾವನೆ
ನಿಶಾ ಹೆಚ್ ಕಾಮತ್ ಕಿನ್ನಿಗೋಳಿ



