ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಕೂಡಿಟ್ಟ ದುಃಖವ ಹೊರ ಹಾಕಿದ್ದೇನೆ ನೀ ಕಂಡ ಕ್ಷಣದಲ್ಲಿ
ಹಿಡಿದಿಟ್ಟ ನೋವಿನಿಂದ ಅತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ

ಬದುಕು ಶೂನ್ಯತೆಯ ಭಾವ ಮರೆಸಿ ಹೊಸತನ ಮೂಡಿಸಿದೆ ಈಗ
ನೀ ಬಿಟ್ಟ ಸವಿ ನೆನಪುಗಳಿಂದ ನಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ

ಎಷ್ಟೋ ಮಾತುಗಳು ಹೇಳದೆ ಮೌನದಲ್ಲಿ ಮರೆಯಾಗಿವೆ
ನೋಡಬಾರದೆಂದಾಗಲೇ ಸಿಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ

ಆಗಸದ ನಕ್ಷತ್ರಕ್ಕೂ ಒಮ್ಮೊಮ್ಮೆ ಕರಿಛಾಯೆ ಬಿಳಬಹುದು
 ಉಸಿರು ಬಿಗಿ ಹಿಡಿದು ಬದುಕಿ ಸತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ

ಬದುಕಿನ ರಂಗಮಂದಿರದಲ್ಲಿ ಅವನೇ ಖಳನಾಯಕನಂತಾಗಿಹ
ರೇಖೂ ಬಾಳ ನೌಕೆಯಲಿ ಗೆದ್ದು ಸೋತಿದ್ದೇನೆ ನೀ ಕಂಡ ಕ್ಷಣದಲ್ಲಿ


About The Author

Leave a Reply

You cannot copy content of this page

Scroll to Top