ಕಾವ್ಯ ಸಂಗಾತಿ
ಸುಧಾ ಹಡಿನಬಾಳ
ʼಹೊಸ ವರುಷ ಬಂದಿದೆ…ʼ
ವರುಷ ಉರುಳಿ ಹೊಸ
ವರುಷ ಬಂದಿದೆ ನವ
ಭಾವದೊಂದಿಗೆ ಹೊಸ
ಹರಷದೊಂದಿಗೆ …
ವರುಷದ ಜಾಡ್ಯ ಕಳೆಯಲು
ನೋವಿನ ನೆನಪು ಸರಿಸಲು
ನಲಿವಿನ ಸವಿಯ ನೆನೆಯಲು
ಹಿಂದೊಮ್ಮೆ ತಿರುಗಿ ನೋಡಲು
ಅಗಲಿದವರ ನೆನಪಿನೊಂದಿಗೆ
ಹಿರಿಯರ ಹಾರೈಕೆಯೊಂದಿಗೆ
ಕಿರಿಯರ ಒಲುಮೆಯೊಂದಿಗೆ
ಸಮತೆಯ ಆಶಯದೊಂದಿಗೆ
ಬತ್ತದ ಚಿಲುಮೆಯಂತೆ
ಬೆಳಗುವ ಹಣತೆಯಂತೆ
ಬೆಳದಿಂಗಳ ತಂಪಿನಂತೆ
ತುಟಿಯಂಚಿನ ನಗುವಿನೊಂದಿಗೆ
ಹೊಸ ವರುಷವ ಸ್ವಾಗತಿಸುವ
ಸಕಲರಿಗೆ ಶುಭ ಕೋರುವ
ಬಿಂಕ ಬಿಗುಮಾನ ಬಿಟ್ಟು
ಸಣ್ಣತನ ಮೊಂಡುತನ ತೊರೆದು…
ಸುಧಾ ಹಡಿನಬಾಳ