ಲೇಖನ ಸಂಗಾತಿ
ನಾನುಮತ್ತು ನನ್ನ ಕನಸು-
ಶಾರದಾಜೈರಾಂ.ಬಿ
ನಾವೆಲ್ಲರೂಬಾಲ್ಯವನ್ನು ಏಕೆಇಷ್ಟಪಡುತ್ತೇವೆ ,ಹಿಂದಿ ಕವಯಿತ್ರಿ ಒಂದೆಡೆ ಹೇಳುವಂತೆ ಮತ್ತೆ ಮತ್ತೆ ನೆನಪಾಗುತ್ತಿದೆ ನನ್ನ ಬಾಲ್ಯ ಎಂದು ಆ ದಿನಗಳ ಮಧುರಾನುಭೂತಿ ಎದೆಯಲ್ಲಿ ಬೆಚ್ಚಗೆ ಹೊದ್ದು ಮಲಗಿವೆ,ಆಗಾಗ ಹೊರಬಂದು ಮನವ ಮುದಗೊಳಿಸುವ ಆ ಕಾಮನಬಿಲ್ಲಿನಂತೆ.ಪತ್ರಿಕೋದ್ಯಮ ಅಭ್ಯಸಿಸಬೇಕು ಎಂಬ ಬಾಲ್ಯದ ಕನಸು ನೆರವೇರಿಸಿಕೊಳ್ಳುವೆಡೆ ನನ್ನ ನಡೆ ಖುಷಿಗೆ ಕಾರಣ.ನವೆಂಬರ್ 16 ರಾಷ್ಟ್ರೀಯ ಪತ್ರಿಕಾ ದಿನ ಎಂದು ಆಚರಿಸಲಾಗುತ್ತದೆ.ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ದೊಡ್ಡ ಅಸ್ತ್ರವಾಗಿತ್ತು ಈ ಮುದ್ರಣಾಲಯ ಸ್ವಾತಂತ್ರ್ಯ ದ ಬಳಿಕವು ಭಾರತದಲ್ಲಿ ಮಾಧ್ಯಮವು ಪ್ರಮುಖ ಪಾತ್ರ ವಹಿಸಿದೆ.ಈ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆಯುತ್ತಾರೆ.ಪತ್ರಿಕಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವಲ್ಲಿ ಪತ್ರಿಕೆಯ ಪಾತ್ರ ಹಿರಿದಾದುದು.
ಆಧುನಿಕ ಯುಗದಲ್ಲಿ ಸ್ಮಾರ್ಟ್ ಫೋನ್ ಗಳು ಬಳಕೆಯಿಂದ ನಾಲ್ಕು ಗೋಡೆಗಳ ನಡುವೆ ಕುಳಿತಲ್ಲಿಯೇ ದೇಶ,ವಿದೇಶಗಳ ರಾಜಕೀಯ, ಸಿನಿಮಾ, ಸಾಹಿತ್ಯ, ವಿಜ್ಞಾನ ತಂತ್ರಜ್ಞಾನಗಳ ಮಾಹಿತಿ ತಿಳಿಯಬಹುದಾಗಿದೆ.ಪತ್ರಿಕಾ ಸ್ವಾತಂತ್ರ್ಯ ಅತಿ ಮುಖ್ಯವಾದುದು ಇದು ಸರ್ಕಾರ ಮತ್ತು ನಾಗರೀಕರ ನಡುವಿನ ಅಂತರ ಕಡಿಮೆ ಮಾಡಲು ಸಹಕರಿಸುತ್ತದೆ.ಪತ್ರಿಕೆಗಳ ಬರವಣಿಗೆ, ಸಂಪಾದನೆ, ಪ್ರಕಟಣೆ, ಸಂಗ್ರಹಣೆ, ಪ್ರಸರಣಾ ಪತ್ರಿಕೆಗಳ ನಿರ್ವಹಣೆ, ಜಾಹೀರಾತು ಮುಂತಾದ ಚಟುವಟಿಕೆಗಳನ್ನು ಒಳಗೊಂಡಿದೆ.
ತಮ್ಮ ಪುಸ್ತಕಕ್ಕೆ ತಾವೇ ಮುಖಪುಟ, ಚಿತ್ರ ಬರೆದುಕೊಂಡ ಏಕೈಕ ಸಾಹಿತಿ ಆ ಕಾಲದಲ್ಲಿ ಯಾರಾದರೂ ಇದ್ದರೆ ಅದು ಶಿವರಾಮ ಕಾರಂತರು, ಮುದ್ರಣಾಲಯದ ಮೊಳೆ ಜೋಡಿಸುವ,ಅಚ್ಚು ಮಾಡುವ,ಪ್ರೂಪ್ ನೋಡುವ ಮುದ್ರಿಸುವ ಇಷ್ಟಾಗಿ ಪುಸ್ತಕ ಸಿದ್ದವಾದ ನಂತರ ಓದುಗನು ನಾನೊಬ್ಬನೇ ಎಂದಿದ್ದಾರೆ.
ಈ ಸಂದರ್ಭದಲ್ಲಿ ಒಂದು ಪ್ರಸಂಗ ಹೇಳಲೇಬೇಕು ಡಿ.ವಿ.ಗುಂಡಪ್ಫನವರು ನಮ್ಮ ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಅವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ ಯೇ ಆಗಿದೆ.ಮೈಸೂರಿನ ದಸರೆಯ ವಿಶೇಷ ಸಂದರ್ಭದಲ್ಲಿ ಆಗ ಸರ್ ಎಂ ವಿಶ್ವೇಶ್ವರಯ್ಯ ಅವರ ದಿವಾನರಾದ ಸಮಯ ದಸರೆಯ ಬಗ್ಗೆ ಎಲ್ಲಾ ಪತ್ರಕರ್ತರು ದಸರೆಯನ್ನು ವೈಭವವಾಗಿ ವರ್ಣಿಸಿ ಬರೆದಿದ್ದಾರೆ ಎಂದು ಸಂತಸಗೊಂಡು ಮರು ಉಡುಗೊರೆಯಾಗಿ ಎಲ್ಲರಿಗೂ ಸ್ವಲ್ಪ ಹಣ ಕೊಡಿ ಎಂದು ತಿಳಿಸಿರುತ್ತಾರೆ.ಆಗ ಡಿವಿಜಿ ಅವರಿಗೂ ಹಣ ಸಂದಾಯ ಆಗುತ್ತದೆ ತಕ್ಷಣ ಸರ್ ಎಂ.ವಿಶ್ವೇಶ್ವರಯ್ಯರ ಬಳಿ ಬಂದು ಡಿವಿಜಿ ವಿಚಾರಿಸುತ್ತಾರೆ,ಆಗ ಇದ್ದ ವಿಷಯ ಸರ್ ಎಂ.ವಿ.ತಿಳಿಸುತ್ತಾರೆ ಒಡನೆ ಡಿವಿಜಿ ಹೇಳುತ್ತಾರೆ ವರದಿ ಮಾಡುವುದೇ ಪತ್ರಕರ್ತನ ಕರ್ತವ್ಯ,ವರದಿ ಮಾಡಲಿಕ್ಕೆಂದೇ ಸಂಬಳ ಕೊಟ್ಟು ಪತ್ರಿಕೆಯವರು ನೇಮಕ ಮಾಡಿಕೊಂಡಿರುತ್ತಾರೆ ಆದ್ದರಿಂದ ಸರ್ಕಾರ ಈ ರೀತಿ ಹಣ ನೀಡುವ ಅವಶ್ಯಕತೆ ಇಲ್ಲ ಎಂದು ವಿನಯದಿಂದ ಹೇಳಿ ಹಣ ಹಿಂತಿರುಗಿಸುತ್ತಾರೆ,ಆಗ ಸರ್ ಎಂ ವಿಶ್ವೇಶ್ವರಯ್ಯ ಅವರು ಅವರ ಪ್ರಾಮಾಣಿಕತೆಗೆ ವೃತ್ತಿ ಪ್ರತಿಭೆಗೆ ಮೂಕವಿಸ್ಮಯ ಆಗುತ್ತಾರೆ.ಪತ್ರಿಕಾ ಧರ್ಮದ ಪಾವಿತ್ರ್ಯತೆ ಎತ್ತಿ ಹಿಡಿದ ಅಪರೂಪದ ಮಹಾನುಭಾವರು.
ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ, ನಿಷ್ಪಕ್ಷಪಾತ,ಪಾರದರ್ಶಕತೆ, ವಾಸ್ತವತೆ, ಸತ್ಯಾಸತ್ಯತೆ ಪರಿಶೀಲಿಸಿ ಸರಳವಾಗಿ ಓದುಗನಿಗೆ ಹೇಳುವುದ ಬಿಟ್ಟು ಒಬ್ಬ ವ್ಯಕ್ತಿಯ ವೈಭವಿಕರಣ,ಅತಿಯಾದ ಓಲೈಸುವಿಕೆ,ಪಕ್ಷಪಾತ,ಜಾತಿಮೋಹ, ತನ್ನನ್ನು ಅಡವಿಟ್ಟುಕೊಳ್ಳುವ ಸಂದರ್ಭಗಳು ಇವೆ ಎಂದರೂ ತಪ್ಪಾಗಲಾರದು.ಪತ್ರಿಕಾ ಧರ್ಮದ ತಳಹದಿ ಮೌಲ್ಯಗಳು ಹೇಳಲಷ್ಟೇ ಆಙರಣೆಯಲ್ಲಿ ಇಲ್ಲ ಎಂಬಂತ ಸ್ಥಿತಿ ತಲುಪುತ್ತಿರುವುದು ಆತ್ಮಾವಲೋಕನ ಮಾಡಿಕೊಳ್ಳಬೇಕು.ಸುದ್ದಿ ಓದುವ ಓದುಗ ಸತ್ಯವೆಂದೇ ನಂಬುತ್ತಾನೆ ಹಾಗಾಗಿ ಸ್ಪಷ್ಟ ಮಾಹಿತಿ ಇರಬೇಕು.
ಈ ಸಂದರ್ಭದಲ್ಲಿ ಶಿವರಾಮ ಕಾರಂತರ ದಿಟ್ಟ ನಿಲುವು ನೆನಪಾಗುವುದು ಒಮ್ಮೆ ಸಾಹಿತ್ಯ ಗೋಷ್ಠಿ ನಡೆಯುವ ಸಂದರ್ಭದಲ್ಲಿ ಬರದ ಸಮಯ ಇದೆಲ್ಲಾ ಬೇಕಿತ್ತೆ ಎನ್ನುವವರ ಮಾತು ಕಿವಿಗೆ ಬಿದ್ದಾಗ ವೇದಿಕೆಯಲ್ಲಿ ದಿಗ್ಗಜರ ಕುವೆಂಪು ಸೇರಿದಂತೆ,ಬರ ಬಂದಿದೆಯೆಂದು ನಾವು ಮಸಾಲೆ ದೋಸೆ ತಿನ್ನುವುದು ಬಿಟ್ಟಿಲ್ವವಲ್ಲ ಎಂದು ಮಾತಿನ ಛಾಟಿ ಬೀಸುತ್ತಾರೆ ಹಾಗೇ ಇದ್ದದ್ದು ಇದ್ದಂತೆ ಹೇಳುವುದರಲ್ಲಿ ತಪ್ಪೇನು.
ಟಿ.ಲಂಕೇಶರು ಸಹ ದಿಟ್ಟ ನಡೆಯಿಂದ ಪತ್ರಿಕೆ ಹೆಸರಾಗಿದ್ದು.
ಒಂದು ಕ್ಷೇತ್ರದಲ್ಲಿ ಸಮಸ್ಯೆ ಎಂದಾಗ ಆತ ಸುದ್ದಿಯನ್ನಷ್ಟೇ ಬರೆಯದೆ ಉಸ್ತುವಾರಿ ಸಚಿವರ ಹೆಸರು ಹಾಕಿದಾಗ ಸಮಸ್ಯೆ ಬಹುಬೇಗ ಪರಿಹರಿಸಬಹುದು ಎಂಬ ಸತ್ಯ ತಿಳಿದಿರಬೇಕು.
ಸಾಮಾನ್ಯ ನಾ ಕೂಗಾಗಬೇಕು, ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು, ಮಾನವೀಯತೆಗೆ ಮಾದರಿಯಾಗಬೇಕು ಹಾಗಾದಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಅಲ್ಲವೇ?
ಹೌದು ಲಂಕೇಶ್ ಎಂದಾಕ್ಷಣ ಆ ರಾವಣನ ಹೆಸರಿನ, ದೈತ್ಯ ದೇಹದಂತೆ ದೈತ್ಯ ಪ್ರತಿಭೆ.ಹಾಗೇಯೇ ಅವರು ಎಲ್ಲರಿಗೂ,ಆಪ್ತವಲಯಕ್ಕೂ “ಮೇಸ್ಟ್ರೇ”ಎಂದೇ ಪರಿಚಿತ.ಅವರು ಗುರು ದ್ರೋಣಾಚಾರ್ಯರಿದ್ದಂತೆ,ಅದೆಷ್ಟೋ ಏಕಲವ್ಯರಿಗೆ.ಅಪರೋಕ್ಷವಾಗಿ ಗುರುವೆಂದುಕೊಂಡು ಸಾಧಿಸಿದವರೆಷ್ಟೋ.ತಮ್ಮ ಪ್ರತಿಭೆ, ಅರ್ಹತೆ, ವ್ಯಕ್ತಿತ್ವ ಹಾಗೇಯೇ ಬಸವಣ್ಣನ ಅನುಭವ ಮಂಟಪದಲ್ಲಿದ್ದಂತೆ ಸುತ್ತಲೂ ಎಲ್ಲಾ ಸ್ತರದವರಿರಬೇಕೂ,ಹಾಗೇಯೇ ಎಲ್ಲಾರಿಗೂ ಏಕಸಮಾನ ಪ್ರೀತಿ ಅಲ್ಲಿ ಪ್ರತಿಭೆ ಅಷ್ಟೇ ಮಾತನಾಡಬೇಕು, ಮಾನವೀಯತೆ ಉಸಿರಾಡಬೇಕು.
ಜನರಿಗೆ ಒಳಿತು ಮಾಡಬೇಕಾದ ವಿಷಯಗಳಲ್ಲಿ ಇಷ್ಟು ಬೇಜವಾಬ್ದಾರಿತನದಿಂದ ಪ್ರವರ್ತಿಸುವ ನಿನ್ನಂಥವನು ರಾಜ್ಯದ ಮುಖ್ಯಮಂತ್ರಿ ಎಂದು ಹೇಗೆ ಮರ್ಯಾದೆ ಕೊಡುವುದು,ನಿಜವಾಗಿ ನೀನೊಬ್ಬ ಮೂಖ೯ಎಂದು ಬಹಿರಂಗವಾಗೇ ನಿರ್ಭಿಡೆಯಿಂದ ಒಬ್ಬ ಮುಖ್ಯಮಂತ್ರಿಯ ಬಗ್ಗೆ ಬರೆಯುತ್ತಿದ್ದ ಪತ್ರಿಕೆಯ ಸಂಪಾದಕರು ಅವರಾಗಿದ್ದರು.
ಪತ್ರಕರ್ತ ಯಾವಾಗಲೂ ನಿರಂತರವಾದ ಪ್ರತಿಪಕ್ಷವಾಗಿರಬೇಕು ಯಾವ ಪರಿಸ್ಥಿತಿಯಲ್ಲೂ ಅವನು ಆಳುವ ಪಕ್ಷದ ಪರವಾಗಿರಬಾರದು ಆ ಜವಾಬ್ದಾರಿಯನ್ನು ಕಾಪಾಡಿಕೊಳ್ಳುವುದಾದರೆ ಪತ್ರಿಕೆಯಲ್ಲಿ ಬರೆಯಿರಿ ಎನ್ನುತ್ತಿದ್ದರು.
ಇಂದಿನ ದಿನಮಾನಗಳಲ್ಲಿ ಆ ತರದ್ದು ಅಪರೂಪವೇ, ಒಮ್ಮೆ ಒಬ್ಬ ಪತ್ರಕರ್ತನ ಬಗ್ಗೆ ಸೀನಿಯರ್ ಪತ್ರಕತ೯ ನನ್ನ ಮಾತು ಕೇಳ್ತಾಯಿಲ್ಲ ಸರ್ ಎಂದು ದೂರಿದಾಗ ರೀ ಅವನು ಏನು ಬರೀತಾನೋ ಅದನ್ನು ಬರಿಯೋಕೆ ಬಿಡ್ರಿ, ನಿಮ್ಮನ್ನು,ಸಂಪಾದಕನನ್ನು ಮೆಚ್ಚಿಸಲು ಬರೆಯೋಕೆ ಶುರು ಮಾಡಿದರೆ,ನಾಳೆ ಒಬ್ಬ ಎಂಎಲ್ಎ ಯನ್ನೂ ಸಂತೋಷಪಡಿಸೋಕೆ ಬರೆಯಬೇಕು ಅಂತ ಅವನಿಗೆ ಅನ್ನಿಸೋಕೆ ಶುರುವಾಗುತ್ತೆ,ಅವನ ಸ್ವತಂತ್ರದೊಡನೆ ಬರೆಯೋಕೆ ಅವನಿಗೆ ಬಿಡಿ ಯಾರೂ ಪೂಲ್…ಎಂದು ಗದರುತ್ತಿದ್ದರು.
ಅವಕಾಶ ಸಿಗದ ಹೊಸ ತಲೆಮಾರಿನ ವರನ್ನು ಬೆಳೆಸಬೇಕು,ಗೆದ್ದ ಒಬ್ಬನ ದಯೆಯಲ್ಲಿ ನಾವೂ ಗೆದ್ದು ಬಿಡಬಹುದೆಂದು ಯಾವಾಗ ಯೋಚಿಸಲು ಆರಂಭಿಸುತ್ತೇವೆಯೋ ಆ ಕ್ಷಣದಿಂದಲೇ ನಮ್ಮೋಳಗಿನ ಕಲೆ, ಪ್ರತಿಭೆ ಸಾಯಲಾರಂಭಿಸುತ್ತದೆ ಎನ್ನುತ್ತಿದ್ದ ವ್ಯಕ್ತಿ ಶಕ್ತಿ ತನ್ನನ್ನು ಒರಟ ಎಂದು ವಿಮರ್ಶಿಸುವವರಿಗೆ ಮನಸ್ಸಿಗೆ ಮನಃಸಾಕ್ಷಿಗೆ ಸರಿ ಎನ್ನಿಸಿದ ವಿಷಯವನ್ನು ಪ್ರಾಮಾಣಿಕವಾಗಿ ಅಕ್ಷರವಾಗಿಸುತ್ತೇನೆ, ಹೀಗೆ ಒರಟನಂತೆ ಬದುಕುವುದರಲ್ಲಿ ನನಗೆ ಏನೂ ನಷ್ಟವಿಲ್ಲ, ಹೀಗೆ ಬದುಕಬೇಕು ಎಂದು ಹೇಳುವುದಕ್ಕಿಂತ ಬದುಕಿ ತೋರಿಸಿದರು ಹಲವರ ರೋಲ್ ಮಾಡೆಲ್ ಲಂಕೇಶರು ನನ್ನನಂತೂ ಇಡಿಯಾಗಿ ಆವರಿಸಿ ಚಿಂತನೆಗೆ ಗುರಿಯಾಗಿಸಿ,ಹೃದಯಪೂರ ಮೆಚ್ಚುಗೆ ಮೂಡಿ ಅದು ಸದಾ ಜಾಗೃತವಾಗಿ ಆಗಾಗ ಅವರ ಗದರುವಿಕೆಯಂತೆ ಎಚ್ಚರಿಸುತ್ತಾ ಇರಲಿ,ಮುನ್ನೇಡಸಲಿ ನಾನೂ ಕೂಡಾ ಒಬ್ಬ ಏಕಲವ್ಯ.!
ಶಾರದ ಜೈರಾಂ,