ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗದ  ಜಾತ್ರೆಯಲಿ
ಕೋಟಿಯೊಳಗೊಬ್ಬರಲಿ ನೀನು
ಬದುಕಿನ ಸಂತೆಯಲಿ
ಧಾವಿಸುವವರೊಬ್ಬರಲಿ ನೀನು

ಹಣೆ ಬರಹ ಹೊತ್ತು
ಹುಟ್ಟಿ ಬಂದವರೊಬ್ಬರಲಿ  ನೀನು
ಬವಣೆಗಳ ಸರವ ಕೊರಳಲಿ
ಧರಿಸಿಬಂದವರೊಬ್ಬರಲಿ ನೀನು

ಬಯಕೆಗಳ  ಬೆನ್ನತ್ತಿ
ತೇಕುತ ಇರುವವರೊಬ್ಬರಲಿ ನೀನು
ಆಸೆಗಳ ಉಯ್ಯಾಲೆಯಲಿ
ಜೀಕುತ ಸೋತವರೊಬ್ಬರಲಿ  ನೀನು

ಬಣ್ಣಗಳ ಭ್ರಮೆಯಲಿ
ಇಂದ್ರಚಾಪ ಹಿಡಿಯುವವರೊಬ್ಬರಲಿ ನೀನು
ಕಾಂಚಾಣದ  ಮೆರುಗಿಗೆ
ಕುರುಡರಾದವರೊಬ್ಬರಲಿ ನೀನು

ಬಾಳ ನಿಜ ಅರ್ಥವನು
ತಿಳಿದುಕೋ ಮರುಳ ಮನುಜಾ
ಅರಿವಿನ ಕಣ್ತೆರೆದು
ತಿರುಳ ಸವಿಯುವವನಾಗು ನೀನು..


About The Author

3 thoughts on “ಹಮೀದಾ ಬೇಗಂ ದೇಸಾಯಿ ಕವಿತೆ-ಜಗದ ಜಾತ್ರೆಯಲಿ…”

  1. ಮಮತಾ ಶಂಕರ್

    ಬಹಳ ಚೆನ್ನಾಗಿದೆ ಮೇಡಂ…. ಅರ್ಥಪೂರ್ಣ

Leave a Reply

You cannot copy content of this page

Scroll to Top