ಕಾವ್ಯ ಸಂಗಾತಿ
ಮಾಲಾ ಹೆಗಡೆ
ನೀ ಕವಿತೆ
ಭಾವನೆಗಳಿಗೆ ಬೆಳಕ ಬೀರೋ
ದೀವಿಗೆ ಕವಿತೆ,
ಯೋಚನಾ ಲಹರಿಯದು
ಜೀವ ತಳೆದ ಒಡಲಗೀತೆ.
ಅಂತರಂಗದಿಂದ ಉದಿಸಿ ಬಂದ
ಪದಗಳ ಸರತಿ,
ಒಂಟಿಯಾಟದಿ ಜೊತೆ ನಿಂದು
ಜಂಟಿಯಾಗೋ ಸಹವರ್ತಿ.
ಹರ್ಷೋದ್ಘಾರವ
ಹರವಿಡಲು ನಿನ್ನನರಸಿದೆ,
ದುಃಖ ದುಗುಡವ
ನಿನ್ನೊಳಗಿಟ್ಟು ನಾ ಹಗುರಾದೆ.
ಗತದ ನೆನಪುಗಳೆಲ್ಲವ
ಒಟ್ಟಿಗೆ ಕೂಡಿ ಕಟ್ಟಿದೆ,
ಭವಿಷ್ಯದ ಸವಿ
ಆಶಯವೆಲ್ಲವ ಸೇರಿ ತುಂಬಿಸಿದೆ.
ಸೋಲ ಹಿಮ್ಮೆಟ್ಟಿಸೋ
ಛಲವ ಹುಟ್ಟಿಸುವೆ,
ಗೆಲ್ಲುವ ಭರವಸೆಯ ತಂಗಾಳಿ
ಬೀಸುವೆ.
ನೊಂದ ಮನಕೆ ನಲ್ಮೆಯಲಿ
ಸ್ಫೂರ್ತಿಯಾಗುವೆ,
ಕವಿಯ ಹಂಬಲವ ಈ ತೆರದಿ
ಪೂರ್ತಿಯಾಗಿಸುವೆ.
ಮಾಲಾ ಹೆಗಡೆ.
ಚಲೋ ಇದ್ದು
ಧನ್ಯವಾದಗಳು ಮೆಚ್ಚುಗೆಗೆ
ಚಂದದ ಬರಹ