ಕಾವ್ಯ ಸಂಗಾತಿ
ಗಿರಿಜಾ ಮಾಲಿ ಪಾಟೀಲ್
ಸಖ -ಸಖಿ
ಅಷ್ಟೂ ಸುಖದ ಬಯಕೆಗಳ
ಒಗ್ಗೂಡಿಸಿ ಮಾಲೆ
ಹೆಣೆಯುತ್ತಿರುವೆ
ಪರಿಮಳ ನಿನ್ನರಸಿ ಬರಲಿಲ್ಲವೆ?!
ಬರೆದರೆ ಕರ್ತನು ನಿನ್ನ
ದೇಹದ ಚಿತ್ರವ ಅದರಲಿ
ಮೋಹದ ರಂಗು
ನಾ ಬಳಿಯುವೆ
ಅವನಿಯ ನಾಟ್ಯ ರಸದಲಿ
ಮಿಂದೆದ್ದು ಕೆಂಪಾದ ರವಿ
ಕಾರಿರುಳ ನಿಶೆಯ ಹೆರಳಲ್ಲಿ
ಮರೆಯಾಗುತ್ತಿದ್ದಾನೆ
ಮರಳಿಸಬೇಕೆಂದಿದ್ದೇನೆ…
ಎರವಲು ನೀಡಿದ ನಿನ್ನ ಮುತ್ತುಗಳ
ನೀ ಮರಳಬಹುದೆ
ಹರೆಯ ಸರಿಯುವ ಮುನ್ನ
ನಿನ್ನ ಕಣ್ಣ ಕನಸಿನ ಕೊಳದಿ
ವಿಹರಿಸುವ ಬಯಕೆ,
ಧುಮುಕಿ ಬಿಡಲೇನು
ಒಂದೇ ಒಂದು ಬಾರಿ
ನನ್ನ ಗುಂಗಿನಲ್ಲಿ ನೀನಿದ್ದೀರಬಹುದೆ?
ಎನ್ನುವ ಚಿಂತೆ ಕಾಡುತಿದೆ ನನ್ನಲಿ
ಚಿಕ್ಕ ಸುಳಿವನ್ನಾದರೂ ನೀಡು
ನನ್ನಿ ಕುತೂಹಲ ತಣಿಯಲಿ
ಗಿರಿಜಾ ಮಾಲಿ ಪಾಟೀಲ್
Super Medam