ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಮಳೆ
ಏನಿದು ಮಳೆಯೊ!
ಜಿಟಿ ಜಿಟಿ ಮಳೆಯೊ,
ಮುಂಜಾನೆಯಿಂದ ಸಂಜೆಯತನಕ.
ಸುರಿಯುವ, ಜಿಟಿ ಜಿಟಿ ಮಳೆಯೊ!
ಹಸುರನು ಹೊದ್ದಿಹ ಬೆಟ್ಟದ ಸಾ ಲು,
ಕಣ್ಮನ ತಣಿಸುವ ಪಚ್ಚೆನೆ ಬಯ ಲು,
ಪ್ರಕೃತಿ ಮಾತೆಯ, ಒಡಲಿನ ಸಿರಿ ಯು,
ಸಂಭ್ರಮಗೊಳಿಸಿದೆ, ಜಿಟಿ ಜಿಟಿ ಮ ಳೆಯು.
ಬಾನಲಿ ಮೂಡಿದೆ, ಕಾಮನ ಬಿಲ್ಲು.
ಬಣ್ಣಗಳೆರಸಿದೆ, ಎಳೆ ಬಿಸಿಲು.
ಸ್ವರ್ಗಸೀಮೆಗೆ, ತೋರಣ ಕಟ್ಟಿ,
ಸಂಭ್ರಮಗೊಳಿಸಿದೆ, ಜಿಟಿ ಜಿಟಿ ಮಳೆಯು.
ಭಾವ ಶರಧಿಯೊಳು, ಮೀಯಿಸಿ ತೇಲಿಸಿ,
ಕವಿ ಹೃದಯವನು, ಪುಲಕಿತಗೊಳಿ ಸಿ,
ವರುಷಧಾರೆಯ, ಹರುಷದ ಹೊನ ಲು,
ಸಂಭ್ರಮಗೊಳಿಸಿದೆ, ಜಿಟಿ ಜಿಟಿ ಮಳೆಯು.
ಪಿ.ವೆಂಕಟಾಚಲಯ್ಯ.
One thought on “ಪಿ.ವೆಂಕಟಾಚಲಯ್ಯ ಅವರ ಕವಿತೆ-ಮಳೆ”