ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಕಾಯುವೆನು
ಒಲವಿನ ನಡೆಗೆ ನೀ ಬರುವೆಯ ಕಡೆಗೊ
ತೊರೆಯುವ ಮುನ್ನ ಅರಿವೆಯ ನನ್ನ
ನೀ ತಿಳಿಯದೆ ಇರಲು ಕಾರಣ ಏನು
ಹೇಳಲು ನೀನು ಕೇಳುವೆ ನಾನು
ಪ್ರೀತಿಯ ಹುಟ್ಟು ತಿಳಿಸಲು ನೀನು
ಮಾತು ಮೊದಲೋ ನಗುವು ಮೊದಲೋ
ಕಂಡ ಕನಸು ಉಳಿಸಲು ನೀನು
ಇರುವೆನು ನಾನು ಹೃದಯದ ಒಳಗೂ
ಮನಸ್ಸಿನ ಬಣ್ಣ ನಿನ್ನ ನಗುವಿನ ಅಂದ
ಕಲರವ ಮೂಡಿ ಬಾಳಿಗೆ ಚೆಂದ
ಕಥೆಗಳು ಎಲ್ಲಾ ನಿನ್ನ ಹೆಸರಲೇ ಇರಲು
ಬರೆಯುವೆ ನಾನು ಹೃದಯದ ನೋವು
ಬಚ್ಚಿಟ್ಟುಕೊಂಡ ನಿನ್ನ ಮಾತುಗಳೆಲ್ಲ
ಕರೆಯುತ ನನ್ನ ಕೇಳುದು ನಿನ್ನ
ಇರುಳಿನ ಒಳಗೆ ಬರುವೆಯ ಮನೆಗೆ
ಚಂದಿರ ನಿನ್ನ ಕಾಯುವ ಹೊರಗೆ
ಮನ್ಸೂರ್ ಮೂಲ್ಕಿ