ಸವಿತಾ ದೇಶಮುಖ ಅವರ ಕವಿತೆ-‘ಬುದ್ಧ ಬಸವ ಹುಟ್ಟಿ ಬರಲಿ’

ಬುದ್ಧ- ಬಸವ ಹುಟ್ಟಿಬರುವ
ಕಾಲ ಸನ್ನಿಹಿತ….
ಇನ್ನೂ ತಡ ಮಾಡದಿರಿ
ಮತ್ತೆ ಜನಿಸಿ ಬನ್ನಿ
ಈ ಭೂಮಿಯ ಎತ್ತಿ ಹಿಡಿಯಲು
ನೀವು ಕಲಸಿದ ಪಾಠಗಳು
ಮತ್ತೆ ಮರುಕಳಿಸಲಿ,
ಸತ್ಯ- ಅಹಿಂಸೆ-ಐಕ್ಯತೆಯ
ಭಾವವು ಮತ್ತೆ ಮೈದಳಿಯಲಿ…

ಕಥೆಯಾಗದಿರಲಿ ನಿಮ್ಮ
ದಿವ್ಯ ಕಲಿಕೆಯು,
ಕಾಲ್ಪನಿಕ ಚರಿತೆಯಾಗದಿರಿ….
ಮತ್ತೆ ನೀವು ಜನಿಸುವ ಕಾಲ ಸುಸನ್ಹಿತವಾಗಲಿ…..

ಎತ್ತ ನೋಡಿದರತ್ತ
ಮೋಸ-ಕೊಲೆ-ಪಾತರು
ತಮ್ಮ ಸ್ವಾರ್ಥದಾಸೆಗಾಗಿ ನಮ್ಮ
ಸಂಸ್ಕೃತಿ-ಪರಂಪರೆಯ
ಬಲೆಯನಿತ್ತಿ ಮೆರೆದಾಡುವರು
ಮರೆತು ಐಕ್ಯತೆಯ,
ಮಿತ್ಯ ಅಭಿಮಾನ ಬ್ರಾಂತಿಯಲಿ

ರಾಷ್ಟ್ರ-ಸ್ವಾಭಿಮಾನವ
ದ್ವೇಷಿಸುವ ಹವಳಣೆಯಲಿ
ಎತ್ತನಡೆದಿಹರು ಹಿಂಸೆ
ಉಕ್ಕಿದ ಭಾವದಿ….

ಬಸವ- ಬುದ್ಧ ಅಂದು
ತೊರೆದು‌ ರಾಜ ವೈಭವ,
ನಡೆದಿರಿ ಹೊಸ ಯುಗವ
ಕಟ್ಟುವ ಕನಸು ಹೊತ್ತು
ನಿಮ್ಮ ತ್ಯಾಗ ಬಲಿದಾನಕ್ಕೆ
ನೀರ ಹೊಯ್ದು,
ಮತ್ತೆ ಅದೇ ದಾರಿಯಲ್ಲಿ
ನಡೆದ ಜನಸ್ತೋಮವು
ಮೋಸದಿ ಜಗವ ಗೆಲ್ಲುವ
ಹಾವಣೆಯಲ್ಲಿ….

ಬುದ್ಧ -ಬಸವರು ಈಗ ಮತ್ತೆ ಹುಟ್ಟಿ ಬರಲೇಬೇಕು
ದ್ವೇಷ ಪಾಪದ ಕುಪದಿಂದ
ಮೇಲೆತ್ತಲು,
ನಮ್ಮ ಕೈ ಹಿಡಿದು ನಡೆಸಲು,
ನಿಮ್ಮ ದಿವ್ಯ ಪ್ರಭೇಯಲಿ…..


One thought on “ಸವಿತಾ ದೇಶಮುಖ ಅವರ ಕವಿತೆ-‘ಬುದ್ಧ ಬಸವ ಹುಟ್ಟಿ ಬರಲಿ’

Leave a Reply

Back To Top