“ಸರಳ ಸಜ್ಜನಿಕೆಯ ಸಂಶೋಧಕ ರಂ ಶ್ರೀ ಮುಗಳಿ” ಇಂದು ಜುಲೈ 15 ರಂಶ್ರೀ ಮುಗಳಿ ಯವರ ಜನ್ಮ ದಿನದ ಅಂಗವಾಗಿ ಡಾ ಗೀತಾ ಡಿಗ್ಗೆ ಅವರ ಲೇಖನ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ‘ರಸಿಕರಂಗ ‘ಎಂದೇ ಪರಿಚಿತರು. ಕನ್ನಡ ಸಾಹಿತ್ಯ ಚರಿತ್ರೆಯ ಶಿಲ್ಪಿಯಾಗಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿವತಿಯಿಂದ ಪುರಸ್ಕೃತರಾದ ಎರಡನೇಯ ಕನ್ನಡಿಗರು ಎಂಬ ಹೆಗ್ಗಳಿಕೆ ಇವರಿಗಿದೆ. ದಕ್ಷಿಣ ಮಹಾರಾಷ್ಟ್ರದಲ್ಲಿ ಕನ್ನಡ ಮರಾಠಿ ಜನರಿಗೆ ಪ್ರಿಯರಾದವರು. ಗಡಿನಾಡಿನ ಕನ್ನಡ ದೀಪ, ಕನ್ನಡದ ಪಾರಿಜಾತ ಎನ್ನುವ ಬಿರುದುಗಳಿಗೆ ಪಾತ್ರರಾದವರು. ಮಹಾರಾಷ್ಟ್ರ, ಕರ್ನಾಟಕ ಗಡಿಭಾಗದಲ್ಲಿಯ ಕನ್ನಡ ಮರಾಠಿಯ ಕೊಂಡಿಯಾಗಿ, ಸ್ನೇಹ ಸೇತುವೆಯಾಗಿ ಕೆಲಸ ಮಾಡಿದ ಧೀಮಂತ ವ್ಯಕ್ತಿತ್ವದವರು. ರಂ ಶ್ರೀ ಮುಗಳಿಯವರು ಪ್ರಾಮಾಣಿಕರು, ಶಿಸ್ತುಬದ್ಧ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ, ಸಂಪಾದಕರಾಗಿ, ಕನ್ನಡ ಸರಸ್ವತ ಕಣಜಕ್ಕೆ ಅವರು ನೀಡಿದ ಕೊಡುಗೆ ಅಪಾರ. 50ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ವಾಂಗ್ಮಯಕ್ಕೆ ನೀಡಿರುವರು. ಸಂಗೀತ ಪ್ರೀಯರೂ ಆಗಿದ್ದ ಇವರು ಸ್ವತಹಃ ವೀಣೆ ಹಾಗೂ ಹಾರ್ಮೋನಿಯಂ ಗಳನ್ನು ನುಡಿಸುತ್ತಿದ್ದರು. ಇವರದು ತುಂಬ ಸರಳ ಜೀವನಶೈಲಿ.
 ರಂ ಶ್ರೀ ಮುಗಳಿಯವರು 15ಜುಲೈ 1906 ರಂದು ಹೊಳೆಆಲೂರಿನಲ್ಲಿ ಜನಿಸಿದರು.  ಇವರ ಪೂರ್ಣ ಹೆಸರು ರಂಗನಾಥ ಶ್ರೀನಿವಾಸ ಮುಗಳಿ. ತಂದೆ ವಕೀಲರಗಿದ್ದರು. ಆದರೆ ಇವರಿಗೂ ಸಂಗೀತ ಮತ್ತು ನಾಟಕಗಳಲ್ಲಿ ವಿಶೇಷ ಆಸಕ್ತಿಯಿತ್ತು. ತಂದೆಯ ಕಲಾಭಿರುಚಿ ರಂ ಶ್ರೀ ಯವರಿಗೂ ಬಂದಿತ್ತು. ಇವರ ಪ್ರಾಥಮಿಕ ಶಿಕ್ಷಣ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಆಗುತ್ತದೆ. ವಿಜಯಪುರದ ಪಿಡಿಜೆ ಹೈಸ್ಕೂಲ್ ನಲ್ಲಿ ಸೇರಿಕೊಳ್ಳುತ್ತಾರೆ. ಇಲ್ಲಿ ಅವರ ಬದುಕಿನಲ್ಲಿ ತಿರುವು ಕಾಣುತ್ತದೆ. ಇಂಗ್ಲಿಷ್, ಸಂಸ್ಕೃತ ಭಾಷೆಗಳ ಸಮೃದ್ಧ ಸಾಹಿತ್ಯವನ್ನು ಓದುತ್ತಾರೆ. ಹೆಚ್ಚಿನ ಓದಿಗೆ ಧಾರವಾಡ ಕ್ಕೆ ಹೋಗುತ್ತಾರೆ. 1928ರಲ್ಲಿ ಬಿ ಎ ಸಂಸ್ಕೃತ ಆನರ್ಸ್, 1930ರಲ್ಲಿ ಎಂ ಎ ‘ವಿದ್ಯಾರಣ್ಯ’ಪರಿತೋಷಕದೊಂದಿಗೆ ಪೂರ್ಣಗೊಳಿಸುತ್ತಾರೆ. 1932ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿ ಸೇವೆಯನ್ನು ಆರಂಭಿಸುತ್ತಾರೆ.  1933ರಲ್ಲಿ ಪ್ರಾಧ್ಯಾಪಕರಾಗಿ ಸಾಂಗ್ಲಿಯ ವಿಲಿಂಗ್ ಡನ್ ಕಾಲೇಜಿನಲ್ಲಿ ಸೇರುತ್ತಾರೆ. ಇಲ್ಲಿಯೇ ತಮ್ಮ ತುಂಬುಜೀವನ ನಡೆಸಿದರು. ಪ್ರಾಚಾರ್ಯರಾಗಿ ಸೇವೆಸಲ್ಲಿಸಿದರು. ಧಾರವಾಡ ದ ಗೆಳೆಯರ ಗುಂಪಿನಲ್ಲಿ ದ ರಾ ಬೇಂದ್ರೆ, ವಿ ಕೆ ಗೋಕಾಕ್ಒಡನಾಟದಲ್ಲಿ ಸಾಹಿತ್ಯಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ.


‘ಜಯಕರ್ನಾಟಕ ‘, ‘ಜೀವನ ‘  ಈ ಸಾಹಿತ್ಯ ಪತ್ರಿಕೆಯ ನಿರ್ವಹಣೆ ಕೂಡ ಮಾಡುತ್ತಾರೆ. ಸಾಂಗ್ಲಿಯಲ್ಲಿ ‘ವರುಣಕುಂಜ’ ಆರಂಭಿಸುತ್ತಾರೆ. ಕನ್ನಡ ಸಾಹಿತ್ಯ ಚರಿತ್ರೆ, ಪ್ರಾಚೀನ ಕನ್ನಡಸಾಹಿತ್ಯ ರೂಪ, ಬಾಸಿಗ, ಅನ್ನ, ಬಾಳುರಿ, ಕಾರಣಪುರುಷ ಮತ್ತು  ‘ಜೀವನ ರಸಿಕ ‘(ಜೀವನ ಚರಿತ್ರೆ) ಹೇರಿಟೇ ಜ್ ಆಫ್ ಕರ್ನಾಟಕ ಇಂಗ್ಲಿಷ್ ಕೃತಿ, ಕನಸಿನ ಕೆಳದಿ ಮುಂತಾದ ಕೃತಿಗಳನ್ನು ಬರೆದರು. ಉತ್ತರಕರ್ನಾಟಕದ ಅಶ್ವಿನಿ ದೇವತೆಗಳಂತೆ ರಂ ಶ್ರೀ ಮುಗಳಿ,  ವಿ ಕೆ ವಿಗೋಕಾಕ ಇವರುಗಳು ಇರುವದು ಹೆಮ್ಮೆಎನಿಸುತ್ತದೆ .
ರಂ ಶ್ರೀ ಮುಗಳಿಯವರು ಹೊರನಾಡ ಕನ್ನಡಿಗರ ಸಂಘಟಣೆಗಾಗಿಯೂ ಅಪಾರವಾಗಿ ದುಡಿದಿದ್ದಾರೆ. ಕನ್ನಡ ನಾಡಿನ ಹೊರಗಿದ್ದರೂ ನಾಡು ನುಡಿಯ ಎಳ್ಗೆಗಾಗಿ ಅವಿರತ ಶ್ರಮಿಸಿದರು. ಉತ್ತರಕರ್ನಾಟಕ ಭಾಗದಲ್ಲಿ ಕನ್ನಡಿಗರ ಪ್ರೌಢ ವ್ಯಾಸಂಗಕ್ಕಾಗಿ ಸಾಕಷ್ಟು ಅವಕಾಶವಿಲ್ಲದಿದ್ದ ಕಾಲದಲ್ಲಿ ಇವರ ಪರಿಶ್ರಮದಿಂದ ಕನ್ನಡ ವಿಭಾಗ ಅಲ್ಪವಧಿಯಲ್ಲಿಯೇ ವಿಸ್ತಾರ ಹೊಂದಿದ್ದು ಇವರ ದಕ್ಷತೆ ಮತ್ತು ಕನ್ನಡ ನಿಷ್ಠೆಗೆ ಸಾಕ್ಷಿ. ಇಂದು ಮಹಾರಾಷ್ಟ್ರ ಹಾಗೂ ಕರ್ನಾಟಕದ ಶಿಕ್ಷಣ ರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕ ಕನ್ನಡ ಪದವಿಧರರು ಮುಗಳಿಯವರ ಶಿಷ್ಯವೃಂದಕ್ಕೆ ಸೇರಿದವರು. ಸಾಹಿತ್ಯ ಕ್ಷೇತ್ರದಲ್ಲೂ, ಸಾಮಾಜಿಕ ಜೀವನದಲ್ಲೂ ರಂ ಶ್ರೀ ಮುಗಳಿಯವರ ದುಡಿಮೆ ಅಪಾರವಾದುದು. ಹತ್ತಾರು ಕ್ಷೇತ್ರಗಳಲ್ಲಿ ಉತ್ಸಾಹದಿಂದ ಕೆಲಸ ಮಾಡಿದರು. 1941 ರಲ್ಲಿ ಹೈದ್ರಾಬಾದನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ನಾಟಕಗೋಷ್ಟಿಯ ಅಧ್ಯಕ್ಷರಾಗಿ, 1955ರಲ್ಲಿ ನಡೆದ ಇಂಕ್ಲಾ ಸಂಸ್ಥೆಯ ಪರವಾಗಿ ಪ್ರೀಭುವಿನಲ್ಲಿ ನಡೆದ ಜಾಗತಿಕ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ‘ಕನ್ನಡ ಸಾಹಿತ್ಯ ಚೆರಿತ್ರೆ’ಗೆ ಪುಣೆ ವಿಶ್ವವಿದ್ಯಾಲಯದಿಂದ ಪ್ರಥಮ ಡಿ.ಲಿಟ್ ಪದವಿ ಪಡೆಯುವರು.
ರಂ ಶ್ರೀ ಮುಗಳಿ 20ನೇ ಶತಮಾನ ಕಂಡಂತಹ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ.

Leave a Reply

Back To Top