ಅಪರ್ಣಾರವರಿಗೆ ಅರುಣಾ ನರೇಂದ್ರ ಅವರ
ಈ ಗಜಲ್ ಅರ್ಪಣೆ
ಮಸಣದ ಹೂವು ಎಲ್ಲಿ ಮರೆಯಾಗಿ ಹೋಯಿತು
ಕನ್ನಡಿಗರ ಕಣ್ಣೀರು ಕೋಡಿಯಾಗಿ ಹರಿಯಿತು
ಚಲನಚಿತ್ರ ಕಿರು ತೆರೆಯ ಮೋಹಕ ತಾರೆ
ಹೊರಟು ನಿಂತೆ ನೆನಪಾಗಿ ಬರಿದಾಯಿತು
ಕನ್ನಡದ ಡಿಂಡಿಮವ ನುಡಿಸಿ ಬದಿಗೆ ಇರಿಸಿ
ಬದುಕ ಬಟ್ಟೆ ಬಹಳ ದೂರವಾಗಿ ನೋಯಿತು
ಎಲ್ಲೆ ಇರದ ಮೇರೆಯನ್ನು ಮೀರಿ ಹೊರಟ ಹಕ್ಕಿ
ಎಲ್ಲಾ ತೊರೆದು ಮುಗಿಲ ಬಣ್ಣವಾಗಿ ಬೆರೆಯಿತು
ಕನ್ನಡದ ನುಡಿಮುತ್ತು ಉಡಿಗಟ್ಟಿ ನಡೆದ ಕನ್ನಡತಿ
ಅಲ್ಲಿ ಯಾವ ಕರೆ ಉದ್ಘೋಷವಾಗಿ ಕರೆಯಿತು
ನಗೆ ಮಲ್ಲಿಗೆ ಹೆಜ್ಜೆ ಗುರುತು ಉಳಿಸಿ ಹೋದೆ
ಕೋಟಿ ಹೃದಯ ಇಲ್ಲಿ ನಿನಗಾಗಿ ಮೊರೆಯಿತು
ಅಪರ್ಣಾ ನಿನಗಿದೋ ಅರುಣಾಳ ಅಶ್ರುತರ್ಪಣ
ಕಳಿಸಲೆಂದು ಮತ್ತೆ ಜನ ವ್ಯಥೆಯಾಗಿ ನೆರೆಯಿತು
ಅರುಣಾ ನರೇಂದ್ರ
ಸೂಪರ್ ಮೇಡಂ
thank you sir
ಸೂಪರ್ ಆಗಿ ಬಂದಿದೆ ಸರ್
ತುಂಬಾ ಅರ್ಥಪೂರ್ಣವಾಗಿ ಮನಸ್ಸಿಗೆ ನಾಟುವಂತೆ ಬರೆದಿರುವರು