ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಜನ್ಮ, ಅನ್ನವ ಕೊಟ್ಟು
ನಂ ಸಲಹುವವಳು,
ಪ್ರತ್ಯಕ್ಷವಾದ ದೇವರು
ಈ ತಾಯಿ ಜಗದೊಳು.
ಇರಬಹುದು ಕೆಟ್ಟ
ಅಪ್ಪ, ಬಂಧು- ಭಗಿನಿ,
ಇರಲು ಸಾಧ್ಯವಿಲ್ಲ
ಕೆಟ್ಟ ತಾಯಿ ಯಾರಿಗೂ.
ನೂರು ನೋವು ಸಹಿಸಿ
ಉಸಿರನಿತ್ತವಳು,
“ಅಮ್ಮಾ” ಎನ್ನೋ ಕೂಗಿಗೆ
ಖುಷಿಯ ಪಟ್ಟವಳು.
ಸತ್ತರೆ ಹೆಣ್ಣೊಬ್ಬಳು
ಸಿಗಬಹುದು ಮತ್ತೆ,
ಪತ್ನಿ ಅಥವಾ ಸೊಸೆ.
ಸಿಗಲಾರಳು ತಾಯಿ.
ತಾನು ಸಾಯೋತನಕ
ಸಂತತಿಯ ಕಾಳಜಿ,
ತಾಳ್ಮೇಲಿ ಭೂಮಿ ಗುಣ
ತೀರದ ತಾಯಿ ಋಣ.
ಕರುಳ ಕತ್ತರಿಸಿ
ಜನ್ಮ ನೀಡಿದ ತಾಯಿ
ಅನ್ನ ನೆರಳು ನೀಡೋ
ಭೂಮಿ ತಾಯಿಗೆ ಸಮ.
———————
ವ್ಯಾಸ ಜೋಶಿ.
ತನಗಗಳು ತುಂಬಾ ಚೆನ್ನಾಗಿವೆ ಸರ್