ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಅಮೃತ ಸಿಂಚನ
ಅನುರಾಗದ ಸೆಳೆತ
ಅನುಭಾವದ ಮಿಡಿತ
ಸೆಳೆಯುತ್ತಿದೆ ಹೃದಯ ರಾಗ
ಮಿಂಚಿನ ಆವೇಗ
ನೆನಪಿನಂತೆ ನೀನು
ಮಾಧುರ್ಯದಲಿ
ಅಮೃತ ಸಿಂಚನ ದಂತೆ
ನೆನಪಾಗುವೆ
ಒಲವ ಮಾತುಗಳ ಬೆಂಬಲ
ಸದಾ ಹೃದಯದಲಿ
ಮನಸ ತುಂಬ ತುಂಬಿರುವೆ
ಬೇರೆನೂ ನೆನಪಾಗದ ಹಾಗೆ
ದೂರವಿದ್ದರೂ ನನ್ನ ಬಳಿಯೇ
ಇರುವಂತಹ ಭಾವನೆ
ಹುಸಿಕೋಪವೂ ಬರದ
ಪ್ರೀತಿ ಉಕ್ಕುವ ಭಾವ ಮನದಲ್ಲಿ
ಗಾಯತ್ರಿ ಎಸ್ ಕೆ