ಗಾಯತ್ರಿ ಎಸ್ ಕೆ ಅವರಕವಿತೆ-ನಾಚಿಕೆ ಅವಳಿಗೆ

ನಾಚಿಕೆ ಅವಳಿಗೆ ಮಾತಲಿ
ಮುಂದು ಹೇಳಲು ಹಿಂದು
ಬಲು ಯೋಚನೆ ಮಾಡುವಳು
ಸುಮ್ಮನೆ.. ಸಂಕೋಚದ
ಹುಡುಗಿಯವಳು!

ಮನಸ್ಸಲಿ ತರತರಹ ಯೋಚನೆ
ಎದುರಲಿ ಬಿಮ್ಮನೆ ಕೆಣಕುವಳು
ಸುರಸುಂದರಿ ಆದರೆ ಏನು
ನಾಚಿ ನೀರಾಗುವಳು ಕಲ್ಪನೆ
ರೂಪಸಿ ಚಂದದ ಬೆಡಗಿ!

ಇಂಪಾದ ಕೋಗಿಲೆ ಕಂಠದ
ಸುಂದರ ಹೆರಳಿನ ಗಂಭೀರೇ
ನವಿಲಿನ ನಡಿಗೆಯ ವೈಯಾರಿ
ಕುಡಿಹುಬ್ಬು ಮೋಹಕ
ನೋಟದಲಿ ಸೆಳೆವಳು!

ನಕ್ಕರೆ ಅರಗಿಣಿ ಸವಿ ಮಾತಿನ
ಸುಂದರಿ ನೀಲವೇಣಿ
ಹೇಳಲು ಹೆಸರು ತಡವರಿಸುತ
ಕಂಪಿಸುತ ನಸುಗೆಂಪಿನಲಿ
ಸವಿ ನೆನಪಿನ ಮಾತಾಡುವಳು!


Leave a Reply

Back To Top