ವ್ಯಾಸ ಜೋಶಿ ಅವರ ಹಾಯ್ಕುಗಳು

ಮಲ್ಲಿಗೆಗಾಗಿ
ಉಲಿದಳು; ಮೆಲ್ಲಗೆ
ಕಿವಿಯೊಳಗೆ.

ಹುಸಿ ಮುನಿಸು
ಅರಸಿಗೆ ; ಮಲ್ಲಿಗೆ
ಮುಡಿಸಿದೆನು.

ನೀ ಹೂವಿನಷ್ಟು
ಚಂದ ಅಂದೆ ; ಚೆಲುವೆ
ಅರಳಿದಳು.

ತುಂತುರು ಮಳೆ
ಕೊಡೆಯಲ್ಲಿ ಬೆಚ್ಚಗೆ
ಅವನೊಟ್ಟಿಗೆ.

ಅವನ ಮಾತು
ಕಲಸು ಮೇಲೊಗರು
ನಂಬೋದು ಹೆಂಗೆ!

ಪುಟ್ಟ ದೀಪಕೆ
ಆ ಗಾಡಾಂಧಕಾರವು
ಅಂಜಿ ಓಡಿತು.

ಶಿಶು ವಿಹಾರ,
ಗಿಳಿಗಳ ಹಿಂಡಿನ
ಕಲರವವು.

5 thoughts on “ವ್ಯಾಸ ಜೋಶಿ ಅವರ ಹಾಯ್ಕುಗಳು

      1. ಚೆನ್ನಾಗಿ ಇದಾವೆ ಹಾಯ್ಕ್ಗಳು sir ಮೆಲೋಗರ ಸರಿಯಾದ ಪದ ಅಲ್ವಾ sir

Leave a Reply

Back To Top