ಬದುಕು…! ಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್, ಜಿ.

ಆ ಪ್ರಾಣ ಸಖಿ
ನನ್ನ ಬಾಡಿದ ಮುಖವನ್ನು ನೋಡಿ
ಪ್ರಶ್ನೆ ಮಾಡಿಯೇ ಬಿಟ್ಟಳು…!

ಈ ಸುಂದರ ಭೂಮಿಯಲ್ಲಿ
ಬದುಕಲು ನಿನಗೆ ಇಷ್ಟ
ಇಲ್ಲವೇ ಗುರುವೇ….?

ಮೆಲ್ಲನೆ ಉತ್ತರಿಸಿದೆ….
ಇಲ್ಲ….!

ಪುನಃ ಮತ್ತೊಂದು ಪ್ರಶ್ನೆ….
‘ಮರಣ’ ಹೊಂದಲೇ
ಬೇಕೇ…?

ಇಲ್ಲ… ಇಲ್ಲ….!!

ಮತ್ತೆ…? ನಿನ್ನ ಕತೆ ಏನು…?

ಪುನಃ ಮೆಲ್ಲನೆ ಉತ್ತರಿಸಿದೆ….
‘ಇಷ್ಟ’ ಎಂಬುವುದೇ
ನನ್ನ ಪಾಲಿಗೆ
ಈಗ ಇಲ್ಲ…!

ಮನಸ್ಸಿಗೆ ಪೂತಿ೯ ಕತ್ತಲೆ…!
ಬದುಕಿನಲ್ಲಿ ಕನಸುಗಳೇ ಇಲ್ಲ…!
ಎಲ್ಲಾಡೇ ಅಸೂಯೆ ಕಣ್ಣುಗಳು….!
ಚುಚ್ಚುನುಡಿಗಳು….!

ಯಾವುದಾದರೂ ಏಕಮಾಗ೯ದ
ಹಾದಿಯಲ್ಲಿ ಒಂಟಿಯಾಗಿ
ಮೌನವಾಗಿ ನಡೆಯಬೇಕು….!

ಮರಣ ಹೊಂದಿರುವ
ರೀತಿ ಬದುಕುವುದಕ್ಕಿಂತ….
ಮರಣ ಹೊಂದಿ
ಈ ಭೂಮಿಯಲ್ಲಿ
ನೆಮ್ಮದಿಯಿಂದ ಜೀವಿಸಬೇಕು…!!!
—————————————–

One thought on “ಬದುಕು…! ಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್, ಜಿ.”

  1. ಮೂಲ ಬೇಕು, ಗುರುವೇ ಪದ ಬಳಕೆ ಸರಿ
    ಹೊಂದಿದಂತಿಲ್ಲ ಅನಿಸುತ್ತದೆ.ದಯಮಾಡಿ ಮೂಲದ ಯಾವ ನುಡಿಗೆ ಆ ಪದವ ಬಳಸಿದಿರಿ ತಿಳಿಯಲು ಕೌತುಕನಾಗಿಹೆ
    ಬಾಗೇಪಲ್ಲಿ ಕೃಷ್ಣಮೂರ್ತಿ.

Leave a Reply