ಸವಿತಾ ದೇಶಮುಖ ಅವರ ಕವಿತೆ-ಗುಬ್ಬಚ್ಚಿ ಗೂಡು

ಅಮ್ಮನಿನ್ನ ಕೋಶದ
ಕುಡಿ ನಾನು
ನಿನ್ನ ಒಡಲಲಿ ಆಡಿ,
ನಿನ್ನ ರೆಕ್ಕೆಪುಕ್ಕೆಯಲಿ
ಬೆಚ್ಚಗೆ ಬೆಳೆದ ಗುಬ್ಬಚ್ಚಿ ನಾನು.
ಗಿಡದ ಟೊಂಗೆಯಲಿ ಪುಟ್ಟದೊಂದು ಭದ್ರ ಮನಿಯ ಕಟ್ಟಿ ಎಲ್ಲರ ಕಣ್ಣಮರಿ ಮಾಚಿ ರಕ್ಷಿಸುವೆ ನನ,

ನಿನ್ನ ಉದರದಿ ಕಾವವಿಟ್ಟು
ಹೊರ ಜಗವ ತೋರಿದಿ
ಅಲೆಅಲೆದು ಕಾಳು ಕಡಿ
ಹೆಕ್ಕಿ ಹೆಕ್ಕಿ ಚುಂಚಿನಲ್ಲಿ ಹಿಡಿದಷ್ಟು ತಂದೆ
ಎನ್ನ ಹಸಿವು ತಣಸಿದಿ
ಲೆಕ್ಕಿಸದೆ ಮಳೆ ಬಿಸಿಲು ಗಾಳಿ ನಿನ್ನ ಮಮತೆ ತುಂಬಿದ ಕಂಗಳು
ನನಗೊಂದು ಹಬ್ಬ

ನಿನ್ನ ದಾರಿ ಕಾಯುತ ಕುಳಿತ
ನನ ರಮಿಸಿ ಸಂತೈಸುವೆ,
ಕಲಿಸುವೆ ಉನ್ನತ ಹಾರಾಟಕ್ಕೆ ವಿಜಯೋತ್ಸವದ ಹವಣೆಯಲ್ಲಿ
ಗಗನ ಎತ್ತರಕೆ ಹಾರುವುದಕೆ ಕಾತುರದಿ ಕಾಯುವೆ

ದಿಗಂತಕ್ಕೆ ಹಾರಿ
ನನ್ನ ದಾರಿಯತ್ತ ಸಾಗುವೆ
ನನ್ನದೇ ಜಗವ ಸೃಷ್ಟಿಸುವೆ
ತಾಯೇ ನಿನ್ನ ಮರೆವೆ….

ಸತ್ಯದ ಅರಿವವಿದ್ದರು
ಮಮತೆಯ ಜೀವದ ಹಾಸಿಗೆ ಹಾಸಿ ಸಂರಕ್ಷಿಸುವೆ ಬೆಳೆಸುವೆ ಎತ್ತರಕ್ಕೆ ಹಾರಿಸಿ ಜಗವ ಪ್ರವಹರಿಸುವ ದಿಸೆಯಲಿ

ಒಬ್ಬಳೆ ನಿಂತು ನೋಡುವೆ
ಗಗನದ ಎತರಕೆ ಸಾರ್ಥಕತೆಯ ಭಾವ ಹೊತ್ತು

ಜೀವನದ ಸತ್ಯ ತಿಳಿಯದಿರಿ ಎಂಥ ಮರುಳೆ?


2 thoughts on “ಸವಿತಾ ದೇಶಮುಖ ಅವರ ಕವಿತೆ-ಗುಬ್ಬಚ್ಚಿ ಗೂಡು

Leave a Reply

Back To Top