ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ
ಪ್ರೇಮ ಬರಹ
ಕಣ್ಣಲ್ಲಿನ ಕನಸುಗಳೆಲ್ಲವೂ
ವೇದ ಮಂತ್ರಗಳಾಗಿ ನನ್ನ
ಬದುಕಿನ ದಾರಿಯಲ್ಲಿ ಶೃಂಗಾರ
ಕಾವ್ಯದ ಗೀತೆಯನ್ನೇ ಬರೆದಂತೆ..!!
ಆ ಗೀತೆಯಲ್ಲಿ ನನ್ನವಳ ಮನಸು
ಹಕ್ಕಿಯಂತೆ ಹಾರುತ್ತ ಬಾನಿಂದ
ಧರೆಗೆ ಮೇಘ ಮಂದಾರದ
ಸುರಿಮಳೆಯನ್ನೇ ಸುರಿಸಿದಂತೆ..!!
ಆ ಸುರಿಮಳೆಯ ಹನಿಗಳೆಲ್ಲ
ಪ್ರೀತಿಯ ಅಲೆಗಳಾಗಿ ಈ ಧರೆಯ
ಮೇಲೆ ಪ್ರೇಮ ಲೋಕದ
ಇತಿಹಾಸವನ್ನೇ ಸೃಷ್ಟಿಸಿದಂತೆ..!!
ಆ ಸೃಷ್ಟಿಯೊಳಗೆ ಅರಳಿದ ಎಲ್ಲಾ
ಹೂವುಗಳು ಮಂದಾರ ಪುಷ್ಪವಾಗಿ
ನನ್ನ ಬೊಂಬೆಯ ಮೂಡಿಯಲ್ಲಿ
ಶ್ರಾವಣ ಮಾಸದ ಚಿತ್ತಾರವನು
ಬಿಡಿಸಿದಂತೆ..!!
———————
ನಿಜಗುಣಿ ಎಸ್ ಕೆಂಗನಾಳ