ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ
ಹಾಯ್ಕುಗಳು
೧
ಅಕ್ಷರವೆಂಬ
ಬೆಳಕು ಬರದಿರೆ
ಬದುಕು ಶೂನ್ಯ
೨
ಹಣ ಕೂಡಿಸಿ
ಗುಡಿ ಕಟ್ಟು ಕಾರ್ಯಕೆ
ದೇವ ನಗುವ
೩
ಪ್ರೀತಿ ಇಲ್ಲದೆ
ಜಗ ಕಟ್ಟಲಾಗದು;
ಮನವೂ ಕೂಡ
೪
ಧರ್ಮ ತಿರುಳ
ಅರಿಯದವ ಭೇದ
ಹೆಚ್ಚಿಸಬಲ್ಲ
೫
ಬದುಕೆಂದರೆ
ಬಯಲಿಗಿಟ್ಟ ದೀಪ
ಕಾಯಬೇಕಷ್ಟೇ
————————-
ಎಸ್ಕೆ ಕೊನೆಸಾಗರ
ಮಾರದಮಿ ಹಾಯ್ಕುಗಳು ಸರ್
ಮಾರ್ಮಿಕ ಹಾಯ್ಕುಗಳು ಸರ್.