.ಶೋಭಾ ನಾಯ್ಕ ಅವರ ಕವಿತೆ-…ಗೆ

ನೀ.. ಯಾಕೆ  ಹೀಗೇ?
ಎಂದು  
ಕೇಳಿದೆನೋ
ಆಗೆಲ್ಲ
ಮಹಾಮುನಿ
ನೀನು

ಮುದ್ದು ,ಬೇಗಂ
ಎಂದು ಕರೆಯುವ
 ಆ….ದನಿ
ನಿನ್ನದೇನಾ?

ಅರೇ..
ಮುನಿದಾಗ ಮಾತ್ರ  
ನೀನಲ್ಲ
ನೀನು!

ಇಲ್ಲಿದ್ದ ನೀನು
ಅಲ್ಲೆಲ್ಲೋ
 ಇಣುಕಿ,
ಹಣುಕಿ
ಮತ್ತಿಲ್ಲಿ ಬಂದು
ಮಂಡಿಯೂರಿ
ಮುನಿಸು
ಓಡಿಸುವಾಗ



ಬೇಗಂ  
ಗುಲಾಮನಾಗುವೆ
ಎಂದು
ಕವಿತೆಯೋದುವಾಗ

ಜೀವ ನೀನು
 ಎನ್ನುತ
ನನ್ನ ಜೀವವೇ…
ಆಗುವಾಗ
 
ಉಡುವ ಬಣ್ಣ
ತುತ್ತಿನ ಅನ್ನ
ಗುಟುಕಿನ ಹನಿ
ಇಟ್ಟ  ಹೆಜ್ಜೆ
ಎಲ್ಲವುಗಳ   ನಿತ್ಯದ
ಲೆಕ್ಕ ಕೇಳುವಾಗ
ಮತ್ತೆನಿನ್ನ  
ಲೆಕ್ಕ ಒಪ್ಪಿಸುವಾಗ

ದೂರವಿದ್ದು, ಹತ್ತಿರವಾದಾಗ
ದೂರಲಾರೆ
ಬಿಡು ಇನ್ನು


ನೀ ಯಾಕೆ
ಹಾಗೆಂದು!

ಗೊತ್ತಿಲ್ಲ ನನಗೂ..
ನಿನ್ನ
ಬಿಟ್ಟು
ಉಸಿರಾಡುವುದು
ಹೇಗೆಂದು!


4 thoughts on “.ಶೋಭಾ ನಾಯ್ಕ ಅವರ ಕವಿತೆ-…ಗೆ

  1. ತಮ್ಮ ಕವಿತೆ ತುಂಬಾ ಚೆನ್ನಾಗಿದೆ. ಎಲ್ಲಾಪುರದಲ್ಲಿ ನಡೆದ ಹಣತೆ ಕವಿಗೋಷ್ಠಿಯಲ್ಲಿ ನಿಮ್ಮನ್ನು ನೋಡಿದ್ದೇನೆ. ನಾನು ಕೂಡ ಕವಿಗೋಷ್ಠಿಯಲ್ಲಿ ಭಾಗವಹಿಸಿದೆ.

    ನೀವು ಬರೆದ ಅವ್ವ ಮತ್ತು ಅಬ್ಬಲಿಗೆ ಕವನಗಳು ತುಂಬಾ ಚೆನ್ನಾಗಿವೆ.
    ತಮ್ಮಿಂದ ಇನ್ನಷ್ಟು ಸಮಾಜಮುಖಿ ಕವನಗಳು ಹೊರಹೊಮ್ಮಲಿ ಕವನಗಳು ಹೊರಹೊಮ್ಮಲಿ ಎಂದು ಆಶಿಸುತ್ತೇನೆ.

Leave a Reply

Back To Top