ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಅಬಲೆಯಲ್ಲ ಅವಳು
ಹೆಣ್ಣೆಂದರೆ ಅಬಲೆ
ಮಕ್ಕಳ ಹೆರುವ ಯಂತ್ರ
ಶಯನದಲ್ಲಿ ಸುಖ ಕೊಡುವ ಬೊಂಬೆ
ಮೌಡ್ಯಗಳ ಬೇಲಿ
ಹಾಕಿಬಿಟ್ಟಿರಿ
ಎಕೆಂದರೆ ???
ನೀವು ಗಂಡಸು
ಹಸೆಮಣೆಯ
ರಂಗ ಮಂದಿರದ ಮೇಲೆ
ಶುರುವಾದ ಅವಳ ಪಾತ್ರಕ್ಕೆ
ಕೊನೆಯ ಅಂಕವೇ ಇಲ್ಲವೇ
ಅವಳೇಷ್ಟು ಪಾತ್ರ ಮಾಡಿಯಾಳು ??
ಅವಳ ದೇಹಕ್ಕೂ
ದಣಿವಾಗುವ ದಿಲ್ಲವೇ ??
ನಿಮಗೂ ದಣಿವಾದ ಹಾಗೇ
ಗೊತ್ತಿಲ್ಲ ದೂರಲ್ಲಿ
ಎಡ ತೊಡರುಗಳ ಮಧ್ಯೆ
ಮನುಷ್ಯತ್ವಕ್ಕೂ
ಮಹದಂತಸ್ತು ಗಳಿವೆ
ಎಂಬ ನಂಬಿಕೆಯಿಂದ
ಎಕಾಂಗಿಯಾಗಿ
ಮನಸಿನ ಗೋಡೆಗಳ ತುಂಬಾ..
ಕೇವಲ ನಿಮ್ಮೆಸರು ಕೆತ್ತಿ
ಬದುಕುವ ಅವಳಿಗೂ..
ಮನಸಿದೆ
ಅವಳ ಭಾವನೆಗೆ
ನಿಮ್ಮ ಗಂಡಸಿನಹಂಮ್ಮಿನ
ಬೆಂಕಿ ತಾಕಿಸಬೇಡಿ
ನಿಮ್ಮ ಅರಿಶಿನ ದಾರದ
ಕುಣಿಕೆಗೆ ಅವಳು
ಸುಮ್ಮನೇ..ತಲೆಯೊಡ್ಡಿದ್ದು
ನಿಮ್ಮ ಮೆಲೆ ಭರವಸೆಯ
ನಂಬಿಕೆ ಯಿಟ್ಟದ್ದು..
ಅಪ್ಪ ಅಮ್ಮ ಕೊಟ್ಟ
ದಿವ್ಯ ಉಡುಗೊರೆ..
ಎಂಬ ಗರ್ವದಿಂದ
ಅವಳು ಕೇಳುವದು
ಅವಳ ಪಾಲಿನ ಪ್ರೀತಿ
ಕೊಟ್ಟುಬಿಡಿ ಸಾಕು
ಸಹನೆಗೂ ಸಹನೆಯ
ಮಿತಿಇದೆ
ಜೀವಕ್ಕಿರುವ
ಪರಿಮಿತಿಯ ಹಾಗೇ
ಒಬ್ಬರೇ ಇದ್ದಾಗ
ಅವಳ ಹರಿದ
ಸೀರೆಯೊಡನೆ ಒಮ್ಮೆ
ಸುಮ್ಮನೇ ಮಾತಾಡಿ ನೋಡಿ !!
ಸೀರೆಯ ಸೆರಗಿನಂಚಿನಲಿ
ಕರಗಿ ಹೋದ ಕಣ್ಣೀರ ಹನಿಗಳ ಲೆಕ್ಕ ಮಾಡಿ
ನಾವೂ ಮನಸುಳ್ಳ ಮನುಷ್ಯರು
ನಮ್ಮನ್ನೂ ಬದುಕಲು ಬಿಡಿ
ನಿಮ್ಮ ಹಾಗೇ
ನಾವೇ ಪಿಡಿದ ಕರದಿಂದ
ಕರಮುಗಿದು ಕೇಳುವೇವು
ಮೌಡ್ಯಗಳ ಬೇಲಿಯಿಂದ
ನಮ್ಮನ್ನು ಹೊರತನ್ನಿ
ಇಮಾಮ್ ಮದ್ಗಾರ