ರಾಜನ ತಂದೆ ಕೋಪದಿಂದ ಆಡಿದ ಮಾತಿನಿಂದ ಸುಮ್ಮನೆ ಕುಳಿತ ರಾಜನನ್ನು ಅವರ ಅಣ್ಣ ಹೋಗಲಿ ಬಿಡು ರಾಜ ನಾನು ಅಪ್ಪನೊಂದಿಗೆ ಮಾತನಾಡುವೆ. ನೀನು ಈಗ ಸುಮ್ಮನೆ ಇದ್ದುಬಿಡು ಎನ್ನುತ್ತಾನೆ. ಸರಿ ಎಂದು ಎದ್ದು ಹೊರಗೆ ಹೋಗುತ್ತಾನೆ ರಾಜ.
ರಾಜನ ಕಾಲ್ ಗಾಗಿ ಕಾಯುತ್ತ ಕುಳಿತ ದೇವಕಿಯ ಫೋನ್ ರಿಂಗ್ ಆದ ತಕ್ಷಣ ಹಲೋ ರಾಜ ಹೇಳಿ ನಿಮ್ಮ ಮನೆಯಲ್ಲಿ ಏನು ಅಂದರು ಮದುವೆ ಬಗ್ಗೆ ಎಂದು ಕೇಳಿದಾಗ, ಅದನ್ನೇ ಹೇಳಲು ಮಾಡಿರುವೆ ಎನ್ನುತ್ತಾನೆ. ಹೌದಾ ಹೇಳು ಎಂದಾಗ, ನಮ್ಮ ಪ್ರೀತಿಯ ವಿಷಯ ಎಲ್ಲ ಹೇಳಿದ್ದೇನೆ. ಮದುವೆ ಆದರೆ ನಿನ್ನನ್ನ ಮಾತ್ರ ಆಗುವೆ ಎಂದೆಲ್ಲ ಹೇಳಿರುವೆ. ನೀನು ಕೂಡ ನಿಮ್ಮ ಮನೆಯಲ್ಲಿ ನಮ್ಮ ವಿಷಯ ಹೇಳು ಎನ್ನುತ್ತಾನೆ. ದೇವಕಿ ಖುಷಿಯಿಂದ ಓಕೆ ರಾಜ ನಾಳೆ ಕಾಲ್ ಹೇಳುವೆ ಎನ್ನುತ್ತಾಳೆ. ಸರಿ ನಾಳೆ ಮಾತನಾಡೋಣ ಊಟ ಮಾಡಿ ರೆಸ್ಟ್ ಮಾಡಿ ಎನ್ನುತ್ತ ರಾಜ ಮನೆಗೆ ಹೊರಡುತ್ತಾನೆ.

ಮರುದಿನ ದೇವಕಿ ತನ್ನ ತಂದೆ ಮತ್ತು ಮನೆಯವರಿಗೆ ಕಾಲ್ ಮಾಡಿ ತಮ್ಮ ಪ್ರೀತಿ ವಿಷಯ ಹೇಳುತ್ತಾಳೆ. ಆಗ ಅವರ ತಂದೆ ನೀನು ಮೊಡಲು ಊರಿಗೆ ಬಾ ಆಮೇಲೆ ಎಲ್ಲ ಮಾತಾಡೋಣ ಎನ್ನುತ್ತಾರೆ. ಸರಿ  ಬರುವೆ ಎಂದು ಫೋನ್ ಇಡುತ್ತಾಳೆ. ಎರಡನೇ ಶನಿವಾರ ರಜೆ ಇದ್ದುದರಿಂದ ಫ್ರೀ ಆಗಿ ಊರಿಗೆ ಹೊರಡಲು ತಯಾರ ಆಗಿ ರಾಜನಿಗೆ ಕಾಲ್ ಮಾಡುತ್ತ,ಊರಿಗೆ ಹೋಗುವ ವಿಷಯ ತಿಳಿಸುತ್ತಾಳೆ. ಸರಿ ಹೋಗಿ ಬನ್ನಿ. ನಮ್ಮ ವಿಷಯ ಎಲ್ಲವನ್ನೂ ಹೇಳಿ ಎನ್ನುತ್ತಾನೆ. ಸರಿ ಅಂತ ಹೇಳಿ ಹೊರಡುತ್ತಾಳೆ.

ಏನೂ ಹೇಳದೆ ಊರಿಗೆ ಬಂದ ದೇವಕಿಗೆ ಎಲ್ಲರ ಪ್ರಶ್ನೆ ಒಂದೇ, ಏನೂ ಬಾ ಅಂದರೂ ಬಾರದೆ ಇರುವ ನೀನು ಈಗ ಸಡನ್ನಾಗಿ ಬಂದಿರುವೆ, ಹುಶಾರಾಗಿದಯಾ ಇಲ್ವಾ ಅಂತ ನಗುತ್ತ ಕೇಳುತ್ತಾರೆ. ಆಗ ದೇವಕಿ ಹಾಗೇನು ಇಲ್ಲ ಆರಾಮಾಗಿ ಇದ್ದೇನೆ. ಎರಡು ದಿನ ರಜೆ ಇತ್ತಲ್ವಾ ಅದಕ್ಕೆ ಬಂದೆ ಎಂದು ಕೇಳಿದಾಗ,ಸರಿ ಬಿಡು ನೀನು ಬಂದಿದ್ದು ಒಳ್ಳೆಯದಾಯಿತು ಎಂದು ಸುಮ್ಮನಾಗುತ್ತಾರೆ. ಆಗ ದೇವಕಿಯ ಅಮ್ಮ ಸರಿ ಹೋಗು ಫ್ರೆಶ್ ಆಗಿ ಬಾ ಟೀ ಮಾಡುವೆ ಎಂದು ಅಡುಗೆ ಮನೆಗೆ ಹೊರಡುತ್ತಾಳೆ. ಇತ್ತ ದೇವಕಿ ಫ್ರೆಶ್ ಆಗಿ ಅಡುಗೆ ಮನೆಗೆ ತಾಯಿಯ ಹತ್ತಿರ ಹೋಗಿ ನಿಲ್ಲುತ್ತಾಳೆ. ಸುಮ್ಮನೆ ಬಂದು ನಿಂತ ಮಗಳಿಗೆ ಏನು ಯಾಕಮ್ಮ ಸಪ್ಪಗಾಗಿರುವೆ? ಎಂದು ಪ್ರಶ್ನೆ ಮಾಡಿದಾಗ ಹಾಗೇನು ಇಲ್ಲಮ್ಮ ಎಂದು ರಾಗ ಎಳೆಯುತ್ತಲೇ ಇರುವಾಗ, ಇಲ್ಲ ಏನೋ ಇದೆ ನಿನ್ನ ಮನಸ್ಸಲ್ಲಿ ಅದು ಏನು ಹೇಳು ಎಂದಾಗ, ದೇವಕಿ ಅಮ್ಮ ಒಂದು ಹುಡುಗನ್ನ ಪ್ರೀತಿಸಿರುವೆ. ಮದುವೆ ಅಂತ ಆದರೆ ಅವನನ್ನೇ ಆಗುವೆ ಎನ್ನುತ್ತಾಳೆ. ಏನೇ ನೀನು ಹೀಗೆ ಹೇಳುತ್ತಿ.ನಿಮ್ಮ ತಂದೆ ಗಂಡು ನೋಡಿದರೆ ಈಗಲೇ ಮದುವೆ ಬೇಡ ಅಂದಿದ್ದು ಇದಕ್ಕೆನಾ? ಹುಡುಗ ಹೆಂತವನೋ? ಅವರ ಮನೆಯವರು ಹೇಗೋ? ಎಂತೆಲ್ಲ ಪೇಚಾಡುತ್ತ, ದೇವಕಿಯ ಕೈಗೆ ಟೀ ಕೊಟ್ಟು, ಏನ್ರೀ ಎನ್ನುತ್ತ ಹೊರಗೆ ಹೋಗುತ್ತಾಳೆ. ಆಗ ಏನಾಯಿತು ಯಾಕೆ ಇಷ್ಟೊಂದು ಜೋರಾಗಿ ಕೂಗುತ್ತಿ ಎಂದಾಗ, ಏನಿಲ್ಲ ನಿಮ್ಮ ಮಗಳು ಯಾವುದೋ ಹುಡುಗನ್ನ ಪ್ರೀತಿ ಮಾಡತ್ತಿದ್ದಾಳೆ ಅಂತೆ. ಅವನನ್ನೇ ಮದುವೆ ಆಗುತ್ತಾಳೆ ಅಂತೆರಿ ಎಂದಾಗ,  
ಅವಳಪ್ಪ ಹೌದಾ ಒಳ್ಳೆಯದಾಯಿತು ಬಿಡು. ಅವಳಿಗೆ ಬೇಕಾದ ಹುಡುಗನ್ನ ಅವಳೇ ಆಯ್ಕೆ ಮಾಡಿಕೊಂಡಿದ್ದಾಳೆ ಎನ್ನುತ್ತಾನೆ. ಆಗ ಎಲ್ಲರಿಗೂ ಆಶ್ಚರ್ಯ. ಒಪ್ಪೋದಿಲ್ಲ ಈ ವಿಷಯ ಅಂತ. ಆದರೆ ದೇವಕಿಯ ತಂದೆ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು, ಹೇಳಮ್ಮ ಯಾರು ಅವನು?ಏನು ಕೆಲಸ?ಅವರ ಮನೆಯವರು ಒಪ್ಪಿದ್ದಾರೆ? ಜಾತಿ ಯಾವುದು? ಈ ಎಲ್ಲ ಪ್ರಶ್ನೆಗಳನ್ನು ಕೇಳಿದರು. ಆಗ ದೇವಕಿ ಅವರ ಮನೆಯಲ್ಲಿ ಕೂಡ ಒಪ್ಪಿದ್ದಾರೆ. ಅವರದ್ದು ಬಿಜನೆಸ್ ಇದೆ. ಜಾಯಿಂಟ್ ಫ್ಯಾಮಿಲಿ ಇದೆ. ಕಾಸ್ಟ್ ಬೇರೆ ಇದೆ. ಅವರು ತುಂಬಾ ಒಳ್ಳೆಯವರು. ನನಗೆ ತುಂಬಾ ಇಷ್ಟ ಆಗಿದ್ದಾರೆ ಅಪ್ಪಾ.ಪ್ಲೀಸ್ ಅವರ ಜೊತೆಗೆ ನನ್ನ ಮದುವೆ ಮಾಡಿಸಿ ಎನ್ನುತ್ತಾಳೆ.
ಆಗ ದೇವಕಿಯ ತಂದೆ ಎಲ್ಲ ಓಕೆ ಅಮ್ಮಾ ಆದರೆ ಜಾತಿ ಬೇರೆ ಇದೆ ಅಲ್ವಾ? ಅಪ್ಪಾ ನೀವು ರಾಜನ ಜೊತೆ ಮಾತನಾಡಿ ಎನ್ನುತ್ತಾಳೆ. ಮಗಳು ಹೇಳಿದ್ದನ್ನು ಕೇಳಿದ ತಂದೆ ಮನಸ್ಸಲ್ಲಿ ಎಂದುಕೊಳ್ಳುತ್ತಾರೆ. ಬೇಡ ಅಂದರೆ ಮತ್ತೇನಾದರೂ ಅನಾಹುತ ಆಗಬಾರದು ಅಂತ. ಸರಿಯಮ್ಮ ಈ ಸಲ ನಿನ್ನ ಜೊತೆಗೆ ನಾವೆಲ್ಲ ಊರಿಗೆ ಬರುತ್ತೇವೆ. ಅಲ್ಲೇ ಮಾತನಾಡುವ ಎನ್ನುತ್ತಾನೆ. ಆಗ ದೇವಕಿಗೆ ಸಮಾಧಾನವಾಗುತ್ತೆ. ಸರಿ ಅಪ್ಪಾ ಎನ್ನುತ್ತ ಖುಷಿಯಿಂದ ರೂಮಿಗೆ ಬಂದು ಕುಳಿತು, ರಾಜನಿಗೆ ಫೋನ್ ಮಾಡಿ ವಿಷಯ ಹೇಳುತ್ತಾಳೆ.
ರಾಜನು ಕೂಡ ನಮ್ಮ ಮನೆಯಲ್ಲಿ ಎಲ್ಲರೂ ಒಪ್ಪಿದ್ದಾರೆ. ಒಳ್ಳೆಯದಾಯಿತು ನೀನು ಬೇಗ ಊರಿಗೆ ಬಾ ಎನ್ನುತ್ತಾನೆ. ನನಗಂತೂ ತುಂಬಾ ಖುಷಿಯಾಗಿದೆ ಎನ್ನುತ್ತಾನೆ. ಹೂಂ ಎಲ್ಲರೂ ಬರುತ್ತಾರೆ ರಾಜ ಮದುವೆ ವಿಷಯ ಮಾತನಾಡಲು ಎಂದು ನಗುತ್ತ ದೇವಕಿ. ಇಬ್ಬರು ಪರಸ್ಪರ ಖುಷಿ ಹಂಚಿಕೊಳ್ಳುತ್ತಾರೆ. ಸರಿ ನಾಳೆ ಬೇಗ ಬನ್ನಿ ಎಂದು ನಗುತ್ತ ಹೇಳಿ ರಾಜನು ಫೋನ್ ಇಡುತ್ತಾನೆ. ನಾಳೆಗಾಗಿ ಕಾಯುತ್ತ ಆ ರಾತ್ರಿ ಕಳೆಯುತ್ತಾರೆ.


Leave a Reply

Back To Top