ಡಾ ಡೋ.ನಾ.ವೆಂಕಟೇಶ ಕವಿತೆ ಬದುಕು ಕೃಷ್ಣಾರ್ಪಣ

ಬದುಕು ಹಸುರಾಗಿ ತುತ್ತು ತುತ್ತಿಗೆ ತತ್ವಾರ ಬರದೇ
ಇನ್ನಷ್ಟು ಮತ್ತಷ್ಟಕ್ಕೆ
ಹಾಹಾಕರಿಸದೆ
ಕೈಲಿದ್ದ ಮಾಣಿಕ್ಯ ಮುತ್ತು ರತ್ನಗಳ
ಬರೇ ಪೆಟ್ಟಿಗೆಯಲ್ಲಿರಿಸದೇ
ತಿಂದುಂಡು
ಸಂಭ್ರಮಿಸು,
ಜೀವನವೇ ಒಂದು ಸಂಕ್ರಾಂತಿ ಎಂದು!

ತೃಪ್ತಿಯಿಂದ ತೆರಳು ಇಲ್ಲಿಂದ ಬರಿಗೈಯಲ್ಲಿ ಹೊರಡು ನಶ್ವರದಿಂದ.
ಯಾರಿಂದಲೂ
ಹೊಗಳಿಸಿ ಕೊಳ್ಳುವ ಕೃಪೆ
ಬೇಡ ನಿನಗೆ.

ಬೃಹ್ಮಾಂಡದ ಧೂಳು ನೀ
ಅಗಣಿತ ಚರಾಚರಗಳಲ್ಲಿ
ಸ್ಮರಣಿಸಲು ಬೇಡ ನಿನ್ನ.
ಇಲ್ಲೆ
ಕೊಳಿಸಿ ಹಾಕುವರು
“ಟೈಮ್ ಕ್ಯಾಪ್ಸೂಲ್” ನಲ್ಲಿ
ಹಾಕಿ ಭೂಮಿಯಾಳದಲ್ಲಿ
ಹುದುಗಿಸಿ ಉಸಿರು ಕಟ್ಟಿಸಿವರು ನಿನ್ನ.

ಅನಂತಾನಂತ ವಿಶ್ವ,
ಆದಿ ಅಂತ್ಯದ ಮಾಹಿತಿಯಿರದ ವಿಶ್ವ,
ಇಂದು ಇಲ್ಲಿ
ನಾಳೆ ಎಲ್ಲೆಲ್ಲೂ ಇರದಿರುವ
ಅನಿಕೇತನ ಈ ವಿಶ್ವ!

ಹೇಳು ಎಲ್ಲರಿಗೂ ಧನ್ಯವಾದ
ಹಿತರಿಗೆ ಹಿತ ಶತೃಗಳಿಗೆ,
ಸಭ್ಯರಿಗೆ ಅಸಭ್ಯರಿಗೆ ,
ಹತ್ತಿರದವರಿಗೆ ,ದೂಡಿ
ದೂರವಾದವರಿಗೆ!

ವಂದನಾರ್ಪಣೆ
ಮಾಡು, ಹೇಳು
ಕೃಷ್ಣಾರ್ಪಣ!!


6 thoughts on “ಡಾ ಡೋ.ನಾ.ವೆಂಕಟೇಶ ಕವಿತೆ ಬದುಕು ಕೃಷ್ಣಾರ್ಪಣ

  1. ನಿಮ್ಮ ಕವಿತೆ ನಮ್ಮ ಜೀವನವನ್ನು ನಡೆಸಲು ಅತ್ಯುತ್ತಮ ಮಾರ್ಗದರ್ಶನ ನೀಡುತ್ತದೆ. ತುಂಬಾ ಚೆನ್ನಾಗಿ ಬಂದಿದೆ.ಧನ್ಯವಾದಗಳು.

  2. ನಿಮ್ಮ ಕವಿತೆ ನಮ್ಮ ಜೀವನವನ್ನು ನಡೆಸಲು ಅತ್ಯುತ್ತಮ ಮಾರ್ಗದರ್ಶನ ನೀಡುತ್ತದೆ. ತುಂಬಾ ಚೆನ್ನಾಗಿ ಬಂದಿದೆ.ಧನ್ಯವಾದಗಳು.

    1. ತುಂಬಾ ಧನ್ಯವಾದಗಳು ಮಂಜುನಾಥ್.
      ನಿಮ್ಮ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು!!

    2. ತುಂಬಾ ಧನ್ಯವಾದಗಳು ಮಂಜುನಾಥ್.
      ನಿಮ್ಮ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು!

Leave a Reply

Back To Top