ಗಂಗಾ ಚಕ್ರಸಾಲಿಯವರ ಕವಿತೆ-ಸ್ನೇಹ -ಪ್ರೀತಿ

ಅವರಿಬ್ಬರ ಮಾತುಗಳ ಸಲುಗೆಯಲೆ
ಸ್ನೇಹ ಪ್ರೀತಿಗಳ ತಿಕ್ಕಾಟ ಮೇಲಿಂದ ಮೇಲೆ
ಅವಳೆಂದಳೂ ನಮ್ಮದು ಬರಿ ಸ್ನೇಹ ಸೆಲೆ
ಅವನೆಂದ ನಮ್ಮದು ಪ್ರೀತಿಯ ಅಲೆ|

ನಿನ್ನ ಕಣ್ಣೋಟವೇ ಹೇಳುತ್ತಿದೆ ಇದೊಂದು ಪ್ರೀತಿ
ನೆನಪಾದಾಗಲೆಲ್ಲ ಕರೆಮಾಡುವ ನಿನ್ನ ರೀತಿ
ಆಗಾಗ ಕಾಡಿಸುವಂತಹ ನಿನ್ನಯ ಛಾತಿ
ಒಪ್ಪಿಕೊಳ್ಳಬೇಕು ಗೆಳತಿ ,ಇದು ಪ್ರೀತಿ|

ನಿನಗೆ ನಾ ಸ್ಪಂದಿಸಿದ್ದು, ಸ್ನೇಹದ ಕಾಳಜಿಗಾಗಿ
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದು ಮಾತಿನ ಗಟ್ಟಿತನಕ್ಕಾಗಿ
ಕಾಡಿಸುವಿಕೆಯಿದ್ದದ್ದು ಬಿಗು ಗೆಳೆತನಕ್ಕಾಗಿ
ಸ್ನೇಹಕ್ಕೆ ಪ್ರೀತಿಯ ಹೆಸರಿಡದಿರು.. ನೀನಿರು ಗೆಳೆಯನಾಗಿ|

ಮಾತುಗಳಾರ್ಭಟಗಳೇ ಯುದ್ಧಗಳಂತಾಗಿ
ಇಬ್ಬರ ಮನಗಳು ಮೌನಕ್ಕೆ ಶರಣಾಗಿ
ಸ್ನೇಹ ಪ್ರೀತಿ ಪದಗಳು ಅಲೆದಾಡಿವೆ ಒಂಟಿಯಾಗಿ
ಹೃದಯಗಳು ನರಳುತ್ತಲಿವೆ ಒಬ್ಬರಿಗೊಬ್ಬರಿಗಾಗಿ|

ಇಬ್ಬರಲ್ಲೂ ಬಗೆ ಹರಿಯದ ತೊಳಲಾಟ
ಅವಳದು ಮಾನಸಿಕ ಯೋಚನೆಗಳ ಆಟ
ಅವನ ಮನಸ್ಸಿನದು ಅವಳ ಹಿಂದೆಯೇ ಓಟ
ಪ್ರೀತಿ, ಸ್ನೇಹ ಸೋತಿವೆ..ಉಳಿದಿದ್ದೊಂದೆ ಮೌನನೋಟ|
————————–

One thought on “ಗಂಗಾ ಚಕ್ರಸಾಲಿಯವರ ಕವಿತೆ-ಸ್ನೇಹ -ಪ್ರೀತಿ

  1. ಗಂಡು ಹೆಣ್ಣಿನ ಪ್ರೇಮ- ಪ್ರೀತಿಯ ಸಂಘರ್ಘ
    ಅಂತ್ಯ ಕಾಣದೆ ತೊಳಲಾಡಿದೆ.
    ೦ ಜಿ.ಎಸ್.ಪ್ರಕಾಶ್,ಬೆಂಗಳೂರು ೦

Leave a Reply

Back To Top