“ಮನೆಯಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ,ಮಕ್ಕಳ ಡಬ್ಬಿ,ಮನೆಯಲ್ಲಿದ್ದವರಿಗೆ ಅಡುಗೆ, ಬಟ್ಟೆ ಹೀಗೆ ಎಲ್ಲವನ್ನು ನಿಭಾಯಿಸಿ  ಕೆಲಸಕ್ಕೆ ಬರುವದು ಬರುವವರೆಗೂ ಪತಿಯ ಮುಂಗೋಪತನ, ಅತ್ತೆಯ ಸುಪ್ರಭಾತ, ಮಕ್ಕಳ ಹಟ ಅಬ್ಬಬ್ಬಾ! ಒಮ್ಮೊಮ್ಮೆ ವಿಚ್ಛೇದನ ಕೊಟ್ಟು ಬಿಡಲೇ ಎಂದು ಅನಿಸುತ್ತದೆ.”ಎಂಬ ವೀಣಾಳ ಮಾತಿಗೆ ಅವಳ ಸಹೋದ್ಯೋಗಿ ವನಿತಾ “ಮದುವೆಯಾದ ಮೇಲೆ  ಹೆಣ್ಣು ಹೊಂದಾಣಿಕೆ ಮಾಡಿಕೊಂಡು ಕಷ್ಟನೋ ಸುಖನೋ ಮಕ್ಕಳ ಮುಖ ನೋಡಿ ಜೀವನ ಮಾಡಲೇಬೇಕು.ನೀ ಹೇಳಿದಂತೆ ನೀನು ಉದ್ಯೋಗಸ್ಥೆ ನಿಜ ನಿನ್ನ ಪತಿ ನಿನಗಿಂತ ಕಡಿಮೆ ಸಂಬಳ ತಂದರೂ ಪುರುಷ ಪ್ರಧಾನ ಸಮಾಜದಲ್ಲಿ ತಾನೇ ಶ್ರೇಷ್ಠ ಎನ್ನುವ ಮನೋಭಾವಕೆ ಇಲ್ಲಿಯವರೆಗೆ ತಾಳ್ಮೆಯಿಂದ ಬಾಳ ಸಾರಥಿಯಾದಂತೆ ಮುಂದೆ ಕೂಡ ಅನುಸರಿಸಿಕೊಂಡು ಹೋಗು.ಇದಕ್ಕೆ ವಿಚ್ಛೇದನ ಒಂದೇ ಪರಿಹಾರವಲ್ಲ,ಒಂದು ಕ್ಷಣ ನೀನಿಲ್ಲದ ಕ್ಷಣ ಕಲ್ಪಿಸಿಕೊ ಏನಾಗಬಹುದು ನಿನ್ನ ಮನೆ ಹಾಗೂ ಮಕ್ಕಳ ಸ್ಥಿತಿ “ಎಂದಾಗ “ನಿಜ ಗೆಳತಿ ನೀ ಹೇಳಿದಂತೆ ನನ್ನ ಮಕ್ಕಳ ಭವಿಷ್ಯಕ್ಕಾದರೂ ನಾನೇ ಅನುಸರಿಸಿಕೊಂಡು ಹೋಗುವೆ”ಎಂದುಆತ್ಮಸ್ಥೈರ್ಯ ಇಮ್ಮಡಿಯಾದ ಘಳಿಗೆಯನ್ನು ಕಂಡು ವನಿತಾ ಅವಳ ಬೆನ್ನು ಚಪ್ಪರಿಸಿ ಸಮಾಧಾನ ಮಾಡಿದಳು.

ದಾಂಪತ್ಯದಲ್ಲಿ ಕೇವಲ ಸತಿಯಾದವಳು ಮಾತ್ರಃಃ ಪತಿಯನ್ನು ಅನುಸರಿಸಬೇಕೆಂದು  ಹೇಳುವ ಮಾತಿದೆ.
ಗಜೇಶ ಮಸನಯ್ಯನ ಪುಣ್ಯಸ್ತ್ರೀಹೇಳುವ ಮಾತು ತುಂಬ ಅರ್ಥಪೂರ್ಣವಾಗಿದೆ.”ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರುಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?”ಎಂದು ಅವಳು ಕೇಳುವ ಪ್ರಶ್ನೆ ದಾಂಪತ್ಯಕ್ಕೆ ಮುಕ್ತದ್ವಾರವನ್ನು ತೆರೆದಂತಿದೆ.ಧರ್ಮವೆಂಬ ರಥಕ್ಕೆಃ ಸತಿಪತಿಗಳಿಬ್ಬರೂ ಗಾಲಿಗಳು.ಬದುಕಿನ ನಡೆಯಲ್ಲಿ ಧರ್ಮಪ್ರಧಾನ ಪಾತ್ರ ವಹಿಸಿದರೆ ಅದರಲ್ಲಿ ಸತಿಗೂ ಸಮಪಾಲು ಇದೆ.ಜೀವನದಲ್ಲಿ ದಾಂಪತ್ಯಕ್ಕೆ ಮಹತ್ತರದ ಪಾತ್ರವಿದೆ.ಇದನ್ನು ಮನಗಂಡ ಶರಣರು ಯಾವುದೇ ಕಾರ್ಯದ ಯಶಸ್ಸಿನ ಹಿಂದೆ ಇರುವ ಮಡದಿಯ ಕ್ರಿಯಾಶಕ್ತಿಯನ್ನು ಅರಿತು ಅವಳನ್ನುಗೌರವಿಸಿದ್ದಾರೆ.ದಾಂಪತ್ಯದಲ್ಲಿ ಸತಿಪತಿಗಳ ಅಂತರಂಗ ಬಹಿರಂಗ ಪರಿಶುದ್ಧವಾಗಿದ್ದು,ಅವುಗಳು ತಾದಾತ್ಮ್ಯವನ್ನು ಹೊಂದಬೇಕು.ಪರಸ್ಪರ ಅರಿತು ಎಚ್ಚರದಿಂದ ಬಾಳಿದರೆ ಬಾಳಿಗೊಂದು ನೆಮ್ಮದಿ.

ಪ್ರಸ್ತುತ ದಿನಗಳಲ್ಲಿ ದಾಂಪತ್ಯ ಎಂಬ ಮಧುರ ಬಾಂಧವ್ಯ ಕೌಟುಂಬಿಕ ಕಲಹಗಳಿಂದಾಗಿ ವಿಚ್ಛೆದನದಲ್ಲಿ ಅಂತ್ಯವಾಗುತ್ತಿದೆ. ಮದುವೆಯಾಗಿ ತನ್ನ ಮನೆ ಬೆಳಗಲು ಬಂದ ಹೆಣ್ಣು ತನ್ನ ಗೃಹಲಕ್ಷ್ಮಿ ಎಂದು ಅರಿತು ಅವಳು ಉದ್ಯೋಗಸ್ಥೆಯಾಗಿರಲಿ, ಗೃಹಿಣಿಯೇ ಆಗಿರಲಿ ಅವಳನ್ನು ಗೌರವಿಸಬೇಕು.ತನ್ನ ಕುಟುಂಬದ  ಸದಸ್ಯರಿಗಾಗಿ ಮುಡಿಪಿಡುವ ಜೀವದ ಭಾವನೆಗಳಿಗೂ ಸಮಯಕೊಡುವ ಅವಶ್ಯಕತೆ ಇದೆ.”ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ” ಎಂಬ ಮಾತಿದೆ.ಆದರೆ ಇಂದು ಕೋರ್ಟು ಕಛೇರಿವರೆಗೆ ಸಾಗಿ ಸುಖ ದಾಂಪತ್ಯ ಛಿದ್ರವಾಗಿ ಪಾಲಕರಿದ್ದರೂ ಮಕ್ಕಳಲ್ಲಿ ಅನಾಥ ಪ್ರಜ್ಞೆ,ಅಭದ್ರತೆ ಮನೆ ಮಾಡಿ ಆ ಮಕ್ಕಳೂ ಕೂಡ ಖಿನ್ನತೆ, ದುರ್ವ್ಯಸನಕೆ ದಾಸರಾಗಿ ತಮ್ಮ ಭವಿಷ್ಯವನ್ನೆ ಆಹುತಿ ನೀಡುವ ಸಂದರ್ಭಗಳಿಲೊಲವೆಂದಿಲ್ಲ. ಇತ್ತೀಚೆಗೆ ನಡೆದ ಘಟನೆ ಹೃದಯ ವಿದ್ರಾವಕವಾಗಿದೆ.ವಿಚ್ಛೇದನ ಹೊಂದಿದ ದಂಪತಿಗಳ ನಾಲ್ಕು ವರ್ಷದ ಮುಗು ತನ್ನ ಹೆತ್ತಝ ತಾಯಿಯಿಂದಲೆ ಹತ್ಯೆಗೀಡಾದ ಕರಾಳತೆ ಮಾತೃತ್ವಕ್ಕೆ ಕೊಡಲಿ ಏಟಿನಂತೆ ಪರಿಣಮಿಸಿದೆ.ಹೆಣ್ಣು ಎಷ್ಟೇ ಉನ್ನತ ಸ್ಥಾನದ ಕರ್ತವ್ಯದಲ್ಲಿದ್ದರೂ ಕುಟುಂಬ ಅಂತ ಬಂದಾಗ ಅನುಸರಿಸಿಕೊಂಡು ಸಹನೆಯಿಂದ ಹೋಗಿದ್ದೇ ಆದರೆ ಪಾಪ! ಕಂದನ ಪ್ರಾಣ ಉಳಿಯುತ್ತಿತ್ತೇನೋ? ಎಂಬ ಭಾವ ಬರದಿರದು. ದಂಪತಿಗಳಿಬ್ಬರೂ ಉದ್ಯೋಗದಲ್ಲಿದ್ದಾಗ ಇಬ್ಬರಲ್ಲೂ ಸ್ವಾಭಿಮಾನ ಸಹಜ ಸಮಾನತೆ ಬಯಸುವದು ಕೂಡ ಸ್ವಾಭಾವಿಕ ಇವುಗಳ ಮಧ್ಯೆ ನಮ್ಮ ಕುಟುಂಬದ ನೆಮ್ಮದಿಯನ್ನು  ಬಲಿ ಕೊಟ್ಟರೇ ನಮ್ಮಲ್ಲಿ ಮುಂದೆ ಇರುವ ಜೀವನಕ್ಕೆ ಅರ್ಥವಿಲ್ಲ.

“ಎಲ್ಲರ ಮನೆ ದೋಸೆನೂ ತೂತೆ” ಎಂಬ ಮಾತಿನಂತೆ ಚಿಕ್ಕ ಪುಟ್ಟ ಕಲಹಗಳಿಂದ ಯಾವ ಕುಟುಂಬವೂ ಹೊರತಾಗಿಲ್ಲ.ಮನಸ್ತಾಪ ದೀರ್ಘ ಅವಧಿಯವರೆಗೆ ಬೆಳೆಯದಂತೆ ಮತ್ತೆ ನಕ್ಕು ಪರಸ್ಪರ ಸಂತೈಸಿ ಮಕ್ಕಳ ಭವಿಷ್ಯಕ್ಕಾದರೂ ಬದುಕಲು ಹೊಂದಾಣಿಕೆ ಅನಿವಾರ್ಯವೆಂದರಿತಾದರೂ ಬಾಳ ದೋಣಿ ಸಾಗಲೇಬೇಕು ಅಲ್ಲವೆ?

ಪರಸ್ಪರ ಅರಿತು ಎಚ್ಚರದಿಂದ ಬಾಳಿದರೆ ಬಾಳಿಗೊಂದು ನೆಮ್ಮದಿ.ಜೀವನದ ಬಗ್ಗೆ ಅಪಾರವಾದ ಒಲವನ್ನಿರಿಸಿಕೊಂಡ ಶರಣರು ಸಮರಸದಿಂದ ಬಾಳಿದ್ದರು.ಅವರು ಕೌಟುಂಬಿಕ ನೆಮ್ಮದಿಯನ್ನು ಸಾಧಿಸಿದ್ದರು.ವಿಷಮ ದಾಂಪತ್ಯ ಎಂದಿಗೂ ನೆಮ್ಮದಿಯನ್ನು ನೀಡಲಾರದು.ಅದು ಎತ್ತುಏರಿಗೆ,ಕೌಣ ಕೇರಿಗೆ ಎಳೆದಂತೆ ಎಂದು ಬಸವಣ್ಣನವರು ಟೀಕಿಸುತ್ತಾರೆ.

“ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ”ಎಂಬ ಜೇಡರ ದಾಸಿಮಯ್ಯನವರ ಮಾತಂತೆ  ಸಾಮರಸ್ಯದಿಂದ ಬಾಳಿದರೇನಮ್ಮ ಬದುಕೇ ಆದರ್ಶವಾಗುವಲ್ಲಿ ಎರಡು ಮಾತಿಲ್ಲ.


Leave a Reply

Back To Top