ಎಂ.ಬಿ. ಸಂತೋಷ್-ಹಾಯ್ಕುಗಳು

  1. ಮುದ ನೀಡಿತು
    ನೂಪುರದ ನಾದವು
    ಕಿಂಕಿಣಿ ಸದ್ದು
  2. ಅವಸರಕ್ಕೆ
    ಒಲಿದ ಪ್ರೀತಿ ಹೆಚ್ಚು
    ಕಾಲ ಇರದು
  3. ತಡೆಯಲಾರೆ
    ಚಳಿ ; ಬರಬಾರದೇ
    ನೀ ನನ್ನ ಬಳಿ ?
  4. ಅಮ್ಮನಿದ್ದರೆ
    ಕಷ್ಟಗಳು ಹೊಸ್ತಿಲು
    ದಾಟಿ ಬರವು
  5. ಹೇಳಲೇಬೇಕು
    ಸುಂದರ ಬದುಕಿಗೆ
    ನಾವು ವಿದಾಯ
  6. ಕಾರ್ಯಸಿದ್ಧಿಗೆ
    ಕೊನೆಯ ಅಸ್ತ್ರವೇ ಈ
    ಹಣ ನಿಜಕ್ಕೂ
  7. ನೋವು ನಲಿವು
    ಬದುಕಲ್ಲಿ ಇದ್ದದ್ದೇ
    ಅಂಜಿಕೆ ಬೇಡ
  8. ಮುಡಿಪಾಗಲಿ
    ಶಾರದೆಯ ಸೇವೆಗೆ
    ನನ್ನೀ ಬದುಕು
  9. ಸಿಗದಿರುವ
    ಪ್ರೀತಿಗೆ ಮಂಡಿಯೂರಿ
    ನೀ ಕೇಳಬೇಡ
  10. ಸಮುದ್ರದಲ್ಲಿ
    ಇದ್ದೇನೆ ; ಸಿಹಿ ನೀರು
    ಸಿಗುವುದೆಂದು ?
  11. ಹಣವಿದ್ದರೂ
    ಇಲ್ಲದಿದ್ದರೂ ಚಿಂತೆ
    ಬದುಕೇ ಹೀಗೆ
  12. ನೊಂದವರಿಗೆ
    ‘ ನಿನ್ನ ಜೊತೆ ಇದ್ದೇನೆ ‘
    ಎಂದರೆ ಸಾಕು
  13. ಹಣದ ಜೊತೆ
    ಜನ ; ಗುಣದ ಜೊತೆ
    ಭಗವಂತನು
  14. ಸಂತೆಯೊಳಗೆ
    ನಾವಿದ್ದರೂ ಜೀವನ
    ನಗುತ್ತಿರಲಿ
  15. ದಾಯಾದಿಗಳು
    ಸಮಯ ನೋಡಿ ನಿಜ
    ಅಳಿಸುತ್ತಾರೆ
  16. ಖಾದಿ ಇದ್ದಾಗ
    ಬೇಡವೆಂದರು ಸೇಂದಿ
    ಮಹಾತ್ಮ ಗಾಂಧಿ
  17. ತಾಯಿ ಇರುವ
    ತನಕ ತವರಲ್ಲಿ
    ಸದಾ ಬೆಳಕು

18,. ನಲ್ಲೆಯ ತುಟಿ
ಸವಿದು ಸವಿದು ನಾ
ಮಧುಮೇಹಿಯು

  1. ‘ ನಾಳೆ ಎಂದಾಗ
    ಹಾಳು ‘ ಎಂಬುದ ಮನ
    ತಿಳಿದಿರಲಿ
  2. ಮರಿಹಕ್ಕಿಯು
    ಕಾಣುತ್ತಿಲ್ಲ ; ತಾಯಿಯ
    ಅಳು ನಿಂತಿಲ್ಲ
  3. ಕನಸುಗಳ
    ಕಾಣುವುದು ತಪ್ಪಲ್ಲ
    ಸಾಧಿಸಬೇಕು
  4. ಪ್ರಾಮಾಣಿಕತೆ
    ಎಲ್ಲಿ ಇರುತ್ತೆ ಅಲ್ಲಿ
    ಪ್ರೀತಿ ಇರುತ್ತೆ
  5. ಅರಿತಷ್ಟೂ ನೀ
    ಕ್ಲಿಷ್ಟವಾದೆ ; ಅದಕ್ಕೇ
    ನೀ ಇಷ್ಟವಾದೆ
  6. ಬದುಕಿದ್ದಾಗ
    ನೋಡಲಿಲ್ಲ ; ಸತ್ತಾಗ
    ನುಡಿನಮನ
  7. ಸೃಷ್ಟಿಕರ್ತನ
    ಕೈವಾಡ ; ಸಂಜೆ ಬಾನು
    ರಂಗೇರುತಿದೆ

attiveri

Leave a Reply

Back To Top