ಕಾವ್ಯ ಸಂಗಾತಿ
ಸುಕನಸು
ಗಜಲ್
ನಿನ್ನ ಹಚ್ಚಿ ಕೊಂಡಿರುವ ಹೃದಯಕೆ ಬುದ್ದಿ ಕಲಿಸಲಿ ಹೇಗೆ
ನೀ ಜೊತೆ ಬೇಕೆಂದು ಹಠ ಹಿಡಿವ ಮನ ಸಂತೈಸಲಿ ಹೇಗೆ
ನಿನ್ನೊಡನೆ ಮುಂದಿನ ಕ್ಷಣಗಳು ಪರಿಪೂರ್ಣ ಸಂಭ್ರಮ
ನೀನಿಲ್ಲದಂತ ಘನ ಘೋರ ಭವಿಷ್ಯವ ನೆನೆಸಲಿ ಹೇಗೆ
ಬೆಳದಿಂಗಳ ಚಂದ್ರಮನ ಸವಿ ಅನುದಿನವೂ ನಿನ್ನೊಡನೆ
ರಾತ್ರಿ ನಿದ್ದೆಯಲಿ ನೀ ಬಾರದ ಕನಸುಗಳ ಸಂದಿಸಲಿ ಹೇಗೆ
ಬದಲಾವಣೆಯೆ ಜಗದ ನಿಯಮ ಜನ ಬದಲಾಗುವರು
ಅಪಾಯ ಜಗದಿ ನೀನಿಲ್ಲದೆ ನೆಮ್ಮದಿ ಶೋಧಿಸಲಿ ಹೇಗೆ
ಮಲ್ಲಿಗೆ ಸುಮದ ಪರಿಮಳ ಅರಿತದ್ದು ನಿನ್ನಾನುರಾಗದಿಂದ
ಅನುಪಮದ ನಿನ್ನಕ್ಕರೆಯ ಸವಿ ಉಣ್ಣದೆ ಜೀವಿಸಲಿ ಹೇಗೆ
ಸುಕನಸು
ಭಾವನೆಗಳನ್ನು ಬಹಳ ಅದ್ಭುತವಾಗಿ ಅನಾವರಣಗೊಳಿಸಿದ್ದಾರೆ. ಪ್ರತಿ ಸಾಲುಗಳಲ್ಲು ಪ್ರೇಮದ ಅಗಲಿಕೆಯ ಶೂನ್ಯತೆಯನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಧನ್ಯವಾದ
ಗಜಲ್ ಚನ್ನಾಗಿದೆ