ಅನಿತಾ ಪಿ. ತಾಕೊಡೆ ವಿರಚಿತ ‘ಸುವರ್ಣಯುಗ’ ಕೃತಿಯ ಅವಲೋಕನ ಉದಯಕುಮಾರ ಹಬ್ಬು

ಪುಸ್ತಕ ಸಂಗಾತಿ

ಅನಿತಾ ಪಿ. ತಾಕೊಡೆ

‘ಸುವರ್ಣಯುಗ’

ಉದಯಕುಮಾರ ಹಬ್ಬು

ಸುವರ್ಣಯುಗ
ಲೇಖಕರು:ಅನಿತಾ ಪಿ. ತಾಕೊಡೆ
ಪ್ರಕಾಶನ :ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ
ಪುಟ-೨೯೮, ಬೆಲೆ ೩೪೫

ಅನಿತಾ ಪಿ. ತಾಕೊಡೆ ಇವರು ಒಳ್ಳೆಯ ಕಥೆಗಾರರು, ಪ್ರಬಂಧಕಾರರು ಇದೀಗ ಬಿಲ್ಲವರ ಧೃವತಾರೆಯಾದ, ತನ್ಮೂಲಕ ಇಡೀ ಮಾನವ ಜನಾಂಗಕ್ಕೆ ಮಾದರಿಯಾಗಿದ್ದ ಸಂತನಂತಿದ್ದ, ಮಾನ್ಯ ಜಯ ಸುವರ್ಣ ಅವರ ಜೀವನ ಕಥನ ಅಥವಾ ಜೀವನ ಚರಿತ್ರೆಯನ್ನು ಪಿ. ಎಚ್. ಡಿಗೆ ಪೂರಕವಾಗಿ ಬರೆದ ಸಂಪ್ರಬಂಧವನ್ನು ಓದುಗರ ಮುಂದೆ ಇಟ್ಟಿದ್ದಾರೆ‌.
ಜೀವನ ಚರಿತ್ರೆ ಓದುವುದರಿಂದ ಓದುಗರಿಗೆ ಅವರ ಬದುಕಿನ ರೀತಿ ಆದರ್ಶಗಳು ಮಾದರಿಯಾಗಿ ಸಿಗುತ್ತವೆ. ಮಾನ್ಯ ಜಯ ಸುವರ್ಣರಂತಹ ಧೀಮಂತ, ಉದಾತ್ತ ಮತ್ತು ನಿಸ್ವಾರ್ಥಿ ಸಮಾಜ ಸೇವಕರು ನಮಗೆ ಆದರ್ಶವಾಗುತ್ತಾರೆ.
ಅವರು ಹುಟ್ಟಿ ಬೆಳೆದದ್ದು ಕಡು ಬಡತನದಲ್ಲಿ. ಮುಂಬಯಿಗೆ ಮಾವನ ಪ್ರೇರಣೆಯಿಂದ ಹೋಗಿ ಹೊಟೆಲ್ ಉದ್ಯಮದಲ್ಲಿ ಪಳಗಿ ಸ್ವಂತ -ಜಯಪ್ರಕಾಶ” ಹೊಟೇಲ್  ಅನ್ನು ಸ್ಥಾಪಿಸುತ್ತಾರೆ. ಆ ಉದ್ಯಮದಲ್ಲಿ ಶ್ರದ್ಧೆ ಪರಿಶ್ರಮದಿಂದ ಸಾಕಷ್ಟು ಹಣ ಗಳಿಸಿ ಶ್ರೀಮಂತರಾಗುತ್ತಾರೆ. ತನ್ನ ಕುಟುಂಬದ ಸರ್ವ ಸದಸ್ಯರಿಗೂ ಆರ್ಥಿಕ ಸಹಾಯವನ್ನು ಮಾಡುತ್ತಾರೆ.
ಅಮ್ಮ ಅಚ್ಚುಗೆ ಹಣ ಸಾಕಷ್ಟು ಕೊಟ್ಟು ಸಂತೋಷಪಡಿಸುತ್ತಾರೆ. ಇಷ್ಟೆ ಆಗಿದ್ದರೆ ಜಯ ಸುವರ್ಣರು ಇಷ್ಟೊಂದು ಶ್ರೇಷ್ಠ ವ್ಯಕ್ತಿಗಳಾಗಿರುತ್ತಿರಲಿಲ್ಲ. ಗಳಿಸಿದ ಹಣವನ್ನು ಬಡವರಿಗೆ ಭಿಕ್ಷುಕರಿಗೆ ದಾನ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ತಾನು ಹುಟ್ಟಿ ಬಂದ ಬಿಲ್ಲವ ಸಮಾಜವನ್ನು ಔನ್ನತ್ಯಕ್ಕೆ ಸ್ವಾವಲಂಬನೆಯತ್ತ ಮುನ್ನಡೆಸುತ್ತಾರೆ. ರಾಷ್ಟ್ರೀಯ  ಬಿಲ್ಲವ ಮಹಾಮಂಡಲವನ್ನು ಸ್ಥಾಪಿಸಿ ಬಿಲ್ಲವರು ಘನತೆಯಿಂದ ತಲೆ ಎತ್ತಿ ನಡೆಯುವಂತೆ ಮಾಡುತ್ತಾರೆ. ಮಂದಾರ್ತಿ ಯಕ್ಷಗಾನ ಮಂಡಳಿಯಲ್ಲಿ ಬಿಲ್ಲವರಿಗೆ ಕಲಾವಿದರಾಗಿ ಸೇವೆ ಸಲ್ಲಿಸಲು ಅವಕಾಶವಿರಲಿಲ್ಲ. ಜಯ ಸುವರ್ಣರ ಅಹರ್ನಿಷಿ ಹೋರಾಟದಿಂದ ಈಗ ಬಿಲ್ಲವರು ಮಂದಾರ್ತಿ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿದೆ. ಜಾತಿಯಲ್ಲಿ ಮೇಲು ಕೀಳು ಇವರ ಹೋರಾಟದಿಂದ ಹೊಡೆದೋಡಿಸಲಾಗಿದೆ. ಮಹಾರಾಷ್ಟ್ರ ಸರಕಾರವು ಬಿಲ್ಲವರಿಗೆ ಓ.‌ಬಿ. ಸಿ. ಸೌಲಭ್ಯ ಸಿಗುವಂತೆ ಹೋರಾಟ ಮಾಡಿ ಬಿಲ್ಲವರು ಅದರ ಪ್ತಯೋಜನ ಪಡೆದು ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ. ಭಾರತ ಬ್ಯಾಂಕ್ ನ ಅಧ್ಯಕ್ಷರಾಗಿ ಅದರ ವೈವಾಟನ್ನು ೧೦೦ ಕೋಟಿ ರೂಪಾಯಿಗಳಿಗೆ ಏರಿಸಿ ಶೆಡ್ಯೂಲ್ಡ್ ಬ್ಯಾಂಕಾಗಿ ಪರಿವರ್ತಿಸಿದ್ದಾರೆ‌
ಸಮಾಜ ಸೇವೆಯೆ ಅವರ ಉಸಿರು. ರಾಜಕೀಯ ಕ್ಷೇತ್ರದಲ್ಲಿ ಅವರನ್ನು ಕರೆದರೂ ಅದಕ್ಕೆ ಹೋಗದೆ ಸಮಾಜ ಸೇವೆಯಲ್ಲಿರುವ ಸಂತೋಷ ರಾಜಕೀಯದಲ್ಲಿಲ್ಲ. ಸಮಾಜ ಸೇವೆಯ ಅವಕಾಶವೂ ರಾಜಕೀಯ ಕ್ಷೇತ್ರದಲ್ಲಿ ಇಲ್ಲ. ದೀನರ ಸೇವೆಯೇ ದೇವರ ಸೇವೆ ಎಂದು ನಂಬಿ ನಡೆದವರು. ಜನಾರ್ದನ ಪೂಜಾರಿ ಮಾನ್ಯ ಮಾಜಿ ಅರ್ಥಸಚಿವರು ಸಾಲ ಮೇಳದಿಂದ ಬಡವರ ಉನ್ನತಿಗೆ ಕೊಡುಗೆ ಕೊಟ್ಟರೆ‌ ಜಯ  ಸುವರ್ಣರು ಭಾರತ ಬ್ಯಾಂಕಿನ ಮೂಲಕ ಬಡವರಿಗೆ ನೆರವಾಗಿದ್ದಾರೆ‌.
ಅಕ್ಷಯ ಪತ್ರಿಕೆ ಮುಂಬಯಿಯ ಹೆಸರಾಂತ ಮಾಸ ಪತ್ರಿಕೆ. ಅದರ ಚಾಲನ ಶಕ್ತಿ ಜಯ ಸುವರ್ಣರು ಆಗಿದ್ದರು.
ಅವರ ಹೆಂಡತಿ ಶ್ತೀಮತಿ ಲೀಲಾ ಗಂಡನನ್ನೆ ದೇವರು ಎಂದು ತಿಳಿದ ಸದ್ಗ್ರಹಿಣಿ. ಅವರ ಮನೆಗೆ ನೂರಾರು ಜನ ಬಂದರೂ ಅವರ ಆದರಾತಿಥ್ಯದಲ್ಲಿ ಲೀಲಾ ಎತ್ತಿದ ಕೈ.


ನಾನು ಜಯ ಸುವರ್ಣರನ್ನು ಅಕ್ಷಯ ಪತ್ರಿಕೆಯಲ್ಲಿ, ಮಂದಾರ್ತಿ ಮೇಳದ ವಿವಾದದ ಸಮಯದಲ್ಲಿ “ಉದಯವಾಣಿ”ಯಲ್ಲಿ ಭಾವಚಿತ್ರ ಕಂಡಿದ್ದೆ. ನಾವು ಐದಾರು ವರ್ಷಗಳ ಹಿಂದೆ ಉತ್ತರ ಭಾರತದ ೨೧ ದಿನಗಳ ತೀರ್ಥಯಾತ್ರೆಗೆ ಹೋಗಿದ್ದೆವು. ತಿರುಗಿ ಬರುವಾಗ ಇಂಡಿಯನ್ ಎರ್ ಲೈನ್ಸ್ ವಿಮಾನದಲ್ಲಿ ಮಂಗಳೂರಿಗೆ ತಿರುಗಿ ಬರುತ್ತಿದ್ದೆವು. ಅವರು ಇಕೊನೊಮಿ ಕ್ಲಾಸ್ ಸೀಟಿನಲ್ಲಿ ಕುಳಿತಿದ್ದರು. ನಾನು ಅವರನ್ನು ಬಾವಚಿತ್ರದಲ್ಲಿ ನೋಡಿದ್ದರಿಂದ ಅವರನ್ನು ಕಂಡ ಕೊಡಲೆ ನಮಸ್ಕಾರ ಮಾಡಿದೆ.  ಅವರು ಆ ಮುಗುಳ್ನಗು ಮತ್ತು ಮರುನಮಸ್ಜಾರ ಎಂದೆಂದಿಗೂ ಮರೆಯಲಾರದ ಸಂಗತಿಯಾಗಿದೆ.
ಅನಿತಾ ಈ ಒಂದು ಗ್ರಂಥ ಬರೆದು ಉಪಕಾರ ಮಾಡಿದ್ದಾರೆ. ಜಯ ಸುವರ್ಣ ಹೆಸರಿನಲ್ಲಿ ಜಯ ಇದೆ.‌ಜಯ ಇದು ಮಹಾಭಾರತ ಕಾವ್ಯದ ಹೆಸರು. ‌ನನಗೆ ಅವರ ವ್ಯಕ್ತಿತ್ವದ ಕುರಿತು ಓದಿದಾಗ ಮಹಾಭಾರತ ಕಾವ್ಯದ ಶ್ತೀಕೃಷ್ಣನ ಮತ್ತು ಭೀಷ್ಮನ  ನೆನಪಾಯಿತು‌.
ಪ್ರತಿಯೊಬ್ಬರೂ ಓದಲೇಬೇಕು‌ ಜಯ ಸುವರ್ಣರ ಬದುಕಿನಿಂದ ಪಾಠ ಕಲಿಯಬೇಕು. ಒಂದೊಳ್ಳೆಯ ಕೃತಿ ರಚನೆಗಾಗಿ ಅನಿತಾ ಪಿ ತಾಕೊಡೆಯವರಿಗೆ ಅಭಿನಂದನೆಗಳು.


ಉದಯಕುಮಾರ ಹಬ್ಬು

3 thoughts on “ಅನಿತಾ ಪಿ. ತಾಕೊಡೆ ವಿರಚಿತ ‘ಸುವರ್ಣಯುಗ’ ಕೃತಿಯ ಅವಲೋಕನ ಉದಯಕುಮಾರ ಹಬ್ಬು

  1. Well written Udayanna.i am proud to be associated with Respected Jaya Suvarnaji in the Billawar Association, Mumbai and Bharat Bank fo the 25 years. Great experience.He will always remain in my heart.

Leave a Reply

Back To Top