ಕನ್ನಡದ ಹಿರಿಯ ಸಾಹಿತಿಗಳಾದ ಡಾ.ಸಿದ್ದರಾಮ ಹೊನ್ಕಲ್‌ ಅವರಪುಸ್ತಕಗಳನ್ನ ಓದುವ ಆಸಕ್ತಿ ಇರುವವರಿಗಾಗಿ ಮಾಹಿತಿ

ಆತ್ಮೀಯರೇ,
ಇದೀಗ ನಮ್ಮ ಪ್ರಕಾಶನಕೆ ಹೊಸ ಹಾಗೂ ಮರು ಮುದ್ರಣಗೊಂಡ ನನ್ನ ಹದಿನಾಲ್ಕು (14) ಕೃತಿಗಳು. ಒಟ್ಟು 3500 ಪುಟಗಳ ಸಮೃದ್ದವಾದ ಓದು ನೀಡಬಲ್ಲವು. ಇವೆಲ್ಲವೂ ಅಪಾರ ಕುತೂಹಲದಿಂದ ಓದಿಸಿಕೊಂಡು ಹೋಗುವ  ಆಪ್ತವಾದ ಓದಿನ ಖುಷಿ ನಿಮಗೆ ನೀಡಲಿವೆ.ಆ ಗ್ಯಾರಂಟಿ ನಾನು ನೀಡಲಿರುವೆ.

 ಇವುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ (ಇವುಗಳ ಒಟ್ಟು ಬೆಲೆ ರೂ.3500/-) ನಿಮಗೆ ತಲುಪಿಸಿ ಓದಿಸುವ ಹಂಬಲ ನನ್ನದು.ನೀವು ಕೇವಲ ರೂ.2200/- ಫೋನು ಪೇ ಅಥವಾ ಗೂಗಲ್ ಪೇ ಮೂಲಕ 9945922151 ಗೆ ಹಾಕಿ ವಾಟ್ಸಾಪ್ ಮೂಲಕ ಇದೇ ನಂಬರಿಗೆ ನಿಮ್ಮ ವಿಳಾಸ ಕಳಿಸಿದರೆ ರಿಜಿಸ್ಟರ್ ಅಂಚೆ ವೆಚ್ಚ ನಾವೇ ಭರಿಸಿ ಪುಸ್ತಕ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು. ಹಣಕಾಸಿನ ತೊಂದರೆ ಇದ್ದರೆ ಎರಡು ಮೂರು ಕಂತಿನಲ್ಲಿ ಸಹ ಹಣ ಕಳಿಸಬಹುದು. ಇತ್ತೀಚಿಗೆ ಮುದ್ರಣ ಪುಸ್ತಕ ಕಳಿಸಲು ಮುಂಚೆ ಇದ್ದ ಕಡಿಮೆ ವೆಚ್ಚ ಪದ್ದತಿ ಕೇಂದ್ರ ಸರ್ಕಾರದ ಅಂಚೆ ಇಲಾಖೆ ರದ್ದು ಮಾಡಿ ಲೇಖಕರಿಗೆ ಬಹಳ ಹೊರೆ ಮಾಡಿದೆ.ಒಂದು ಪುಸ್ತಕ ಕಳಿಸಲು ಕನಿಷ್ಠ ರೂ.40/- ರಜಿಸ್ಟರ್ ಅಂಚೆ ವೆಚ್ಚ ಆಗಲಿದೆ.

ಇದರಲ್ಲಿ ಆರು ಪ್ರವಾಸ ಕಥನ ಒಳಗೊಂಡ ಏಳುನೂರು ಪುಟದ “ಲೋಕ ಸಂಚಾರಿ” ಪ್ರವಾಸ ಕಥನ, ಒಂದು ಸಮಗ್ರ ಕಥಾ ಸಂಕಲನ, ಐದು ಗಜಲ್ ಸಂಕಲನ ಒಳಗೊಂಡ ಐದುನೂರು ಪುಟದ  ಒಂದು ಚೆಂದನೆಯ ಸಮಗ್ರ ಗಜಲ್ ಸಂಕಲನ “ನಿನ್ನ ಜೊತೆ ಜೊತೆಯಲಿ ..”, ಒಂದು ಶಾಯಿರಿ ಸಂಕಲನ, ಒಂದು ಹೈಕು ಸಂಕಲನ, ಪ್ರೇಮೋನ್ಮಾದದ ಆಯ್ದ ಗಜಲ್ ಸಂಕಲನ,ಒಂದು ನೂರು ಕೃತಿಗಳ ವಿಮರ್ಶೆ ಸಂಕಲನ, ಒಂದು ನನ್ನ ಸಾಹಿತ್ಯ ಸಮೀಕ್ಷೆ ಕೃತಿ, ಆತ್ಮಕಥನ ಮಾದರಿಯ ಎರಡು ಲಲಿತ ಪ್ರಬಂಧ ಕೃತಿಗಳು, ಮರೆಯುವ ಮುನ್ನ ಹಾಗೂ ಎಲ್ಲಾ ಮರೆತಿರುವಾಗ ಹೀಗೆ ಎರಡು ಕೃತಿಗಳು, ಸಾಹಿತ್ಯ ವಾಚಿಕೆ ಕೃತಿ,ಹೊನ್ನುಡಿಗಳ ಕೃತಿ, ಅಕಾಡೆಮಿ ಪುರಸ್ಕೃತ ಪ್ರವಾಸ ಕಥನ ಪಂಚನದಿಗಳ ನಾಡಿನಲ್ಲಿ..ಹೀಗೆ ವೈವಿಧ್ಯಮಯ ಮನೋಜ್ಞತೆಯ ಎಲ್ಲಾ ಪ್ರಕಾರದ ಕೃತಿಗಳು ಲಭ್ಯವಿವೆ.

ಇದರಲ್ಲಿ ಬಹುತೇಕ ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಒಳಗೊಂಡು ವಿವಿ ಮಟ್ಟದ, ಕೇಂದ್ರ ಕಸಾಪದ,ಹೀಗೆ ಅನೇಕ ಪ್ರತಿಷ್ಠಿತ ಪುರಸ್ಕಾರ ಸಹ ಪಡೆದಿವೆ.ವಿವಿಗಳಲ್ಲಿ ಪಠ್ಯ ಕೂಡಾ ಆಗಿದಾವೆ.ಈ ಕೃತಿಗಳನು ಓದುವ ಮನಸು ನಿಮಗಿದ್ದರೆ ತಿಳಿಸಿ. ಒತ್ತಾಯವೇನಿಲ್ಲ. ಓದಲಾಗಲಿಲ್ಲವೆಂಬ ಹಳಹಳಿಕೆ ಬೇಡಿ. ಅನೇಕರು ಕೇಳಿದ ಕಾರಣದಿಂದ ಹಲವು ಕೃತಿಗಳು ಮರು ಮುದ್ರಣಗೊಂಡು ಬಂದಿವೆ. ಇದರಲ್ಲಿ ಕೆಲವೇ ಪುಸ್ತಕ ಬೇಕಾದರೂ ಸಹ ಸಂಪರ್ಕಿಸಬಹುದು.ಆರು ಪ್ರವಾಸ ಕಥನಗಳ ಒಂದು ಸಮಗ್ರ ಕೃತಿ ಲೋಕಸಂಚಾರಿ . ಐದು ಗಜಲ್ ಸಂಕಲನ ಸೇರಿದ ನಿನ್ನ ಜೊತೆ ಜೊತೆಯಲಿ ಒಂದು ಸಮಗ್ರ ಗಜಲ್ ಸಂಕಲನ, ಒಂದು ಹೈಕು, ಒಂದು ಶಾಯಿರಿ ಹೀಗೆ 1500 ಪುಟಗಳ ನಾಲ್ಕು ಕೃತಿಗಳ  ಸೆಟ್ ಸಹ ಇದೆ.ಅದಕೆ ಕೇವಲ ರೂ.11೦೦/- ಮಾತ್ರ..ನನ್ನ ಪ್ರಕಟಿತ ಒಟ್ಟು 68 ಕೃತಿಗಳಲ್ಲಿ ಈಗ ಇಷ್ಟು ಕೃತಿಗಳು ಮಾತ್ರ ಮಾರಾಟಕ್ಕೆ ಲಭ್ಯವಿವೆ.ತಾವು ನನ್ನ 9945922151 ಫೋನು ಪೇ ಮಾಡಿ ಅಂಚೆ ವಿಳಾಸ ವಾಟ್ಸಾಪ್ ಮೂಲಕ ನೀಡಿದರೆ ರಿಜಿಸ್ಟರ್ ಅಂಚೆ ವೆಚ್ಚ ಪ್ರಕಾಶಕರೇ ಭರಿಸಿ ತಮಗೆ ಪುಸ್ತಕ ಕಳಿಸುವರು.

ಈ ಕೃತಿಗಳು ಓದಿದರೆ ತಮ್ಮ ಈಗಿರುವ ಪ್ರತಿಭೆಗೆ ಇನ್ನಷ್ಟು  ಪ್ರಕಾರದ ಬರವಣಿಗೆ ಸಿದ್ಧಿಸೋದು ಗ್ಯಾರಂಟಿ ನಾನು ಕೊಡುವೆ. ಸಾಹಿತ್ಯದ ಓದು ಕಡಿಮೆ ಆಗುವ ಈ ದಿನಗಳಲ್ಲಿ ಸಾಹಿತ್ಯ ಓದಿಸುವ ಹಂಬಲ, ಕಾಳಜಿ ಮಾತ್ರ ಇದರ ಹಿಂದೆ ಇದೆ.ಬೇರೆನೂ ಇಲ್ಲ. ಈಗಾಗಲೇ ಇಲ್ಲಿಯ ಕೆಲವು ಕೃತಿಗಳು ತಮ್ಮ ಕಡೆ ಇದ್ದರೆ ತಿಳಿಸಬಹುದು. ಅವುಗಳ ಬದಲಿಗೆ ನನ್ನ ಇತರ ಬೇರೆ ಕೃತಿಗಳನ್ನು ಕಳಿಸಲಾಗುವುದು.ಯಾವುದಕ್ಕೂ ದಯವಿಟ್ಟು ತಿಳಿಸಿ.ನಮಸ್ಕಾರ.

ಡಾ.ಸಿದ್ಧರಾಮ ಹೊನ್ಕಲ್.
ಶ್ರೀ ಅಲ್ಲಮಪ್ರಭು ಪ್ರಕಾಶನ,ಬುಕ್ ಸ್ಟಾಲ್,
ಮುಖ್ಯ ರಸ್ತೆ,ಅಂಚೆ-ಶಹಾಪುರ-585223, ಯಾದಗಿರಿ ಜಿಲ್ಲೆ

ಶ್ರೀ ಅಲ್ಲಮಪ್ರಭು ಪ್ರಕಾಶನ ಹಾಗೂ ಶ್ರೀ ಹೊನ್ಕಲ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಶಹಾಪುರ

Leave a Reply

Back To Top