ಅಂಕಣ ಬರಹ

ಸಂವೇದನೆ- 1

ಭಾರತಿ ನಲವಡೆ

ಉದ್ಯೋಗಸ್ಥ ಮಹಿಳೆಯರು

ಎದುರಿಸುತ್ತಿರುವ ಸಮಸ್ಯೆಗಳು

ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು

“ಉದ್ಯೋಗಂ ಪುರುಷ ಲಕ್ಷಣಂ”ಎಂಬ ಮಾತು ಅನಾದಿಕಾಲದಿಂದಲೂ ಕೇಳಿ ಬರುತ್ತಿದೆ.ಬದಲಾವಣೆ ಜಗದ ನಿಯಮ ಎಂಬಂತೆ ಇಂದು ಬದಲಾದ ಕಾಲಘಟ್ಟದಲ್ಲಿ ಮಹಿಳೆಯು ಅಡುಗೆ ಮನೆಯ ಲಕ್ಷ್ಮಣ ರೇಖೆಯನ್ನು ದಾಟಿ ಸಂಸಾರ ರಥ ಸಾಗಿಸಲು ಗಂಡಿನ ಹೆಗಲಿಗೆ ಹೆಗಲುಕೊಟ್ಟು ಆರ್ಥಿಕವಾಗಿ ಜೀವನಮಟ್ಟದ ಚೇತರಿಕೆಗೆ ಪತಿಗೆ ಜೋಡೆತ್ತಿನಂತೆ ಸಹಕಾರ ನೀಡುವ ಮನೆ ಮನಬೆಳಗುವ ಅವಳ ತ್ಯಾಗಕ್ಕೆ ಎಣೆಯುಂಟೆ?

ಮಾನಸಾ ಒಬ್ಬ ಉದ್ಯೋಗಸ್ಥ ಮಹಿಳೆ.ನಸುಕಿನಲ್ಲೆದ್ದು ಮಕ್ಕಳಿಗೆ ತಿಂಡಿ , ಅತ್ತೆ ಮಾವರಿಗೆ ಅವರ  ಅಡುಗೆ ಮಾಡಿಟ್ಟು ಅದರಲ್ಲೂ ವಿಶೇಷವಾಗಿ ಅವರ ಪಥ್ಯದೂಟಕ್ಕೆ ಪ್ರತ್ಯೇಕವಾಗಿ ತಯಾರಿಸಿ ತಾನು ತಿನ್ನ ಲಾಗದೇ ಡಬ್ಬಿಯಲ್ಲಿ ಹಾಕಿಕೊಂಡು ಪತಿಗೆ ಮಕ್ಕಳ ಶಾಲಾ ವಾಹನ ಬಂದರೆ ಮಕ್ಕಳನ್ನು ಕಳಿಸಿ ಆಫೀಸಿಗೆ ಹೋಗಲು ತಿಳಿಸಿ ತನ್ನ ಆಫೀಸಿಗೆ ಹೋಗುವಷ್ಟರಲ್ಲಿ ನಿನ್ನೆಯ ಉಳಿದ ಕೆಲಸ ಮುಗಿಸುವ ತವಕದಲ್ಲಿ ಆರಿದ ತಣ್ಣಗಾದ ತಿಂಡಿಯನ್ನು ಅರ್ಧಂಬರ್ಧ ತಿಂದು ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿ ಮಧ್ಯಾಹ್ನದ ಊಟದ ನಂತರ ಪೂರಾ ಬ್ಯೂಜಿ ಮತ್ತೆ ಮನೆಗೆ ಬಂದು ಮಕ್ಕಳ ಹೊಂವರ್ಕ ಅಡುಗೆ ಮರುದಿನದ ಅಡುಗೆ ತಿಂಡಿಗೆ ಯೋಜನೆ ಇದರಲ್ಲಿ ಅವಳ ದಿನ ಕಳೆದು ಹೋಗುತ್ತದೆ.ಆಕಸ್ಮಾತ್ ತಡವಾಗಿ ಬಂದರೆ ಮನೆಯವರ ಕೆಂಗಣ್ಣಿಗೆ ಗುರಿಯಾಗುವ ಭೀತಿ ಪತಿಯ ಗಂಟಿಕ್ಕಿದ ಮುಖದಲ್ಲಿ ಇಣುಕುವ ಪ್ರಶ್ನೆಗಳಿಗೆ ಉತ್ತರಿಸಿ ಮನದ ನೊಂದರೂ ಮಕ್ಕಳ ಮುಖ ನೆನಪಾಗಿ ಕೃತಕ ನಗೆ ಬೀರುವ ಸಾಹಸ ಇಷ್ಟರ ಮೇಲೆ ಆಯಾಸ ಆಗಿರುವುದನ್ನು ತೋರಿಸಿಕೊಳ್ಳದೇ ಹಾಸಿಗೆ ಸಿಕ್ಕರೇ ಸಾಕಪ್ಪಾ! ಎಂದು ಉರುಳುವಾಗ ಪತಿಯ ಬಯಕೆಗಳ ಪ್ರಚೋದನೆಗೆ ಪ್ರತಿಕ್ರಿಯಿಸದಿರಲಾದೀತೆ? ಒಮ್ಮೋಮ್ಮೆ ಮಾನಸಾ ಗೊಣಗಿದ್ದಿದೆ.ಪಕ್ಕದ ಮನೆಯ ರೇಖಾ ಯಾವಾಗಲೂ ಎಷ್ಟೊಂದು ಸಂತೋಷವಾಗಿರುತ್ತಾಳೆ.ಪತಿ ಖಾಸಗಿ ಕಂಪನಿ ಉದ್ಯೋಗಿ.ಅವಳ ಕೈಯಲ್ಲಿ ಎಲ್ಲಾ ಸಂಬಳಮನೆ ಕೆಲಸಕ್ಕೆ ಆಳು. ತಾನು ಪತಿಗೆ ಸರಿಸಮಾನಾಗಿ ದುಡಿಯುತ್ತಿದ್ದರೂ ತಿಂಗಳ ಖರ್ಚಿಗೆ ಕೈ ಒಡ್ಡುವಾಗ ಮನಸಿಗೆ ತುಂಬಾ ಖೇದವಾಗುತ್ತಿತ್ತು. ಎಷ್ಟೋ ಸಲ ಗೆಳತಿಯರ ಒತ್ತಾಯಕ್ಕೆ ಅವರೊಂದಿಗೆ ಕಾಫಿ ಕುಡಿಯಲು ಕರೆದಾಗ ನಿರಾಕರಿಸಿದ್ದಕ್ಕೆ “ನೀನೇನೂ ಬಿಲ್ ಕೊಡಬೇಡ ಕಣೇ..ನಮ್ಜೊತೆ ಬಾ ಸಾಕು..”ಎಂದಾಗ ಎಷ್ಟು ಕಷ್ಟ ಪಟ್ಟು ಈ ಕೆಲಸಕ್ಕೆ ಬಂದೆ.ಮನೆಯಲ್ಲಿ ತಾನೆ ದೊಡ್ಡವಳು ಎಂಬ ಕಾರಣಕ್ಕೆ ಬೇಗನೆ ಮದುವೆ ಮಾಡಿದ್ದರಿಂದ ತಮ್ಮ ತಂಗಿಯರ ಶಾಲಾ ಖರ್ಚಿಗೆ ಧನಸಹಾಯ ಮಾಡಲೂ ಆಗದೇ ಯಾವಾಗಲೋ ಊರಿಗೆ ಹೋದಾಗ ಕೈಯಲ್ಲಿ ಒತ್ತಾಯದಿಂದ ಹಣ ತುರುಕಿ ಬರುತ್ತಿದ್ದಳು. ಸಂಬಳದಲ್ಲಿ ವ್ಯತ್ಯಾಸ ಆದಾಗ ಹಣದ ಕುರಿತು ದೊಡ್ಡ ರಂಪಾಟ ಮಾಡುವ ನಡೆಗೆ ಈ ಜೀವನವೇ ಬೇಡ ಎಂದೆನಿಸುತಿದೆ ಎಂದು ಗೆಳತಿಯರ ಮುಂದೆ ಹಂಚಿಕೊಂಡಾಗ “ನಿನ್ನನ್ನು ಇನ್ನೂ ಅರ್ಥ ಮಾಡಿಕೊಳ್ಳದ ಆ ಮೃಗದ ಜೋತೆ ಹೇಗೆ ಬದುಕುತ್ತಿ ಮಾನಸಾ ವಿಚ್ಛೇದನಕ್ಕೆ ಅರ್ಜಿ ಹಾಕು,ಎಂದಾಗ ಮನೆ ಮರ್ಯಾದೆಗಾಗಿ ನುಂಗಿ ಕೊಂಡು ಜೀವನ ಮಾಡುತ್ತಿದ್ದ ಮಾನಸಾ ಳಂತೆ ಉದ್ಯೋಗಸ್ದ ಮಹಿಳೆ ಕೆಲವೊಮ್ಮೆ ಗಂಡನಿಂದ ಕುಟುಂಬದ ಸದಸ್ಯರಿಂದ ಶೋಷಣೆಗೊಳಗಾಗುವ ಸನ್ನಿವೇಶಗಳು ಇಲ್ಲವೆಂದಿಲ್ಲ.ಅವಳನ್ನು ಬಂಗಾರದ ಮೊಟ್ಟೆ ಇಡುವ ಕೋಳಿಯಂತೆ ಮಕ್ಕಳನ್ನು ಹೆರುವ ಯಂತ್ರದಂತೆ ಕಾಣಲಾಗುತ್ತಿದೆ.


ಇದು ಕುಟುಂಬದ ಸಮಸ್ಯೆ ಯಾಕೆಂದರೆ ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಮೇಲಾಧಿಕಾರಿಗಳಿಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗುವುದು ಸಂಧರ್ಭಳು ಇಲ್ಲದಿಲ್ಲ.ಕಾಲ್ ಸೆಂಟರ್ ಗಳಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ರಾತ್ರಿಪಾಳಿ ಯಾವಾಗ ಮುಗಿಯುವುದೋ ಅನಿಸುತ್ತೆ.ಅವರನ್ನು ಸುರಕ್ಷಿತವಾಗಿ ತಲುಪಿಸುವ ಕ್ಯಾಬಗಳಲ್ಲೂ ಕೂಡ ವಿರಳವಾದ ಅತ್ಯಾಚಾರ ಪ್ರಕರಣ ನಡೆದ ದಾಖಲೆಗಳಿವೆ.ಇನ್ನೂ ಕೆಲಸದ ಸ್ಥಳಕ್ಕೆ ತೆರಳುವಾಗ ಹಾಗೂ ಕೆಲಸದ ಸ್ಥಳದಲ್ಲಿ ಕಾಮ ಪಿಪಾಸುಗಳ ಕರಾಳ ಸ್ಪರ್ಶಗಳು ಕೂಡಾ ಮನಸಿಗೆ ಇರಿಸು ಮುರುಸಾಗುತ್ತದೆ.
ಕೆಲವೊಮ್ಮೆ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕನ್ನು ಸಮತೋಲನವಾಗಿಟ್ಟುಕೊಳ್ಳುವಲ್ಲಿ ಕುಟುಂಬದ, ವೃತ್ತಿ ಸ್ಥಳದ ಸಿಬ್ಬಂದಿಗಳ ಸಹಕಾರ ಇದ್ದತೆ ಪರವಾಗಿಲ್ಲ, ಆದರೆ ಸಹಕಾರ ಸಿಗದ ಪರಿಸ್ಥಿತಿಯಲ್ಲಿ ತನ್ನ ಅರೋಗ್ಯದ ಕುರಿತು ಕಾಳಜಿ ತೆಗೆದುಕೊಳ್ಳಲಾಗದೆ ಖಿನ್ನತೆಗೆ ಜಾರುವದುಂಟು. ಮತ್ತೆ ಕೆಲವೊಮ್ಮೆ ಗಂಡನ ಮನೆಯಲ್ಲಿ ಅತ್ತೆ ಮಾವ ಉದ್ಯೋಗಸ್ಥೆಅಲ್ಲದ ಮತ್ತೊಬ್ಬ ಸೊಸೆಯನ್ನು ಶ್ಲಾಘಿಸುತ “ಏನಂತ ಮಾಡಿಕೊಂಡನೋ ಇವಳನ್ನ ಸರಿಯಾಗಿ ಅಡುಗೆ ಮಾಡಲು ಬರಲ್ಲ “ಎಂದು ಶಪಿಸುವದುಂಟು ಅತ್ತೆ ಮನೆಯವರಾಗಲಿ ಮಾಡಿಕೊಳ್ಳುವ ಗಂಡಾಗಲಿ ಅವಳ ಅಡುಗೆ ಬಗ್ಗೆ ವಿಚಾರಿಸಿದ್ರಾ, ಇಲ್ಲ ಬರಿ ಅವಳ ಕೆಲಸ, ಸಂಬಳ ಕೇಳಿ, ನೋಡಿ ಅಲ್ವಾ ಮದುವೆಗೆ ಒಪ್ಪಿದ್ದು. ಈ ಕಡೆ ಮನೆಗೆಲಸ ಅತ್ತ ಆಫೀಸ್ ಕೆಲಸ ಇತ್ತ ಪುಲಿ ಅತ್ತ ದರಿ ಎಂಬಂತೆ ಉಗುಲಾಗದ ನುಂಗಲಾಗದ ತುತ್ತಾಗುತ್ತೆ ಜೀವನ.

ಮಹಿಳೆಯರು ಪುರುಷರ ಬದುಕಿನ ಮುಖ್ಯ ಭಾಗವೇ ಆಗಿದ್ದಾರೆ. ಮತ್ತೆ ಪುರುಷರು ಮಹಿಳೆಯರ ಸಮಸ್ಯೆಗಳ ಮುಖ್ಯ ಕಾರಣಗಳಲ್ಲೊಂದಾಗಿದ್ದಾರೆ. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಪುರುಷರಲ್ಲಿ ಹೇಳಿಕೊಳ್ಳಬೇಕಿದೆ. ಯಾಕೆಂದರೆ ಬಾಲ್ಯದಲ್ಲಿ ತಂದೆಯ ಯೌವನದಲ್ಲಿ ಪತಿಯ, ವೃದ್ದಾಪ್ಯದಲ್ಲಿ ಮಗನ ಆಸರೆ ಪಡೆಯಬೇಕೆಂಬ ಮಾತಿದ್ದರೂ ಅವಳ ಭಾವನೆಗೆ ಸ್ಪಂದಿಸುವ, ಪ್ರತಿಕ್ರಿಯಿಸುವ ಮನವಿರಬೇಕಾದ್ದು ಪತಿಗೆ ಅಲ್ವಾ.

ಇನ್ನೂ ಕುಟುಂಬದ ಸದಸ್ಯರು ಇವಳು ನಮ್ಮ ಮನೆಯ ಲಕ್ಷ್ಮೀ ಎಂಬ ಗೌರವ ಭಾವನೆ ಇರಬೇಕಾದದ್ದು ಸೂಕ್ತ.ಸೊಸೆ ಅಲ್ಲ ಮಗಳೆಂಬ ಭಾವ ಇರಲು ಅವಳು ಅತ್ತೆ ಮಾವರನ್ನು ತಂದೆ ತಾಯಿ ಎಂಬ ಗೌರವದಿಂದ ಕಾಣಲು ಸಾಧ್ಯ.
ಕೆಲಸದ ಸ್ಥಳದಲ್ಲಿ ಸಹೋದರತೆಯಿಂದ ಕಂಡರೆ ಅದು ಒಂದು ಕುಟುಂಬ ತಾನು ಅದರ ಸದಸ್ಯೆ ಎಂಬ ಅಭಿಮಾನ ಅವಳಲಿ ಆತ್ಮ ತೃಪ್ತಿ ಯನ್ನು ಹೆಚ್ಚಿಸುವ ಮೂಲಕ ಸಂತಸದ ಕಾಯಕಕ್ಕೆ ಕಾಯ ಶರಣಾದಂತೆ ಮನವು ರೆಕ್ಕೆ ಬಿಚ್ಚಿದ ಬಾನಾಡಿಯಾಗುತ್ತೆ.
ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸಬಲೀಕರಣದ ಮಾತು ಮತ್ತೆ ಮತ್ತೆ ಕೇಳಿ ಬರುತ್ತದೆ.70ರ ದಶಕದಲ್ಲಿ ಆರ್ಥಿಕ ಸ್ವಾತಂತ್ರ್ಯವೇ ಮಹಿಳಾ ಸಮಾನತೆಯ, ಸಬಲೀಕರಣದ ಅಸ್ತ್ರ ಎಂಬಂತೆ ಬಿಂಬಿತವಾಗಿದೆ. ಆ ಕಾಲಕ್ಕೆ ಅದು ಅನಿವಾರ್ಯ ಕೂಡಾ ಆಗಿತ್ತು. ಕೇವಲ ಪಟ್ಟಣ ಪ್ರದೇಶಗಳಲ್ಲಿ ಸಂಘಟಿತ ವಲಯದಲ್ಲಿ ದುಡಿಯುವವರಂತೆ ಗ್ರಾಮೀಣ ಪ್ರದೇಶದಲ್ಲೂ ಕೂಡಾ ಹೈನುಗಾರಿಕೆ, ಕೃಷಿ, ಗುಡಿಕೈಗಾರಿಕೆಗಳಲ್ಲಿ ಮಹಿಳೆ ತೊಡಗಿಕೊಂಡು ಬಂದಿದ್ದಾಳೆ.ಆರ್ಥಿಕ ಉತ್ಪಾದನೆ ಯಲ್ಲಿ ಅವಳ ಶ್ರಮವನ್ನು ‘ಸೇವೆ ‘ಎಂಬ ಸೀಮಿತ ಚೌಕಟ್ಟಿನಲ್ಲಿ ಬಂಧಿಸಿ ಅದನ್ನು ಆರ್ಥಿಕ ಮೌಲ್ಯದ ಲೆಕ್ಕಾಚಾರದಲ್ಲಿ ಪರಿಗಣಿಸದೆ ನಗಣ್ಯವೆಂದು ನಮ್ಮ ಪುರುಷ ಪ್ರಧಾನ ಸಮಾಜ ‘ಮಹಿಳಾ ಮಾನದಂಡ ‘ದ ಅನ್ಯಾಯಕ್ಕೆ ಕೊನೆಯಿಲ್ಲದ ನಿರಂತರವಾಗಿ ಸಮಸ್ಯೆಯಾಗಿ ಸ್ಪಂದಿಸುತ್ತಿದ್ದಾರೆ.
ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾದಾಗ ಮನೆ ಕೆಲಸಕೆ ಸಹಕಾರ ನೀಡದ ಗುಲಾಮರಂತೆ ಕಾಣುವ ಕುಟುಂಬ ವರ್ಗದವರು ಬೆಂಬಲ ನೀಡಿದಾಗ ಮಹಿಳೆ ಇನ್ನಷ್ಟು ಸಂತಸದಿಂದ ದುಡಿದು ತನ್ನ ಮನೆ. ಸಮಾಜ. ದೇಶವ್ಯಾಪಿಯಾಗಿ ಉನ್ನತಸ್ಥಾನ ಸ್ಥಾನ ತಲುಪಲು ಸಾಧ್ಯ ಅಲ್ಲವೇ

——————————

ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

One thought on “

  1. ತುಂಬಾ ಅರ್ಥಪೂರ್ಣವಾಗಿ ಬಂದಿದೆ ಲೇಖನ ಅಭಿನಂದನೆಗಳು.

Leave a Reply

Back To Top