ಯುವಸಾಹಿತಿ ಬರಹಗಾರ್ತಿ ಭವ್ಯ ಸುಧಾಕರ ಜಗಮನೆಯವರ ಚೋಚ್ಚಲ ಪುಸ್ತಕ *ಲೋಕ ರತ್ನ *ದಿನಾಂಕ 29ಅಕ್ಟೋಬರ್ 2023 ಬೆಳಗ್ಗೆ 10ಕ್ಕೆ ಕಥಾಬಿಂದು ಪ್ರಕಾಶನ ಮಂಗಳೂರು ಪುರಭವನ ಇಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಆಯೋಜಕರು ಪಿ. ವಿ. ಪ್ರದೀಪ್ ಕುಮಾರ್ ಸಾಹಿತ್ಯ ಪೋಷಕರು ಪ್ರಕಾಶಕರು
ಭವ್ಯ ಸುಧಾಕರ ಜಗಮನೆ
ಕವಿಯತ್ರಿ ಅವರ ಜೀವನ ಮತ್ತು ಸಾಹಿತ್ಯ ಸಾಧನೆ
ಪರಿಚಯ
ಭವ್ಯ ಸುಧಾಕರ ಜಗಮನೆ
M.A. , B.Ed. , Kset .
(ಯುವ ಬರಹಗಾರ್ತಿ, ಕವಯತ್ರಿ,
ಯುವ ಸಾಹಿತಿ ,ಪರಿಸರ ಪ್ರೇಮಿ)
ತಂದೆ : ಲೋಕೇಶ .ಎನ್. ಈ
ತಾಯಿ : ರತ್ನಮ್ಮ ಲೋಕೇಶ
ಬಾಲ್ಯ ಜೀವನ
ಕವಿಯತ್ರಿಯವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಗ್ರಾಮದ ಸಮೀಪವಿರುವ ನಾರಾಯಣಪುರ ಎಂಬ ಹಳ್ಳಿಯ ಆದರ್ಶ ದಂಪತಿಗಳ ಜೇಷ್ಠ ಪುತ್ರಿ ಯಾಗಿ 1984 ಜುಲೈ 13ರಂದು ಬಡ ಅವಿಭಕ್ತ ಕೃಷಿಕ ಸಂಸ್ಕಾರವಂತ ಕುಟುಂಬದಲ್ಲಿ ಜನಿಸಿದ್ದಾರೆ. ಇವರಿಗೆ ಮಲ್ಲಿಕಾರ್ಜುನ ಎಂಬ ಏಕೈಕ ತಮ್ಮನಿದ್ದಾರೆ ಅವರೊಂದಿಗೆ ತಾಯಿ ಒಡಲು ಮಡಿಲು ತಂದೆ ಹೆಗಲು ನೋವು ನಲಿವು ಹಂಚಿಕೊಂಡು ಬಂದಿದ್ದಾರೆ.
ಇವರಿಗೆ ಒಬ್ಬ ಅಜ್ಜಿ ಇದ್ದಾರೆ ಅವರು ನೂರರ ಆಸು ಪಾಸಿನಲ್ಲಿರುವವರು ಇವರು ತಮ್ಮ ಜೀವನದಲ್ಲಿ ಊರಿನ ನೂರಾರು ಮಹಿಳೆಯರಿಗೆ ಹೆರಿಗೆ ಮಾಡಿಸಿ ಸದಾ ಚಟುವಟಿಕೆಯಂದಿರುತ್ತಿದ್ದರು. ಇವರಿಗೆ ಓಡಾಡಲು ಆಗದಕಾರಣ ಕವಿಯತ್ರಿ ಅವರ ತಂದೆಯವರು, ಅಜ್ಜಿಯವರನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ.
ಹಾಗೂ ಕವಿ ಯತ್ರಿಯವರಿಗೆ ಇಬ್ಬರು ಚಿಕ್ಕಪ್ಪ ನವರು ಇದ್ದಾರೆ ಅವರಿಬ್ಬರು ಇವರಿಗೆ ಸ್ವಂತ ಮಗಳಂತೆ ನೋಡಿಕೊಳ್ಳುತ್ತಾರೆ. ಅವರಲ್ಲಿ ಒಬ್ಬರಾದ ಶಾಂತಪ್ಪ ಚಿಕ್ಕಪ್ಪಾ ನವರು ಅವಿವಾಹಿತ ರಾಗಿದ್ದು ಅಂದ ಕುರುಡರಾಗಿದ್ದಾರೆ ಅವರು ಕಣ್ಣಿಲ್ಲ ದಿದ್ದರೂ ತುಂಬಾ ವಿಚಾರವಂತರು ಹಾಗೆ ಓದಬೆಕು ಹಿಗೆ ಓದಬೆಕು ಅಂತಾ ಕಿವಿಮಾತು ಹೇಳಿ ಕವಿಯತ್ರಿಯವರಿಗೆ ಪ್ರೋತ್ಸಾಹ ನಿಡುತಿದ್ದರು. ಇನ್ನೊಬ್ಬ ಚಿಕ್ಕಪ್ಪನವರು ಮೂರನೇ ಹಂತದ ಕ್ಯಾನ್ಸರ್ ರೋಗದಿಂದ ಗೆದ್ದು ಉಳಿದು ಬಂದಿದ್ದಾರೆ ಅವರಿಗೆ ಒಬ್ಬ ಮಗಳಿದ್ದು ಅವಳು ಇವರೊಂದಿಗೆ ಸ್ವಂತ ತಂಗಿಯಂತೆ ಬೆರೆಯುತ್ತಾರೆ.
ಲೇಖಕಿಯರ ತಂದೆಯವರಾದ ಲೋಕೇಶ್ ಅವರು ಬಹಳ ಶ್ರಮಜೀವಿ ಅವರ ಕಾಯಕ ಪ್ರತಿದಿನ ಬೆಳಿಗ್ಗೆ 5:00 ಗಂಟೆಗೆ ಪ್ರಾರಂಭವಾಗಿ ರಾತ್ರಿ 9:00 ಗಂಟೆಯ ವರೆಗೂ ಮಲಗುವ ತನಕ ನಡಿಯುತಲೆ ಇರುತ್ತೆ. ವಯಸ್ಸು 70 ದಾಟಿದರೂ ನವ ಯುವಕರಂತೆ ಸದಾ ಕಾಲ ದುಡಿಯುತ್ತಾ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಪರೋಪಕಾರಿ ಸ್ವಭಾವದವರು. ಪ್ರಸ್ತುತ ಕೃಷಿ ಸಹಕಾರಿ ಸಂಘ ಬೇಲೂರು ಹೋಬಳಿ ಮಟ್ಟದಲ್ಲಿ ಸತತ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನ್ಯಾಯವನ್ನು ನೇರವಾಗಿ ಖಂಡಿಸುವ ಸ್ವಭಾವದವರು .
ಕವಿಯತ್ರಿ ಅವರ ತಾಯಿಯವರು ಮನೆಯ ಕೆಲಸ ಮಾಡುವುದರ ಜೊತೆಗೆ ಹೊಲ ಗದ್ದೆ ಕೆಲಸವನ್ನು ಮಾಡುತ್ತಾ ತಮ್ಮ ಪತಿರಾಯರಿಗೆ ಸಹಾಯ ಮಾಡುವರು .ಅವರು ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಬೇರೆಯೊಬ್ಬರು ಕೇಳದಿದ್ದರೂ ಅವರ ಕಷ್ಟ ನೋಡಿ ಅವರಿಗೆ ಸಹಾಯ ಮಾಡುವುದರಲ್ಲಿ ಖುಷಿಪಡುವರು. ಮನೆಯಲ್ಲಿ ಏನೇ ಇಲ್ಲದಿದ್ದರೂ ಮತ್ತೊಬ್ಬರನ್ನು ಕೇಳದ ಸ್ವಾಭಿಮಾನಿಯಾಗಿದ್ದಾರೆ.
ಕವಿಯತ್ರಿ ಅವರ ತಂದೆ ತಾಯಿ ಕೇವಲ ಒಂದು ಎಕ್ಕರೆ ಜಮೀನು ಬೆಳೆ ಬೆಳೆಯುತ್ತಾ ಏಂಟು ರಾಸು ಜಾನುವಾರು ಗಳು ಸಲಹುತ್ತಾ ಜೊತೆಗೆ ತರಕಾರಿ ವ್ಯಾಪಾರ ಮಾಡಿ ಅವರಿಗೆ ಯಾವುದಕ್ಕೂ ಕೊರತೆ ಇಲ್ಲದಂತೆ ಎಲ್ಲಾ ಕೊಡಿಸಿ ಉನ್ನತ ವಿದ್ಯಾಭ್ಯಾಸ ಕೊಡಿಸಿ ಪ್ರೀತಿಯಿಂದ ಸಾಕಿ ಸಲಹಿದ್ದಾರೆ.
ಶಿಕ್ಷಣ
ಕವಿಯತ್ರಿಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅವರದೇ ಆದ ಸ್ವಂತ ಗ್ರಾಮದಲ್ಲಿ ಮಗಿಸಿ ಪ್ರೌಢ ಶಿಕ್ಷಣವನ್ನು ಪಕ್ಕದ ಬೆಣ್ಣೂರ್ ಗ್ರಾಮದಲ್ಲಿ ಮುಗಿಸಿರುವರು .ಬೆಳಗ್ಗೆ ಆರು ಗಂಟೆಗೆ ಎದ್ದು ಅಪ್ಪನೊಂದಿಗೆ ಗದ್ದೆಗೆ ಹೋಗಿ ಬೀಜ ಬಿತ್ತೋದು ತರಕಾರಿ ಕೊಯ್ಯುವುದು ಕಳೆಕೀಳುವ ಕೆಲಸ ಮೂಗಿಸಿ ಒಂಬತ್ತು ಗಂಟೆಗೆ ಮನೆಗೆ ಬಂದು ತಯಾರಾಗಿ ಮನೆಯಿಂದ ಓಡುತ್ತಾ ಹೊರಟರೆ ಶಾಲೆಗೆ ತಲುಪಿದ ಮೆಲೆ ಅವರ ಓಟ ನಿಲ್ಲುತ್ತಿತ್ತು.ರಜೆಯ ದಿನಗಳಲ್ಲಿ ಗದ್ದೆಗೆ ಹೋಗಿ ಎಮ್ಮೆ ಕಾಯುತ್ತಾ ಜೊತೆಗೆ ತೆಗೆದುಕೊಂಡು ಹೊದ ಪುಸ್ತಕ ಓದುತ್ತಿದ್ದರು.ಪ್ರತಿ ದಿನ ಸಂಜೆ ಕೆರೆಯಲ್ಲಿ ಸಗಣಿ ಎತ್ತಿ ತಿಪ್ಪೆತುಂಬಿಸುವುದು ಅವರ ದಿನಚರಿ ಆಗಿತ್ತು.
ಅವರು ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಚಿಕ್ಕಮಂಗಳೂರಿನ ಎಸ್. ಟಿ.ಜೆ. ಮಹಿಳಾ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಿ.ಎಡ್ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಚನ್ನರಾಯಪಟ್ಟಣದ ಆದಿಚುಂಚನಗಿರಿ ಮಹಾವಿದ್ಯಾಲಯದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರಿಗೆ ಇವರ ತಾಯಿಯವರು ಯಾವಾಗಲೂ ನೀನು ಚೆನ್ನಾಗಿ ಓದು ಎಂದು ಪ್ರೋತ್ಸಾಹ ನೀಡುತ್ತಾ ಮನೆ ಕೆಲಸವನ್ನು ಇವರಿಗೆ ಮಾಡಲು ಬಿಡದೆ ತಾವು ಒಬ್ಬರೇ ಮಾಡುತಿದ್ದರು .ಆದರೂ ಇವರು ತಾಯಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುತಿದ್ದರು.
ವೃತ್ತಿ ಜೀವನ
ಸಾಹಿತಿಯವರು ಬೇಲೂರಿನ ಖಾಸಗಿ ಶಾಲೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು ಅವರು ಆರು ತಿಂಗಳ ಶಿಕ್ಷಕಿಯಾಗಿ ಹಾಗೂ ಚಿಕ್ಕಮಂಗಳೂರಿನ ಕ್ಷೇತ್ರ ಸಂಪನ್ಮೂಲ ಕಚೇರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುತ್ತಿಗೆ ಆದರದ ಮೇಲೆ ಒಂದು ವರ್ಷ ಕೆಲಸ ನಿರ್ವಹಿಸಿದ್ದಾರೆ .ಅಷ್ಟರಲ್ಲಿ ಸುಕೃತ ಫಲವೆಂಬಂತೆ ಶಿವಮೊಗ್ಗದ ಸುಸಂಸ್ಕೃತ ಕುಟುಂಬ ಜಯಣ್ಣ ಮತ್ತು ಗೌರಮ್ಮ ಎಂಬ ದಂಪತಿಗಳ ದ್ವಿತೀಯ ಪುತ್ರ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸದ್ಗುಣ ಸಂಪನ್ನರಾದ ಸುಧಾಕರ ಅವರ ಜೊತೆ 2008 ಏಪ್ರಿಲ್ 28ರಲ್ಲಿ ವಿವಾಹವಾಯಿತು ಇವರ ಮಾವನವರು ತುಂಬಾ ಶಿಸ್ತು ಪಾಲನೆಯ ವ್ಯಕ್ತಿಯವರು ಅತ್ತೆಯವರು ಹೊಲಿಗೆ ಕಸೂತಿ ದಿನಪತ್ರಿಕೆ ಓದುವ ಇತ್ಯಾದಿ ಒಳ್ಳೆಯ ಹವ್ಯಾಸ ರೂಢಿಸಿಕೊಂಡಿದವರು. ಇವರಿಗೆ ಮದುವೆ ಆದ ನಂತರವೂ ಅತ್ತೆ ಮಾವ ಗಂಡನವರು ಓದುವಂತೆ ಪ್ರೊತ್ಸಾಹ ನಿಡಿದರು.ಕವಿಯತ್ರಿ ಅವರು ಮತ್ತೆ ತಮ್ಮ ಶಿಕ್ಷಣ ಪ್ರಾರಂಭಿಸಿ ಎರಡು ವರ್ಷದ ಸ್ನಾತಕೋತರ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಟಿ.ಇ.ಟಿ.ಹಾಗೂ ಕೆಸೆಟ್ ಪರಿಕ್ಷೆ ಯನ್ನು ತಮ್ಮ ಮೊದಲ ಪ್ರಯತ್ನ ದಲ್ಲಿ ಪಾಸಾಗಿದ್ದಾರೆ.
ಪ್ರೌಢಶಾಲಾ ಶಿಕ್ಷಕ ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳನ್ನು ಬರೆದು ಒಂದು ಎರಡು ಪರ್ಸೆಂಟೇಜ್ ಗಳ ಅಂತರದಲ್ಲಿ ಹುದ್ದೆಯನ್ನು ಕಳೆದುಕೊಂಡಿದ್ದಾರೆ
ಕೌಟುಂಬಿಕ ಜೀವನ
ಇವರ ಎಲ್ಲಾ ಕೆಲಸಕ್ಕೂ ಅವರ ಪತಿಯವರೇ ಬೆನ್ನೆಲುಬಾಗಿ ನಿಂತು ಸದಾ ಸಮಾಧಾನ ಹೆಳುತಾ ದಯಾಳು ಕರುಣಾಳು ಕೃಪಾಳು ತುಂಬಿದ ಕೊಡದಂತ ಸ್ವಭಾವದ ಅಪರೂಪದ ವ್ಯಕ್ತಿತ್ವದವರು ಎಂದು ಕವಿಯತ್ರಿ ಯವರು ತಮ್ಮ ಬಾಳಸಂಗಾತಿ ಬಗ್ಗೆ ಹೆಮ್ಮೆ ಯಿಂದ ಹೆಳಿಕೊಳ್ಳುತಾರೆ. ಇವರಿಗೆ ಚತುರ್ ಎಂಬ ಮಗ ಷಾವೀ೯ ಎಂಬ ಹೆಣ್ಣು ಮಗು ಇಬ್ಬರು ಪುಟ್ಟ ಮುದ್ದು ಮಕ್ಕಳು ಇದ್ದಾರೆ.ಇವರ ಮನೆಯಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬ, ಮಹಾನ್ ವ್ಯಕ್ತಿಗಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ.ಇವರ ಮಗ ಅಪ್ಪಟ ದೇಶಾಭಿಮಾನಿ, ಸಾಮಾನ್ಯ ಜ್ಞಾನದ ಗಣಿ,ಇವರ ಮಗಳು ಎಲ್ಲರನ್ನೂ ನಕ್ಕು ನಗಿಸುವ , ಮೆಚ್ಚಿಸುವ ಸಾಂತ್ವನ ಸಿರಿ.ಇವರು ಕವಿಯತ್ರಿ ಅವರ ಬದುಕಿನ ಸ್ಪೂರ್ತಿ ಯ ಸೆಲೆ ಯಾಗಿದ್ದಾರೆ.
ಸಾಧನೆಯ ಹಾದಿ
ಇವರು ಸಾಧನೆಯ ಹಾದಿಯಲ್ಲಿ ತಾವು ಪುಟ್ಟ ಸಸಿ ಎಂದು ಹೇಳಿಕೊಳ್ಳುತ್ತಾರೆ ಇವರು ಬಾಲ್ಯದಿಂದಲೂ ಶಾಲೆಯ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಾದ ಭಾಷಣ ,ನೃತ್ಯ ,ಚರ್ಚಾ ಸ್ಪರ್ಧೆ, ಅಭಿನಯ, ಆಶುಭಾಷಣ,ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.ಜೊತೆಗೆ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಪ್ರಥಮ ಬಹುಮಾನ ಪಡೆದಿದ್ದಾರೆ.ಹಾಗೂ ಇವರು ಪದವಿ ಓದುತಿರುವಾಗ ಖ್ಯಾತ ಗಾಯಕರಾದ ಸಿ.ಅಶ್ವಥ್ ಸರ್ , ಮತ್ತು ಯಶವಂತ ಹಳೆಬಂಡಿ ಇವರನ್ನು ಸ್ವಾಗತಿಸಲು ಅವಕಾಶ ದೊರೆಯಿತು ಎಂದು ಕವಿಯತ್ರಿ ಯವರು ಹೆಮ್ಮೆ ಯಿಂದ ಹೆಳಿಕೊಂಡಿದ್ದಾರೆ . ಪ್ರಸಿದ್ಧ ಸಾಹಿತಿಗಳಾದ ಪ್ರಧಾನ್ ಗುರುದತ್ತ, ಚಂಪಾ ,ಎಚ್.ಎಸ್. ವೆಂಕಟೇಶ್ ಮೂರ್ತಿ ಮೊದಲಾದವರು ಇವರ ಕಾಲೇಜಿಗೆ ಬಂದಿದ್ದಾಗ ಆ ಕಾರ್ಯಕ್ರಮದ ನಿರೂಪಣೆಯನ್ನು ತಾವೇ ಮಾಡಿರುವುದಾಗಿ ಖುಷಿಯಿಂದ ಹೇಳಿಕೊಳ್ಳುತ್ತಾರೆ. ಕಾಲೇಜಿನಲ್ಲಿ ಸಮವಸ್ತ್ರ ಮಾಡಬೇಕೆಂದು ಸ್ನೇಹಿತರೊಂದಿಗೆ ಸೇರಿ ಜಿಲ್ಲಾಮಟ್ಟದಲ್ಲೇ ಹೋರಾಟ ಮಾಡಿದ್ದಾರೆ .ತಪ್ಪು ಮಾಡಿದವರು ಯಾರೇ ಆದರೂ ನೇರವಾಗಿ ಖಂಡಿಸುವ ಸ್ವಭಾವದವರು. ಪ್ರಸ್ತುತ ಇವರು ಸ್ನೇಹಿತರೊಂದಿಗೆ ಸೇರಿ ಕನ್ನಡ ಸ್ಪರ್ಧಾರ್ಥಿಗಳಿಗೆ ಉಚಿತ ಆನ್ಲೈನ್ ಉಪನ್ಯಾಸ ನೀಡುತ್ತಾ, ಜೊತೆಗೆ ಮಕ್ಕಳ ಸಾಹಿತ್ಯ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಕಾರ್ಯಕ್ರಮ ಮಾಡುತ್ತಿರುವ ರೇಡಿಯೋ ಬರ್ಫಿ ಮಕ್ಕಳ ಬಾನುಲಿ ಕೇಂದ್ರ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ಅವರು ನಡೆಸಿಕೊಡುತ್ತಿರುವ ರೇಡಿಯೋ ಕಾರ್ಯಕ್ರಮದಲ್ಲಿ ಕವಿಯತ್ರಿಯವರು ಮಕ್ಕಳಿಗಾಗಿ ಉಪನ್ಯಾಸ ನೀಡುತ್ತಾ ಕನ್ನಡ ಸೇವೆ ಮಾಡುತ್ತಿದ್ದಾರೆ.
ಸಾಹಿತ್ಯ ಯಾನ
ಕವಿಯತ್ರಿಯವರ ಸಾಹಿತ್ಯಯಾನಾ ಅವರು ಪದವಿಪೂರ್ವ ಹಂತದಲ್ಲಿ ಇರುವಾಗಲೇ ಸಣ್ಣ ಕಥೆ, ಕವನ, ಬರೆಯುವದರೊಂದಿಗೆ ಆರಂಭವಾಯಿತು. ಪದವಿ ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ಸುನಾಮಿ ಕುರಿತು ಬರೆದ ಲೇಖನ ಪ್ರಕಟವಾಯಿತು. ಕೆಲವು ಕಥೆ ,ಲೇಖನ ,ಕವಿತೆ ,ಪ್ರವಾಸ ಕಥನ, ಮುಂತಾದವುಗಳನ್ನು ಬರೆದಿದ್ದರು ಆದರೆ ಅದೆಲ್ಲವೂ ಅವರ ಕಾಲೇಜಿನ ಎನ್.ಎಸ್.ಎಸ್ .ಕ್ಯಾಂಪಿನಲ್ಲಿ ಕಳೆದು ಹೋಯಿತು ಎಂದು ತುಂಬಾ ಬೇಸರವನ್ನು ವ್ಯಕ್ತಪಡಿಸಿದರು. ಸ್ವಲ್ಪ ದಿನದ ನಂತರ ಮತ್ತೆ ಬರೆಯಲು ಪ್ರಾರಂಭಿಸಿದರು .ಅದನ್ನು ಇಂದಿನವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ .ಇತ್ತೀಚೆಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ರಾಜ್ಯಮಟ್ಟದ ಹತ್ತಾರು ಸಾಹಿತ್ಯ ಬಳಗದಲ್ಲಿ ಹಲವು ಸಾಹಿತ್ಯ ಪ್ರಕಾರದಲ್ಲಿ ಸಕ್ರಿಯವಾಗಿ ಪ್ರತಿದಿನ ಬರೆಯುತ್ತಿದ್ದಾರೆ. ಎಲ್ಲಾ ಬಳಗಗಳಲ್ಲಿ ಮೆಚ್ಚುಗೆಯ ಅತ್ಯುತ್ತಮ ,ಉತ್ತಮ,ಪ್ರಥಮ, ದ್ವಿತೀಯ, ತೃತೀಯ ,ಹೀಗೆ ತುಂಬಾ ಅಭಿನಂದನ ಪತ್ರಗಳು ಪಡೆದುಕೊಂಡಿದ್ದಾರೆ.
ಬಿರುದುಗಳು
೧. ಭಾರತೀಯ ಸರ್ವ ಶ್ರೇಷ್ಠ ಕರುನಾಡ ಕೊಗಿಲೆ ಬಿರುದು.
೨.ಜ್ಞಾನ ಸಂವೃದ್ಧಿ, ಜ್ಞಾನ ಚೈತನ್ಯ, ಜ್ಞಾನ ಧನಂಜಯ, ಜ್ಞಾನ ಕೀರ್ತಿ ಇತ್ಯಾದಿ ಬಿರುದು ಗಳು
೩. ಜ್ಞಾನ ಚಾಣಕ್ಯ ಬಿರುದು .
೩.ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ ಪುರಸ್ಕೃತರು
೪.ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಚಿಕ್ಕಮಂಗಳೂರು 2023.ಭಾಗವಹಿಸಿದ್ದಾರೆ.
ಪ್ರಕಟಿತ ಪುಸ್ತಕಗಳು
೧. ‘ಲೋಕರತ್ನ ‘ಸ್ವರಚಿತ ನುಡಿಮುತ್ತುಗಳು 2023 ಅಕ್ಟೋಬರ್ ಕಥಾಬಿಂದು ಪ್ರಕಾಶನ.
೨. ‘ಭಾವಸುಧೆ ‘ಕವನ ಸಂಕಲನ (ಪ್ರಕಟಣೆಗೆ ಸಿದ್ದವಾಗಿದೆ)
ಇಲ್ಲಿ ಕವಿಯತ್ರಿ ಯವರು ತಮ್ಮ ಜಿವನದ ಅಭಿಪ್ರಾಯ ಗಳನು ಕುರಿತು ಹಿಗೆ ಹೆಳುತಾರೆ .ಬಹುಮಾನ, ಸನ್ಮಾನ ,ಉನ್ನತ ಹುದ್ದೆ ,ಇವೆ ಜೀವನದ ಸಾಧನೆಗಳಲ್ಲ ಸಾಧನೆ ಒಂದು ಭಾಗ ಅಷ್ಟೇ .ಮಗಳಾಗಿ ,ಸಹೋದರಿಯಾಗಿ ,ಪತ್ನಿ, ಸೊಸೆ ,ತಾಯಿ, ದೇಶದ ಪ್ರಜೆಯಾಗಿ ವಿಶ್ವ ಮಾನವಳಾಗಿ ನನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಜೀವನ ಪೂರ್ತಿ ನಾವು ಮಾಡಬೇಕಾಗಿರುವ ಸಾಧನೆ ಎಂದು ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಕವಿಯತ್ರಿಯ ಜೀವನದ ಧ್ಯೇಯೋದ್ದೇಶಗಳು.
೧.ಸಮಾಜದಲ್ಲಿ ಒಗ್ಗಟ್ಟು ತರಲು ಆಪ್ತ ಸಮಾಲೋಚಕಿಯಾಗಿ ಕೆಲಸ ಮಾಡಬೇಕೆಂದು ಕೊಂಡಿದ್ದಾರೆ.
೨. ಸಾರ್ವಜನಿಕ ಸ್ಥಳಗಳಲ್ಲಿ ಸಾಧ್ಯವಾದಷ್ಟು ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ಮುಂದೆ ಮಾಡುವುದಾಗಿ ಹೇಳಿದ್ದಾರೆ.
೩. ಬರಹದ ಮುಖಾಂತರ ಕನ್ನಡ ಸಾಹಿತ್ಯ ಸೇವೆ.
೪. ಸರಳ ಜೀವನ ಅನಾಥರಿಗೆ ನೋಂದವರಿಗೆ ಸಾಂತ್ವಾನ ನೀಡುವುದು .
೫.ಪರಿಸರ ಸಂರಕ್ಷಣೆಯ ಹೊಣೆಗಾರಿಕೆ.
ನನ್ನ ಸದಾಶಯಕ್ಕೆ ಎಲ್ಲರೂ ಸಹಕರಿಸಿ ಎಂದು ವಿನಂತಿಸಿಕೊಳ್ಳುವೆ ನನ್ನ ಪರಿಚಯ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಜ್ಞಾನ ಜ್ಯೋತಿ ದಿನಪತ್ರಿಕೆ ಬಳಗದ ಗೌರವಾನ್ವಿತರಿಗೆ ಹಾಗೂ ನನಗೆ ಕಲಿಸಿದ ಗುರು ಹಿರಿಯರು ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕವಿಯತ್ರಿ ಯವರು ತಿಳಿಸಿದ್ದಾರೆ.
ನಾಡು ನುಡಿ ಉಳಿಸಿ ಬೆಳೆಸುತ್ತಾ ರಾಷ್ಟ್ರಸವೆ ಮಾಡುತ್ತಾ ವಿಶ್ವಶಾಂತಿ ಕಾಪಾಡುತ್ತ ವಿಶ್ವ ಮಾನವರಾಗೋಣ.
ಭವ್ಯ ಸುಧಾಕರ ಜಗಮನೆ
LIG-57,1ನೆ ತಿರುವು, ಹುಡ್ಕೋ,
ವಿನೋಭನಗರ ಶಿವಮೊಗ್ಗ.577204.
ಮೊ.ನಂ.7899492498
ಡಾ.ಭಾಗ್ಯ ಡಿ. ಕೆ. ಎಂ.