ರುಕ್ಮಿಣಿ ನಾಯರ್. ಗೌರಿ ಲಂಕೇಶ್ ನೆನಪಲ್ಲಿಒಂದು ಬರಹ,ವ್ಯವಸ್ಥೆಯವಿರುದ್ದ ಸಿಡಿದಿದ್ದ ಗೌರಿ

ಗೌರಿ ನೆನಪಲ್ಲಿ

ರುಕ್ಮಿಣಿ ನಾಯರ್

ಗೌರಿ ಲಂಕೇಶ್ ನೆನಪಲ್ಲಿಒಂದು ಬರಹ,

ವ್ಯವಸ್ಥೆಯವಿರುದ್ದ ಸಿಡಿದಿದ್ದ ಗೌರಿ

ಗೌರಿ ಲಂಕೇಶ್ ಅವರು ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಪ್ರಸಿದ್ಧ ರಾಜಕೀಯ ವ್ಯಾಖ್ಯಾನಕಾರರು ಹಾಗೂ ಸಮಾಜ ಸುಧಾರಕರು.
ಗೌರಿ ಲಂಕೇಶ್ ರವರು ಧೈರ್ಯವಂತ ದಿಟ್ಟ ಮಹಿಳೆ ಎಂದರೆ ಅತಿಶಯೋಕ್ತಿ ಆಗದು. ಯಾರಿಗೂ ಹೆದರದ ಕೆಚ್ಚೆದೆಯ ಪತ್ರಕರ್ತೆ ಆಗಿದ್ದರು. ಇಂದಿಗೂ ಜನ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ಗೌರಿ ಲಂಕೇಶ್ ರವರು ಕವಿ ಪತ್ರಕರ್ತ ಹಾಗೂ ಸಂಪಾದಕರು ಆದ ಪಿ ಲಂಕೇಶ್ ಹಾಗೂ ಇಂದಿರಾ ಲಂಕೇಶ್ ಅವರ ಮಗಳು. ಹುಟ್ಟಿದ್ದು ೨೯ ಜನವರಿ ೧೯೬೨. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು.
ಗೌರಿ ಅವರು ತಮ್ಮ ವೃತ್ತಿ ಜೀವನವನ್ನು ಪತ್ರಿಕೋದ್ಯಮದಿಂದ ಪ್ರಾರಂಭಿಸಿ ಬೆಂಗಳೂರಿನ ಟೈಮ್ಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದರು. ಕೆಲವು ವರ್ಷಗಳ ನಂತರ ತಮ್ಮ ಜೀವನ ಸಂಗಾತಿಯ ಜೊತೆಗೆ ದೆಹಲಿಗೆ ಹೋದರು. ಹೆಚ್ಚುಕಾಲ ಅಲ್ಲಿ ಇರದೇ ಪುನಃ ಬೆಂಗಳೂರಿಗೆ ಬಂದು ಸಂಡೇ ಮ್ಯಾಗಜೀನ್ ವರದಿಗಾರರಾಗಿ ಒಂಬತ್ತು ವರ್ಷಗಳ ಕಾಲ ಕೆಲಸ ಮಾಡಿದರು. ೨೦೦೦ ಇಸವಿಯಲ್ಲಿ ಅವರ ತಂದೆ ತೀರಿಕೊಂಡರು. ತಂದೆಯ ಮರಣಾ ನಂತರ ವಾರ ಪತ್ರಿಕೆಯಾದ ಲಂಕೇಶ್ ಪತ್ರಿಕೆಯ ಸಂಪಾದಕರಾದರು. ಇದನ್ನೂ ಒಳಗೊಂಡಂತೆ ಅವರು ತಮ್ಮದೇ ಆದ ಗೌರಿ ಲಂಕೇಶ್ ವಾರ ಪತ್ರಿಕೆಯನ್ನು ನಡೆಸುತ್ತಾ ಇದ್ದರು.
ಎಡಪಂಥೀಯ ವಿಚಾರಗಳ ಪರವಾಗಿ ವಕಾಲತ್ತು ವಹಿಸುತ್ತಾ ಇದ್ದ ನಕ್ಸಲೀಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಯಶಸ್ವಿಯಾದ ಕರ್ನಾಟಕ ಕಂಡ ಅಪರೂಪದ ಪತ್ರಕರ್ತೆ ಇವರು. ಅಲ್ಪ ಸಂಖ್ಯಾತರ ಮೇಲಿನ ಹಲ್ಲೆ, ಬಾಬಾಬುಡನ್ ಗಿರಿ ದತ್ತಪೀಠ ವಿವಾದ, ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ರಾಮಚಂದ್ರಾಪುರದ ರಾಘವೇಶ್ವರ ಸ್ವಾಮೀಜಿ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಂಸ್ಥಾನಗಳು ಸೇರಿದಂತೆ ಹಲವರ ವಿರುಧ್ಧ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ತಮ್ಮ ನೇರ ನಿಷ್ಠುರ ಹರಿತ ಬರವಣಿಗೆಯಿಂದ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು ಗೌರಿ ಲಂಕೇಶ್ ರವರು. ಅವರು ಹಿಂದೂ ಧರ್ಮದೊಳಗಿನ ಜಾತಿ ವ್ಯವಸ್ಥೆ ಮತ್ತು ಮಹಿಳೆಯರನ್ನು ಎರಡನೇ ದರ್ಜೆಯ ಜೀವಿಗಳು ಎಂದು ಪರಿಗಣಿಸುವುದನ್ನು ಟೀಕಿಸಿದ್ದರು.
ಪತ್ರಿಕೋದ್ಯಮ ಬರಹಗಳಿಂದಾಚೆಗೂ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಶಾಂತಿಗಾಗಿ ನಾಗರಿಕ ವೇದಿಕೆಯಂತಹ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಪತ್ರಿಕೆಯಾಚೆಗೂ ಗೌರಿ ಲಂಕೇಶ್ ಅವರ ವ್ಯಕ್ತಿತ್ವ ಹರಡಿಕೊಂಡಿತ್ತು. ಕನ್ನಡದ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪರವರ ಕಾದಂಬರಿ ಆವರಣದ ಬಗ್ಗೆ ‘ಆವರರಣದ ಒಂದು ವಿ-ಕೃತಿ’ ಎಂಬ ವಿಮರ್ಶಾ ಪುಸ್ತಕವನ್ನು ಬರೆದಿದ್ದರು. ಪಾಶ್ಚಿಮಾತ್ಯ ಲೇಖಕರ ಬಗ್ಗೆ ತಂದೆ ಪಿ ಲಂಕೇಶ್ ಅವರು ಬರೆದಿದ್ದ ಲೇಖನಗಳ ಗುಚ್ಛ ‘ಮನಕೆ ಕಾರಂಜಿಯ ಸ್ಪರ್ಶ’ ದ ಸಂಯೋಜನೆ ಲಂಕೇಶರ ‘ಮರೆಯುವ ಮುನ್ನ’ ದ ಐದು ಸಂಪುಟಗಳನ್ನು ಗೌರಿ ಅವರು ಹೊರ ತಂದಿದ್ದರು. ಕಪ್ಪು ಮಲ್ಲಿಗೆ ಹೆಸರಿನಲ್ಲಿ ಅನುವಾದಿತ ಕಥೆಗಳ ಸಂಕಲನ, ” ಅನುವಾದಿತ ಕಥೆಗಳ ಸಂಪುಟಗಳನ್ನು ಹೊರ ತಂದಿದ್ದರು.
ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.
ಗೌರಿಯವರು ರಾಜಕೀಯ ವಲಯದಲ್ಲಿ ಪ್ರಭಲ ವಿಮರ್ಶಕಿ ಎಂದು ಪರ್ಗಣಿದಲ್ಪಟ್ಟವರು. ಅವರು ಹಿಂದುತ್ವದ ಬಲಪಂಥೀಯ ವಿಮರ್ಶಕರಾಗಿದ್ದರು. ಪ್ರಚೋದಾತ್ಮಕ ಬರಹಗಳಿಗೆ ಅವರು ಪ್ರಸಿದ್ಧರು. ಅವರು ಸ್ತ್ರೀವಾದಿ,ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದವರು.
ಅವರು ಒಬ್ಬ ನಿರ್ಭೀತ ಮಹಿಳಾ ಪತ್ರಕರ್ತೆಯಾಗಿದ್ದರು.
ಸೆಪ್ಟೆಂಬರ್ ೫-೨೦೧೭ ರಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಹಿಂತಿರುಗುವಾಗ ಅವರ ಮನೆಯ ಎದುರೇ ಗುಂಡಿನ ದಾಳಿಗೆ ಬಲಿಯಾಗಿ ಹತರಾದರು.


ರುಕ್ಮಿಣಿನಾಯರ್

3 thoughts on “ರುಕ್ಮಿಣಿ ನಾಯರ್. ಗೌರಿ ಲಂಕೇಶ್ ನೆನಪಲ್ಲಿಒಂದು ಬರಹ,ವ್ಯವಸ್ಥೆಯವಿರುದ್ದ ಸಿಡಿದಿದ್ದ ಗೌರಿ

Leave a Reply

Back To Top