ಬಸವಣ್ಣನವರ ವಚನವಿಶ್ಲೇಷಣೆ ಡಾ ಸಾವಿತ್ರಿ ಕಮಲಾಪೂರ

ವಚನ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಬಸವಣ್ಣನವರ ವಚನ ವಿಶ್ಲೇಷಣೆ

ಅರಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ ! ವಿಭೂತಿಯನ ಹೂಸಿ, ರುದ್ರಾಕ್ಷಿಯನೆ ಕಟ್ಟಿ, ಶಿವ ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯಾ ! ಕೆಟ್ಟು ಬಾಳುವವರಿಲ್ಲಾ ಎಮ್ಮವರ ಕುಲದಲ್ಲಿ, ನೀನೊಲಿದಂತೆ
 ಸಲಹಯ್ಯಾ ಕೂಡಲ ಸಂಗಮದೇವಾ.

           ಬಸವಣ್ಣನವರ ವಚನ


 ಅರಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ !

ಪ್ರತಿಯೊಂದು ಸ್ತ್ರೀಯರಿಗೆ ಅಲಂಕಾರ ಮಾಡಿಕೊಂಡು ಸುಂದರವಾಗಿ ಕಾಣಬೇಕು ಎಂದು ತುಂಬಾ ಹಂಬಲಿಸುತ್ತಿರುತ್ತಾರೆ .ಅಲಂಕಾರ ಮಾಡಿಕೊಂಡು ಗಂಡನ ಒಲವಿಗಾಗಿ ಕಾಯುತ್ತ ಕುಳಿತುಕೊಂಡಿರುತ್ತಾರೆ.ಹೇಗೆ ಅಂದರೆ,

 ಮೈಗೆಲ್ಲ ಅರಿಶಿಣ ಹಚ್ಚಿಕೊಂಡು ಸ್ನಾನ (ಮಿಂದು) ಮಾಡಿ ಸುಂದರವಾದ ಬಂಗಾರದ ಆಭರಣಗಳನ್ನು ಹಾಕಿಕೊಂಡು ಸುಂದರವಾದ ಉಡುಪನ್ನು ಧರಿಸಿ ತನ್ನ ಗಂಡನ ಒಲವು, ಪ್ರೀತಿ ,ಕಾಳಜಿ ಅನುಕಂಪವೇ ಇಲ್ಲವಾದಾಗ ತುಂಬಾ ಬೇಸರದಿಂದ ಬಳಲುವಂತಾಗುತ್ತದೆ ಎನ್ನುವ ಅರ್ಥ.

 ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ, ಶಿವ ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯಾ !

ಭಕ್ತ ದಿನ ನಿತ್ಯ ಶಿವನಿಗಾಗಿ ಹಂಬಲಿಸುತ್ತ ಹಣೆಗೆ
 ವಿಭೂತಿ ಕೊರಳಲಿ ರುದ್ರಾಕ್ಷಿ ಧರಿಸಿಕೊಂಡು  ಶಿವನೊಲುಮೆಗಾಗಿ ಕಾಯುತ್ತ ಇದ್ದಾಗ ಶಿವ ತನ್ನ ಭಕ್ತನ ಭಕ್ತಿಗೆ ಮೆಚ್ಚಲಾರದೇ  ಇರುವ ಭಕ್ತನಂತೆ ನಾನಿರುವೆನಯ್ಯಾ ಎನ್ನುವ ಅರ್ಥ.

 ಕೆಟ್ಟು ಬಾಳುವವರಿಲ್ಲಾ ಎಮ್ಮವರ ಕುಲದಲ್ಲಿ, ನೀನೊಲಿದಂತೆ ಸಲಹಯ್ಯಾ ಕೂಡಲ ಸಂಗಮದೇವಾ.

ದೇವರ ಸನ್ನಿಧಿಯಲ್ಲಿ ದೇವರ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು. ಆದರೂ ಈ
ಹೇಯ ಬದುಕಿನಲ್ಲಿ ಬದುಕು ಸಾಗುವಂತೆ  ಮಾಡುವಂತಿಲ್ಲ ನಮ್ಮ ಧರ್ಮದಲ್ಲಿ ಸಂಗಮನಾಥಾ ನಿಮಗೆ ಸರಿಕಂಡಂತೆ ಸಲಹು.ಭಗವಂತ ಎನ್ನುವ ಅರ್ಥವನ್ನು ಕಾಣಬಹುದು…
ಒಟ್ಟಿನಲ್ಲಿ ನಮ್ಮ ಭಕ್ತಿಯು ಇನ್ನೊಬ್ಬರು ನೋಡುವುದಕ್ಕಾಗಿ ಅಲ್ಲ .ಇನ್ನೊಬ್ಬರು ಹೊಗಳಲಿಕ್ಕಾಗಲಿ ಅಲ್ಲ.ದೃಢವಾದ ಭಕ್ತಿಯಿಂದ ಸಂಗಮನಾಥನನ್ನು ಒಲಿಸಿಕೊಂಡು ನಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು .ಎನ್ನುವ ಅರ್ಥವನ್ನು ಈ ಒಂದು ವಚನದಲ್ಲಿ ಕಾಣಬಹುದಾಗಿದೆ …


 ಡಾ ಸಾವಿತ್ರಿ ಕಮಲಾಪೂರ

Leave a Reply

Back To Top