ಶಿ ಕಾ ಬಡಿಗೇರ ಹೆಸರಿರದ ಕವಿತೆ

ಕಾವ್ಯ ಸಂಗಾತಿ

ಶಿ ಕಾ ಬಡಿಗೇರ

ಹೆಸರಿರದ ಕವಿತೆ

ರೆಕ್ಕೆ ಬಿಚ್ಚಿದ ಹಕ್ಕಿ ಮುಗಿಲು ಮುತ್ತಿ
ನಗೆ ಹರಡಿದ ಹೊತ್ತು ಮರದೊಳಗಿನ
ಹೂವಿಗೆ ಪರಿಮಳದ ಘಮ…

ಹರಿವ ನದಿಯ ಸೆಳವಿನಲಿ ಹೂ ಪಕಳೆಯ
ಮೇಲೆ ಇರುವೆಯ ಈಜಿಗೆ ದಡದ ಬಾಯಿ
ತುಂಬ ನಗು…

ಹೊನ್ನಂಬರಿ ಹೂ ಮೇಲೆ ಯಾರದೋ
ಕವಿತೆಯ ಸಾಲು ಬಣ್ಣ ಚೆಲ್ಲಿದೆ; ಡಬ್ಬಗಳ್ಳಿ
ಹಣ್ಣುಗಳಲ್ಲಿ ಎದೆಯ ಪ್ರೀತಿ ಜೇನಾಗಿದೆ…

ಮರದ ಬೇರುಗಳಲಿ ಕವಿತೆಯ ಹಸಿ
ಬಿರಿದ ಹೂಗಳಲಿ ಪಲ್ಲವಿಯ ದನಿ
ನಿತ್ಯ ಆಲಿಕೆಯಲಿ ಬದುಕಿನ ಹೆಜ್ಜೆ…


  • ಶಿ ಕಾ ಬಡಿಗೇರ

Leave a Reply

Back To Top