ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಪಾಸಾಗದಿದ್ದರೆ ಹೆದರದಿರಿ,

ಧೈರ್ಯದಿಂದ ಬದುಕು

ಎದುರಿಸಿ, ಜಯಿಸಿ.

    ಎಸ್ ಎಸ್ ಎಲ್ ಸಿ ಓದಿದ ಮಕ್ಕಳು ತಮ್ಮ ತರಗತಿಯನ್ನು ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಿಯುಸಿಗೆ ಸೇರಿದ್ದಾರೆ. ಕೆಲವರು ಉತ್ತಮ ರಿಸಲ್ಟ್ ಬಂದು ಉತ್ತಮ ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ.  ಅವರ ಬಗ್ಗೆ ನಾವು ಚಿಂತಿಸುವ ಅಗತ್ಯ ಇಲ್ಲ.  ಆದರೆ ಕೆಲವರಿಗೆ ತಾವು ಅಂದುಕೊಂಡದ್ದಕ್ಕಿಂತ ಪ್ರತಿ ವಿಷಯಗಳನ್ನು ನಾಲ್ಕು ನಾಲ್ಕು ಅಂಕಗಳು ಕಡಿಮೆಯಾಗಿ ಒಟ್ಟಾರೆಯಾಗಿ 30ರಷ್ಟು ಅಂಕಗಳು ಕಡಿಮೆ ಬಂದು ತುಂಬಾ ಬೇಸರವಾದದ್ದು ಕೂಡಾ ಇದೆ. ಅವರು ಅದರ ಬಗ್ಗೆ ಏನು ಬೇಸರ ಮಾಡಿಕೊಳ್ಳಬೇಕೆಂದಿಲ್ಲ ಇಲ್ಲ. ಆದರೆ ಈಗಿರುವ ಅಂಕಗಳು ಬಂದಿದೆಯಲ್ಲ  ಎಂದು ಮುಂದಿನ ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು.  ಕಾರಣ ಇಷ್ಟೇ ಹರಿಯುತ್ತಿರುವ ನದಿಗೆ ಅಡೆತಡೆಗಳು ಬರುವುದು ಸಾಮಾನ್ಯ.  ಆ ಅಡೆತಡೆಗಳನ್ನೆಲ್ಲ ಬಿಟ್ಟು ದಾಟಿ ಬದುಕಿನ ಪಯಣದಲ್ಲಿ ಮುಂದುವರಿಯಬೇಕಾದದ್ದು ಜಾಣತನದ ಲಕ್ಷಣ.


            ಹಾಗಾಗಿ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಂಡು ತನಗೆ ಇಷ್ಟ ಬಂದ ವಿಷಯವನ್ನು ಓದಬೇಕೆಂಬ ಆಸೆಯಿಂದ ಹೊಸ ಕಾಲೇಜಿಗೆ ಸೇರಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ಕಾಲೇಜು ವಿದ್ಯಾಭ್ಯಾಸಕ್ಕೆ ಅಡಿ ಇಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್ ಅಂತ ಹೇಳ್ತಾ ಈಗ ನಾವು ಮಾತನಾಡುತ್ತಿರುವುದು ಒಂದು ಎರಡು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ. ಒಂದೆರಡು ಮಾರ್ಕ್ಸ್ ಗೋ , ಐದಾರು ಅಂಕಗಳಿಗೋ ಅಥವಾ ಅದಕ್ಕಿಂತಲೂ ಹೆಚ್ಚು ಅಂಕಗಳಿಗೂ ಕಡಿಮೆ ಬಂದು ಒಂದೋ ಎರಡೋ, ಹೆಚ್ಚೋ ವಿಷಯಗಳು ಬಾಕಿಯಾಗಿ ಎನ್.  ಸಿ.  ಅಂದರೆ ನಾಟ್ ಕಂಪ್ಲೀಟ್ ಎಂದು ಫಲಿತಾಂಶ ಬಂದಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಮರು ಮೌಲ್ಯಮಾಪನಕ್ಕೆ ತಮ್ಮ ಪತ್ರಿಕೆ ಉತ್ತರ ಪತ್ರಿಕೆಗಳನ್ನು ಹಾಕಿ ಕಾಯುತ್ತಾ ಕುಳಿತಿದ್ದಾರೆ. ಸ್ಕ್ಯಾನ್ ಡ್ ಕಾಪಿ ತರಿಸಲು ಮುನ್ನೂರ ಐವತ್ತು, ಮತ್ತೆ ಮರು .ಮೌಲ್ಯ ಮಾಪನ ಮಾಡಲು ಎಂಟುನೂರು ರೂಪಾಯಿ ಕೊಡಲು ಪ್ರತಿ ವಿಷಯಕ್ಕೆ ಕಷ್ಟ ಎನ್ನುವ, ತಂದೆ ತಾಯಿ ಕೂಲಿ ಕೆಲಸ ಮಾಡಿ, ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಬದುಕುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಇದು ಸಾಧ್ಯ ಆಗದು. ಅವರಿಗೆ ನಾನು ಹೇಳುವುದೆಂದರೆ ಜೀವನದಲ್ಲಿ ಭಯ ಪಡಬೇಕೆಂದಿಲ್ಲ.  ಹೆಚ್ಚು ಹೆಚ್ಚು ಹಣ್ಣು ಬಿಡುವ ಮರಕ್ಕೆ ಹೆಚ್ಚು ಜನ ಕಲ್ಲುಗಳನ್ನು ಹೊಡೆಯುತ್ತಾರೆ. ಆದ ಕಾರಣ ನಿಮ್ಮ ಮುಂದಿನ ಜೀವನ ಬಹಳವೇ ಸುಖಕರವಾಗಿದೆ ಎಂದು ಅರ್ಥ.  ಅಥವಾ ನೀವು ಮುಂದೆ ಬಹಳ ಜನರಿಗೆ ಸಿಹಿ ಸಿಹಿಯಾದ ಹಣ್ಣುಗಳನ್ನು ಕೊಡಲಿದ್ದೀರಿ ಎಂದು ನೀವು ಅರಿತುಕೊಳ್ಳಬೇಕು.
           ಕಷ್ಟಪಡದೆ ಸುಖವಿಲ್ಲ.  ಇದು ಜೀವನಕ್ಕೂ ಅನ್ವಯಿಸುತ್ತದೆ. ಯಾರಿಗೂ ಕೂಡ ಕಷ್ಟಪಡದೆ ಯಾವುದೇ ಸುಖ ಸಿಗಲು ಸಾಧ್ಯವಿಲ್ಲ.  ಮಂತ್ರಿಗಳೇ ಆಗಿರಲಿ,  ಸಿನಿಮಾ ನಟರೆ ಆಗಿರಲಿ, ಅಥವಾ ಸಾಮಾನ್ಯ ಮನುಷ್ಯನಿಗೂ ಅವರವರ ಜೀವನದಲ್ಲಿ ಅವರದ್ದೇ ಆದ ಕಷ್ಟಗಳು ಇರುತ್ತವೆ.  ಆ ಕಷ್ಟಗಳನ್ನು ದಾಟಿಗೆ ಜೀವನದ ಗುರಿ ಕಾಣಲು ಸಾಧ್ಯ.  ಹೇಗೆ  ಎಂದರೆ ಪ್ರತಿ ರಾತ್ರಿ ಕಳೆದ ಮೇಲೆ ಹಗಲು ಹೇಗೆ  ಬರುತ್ತದೆಯೋ ಹಾಗೆ ಒಂದು ಕಷ್ಟದ ನಂತರ ಮತ್ತೊಂದು ಸುಖ ಬರಲಿದೆ.  ಇನ್ನೊಂದು ವಾರದೊಳಗೆ ಫಲಿತಾಂಶ ಬರಲಿದೆ . ಅದು ಕೂಡಾ ಫಲಿತಾಂಶ ಉತ್ತೀರ್ಣ ಆಗಿಯೇ ಇಲ್ಲವೆಂದರೆ ಇನ್ನೊಂದು ತಿಂಗಳಲ್ಲಿ ಮತ್ತೆ ಪರೀಕ್ಷೆ ಬರೆಯುವ ಅವಕಾಶವಿದೆ.  ಮತ್ತೊಂದು ತಿಂಗಳು ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುವಂತಹ ಕಾಲ ಬಂದಿದೆ.  ಹಾಗಾಗಿ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗಬಹುದು.
          ಕಷ್ಟ ಪಟ್ಟೋ, ಯಾರದೋ ಶಿಕ್ಷಕರ, ದಾನಿಗಳ ಅಥವಾ ಸಂಬಂಧಿಕರ ಸಹಾಯ ಪಡೆದೋ ಮತ್ತೊಮ್ಮೆ ಮೌಲ್ಯಮಾಪನ ಹಾಕಿದರೂ,  ಮತ್ತೊಮ್ಮೆ ಪರೀಕ್ಷೆ ಬರೆದರೂ ಉತ್ತೀರ್ಣರಾಗಲೇ ಇಲ್ಲ,  ಎನ್ನುವವರಿಗೆ ಸ್ವಲ್ಪ ದಿನ ತಮಗಿಷ್ಟ ಬಂದ ಕಡೆ ಕೆಲಸಕ್ಕೆ ಹೋಗಿ ಒಂದಷ್ಟು ಹಣವನ್ನು ಗಳಿಸಿಕೊಂಡು ಮುಂದಿನ ವರ್ಷಕ್ಕೆ ಐಟಿಐಗೆ ಸೇರುವ ಅವಕಾಶವಿದೆ.  ನೀವು ಎಂಟನೇ ತರಗತಿ ಫೇಲಾದರೂ,  9ನೇ ತರಗತಿ ಫೇಲಾದರೂ ಅಥವಾ ಹತ್ತನೇ ತರಗತಿಲ್ಲಿ ಅನುತ್ತೀರ್ಣರಾದರು ಸಹ ಐಟಿಐನಲ್ಲಿ ಬೇರೆ ಬೇರೆ ಕೋರ್ಸ್ಗಳಿವೆ.  ನೀವು ಅದನ್ನು ಮಾಡಿಕೊಳ್ಳಬಹುದು. ನಿಮಗಿಷ್ಟವಾದ ಜಾಬ್ ಓರಿಯೆಂಟೆಡ್ ಕೋರ್ಸ್ ಗಳನ್ನು ಆಯ್ಕೆಗಳಲ್ಲಿ ನಿಮಗೆ ಸರ್ಕಾರದಿಂದಲೇ ನೀಡುತ್ತಾರೆ.  ಇದಕ್ಕೆ ಹೆಚ್ಚಿನ ಫೀಸ್ ಗಳಿಲ್ಲ.  ಜಾಸ್ತಿ ಎಂದರೆ ಸರಕಾರಿ ಐಟಿಐ ಕಾಲೇಜು ಗಳಲ್ಲಿ ಒಂದೂವರೆ ಸಾವಿರದಷ್ಟು ಫೀಸ್ ಇರಬಹುದು.  ಆದರೆ ನಿಮ್ಮ ಮನೆಯಿಂದ ಸರಕಾರಿ ಕಾಲೇಜು ದೂರವಿದ್ದರೆ ಓಡಾಡುವುದಷ್ಟೇ  ನಿಮಗೆ ಇರುವ ತೊಂದರೆ. ಅದೊಂದನ್ನು ನೀವು ನೋಡಿಕೊಂಡರೆ ನಿಮಗೆ ಸುಲಭದ ದಾರಿಯಲ್ಲಿ ಮುಂದಿನ ಓದಿಗೆ ಅವಕಾಶವಿದೆ. ಐಟಿಐಗಳೆಂದರೆ ಹುಡುಗರಿಗೆ ಮಾತ್ರವಲ್ಲ ಹುಡುಗಿಯರು ಸಹ ಐಟಿಐಗಳಲ್ಲೂ ಕಲಿತು ಇದರಲ್ಲಿ ಎಲೆಕ್ಟ್ರಾನಿಕ್ಸ್,  ಎಲೆಕ್ಟ್ರಿಷಿಯನ್,  ಪ್ಲಂಬರ್,  ಫಿಟ್ಟರ್, ಮೆಕ್ಯಾನಿಕ್, ಕಂಪ್ಯೂಟರ್ ಸೈನ್ಸ್ , ಮೊಬೈಲ್ ಇಲೆಕ್ಟ್ರೀಷಿಯನ್ , ಕೊಪಾ , ಕಾರ್ಪೆಂಟರ್, ಸ್ಟೆನೋಗ್ರಾಫರ್, ಏ ಸಿ ಮೆಕ್ಯಾನಿಕ್,  ವೆಲ್ಡರ್  ರೆಫ್ರಿಜರೇಟರ್ ರಿಪೇರಿ   ಇವೇ ಮುಂತಾದ ಹಲವಾರು ಕೆಲಸ ಸಿಗುವಂತಹ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಕಲಿಯಬಹುದು. ಇವುಗಳನ್ನು ಕಲಿತ ಬಳಿಕ ರೈಲ್ವೇ, ಸಚಿವಾಲಯ, ಸರಕಾರಿ ಕೆಲಸವೇ ಅಲ್ಲದೆ, ಕೆ ಎಸ್ ಆರ್ ಟಿ ಸಿ ಡಿಪೋಗಳು, ಟೊಯೊಟಾ ದಂತಹ ಹಲವಾರು ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೆಲಸ ಮಾಡಲು ಅವಕಾಶ ಇದೆ. ಅಷ್ಟೇ ಅಲ್ಲ, ತಾನೇ ಸ್ವತಃ ಕೆಲಸ ಕೊಡುವವನಾಗಿ, ಬಾಸ್ ಆಗಿ ಇದ್ದು, ತನ್ನ ಕೈ ಕೆಳಗೆ ಹಲವಾರು ಜನರಿಗೆ ಕೆಲಸ ಕೊಡುವ ಕಾರ್ಯವನ್ನೂ ಮಾಡಬಹುದು. ಇದರಿಂದ ನಮ್ಮ ಜೀವನದ ಜೊತೆಗೆ ಇನ್ನೂ ನಮ್ಮ ಗೆಳೆಯರ ಜೀವನವನ್ನೂ ಉತ್ತಮ ಪಡಿಸಲು ಅವಕಾಶ ಇದೆ.


    ಕೈ ಕಟ್ಟಿ ಕುಳಿತರೆ ಏನೂ ಆಗದು. ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಬೆಳಗ್ಗೆ ಎದ್ದು ಹಲವಾರು ಮನೆಗಳಿಗೆ ಪೇಪರ್ ಹಾಕಿ, ಸರ್ ಎಂ ವಿಶ್ವೇಶ್ವರಯ್ಯನವರು ಬೀದಿ ದೀಪದ ಕೆಳಗೆ ಕುಳಿತು, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಹಳತು ಪುಸ್ತಕಗಳನ್ನು ಕೊಂಡು ಓದಿ ಕಲಿತವರು. ಕಷ್ಟ ಇಲ್ಲದೆ ಬದುಕಿಲ್ಲ. ಆದರೆ ಅದನ್ನು ಎದುರಿಸಿ ಛಲದಲ್ಲಿ ನಿಂತಾಗ ಅಲ್ಲಿ ಸುಖ ಇದ್ದೇ ಇದೆ.
  ಆದ್ದರಿಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಕೊರಗ ಬೇಕಾಗಿಲ್ಲ,  ಸಾಯ ಬೇಕಾಗಿಲ್ಲ, ಬದಲಾಗಿ ಈ ರೀತಿಯ ಟೆಕ್ನಿಕಲ್ ಕೋರ್ಸ್ ಓದಿ ತಾನೇನು ಅಂತ ತೋರಿಸಬೇಕಿದೆ. ಉನ್ನತ ಓದಿಗೆ ಬ್ಯಾಂಕಿನವರು ಸಾಲ ಸೌಲಭ್ಯ ಕೂಡಾ ಕೊಡುತ್ತಾರೆ. ರಜೆಯ ಸಮಯದಲ್ಲಿ ಏನಾದರೂ ಪಾರ್ಟ್ ಟೈಮ್ ಕೆಲಸ ಮಾಡಿ ಒಂದಿಷ್ಟು ಹಣ ಸಂಪಾದಿಸಿ ಉನ್ನತ ವ್ಯಾಸಂಗ ಪಡೆಯಬಹುದು. ಕಷ್ಟ ಎಂದರೆ ಕಾಲೇಜು ಫೀಸ್ ಕಟ್ಟಲು ಸಹಾಯ ಮಾಡುವ ದಾನಿಗಳು ಭಾರತ ದೇಶದಲ್ಲಿ ಇನ್ನೂ ಇದ್ದಾರೆ. ಹಾಗಾಗಿ ಮುಂದೆ ಓದಲು ಕಷ್ಟ ಇಲ್ಲ.
        ಹಾಗಾಗಿ ಓದುವುದನ್ನು ಬಿಡದೆ ಮುಂದುವರೆಸಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆರಿಸಿ. ರಾಜಕೀಯ ಇಷ್ಟವಿದ್ದರೆ ವಿಜ್ಞಾನ ವಿಷಯ ಓದುವ ಬದಲು ರಾಜಕೀಯ ಶಾಸ್ತ್ರ ಓದಿ. ಎಲ್ಲಾ ಫೀಲ್ಡ್ ಗಳ ಮುಂದಿನ ರೂವಾರಿಗಳು ನೀವೇ , ಭಾರತ ಆಳುವ ಪ್ರಜೆಗಳೂ, ನಾಯಕರೂ ನೀವೇ. ನೆನಪಿರಲಿ. ನೀವೇನಂತೀರಿ?

———————————


ಹನಿಬಿಂದು


ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.




Sidebar Layout

Toggle panel: Sidebar Layout

Yoast SEO

Toggle panel: Yoast SEO

  • Post
  • Block

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top