ಮಕ್ಕಳ ವಿಭಾಗ
ಲಲಿತಾ ಕ್ಯಾಸನ್ನವರ
ಕಣ್ಮಣಿ ನನ್ನ ಕಂದ
ಅಮ್ಮ ಅಮ್ಮ ಬಾ ಬಾ ಅಮ್ಮ ಆಟ ಆಡುವಾ
ಆಟ ಆಡಿ ಓಡಿ ಕುಣಿದು ಖುಷಿಯಾಗುವಾ|
ಹಿತ್ತಲಗಿಡದ ಹುಣಸೆ ಹಣ್ಣು ಕಿತ್ತು ತರುವಾ
ಕಾರ ಉಪ್ಪು ಬೆಲ್ಲ ಹಾಕಿ ಚಿಗಳಿ ಕುಟ್ಟುವಾ
ಗಿಳಿಯ ಮರಿಯ ಹಾಗೆ ಗಿಡವ ಏರುವಾ
ಸೀಬೆ ಹಣ್ಣನು ಕಚ್ಚಿ ಕಚ್ಚಿ ತಿಂದು ಸವಿಯುವಾ
ಝುಳು ಝಳು ಹರಿವ ಝರಿಯ ನೋಡುವಾ
ಕಪ್ಪೆಮೀನು ಆಮೆಗಳ ನೋಡಿ ನಲಿಯುವಾ
ದೂರದಿರುವ ನದಿಯದಡಕೆ ಓಡಿ ಸಾಗುವ
ಮರಳಿನಲ್ಲಿ ಮನೆಮಾಡಿ ಖುಷಿಪಡೆಯುವ
ಊರಿನಲ್ಲಿ ಇರುವ ಶಾಲೆಯ ಅಂಗಳದಿ ಆಡುವಾ
ರಗಸಸದ ಅಕ್ಷರ ಕಲಿತು ಜಾಣನಾಗುವ ನಿನ್ನ ಕಣ್ಮಣಿ ಆಗುವೆ….
———————————————-
ಸುಂದರ ಕವನ