ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ


ಕಾವ್ಯ ಸಂಗಾತಿ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಮಹಿಳೆ

ಪ್ರತಿ ಕುಟುಂಬದ ಉಸಿರು
ಆ ಮನೆ ಮಹಿಳೆಯ ಬೆವರು

ಬೆಳಿಗ್ಗೆ ಎದ್ದೇಳುವುದು
ರಾತ್ರಿ ಮಲಗುವುದು
ಯಾವುದಕು ಗಡಿಯಾರ ಸಾಕ್ಷಿ ಆಗದು

ಹೆಣ್ಣು ಸಂಸಾರದ ಸೂಜಿಯ ಕಣ್ಣು
ಮತ್ತು ಅವಳೆ ಅದರ ಚುಚ್ಚು ಮುಳ್ಳು!

ವೆಚ್ಛವಿಲ್ಲದೆ ಎಲ್ಲ ಸ್ವಚ್ಛ
ಮಹಿಳೆಯೆ ಮನೆಯ ಮುನಿಸಿಪಾಲಿಟಿ
ಮನೆಯ ಕಚಡ ಡಬ್ಬ ಖಾಲಿ
ಸಮಯದಲ್ಲಿ ಮತ್ತದರ ಉತ್ಖನನ ಕೂಡ
ಎಲ್ಲಕು ಅವಳ ತರ್ಕ ಕಾರಣ!

ಮನೆ ಮನೆಯ ಛಾವಣಿ ಮೇಲೆ
ಮಹಿಳೆ ಪ್ರಭಾವಳಿ ಮಿಂಚು
ಅವಳ ಕೈ ಲೇಖನಿಯ ಬರಹವೆ
ಮನೆ ಮನೆ ಹಣೆ ಮೇಲಿನ ಗೀಚು!

ನಗು ಮುಖದ ಮಹಿಳೆ
ಮನೆಯೊಂದರ ಆತ್ಮ
ಕಣ್ಣೀರು ತುಳುಕುವ ಹೆಣ್ಣು
ಮನೆಯೊಳಗೆ ಎದ್ದ ಮಸಣ!

ತುಂಬಿ ಹರಿಯಲಿ ನಿರಂತರ
ಪ್ರತಿ ಮಹಿಳೆಯ ಎದೆಯಲಿ
ಆನಂದ ಉಕ್ಕಿಸುವ ಉಸಿರು
ಸುತ್ತಮುತ್ತ ಬೆಳೆಯಲಿ ಹೆಚ್ಚು
ನಳನಳಿಸುವ ನಗುವ ಹಸಿರು!

ಎಂದೆಂದಿಗೂ ಮಿಂಚುತಿರಲಿ
ಮನೆಯೊಳಗಿನ ಹೊರಗಿನ
ಈ ಬೆಳಕಿನ ಸಂಭ್ರಮ ನಕ್ಷತ್ರ!


2 thoughts on “ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ

  1. ನಿಮ್ಮ ಮಹಿಳೆ ನಮ್ಮೆಲ್ಲರ ಪ್ರೀತಿಯ ಹಾಗೂ ಪೂಜನೀಯ ಚೇತನ!
    Very good Murthy. Congrats

Leave a Reply

Back To Top