ಮಾಜಾನ್ ಮಸ್ಕಿ ಹೊಸ ಕವಿತೆ/ಕರಾಳತೆ

ಕಾವ್ಯ ಸಂಗಾತಿ

ಕರಾಳತೆ

ಮಾಜಾನ್ ಮಸ್ಕಿ

ದ್ವೇಷಾಸೂಯೆ….ಬೆಂಕಿಗೆ
ಕಣ್ ದೀವಿಗೆ ಕಳೆದು
ಕರಾಳ ರಾತ್ರಿ ಕವಿದಿದೆ

ಸಿಡಿದ ಬಳೆಗಳು
ಛಿದ್ರವಾದ ಹೃದಯಗಳೆಷ್ಟೋ
ತಾಯಿ ಗರ್ಭ ಬಿರಿದು
ಜ್ವಾಲಾಮುಖಿ ಎದ್ದಿದೆ

ನಮ್ಮವರಿಂದಲೇ ನಮಗೆ
ಮೋಸ..

ಕಂಗೆಟ್ಟ ಕಂಗಳು…
ಆಕಾಶಕ್ಕೆ ಮುಟ್ಟಿದ ಆರ್ತನಾದ…
ದಹಿಸಿದ ದೇಹ ಹೃದಯಗಳ
ಭಸ್ಮ ಗಂಗೆಯಲ್ಲಿ ಹರಿದಿದೆ

ಧರ್ಮಾ ಂಧತೆಯ
ಮಾರಣ ಹೋಮಕ್ಕೆ
ಮೃದಂಗ ಬಾರಿಸಿದ ಕಟುಕರಿಗೆ
ಯಾವ ಪ್ರೀತಿ ಸೌಹಾರ್ದ
ತೋರಿದರೇನು

ಮೆದುಳೇ ಇಲ್ಲದ ನರರಿಗೆ


Leave a Reply

Back To Top