ಮಾಜಾನ್ ಮಸ್ಕಿ/ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಜಾನ್ ಪದ್ಯಗಳು

ಮಾಜಾನ್ ಮಸ್ಕಿ

ಪ್ರೇಮ… ಭಾವಕ್ಕೆ ಅಂಟಿದ ವೈರಸ್
ಜಾನ್…
ದೇಹಕ್ಕೆ ಬಾಧಿಸುವ ಜುಖಾಮ್

ಅಗಲಿಕೆಯಲ್ಲಿಯೂ ಹಿತ ಇದೆ
ಜಾನ್
ನೆನಪಿನ ಅಂಗಳದಲ್ಲಿಯ ರಂಗೋಲಿ…

ಅಸಮಾನತೆ ದೌರ್ಜನ್ಯ ಆರ್ತತೆ ತುಂಬಿದೆ
ಜಾನ್!!
ಮಿಡಿಯಬೇಕು ವಿಶ್ವ ಪ್ರೇಮದ ಮಿಡಿತ

ಹೆಣ್ಣಲ್ಲಿ ಲವಲವಿಕೆ ಗಂಡಿನ ಕಣ್ಣಲ್ಲಿ ಉತ್ಸಾಹ
ಜಾನ್!!
ಮೂಡುತ್ತಿತ್ತೆ ಪ್ರೀತಿಯೇ ಇಲ್ಲದ ಮೇಲೆ?!


Leave a Reply

Back To Top