ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ/ಮೌನದಲಿ ಮಾತು

ಕಾವ್ಯ ಸಂಗಾತಿ

ಮೌನದಲಿ ಮಾತು

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಚಿಪ್ಪಿನೊಳಡಗಿದ ಸ್ವಾತಿ ಮುತ್ತು
ಮೌನದೊಳಡಗಿದ ಸತ್ಯ ಮಾತು

ಮಾತು ಬೆಳ್ಳಿ ಮೌನ ಬಂಗಾರ
ಮೌನದಲಿ ಮಾತು ಹೂಭಾರ

ಯೋಗಿಪುರುಷರಿಬ್ಬರ ಮೌನದ
ಮಾತುಗಳ ಸಂಧಾನ ಸಂವಹನ

ಸಂತೋಷ ಸಂಭ್ರಮ ಸವಿನಯ
ಸಾಮಾನ್ಯರಿಗೆ ತಿಳಿಯದು ಮಾತು

ಶರಣರ ಲಿಂಗಾಂಗ ಸಾಮರಸ್ಯ
ಮೌನದಲ್ಲಿನ ಮಾತಿನ ಸಾರ್ಥಕ್ಯ

ಮೌನ ಯೋಗಿ ರಮಣ ಮಹರ್ಷಿ
ಜನರ ಹೃದಯಗಳರಿತ ದೇವರ್ಷಿ

ಮಾನಸಪೂಜೆಯಲಿ ಶಿವಧ್ಯಾನ
ಮೌನದಾಳಕಿಳಿದಾಗ ನಿಜಜ್ಞಾನ

ಮಾತು ದಣಿದು ಸೋತು ನಿಂತಾಗ
ಮೌನ ಹೇಳುವುದು ಸಾಂತ್ವನ

ಮೌನದಲುದಿಸಿದ ಭಾವನೆ ಕಲ್ಪನೆ
ಕವನ ಹಾಡಾಗಲು ಬೇಕು ಸ್ಪಂದನೆ

ಮಾತಿಗೆ ಮಿತಿಯುಂಟು ದಣಿವುಂಟು
ಮೌನದಲ್ಲಿಯ ಮಾತಿಗೆ ಮಿತಿಯಿಲ್ಲ


3 thoughts on “ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ/ಮೌನದಲಿ ಮಾತು

Leave a Reply

Back To Top