ಅನುವಾದ ಸಂಗಾತಿ
ಯಾರೂ ತುಳಿಯದ ಹಾದಿ.
ಮೂಲಆಂಗ್ಲ:ರಾಬರ್ಟ್ ಫ್ರಾಸ್ಟ್
ಭಾವಾನುವಾದ:ಬಾಗೇಪಲ್ಲಿ ಕೃಷ್ಣಮೂರ್ತಿ
ಹಾದಿ ಎರಡಾಗಿ ಕವಲೊಡೆಯಿತು ಹೊಂಬಣ್ಣದ ಕಾನನದಿ.
ಮನ್ನಿಸಿ, ನಾನು ಎರಡರಲೂ ಒಮ್ಮೆಲೇ ಪಯಣಿಸಲಾರೆ
ಹಾದಿ ಹೋಕನಾದ ನಾನು ಸಾಕಷ್ಟು್ ಹೊತ್ತು ನಿಂದು,
ಎಷ್ಟು ಸಾಧ್ಯವೊ ಅಷ್ಟು ದೂರದ ವರೆಗೂ, ಅವು ತಿರುವು ಪಡೆದು ಕಾಣದಾಗುವವರೆಗೂ ನೋಡಿದೆ.
ನಂತರ, ನ್ಯಾಯಯುತ ಮತ್ತು ಸರಿ ಎನ್ನಿಸಿದೊಂದನು ಹಿಡಿದೆ
ಬಹುಶಃ ನಾನು ಮಾಡಿದ್ದು ಉತ್ತಮ ತೀರ್ಮಾನವಾಗಿತ್ತು
ಏಕೆನೆ,
ಅದು ಹಚ್ಚ ಹಸಿರಿನ ಹುಲ್ಲು ಹಾಸಿನಿಂದ ಕೂಡಿ,ಯಾರೂ ಅದರಲಿ ಹೊಕ್ಕಂತೆ ಕಾಣಲಿಲ್ಲ.
ನಾನು ಇದರಲಿ ಹೊಕ್ಕರೂ, ಮತ್ತೊಂದು ಹಾದಿಯೂ ಹೀಗೆಯೇ ಇದ್ದಿರ ಬಹುದೇನೋ!
ಬೆಳಗಿನ ಸಮಯದಿ ಎರಡೂ ಹಾದಿಯ ಹರಿವು ಹೀಗೆಯೇ ಇದ್ದು, ತರಗೆಲೆಗಳ ಮೇಲೆ ಯಾರ ಹೆಜ್ಜೆಯ ಗುರುತೂ ಇರಲಾರದು
ಇನ್ನೊಂದು ಹಾದಿಯ ಮತ್ತೊಂದು ದಿನಕೆ ಇರಿಸಿದೆ.
ಒಂದು ಹಾದಿಯು ಬೇರೊಂದು ಹಾದಿಗೆ ಹಾದಿ ಅಗಬಹುದೆಂದು ಅರಿತಿದ್ದರೂ
ನಾನು ಹಿಂದಿರುಗಿ ಬರುವೆನೇ ಎಂಬ ಸಂಶಯ.
ನಿಟ್ಟುಸಿರು ಬಿಡುತ ನಾನು ಹೇಳಬಯಸುವೆ.
ಯುಗ ಯುಗಾಂತರದಲಿ ಎಲ್ಲೋ ಒಂದೆಡೆ ಹೀಗೆಯೇ ಕವಲಾದವು ಹಾದಿ ಕಾನನದಿ.
ನಾ ಕನಿಷ್ಠ ಓಡಾಡಿದ ರಸ್ತೆಯ ಹಿಡಿದೆ!
ಅದೊಂದೇ ಎಲ್ಲಾ ವ್ಯತ್ಯಾಸಕೆ ಮೂಲ ಕಾರಣ.
ಮೂಲ : ರಾಬರ್ಟ್ ಫ್ರಾಸ್ಟ್
ಭಾವಾನುವಾದ : ಬಾಗೇಪಲ್ಲಿ ಕೃಷ್ಣಮೂರ್ತಿ